Home
ಸುದ್ದಿಜಾಲ

CES 2022: ಏಸರ್‌ ಕಂಪೆನಿಯಿಂದ ಮೂರು ಹೊಸ ಕ್ರೋಮ್‌ಬುಕ್‌ ಅನಾವರಣ!

ಟೆಕ್‌ ವಲಯದಲ್ಲಿ ಏಸರ್‌ ಕಂಪೆನಿ ತನ್ನ ಜನಪ್ರಿಯ ಲ್ಯಾಪ್‌ಟಾಪ್‌ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳ ಪ್ರದರ್ಶನ ವೇದಿಕೆಯಾದ CES 2022 (ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ) ನಲ್ಲಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳನ್ನು ಕ್ರೋಮ್‌ಬುಕ್‌ ಸ್ಪೀನ್‌ 513, ಕ್ರೋಮ್‌ಬುಕ್‌ 315 ಮತ್ತು ಕ್ರೋಮ್‌ಬುಕ್‌ 314 ಎಂದು ಹೆಸರಿಸಲಾಗಿದೆ. ಈ ಲ್ಯಾಪ್‌ಟಾಪ್‌ಗಳನ್ನು ಹೈಬ್ರಿಡ್‌ ವರ್ಕ್‌, ಎಜುಕೇಶನ್‌ ಮತ್ತು ಎಂಟರ್‌ಟೈನ್‌ಮೆಂಟ್‌ಗಾಗಿ ವಿನ್ಯಾಸಗೊಳಿಸಲಾಗಿದೆ.

ಕ್ರೋಮ್‌ಬುಕ್‌

ಹೌದು, ಏಸರ್‌ ಕಂಪೆನಿ CES 2022ನಲ್ಲಿ ಮೂರು ಹೊಸ ಕ್ರೋಮ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕ್ರೋಮ್‌ಬುಕ್‌ ಸ್ಪಿನ್‌ 513 ಮೀಡಿಯಾಟೆಕ್‌ ಕಂಪಾನಿಯೋ 1380 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಆದರೆ ಕ್ರೋಮ್‌ಬುಕ್‌ 315 ಮತ್ತು ಕ್ರೋಮ್‌ಬುಕ್‌ 314 ಇತ್ತೀಚಿನ ಇಂಟೆಲ್ ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ. ಇನ್ನು ಈ ಮೂರು ಹೊಸ ಕ್ರೋಮ್ ಓಎಸ್ ಲ್ಯಾಪ್‌ಟಾಪ್‌ಗಳು ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತವೆ. ಹಾಗಾದ್ರೆ ಏಸರ್‌ ಕಂಪೆನಿ ಹೊಸ ಕ್ರೋಮ್‌ಬುಕ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್‌ ಕ್ರೋಮ್‌ಬುಕ್‌ ಸ್ಪಿನ್ 513 (CP513-2H)

ಏಸರ್‌ ಕ್ರೋಮ್‌ಬುಕ್‌ ಸ್ಪಿನ್ 513 (CP513-2H)

ಏಸರ್‌ ಕ್ರೋಮ್‌ಬುಕ್‌ ಸ್ಪಿನ್‌ 513 ಲ್ಯಾಪ್‌ಟಾಪ್‌ 2,256x1,504 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13.5-ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 3:2 ಅನುಪಾತದೊಂದಿಗೆ ಬರುತ್ತದೆ. ಜೊತೆಗೆ ಇದು 0.3 ಇಂಚುಗಳಷ್ಟು ಅಳತೆ ಮಾಡುವ ನ್ಯಾರೋ ಸೈಡ್‌ ಬ್ಯಾಜೆಲ್ಸ್‌ಗಳನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್‌ ಕಂಪಾನಿಯೋ 1380 ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಇದು Arm Mali-G57 MC5 ಗ್ರಾಫಿಕ್ಸ್ ಅನ್ನು ಸಂಯೋಜಿಸಿದೆ. ಇದನ್ನು ಪ್ರಯಾಣ ಮಾಡುವಾಗ ಟ್ಯಾಬ್ಲೆಟ್‌ನಂತೆ ಬಳಸಲು ಡಿಸ್‌ಪ್ಲೇಯನ್ನು ಹಿಂದಕ್ಕೆ ಬಾಗಿಸಬಹುದು. ಇದು ಬ್ಯಾಕ್‌ಲಿಟ್ ಕೀಬೋರ್ಡ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸಂಪರ್ಕಕ್ಕಾಗಿ ವೈ-ಫೈ 6 ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಬ್ಯಾಟರಿಯು 10 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

ಏಸರ್‌ ಕ್ರೋಮ್‌ಬುಕ್‌ 315 (CB315-4H/T)

ಏಸರ್‌ ಕ್ರೋಮ್‌ಬುಕ್‌ 315 (CB315-4H/T)

ಏಸರ್‌ ಕ್ರೋಮ್‌ಬುಕ್‌ 315 ಲ್ಯಾಪ್‌ಟಾಪ್‌ 1,920X1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಆಂಟಿ-ಗ್ಲೇರ್ ಫುಲ್‌ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅಪ್ಷನಲ್ ಟಚ್‌ಸ್ಕ್ರೀನ್‌ ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೀಬೋರ್ಡ್ ನಂಬರ್‌ ಕೀಪ್ಯಾಡ್ ಅನ್ನು ಹೊಂದಿದ್ದು, ಹೈಬ್ರಿಡ್ ವರ್ಕ್‌ ಮಾಡೋರಿಗೆ ಸೂಕ್ತವಾಗಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಪರಿಸರ ಸ್ನೇಹಿ ಓಷನ್‌ಗ್ಲಾಸ್ ಟಚ್‌ಪ್ಯಾಡ್ ಅನ್ನು ಒಳಗೊಂಡಿದೆ. ಇದು ಸಂಪೂರ್ಣವಾಗಿ ಪ್ಲಾಸ್ಟಿಕ್ ವೇಸ್ಟ್‌ನಿಂದ ತಯಾರಿಸಲ್ಪಟ್ಟಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಡಿವೈಸ್‌ HDR ವೆಬ್‌ಕ್ಯಾಮ್ ಅನ್ನು ಕೂಡ ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಇತ್ತೀಚಿನ ಇಂಟೆಲ್ ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ. ಇದು ಇಂಟೆಲ್ ಸೆಲೆರಾನ್ ಡ್ಯುಯಲ್-ಕೋರ್ N4500, ಸೆಲೆರಾನ್ ಕ್ವಾಡ್-ಕೋರ್ N5100, ಅಥವಾ ಪೆಂಟಿಯಮ್ ಸಿಲ್ವರ್ N600 ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದು 8GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ.ಇನ್ನು ಈ ಲ್ಯಾಪ್‌ಟಾಪ್‌ ಎರಡು ಯುಎಸ್‌ಬಿ ಜನ್ 2 ಟೈಪ್-ಸಿ ಪೋರ್ಟ್‌ಗಳನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಅನ್ನು ಸಹ ಸೇರಿಸಲಾಗಿದೆ.ಹಾಗೆಯೇ ಈ ಲ್ಯಾಪ್‌ಟಾಪ್‌ 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಏಸರ್‌ ಕ್ರೋಮ್‌ಬುಕ್‌ 314 (CB314-3H/T)

ಏಸರ್‌ ಕ್ರೋಮ್‌ಬುಕ್‌ 314 (CB314-3H/T)

ಏಸರ್‌ ಕ್ರೋಮ್‌ಬುಕ್‌ 314 ಲ್ಯಾಪ್‌ಟಾಪ್‌ 1,920X1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14-ಇಂಚಿನ ಫುಲ್‌-HD IPS ಟಚ್‌ಸ್ಕ್ರೀನ್ ಹೊಂದಿದೆ. ಜೊತೆಗೆ ಆಂಟಿ-ಗ್ಲೇರ್ ಲೇಪನವನ್ನು ಹೊಂದಿದೆ. ಇದು 0.32-ಇಂಚಿನ ಸೈಡ್ ಬೆಜೆಲ್‌ಗಳನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಅಪ್ಷನಲ್ ಮಲ್ಟಿ-ಟಚ್ ಡಿಸ್ಪ್ಲೇ ಅಥವಾ OceanGlass ಟಚ್‌ಪ್ಯಾಡ್ ಮೂಲಕ Chrome OS ಅನ್ನು ನ್ಯಾವಿಗೇಟ್ ಮಾಡಬಹುದು. ಇದು ಇಂಟೆಲ್ ಸೆಲೆರಾನ್ ಡ್ಯುಯಲ್-ಕೋರ್ N4500, ಸೆಲೆರಾನ್ ಕ್ವಾಡ್-ಕೋರ್ N5100, ಅಥವಾ ಪೆಂಟಿಯಮ್ ಸಿಲ್ವರ್ N600 ಅನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಲೋ-ಲೈಟ್‌ ಕಂಡಿಷನ್‌ನಲ್ಲಿ ಉತ್ತಮ ವೀಡಿಯೊ ಗುಣಮಟ್ಟಕ್ಕಾಗಿ ಎರಡು ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ಗಳು ಮತ್ತು ತಾತ್ಕಾಲಿಕ ಶಬ್ದ ಕಡಿತ (TNR) ಟೆಕ್ನಾಲಜಿ ಹೊಂದಿರುವ ವೆಬ್‌ಕ್ಯಾಮ್ ಅನ್ನು ಒಳಗೊಂಡಿದೆ. ಡಿಟಿಎಸ್ ಆಡಿಯೊ ತಂತ್ರಜ್ಞಾನಕ್ಕೆ ಬೆಂಬಲ, ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಈ ಲ್ಯಾಪ್‌ಟಾಪ್‌ನಲ್ಲಿಯೂ ಕಾಣಿಸಿಕೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಏಸರ್ ಕ್ರೋಮ್‌ಬುಕ್ ಸ್ಪಿನ್ 513 (CP513-2H) ಜೂನ್‌ನಲ್ಲಿ ಉತ್ತರ ಅಮೇರಿಕಾದಲ್ಲಿ $599.99 (ಅಂದಾಜು 44,600ರೂ)ಬೆಲೆಯಲ್ಲಿ ಮಾರಾಟವಾಗಲಿದೆ. ಇದು ಯುರೋಪ್, ಮಧ್ಯಪ್ರಾಚ್ಯ, ಮತ್ತು ಆಫ್ರಿಕಾ ದಲ್ಲಿ ಏಪ್ರಿಲ್‌ನಲ್ಲಿ EUR 649 (ಸುಮಾರು ರೂ. 54,600) ನಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಏಸರ್ ಕ್ರೋಮ್‌ಬುಕ್ 315 (CB315-4H/T) ಜನವರಿಯಲ್ಲಿ ಉತ್ತರ ಅಮೇರಿಕಾದಲ್ಲಿ $299.99 (ಅಂದಾಜು 22,300ರೂ.) ನಿಂದ ಖರೀದಿಗೆ ಲಭ್ಯವಿರುತ್ತದೆ. ಇದು ಯುರೋಪ್, ಮಧ್ಯಪ್ರಾಚ್ಯ, ಮತ್ತು ಆಫ್ರಿಕಾ ದಲ್ಲಿ EUR 399 (ಅಂದಾಜು 33,600ರೂ) ಬೆಲೆಯಲ್ಲಿ ಮಾರ್ಚ್ ವೇಳೆಗೆ ಖರೀದಿಗೆ ಲಭ್ಯವಿರುತ್ತದೆ.

ಏಸರ್‌ ಕ್ರೋಮ್‌ಬುಕ್‌ 314 (CB314-3H/T) ಲ್ಯಾಪ್‌ಟಾಪ್‌ ಜೂನ್‌ ತಿಂಗಳಿನಲ್ಲಿ ಉತ್ತರ ಅಮೇರಿಕಾದಲ್ಲಿ $299.99 (ಸುಮಾರು ರೂ. 22,300) ಬೆಲೆಯೊಂದಿಗೆ ಮಾರಾಟವಾಗಲಿದೆ. ಯುರೋಪ್, ಮಧ್ಯಪ್ರಾಚ್ಯ, ಮತ್ತು ಆಫ್ರಿಕಾ ದಲ್ಲಿ ಇದು EUR 369 (ಅಂದಾಜು 31,100ರೂ) ಬೆಲೆಗೆ ಗೆ ಏಪ್ರಿಲ್‌ನಿಂದ ಮಾರಾಟವಾಗಲಿದೆ.

ಇನ್ನು ಈ ಹೊಸ ಏಸರ್‌ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ ಮಾಡೆಲ್‌ಗಳು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Acer on Tuesday launched three new Chromebooks at the Consumer Electronics Show (CES 2022).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+