ಸದ್ಯದಲ್ಲೇ ಹೊಸ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಲಭ್ಯ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್‌ಫಫೋನ್‌ಗಳನ್ನ ಪರಿಚಯಿಸುತ್ತಲೇ ಬಂದಿವೆ. ಇನ್ನು ತಂತ್ರಜ್ಞಾನ ಮುಂದುವರೆದಂತೆ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಕೂಡ ಬದಲಾಗುತ್ತಿದ್ದು, ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಸದ್ಯ ಈ ವರ್ಷ ಕ್ವಾಲ್ಕಾಮ್ ತನ್ನ ಎರಡನೇ ತಲೆಮಾರಿನ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನಿಂಗ್ ಟೆಕ್ನಾಲಜಿಯನ್ನು ಪರಿಚಯಿಸಲು ಮುಂದಾಗಿದೆ.

ಕ್ವಾಲ್ಕಾಮ್‌

ಹೌದು, ಈ ವರ್ಷ ಕ್ವಾಲ್ಕಾಮ್‌ ತನ್ನ ಎರಡನೇ ತಲೆಮಾರಿನ ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನವನ್ನು ಅನಾವರಣಗೊಳಿಸಲು ಮುಂದಾಗಿದೆ. ಸದ್ಯ ಈ ಟೆಕ್ನಾಲಜಿಯನ್ನು 3D ಸೋನಿಕ್ ಜನ್ 2 ಎಂದು ಪ್ರಾರಂಭಿಸಿದೆ, ಇದು ದೊಡ್ಡ ಮೇಲ್ಮೈ ವಿಸ್ತೀರ್ಣದೊಂದಿಗೆ ಬರಲಿದೆ. ಅಲ್ಲದೆ ಇದು ವೇಗವಾಗಿ ಸಂಸ್ಕರಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಸೆನ್ಸಾರ್‌ಗಳು ಹೊಸ ಗಾತ್ರಗಳಲ್ಲಿ ಲಭ್ಯವಾಗಲಿದ್ದು, 50% ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಜನ್ 1 ಸಂವೇದಕಗಳಿಗೆ ಹೋಲಿಸಿದರೆ 77 ಪ್ರತಿಶತ ದೊಡ್ಡದಾಗಿರುತ್ತದೆ ಎಂದು ಕ್ವಾಲ್ಕಾಮ್‌ ಹೇಳಿದೆ. ಇನ್ನುಳಿದಂತೆ ಈ ಟೆಕ್ನಾಲಜಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ವಾಲ್ಕಾಮ್

ಕ್ವಾಲ್ಕಾಮ್ ಎರಡನೇ ತಲೆಮಾರಿನ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಸಾಕಷ್ಟು ವೇಗದ ಕಾರ್ಯಕ್ಷಮತೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಕ್ವಾಲ್ಕಾಮ್‌ 3D ಸೋನಿಕ್ ಸೆನ್ಸಾರ್‌ ಜನ್ 1 4 × 9 ಎಂಎಂ ಆಗಿದ್ದರೆ, ಜನ್ 2 ಬಿಗ್‌ 8 × 8 ಸೆನ್ಸಾರ್‌ ನೊಂದಿಗೆ ಪ್ರಾರಂಭವಾಗಲಿದೆ. ಬಿಗ್‌ ಸೆನ್ಸಾರ್‌ ಎಂದರೆ ಇದು ತನ್ನ ಬಳಕೆದಾರರಿಗೆ ಬೆರಳುಗಳನ್ನು ಇರಿಸಲು ಬಿಗ್‌ ಸ್ಪೇಸ್‌ ಅನ್ನು ಒದಗಿಸುತ್ತದೆ. ಅಲ್ಲದೆ ಕ್ವಾಲ್ಕಾಮ್ 3D ಸೋನಿಕ್ ಸೆನ್ಸಾರ್ 1.7x ಹೆಚ್ಚು ಬಯೋಮೆಟ್ರಿಕ್ ಡೇಟಾವನ್ನು ಸೆರೆಹಿಡಿಯಲು ಅನುಮತಿಸುತ್ತದೆ.

ಹೊಸ ಟೆಕ್ನಾಲಜಿಯನ್ನು ಯಾವಾಗ ನಿರೀಕ್ಷಿಸಬಹುದು?

ಹೊಸ ಟೆಕ್ನಾಲಜಿಯನ್ನು ಯಾವಾಗ ನಿರೀಕ್ಷಿಸಬಹುದು?

ಕ್ವಾಲ್ಕಾಮ್ 3D ಸೋನಿಕ್ ಸೆನ್ಸರ್ ಜನ್ 2 ಮೊಬೈಲ್ ಡಿವೈಸ್‌ಗಳಲ್ಲಿ 2021ರ ಆರಂಭದಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ವಾಲ್ಕಾಮ್ 3D ಸೋನಿಕ್ ಸೆನ್ಸರ್‌ಗಳು ತಾಂತ್ರಿಕ ಪ್ರಗತಿಗಳು ಮತ್ತು ಅಕೌಸ್ಟಿಕ್ಸ್ (ಅಲ್ಟ್ರಾಸಾನಿಕ್ ತರಂಗಗಳು) ಗಳನ್ನು ಬಳಸಲಿವೆ. ಈ ಮೂಲದ ರೇಖೆಗಳಂತಹ 3D ಫೀಚರ್ಸ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಉತ್ತಮ ಬಳಕೆದಾರ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಬೆರಳಿನ ನಡುವಿನ ಕಣಿವೆಗಳು, ಮತ್ತು ಆಳವಾದ ನಿಖರವಾದ ಚಿತ್ರಕ್ಕಾಗಿ ಬಳಕೆದಾರರ ಬೆರಳಿನ ರಂಧ್ರಗಳನ್ನು ಸ್ಕ್ಯಾನ್‌ ಮಾಡಲಿದೆ. ಈ ರೀತಿಯಾಗಿ 3D ಸೋನಿಕ್ ಸೆನ್ಸಾರ್‌ ಒದ್ದೆಯಾಗಿದ್ದರೂ ಗಾಜು ಮತ್ತು ಲೋಹದಂತಹ ಘನ ಮೇಲ್ಮೈಗಳ ಮೂಲಕ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಲು ಅವಕಾಶ ನೀಡಲಿದೆ.

ಸೆನ್ಸಾರ್‌

ಈ ಸೆನ್ಸಾರ್‌ ಅಲ್ಟ್ರಾ-ತೆಳುವಾದ ಅಳತೆ ಹೊಂದಿದ್ದು, ಇದು ಕೇವಲ 2 ಮಿ.ಮೀ.ಹೊಂದಿದೆ. ಇದು ಮುಂದಿನ ಅಂಶವನ್ನು ತಮ್ಮ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಹತೋಟಿಗೆ ತರಬಲ್ಲ ಸ್ಮಾರ್ಟ್‌ಫೋನ್ ತಯಾರಕರಿಗೆ ಇದು ಉತ್ತಮ ಸಂಕೇತವಾಗಿದೆ. ಸೆನ್ಸಾರ್‌ ಫುಲ್‌ ಎಡ್ಜ್-ಟು-ಎಡ್ಜ್ ಹೊಂದಿಕೊಳ್ಳುವ ಒಎಲ್ಇಡಿ ಡಿಸ್ಪ್ಲೇಗಳಿಗೆ ಬೆಂಬಲವನ್ನು ನೀಡುತ್ತದೆ. ಅನೇಕ ಸ್ಮಾರ್ಟ್‌ಫೋನ್ ತಯಾರಕರು ಮಡಿಸಬಹುದಾದ ಮತ್ತು ರೋಲ್ ಮಾಡಬಹುದಾದ ತಂತ್ರಜ್ಞಾನದತ್ತ ಸಾಗುತ್ತಿರುವುದರಿಂದ, ಕ್ವಾಲ್ಕಾಮ್‌ನ ಹೊಸ ಸಂವೇದಕವು ಅದೇ ರೀತಿ ಹೊಂದಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.

Most Read Articles
Best Mobiles in India

English summary
Qualcomm has launched its 2nd Gen fingerprint scanning technology called 3D Sonic Gen 2 that will be used in upcoming flagship smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X