CES 2022: ಆಸುಸ್‌ ಎಕ್ಸಪರ್ಟ್‌ಬುಕ್‌ B3 ಡಿಟ್ಯಾಚೇಬಲ್ ಲ್ಯಾಪ್‌ಟಾಪ್‌ ಅನಾವರಣ!

|

ಪ್ರಸಕ್ತ ಸಾಲಿನ ಕನ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಶೋ (CES) 2022ರಲ್ಲಿ ಹಲವು ಗ್ಯಾಜೆಟ್ಸ್‌ಗಳು ಪ್ರದರ್ಶನಗೊಂಡಿವೆ. ಟೆಕ್ ಜಗತ್ತಿನ ದೈತ್ಯ ಕಂಪೆನಿಗಳೆಲ್ಲಾ ತಮ್ಮ ಕಂಪೆನಿಗಳ ಅಚ್ಚರಿಯ ಗ್ಯಾಜೆಟ್ಸ್‌ಗಳನ್ನು ಅನಾವರಣಗೊಳಿಸಿವೆ. ಇದರಲ್ಲಿ ಆಸುಸ್‌ ಕಂಪೆನಿ ಕೂಡ ಸೇರಿದ್ದು, ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು CES 2022ಯಲ್ಲಿ ಆಸುಸ್‌ ಕಂಪೆನಿ ಆಸುಸ್‌ ಎಕ್ಸ್‌ಪರ್ಟ್‌ಬುಕ್‌ B3 ಡಿಟ್ಯಾಚೇಬಲ್ ಲ್ಯಾಪ್‌ಟಾಪ್‌ ಅನ್ನು ಅನಾವರಣ ಮಾಡಿದೆ. ಇದು 2-in-1 ಲ್ಯಾಪ್‌ಟಾಪ್ ಆಗಿದ್ದು, ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7c Gen 2 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

CES 2022

ಹೌದು, ಆಸುಸ್‌ ಕಂಪೆನಿ CES 2022ರಲ್ಲಿ ಆಸುಸ್‌ ಎಕ್ಸ್‌ಪರ್ಟ್‌ಬುಕ್‌ B3 ಡಿಟ್ಯಾಚೇಬಲ್ ಲ್ಯಾಪ್‌ಟಾಪ್‌ ಲಾಂಚ್‌ ಮಾಡಿದೆ. ಈ ಲ್ಯಾಪ್‌ಟಾಪ್‌ 10.5 ಇಂಚಿನ WUXGA LCD ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 320 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್‌

ಆಸುಸ್‌ ಎಕ್ಸಪರ್ಟ್‌ಬುಕ್‌ B3 ಡಿಟ್ಯಾಚೇಬಲ್ ಲ್ಯಾಪ್‌ಟಾಪ್‌ 1,920x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.5 ಇಂಚಿನ WUXGA LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 320 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌, 16:10 ರಚನೆಯ ಅನುಪಾತ ಮತ್ತು 121 ರಷ್ಟು sRGB ಬಣ್ಣದ ಕವರೇಜ್ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 2 ಇನ್‌ 1 ಲ್ಯಾಪ್‌ಟಾಪ್ ಆಗಿದ್ದು, ಅಡ್ರಿನೊ 618 GPU ಜೊತೆಗೆ ಜೋಡಿಸಲಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7c Gen 2 SoC ಪ್ರೊಸೆಸರ್‌ ಹೊಂದಿದೆ. ವಿಂಡೋಸ್ 11 ಅನ್ನು ರನ್ ಮಾಡುತ್ತದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ.

ಆಸುಸ್‌

ಇನ್ನು ಆಸುಸ್‌ ಎಕ್ಸ್‌ಪರ್ಟ್‌ಬುಕ್‌ B3 ಡಿಟ್ಯಾಚೇಬಲ್ ಲ್ಯಾಪ್‌ಟಾಪ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ ಹೊಂದಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಇದು 45W USB ಟೈಪ್-C ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದಾದ 38Whr li-ion ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 802.11ac ಜೊತೆಗೆ Wi-Fi 5, ಬ್ಲೂಟೂತ್ v5.1, USB 3.2 Gen 1 ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಸದ್ಯ ಈ ಲ್ಯಾಪ್‌ಟಾಪ್‌ನ ಬೆಲೆ ಅಥವಾ ಲಭ್ಯತೆಯನ್ನು ಘೋಷಿಸಿಲ್ಲ. ಇದು ಏಕೈಕ ಸ್ಟಾರ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಆಸುಸ್‌

ಇದಲ್ಲದೆ ಆಸುಸ್‌ ಕಂಪೆನಿ ಈಗಾಗಲೇ CES 2022ರಲ್ಲಿ ಆಸುಸ್‌ ROG ಫ್ಲೋ Z13 ಲ್ಯಾಪ್‌ಟಾಪ್‌ ಅನ್ನು ಕೂಡ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ಅನ್ನು ಗೇಮಿಂಗ್ ಟ್ಯಾಬ್ಲೆಟ್ ಮಾದರಿಯಲ್ಲಿ ಉಪಯೋಗಿಸುವುದಕ್ಕೆ ಅವಕಾಶವಿದೆ. ಇನ್ನು ಟ್ಯಾಬ್ಲೆಟ್ ಕೇವಲ 12mmರಷ್ಟು ತೆಳುವಾಗಿದೆ. ಆದರೆ ಇದು ಇಂಟೆಲ್‌ ಕೋರ್‌ i9-12900H ಪ್ರೊಸೆಸರ್ ಮತ್ತು Nvidia RTX 3050 Ti ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 1080p ರೆಸಲ್ಯೂಶನ್ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಇದಲ್ಲದೆ ಹೆಚ್ಚಿನ ಪವರ್‌ಗಾಗಿ ಎಕ್ಸ್‌ಟರ್ನಲ್‌ GPU ಅನ್ನು ಪ್ಲಗ್ ಮಾಡಬಹುದಾಗಿದೆ.

ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED

ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED

ಆಸುಸ್‌ ಕಂಪೆನಿ ಪರಿಚಯಿಸಿರುವ ಮತ್ತೊಂದು ಲ್ಯಾಪ್‌ಟಾಪ್‌ ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED ಕೂಡ ಒಂದಾಗಿದೆ. ಹೆಸರೇ ಸೂಚಿಸುವಂತೆ, ಇದು ಫೋಲ್ಡ್‌ ಮಾಡಬಹುದಾದ ಸ್ಕ್ರೀನ್‌ ಹೊಂದಿರುವ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್‌ 17.3 ಇಂಚಿನ ಟ್ಯಾಬ್ಲೆಟ್ ಆಗಿದೆ, ಇದನ್ನು L ಆಕಾರಕ್ಕೆ ಮಡಚಬಹುದು. ಅಲ್ಲದೆ 12.5-ಇಂಚಿನ ಮೇನ್‌ ಸ್ಕ್ರೀನ್‌ನಲ್ಲಿ 'ಲ್ಯಾಪ್‌ಟಾಪ್ ಮೋಡ್' ನಲ್ಲಿ ಬಳಸಬಹುದು. ಇದರಿಂದ ಇನ್ನುಳಿದ ಅರ್ಧಭಾಗದ ಆನ್-ಸ್ಕ್ರೀನ್ ಕೀಬೋರ್ಡ್‌ನಂತೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡಾಲ್ಬಿ ವಿಷನ್ ಮತ್ತು 100% DCIP3 ಕಲರ್‌ ಹರವುಗಳನ್ನು ಬೆಂಬಲಿಸುತ್ತದೆ.

Best Mobiles in India

English summary
Asus ExpertBook B3 Detachable was silently launched on Friday, January 7, at Consumer Electronics Show (CES) 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X