Home
ಸುದ್ದಿಜಾಲ

CES 2022: ಹೈಪರ್‌ಎಕ್ಸ್ ಕಂಪೆನಿಯಿಂದ ಹೊಸ ಮಾದರಿಯ ಗೇಮಿಂಗ್‌ ಹೆಡ್‌ಸೆಟ್‌ ಅನಾವರಣ!

ಟೆಕ್‌ ಜಗತ್ತಿನ ಪ್ರಮುಖ ಕಾರ್ಯಕ್ರಮವಾದ ಕನ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಶೋ (CES) 2022 ಈಗಾಗಲೇ ಲಾಸ್‌ವೇಗಾಸ್‌ನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಟೆಕ್‌ ವಲಯದ ದೈತ್ಯ ಎನಿಸಿಕೊಂಡಿರುವ ಕಂಪೆನಿಗಳು ತಮ್ಮ ಗ್ಯಾಜೆಟ್ಸ್‌ಗಳನ್ನು ಪ್ರದರ್ಶನ ಮಾಡುತ್ತಿವೆ. ಈಗಾಗಲೇ ಹಲವು ಕಂಪೆನಿಗಳು ಅಚ್ಚರಿಯ ಗ್ಯಾಜೆಟ್ಸ್‌ಗಳನ್ನು ಅನಾವರಣಗೊಳಿಸಿವೆ. ಇನ್ನು ಈ ಕಾರ್ಯಕ್ರಮದಲ್ಲಿ HP ಕಂಪೆನಿಯ ಗೇಮಿಂಗ್ ಪೆರಿಫೆರಲ್ಸ್ ಸಬ್‌-ಬ್ರಾಂಡ್ ಹೈಪರ್‌ಎಕ್ಸ್ ತನ್ನ ಹೊಸ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶನ ಮಾಡಿದೆ. ಈ ಸರಣಿಯಲ್ಲಿ ಮೂರು ಹೆಡ್‌ಸೆಟ್‌ಗಳು, ಆಂಡ್ರಾಯ್ಡ್ ಡಿವೈಸ್‌ಗಳಿಗೆ ಗೇಮಿಂಗ್ ಕಂಟ್ರೋಲ್‌, ಮೌಸ್ ಮತ್ತು ಕೀಬೋರ್ಡ್ ಅನ್ನು ಒಳಗೊಂಡಿದೆ.

ಹೈಪರ್‌ಎಕ್ಸ್

ಹೌದು, ಹೈಪರ್‌ಎಕ್ಸ್ ಕಂಪೆನಿ CES 2022ರಲ್ಲಿ ಹೊಸ ಗ್ಯಾಜೆಟ್ಸ್‌ಗಳನ್ನು ಅನಾವರಣಗೊಳಿಸಿದೆ. ಇದರಲ್ಲಿ ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್ ಸಿಂಗಲ್‌ ಚಾರ್ಜ್‌ನಲ್ಲಿ 300 ಗಂಟೆಗಳ ತನಕ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಹೈಪರ್‌ಎಕ್ಸ್ ಕ್ಲಚ್ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಬ್ಲೂಟೂತ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಯುಎಸ್‌ಬಿ ಕೇಬಲ್ ಮೂಲಕ ಲ್ಯಾಪ್‌ಟಾಪ್‌ಗಳಿಗೆ ಕನೆಕ್ಟ್‌ ಮಾಡುವ ಅವಕಾಶವನ್ನು ಸಹ ನೀಡಿದೆ. ಹಾಗಾದ್ರೆ ಹೈಪರ್‌ ಎಕ್ಸ್‌ ಕಂಪೆನಿ ಪರಿಚಯಿಸಿರುವ ಹೊಸ ಗ್ಯಾಜೆಟ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್

ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್

ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್ ಸಿಂಗಲ್‌ ಚಾರ್ಜ್‌ನಲ್ಲಿ 300 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಇದು ಎಕ್ಸ್ ಆಡಿಯೊ ಅನುಭವವನ್ನು ಬೆಂಬಲಿಸುತ್ತದೆ. ಇನ್ನು ಈ ಹೆಡ್‌ಫೋನ್‌ಗಳು 50mm ಹೈಪರ್‌ಎಕ್ಸ್ ಆಡಿಯೋ ಡೈನಾಮಿಕ್ ಡ್ರೈವರ್‌ಗಳು ಮತ್ತು ಕಸ್ಟಮ್-ವಿನ್ಯಾಸಗೊಳಿಸಿದ ಡ್ಯುಯಲ್ ಚೇಂಬರ್ ಟೆಕ್ನಾಲಜಿಯನ್ನು ಒಳಗೊಂಡಿವೆ. ಈ ಹೆಡ್‌ಸೆಟ್‌ಗಳು ಎಲ್ಇಡಿ ಡಿಸ್‌ಪ್ಲೇಯೊಂದಿಗೆ ಡಿಟ್ಯಾಚೇಬಲ್ ನಾಯ್ಸ್‌ ಕ್ಯಾನ್ಸಲೇಶನ್‌ ಕಂಡೆನ್ಸರ್ ಮೈಕ್ರೊಫೋನ್ ಅನ್ನು ಸಹ ಹೊಂದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವಾಯರ್‌ಲೆಸ್ USB ಡಾಂಗಲ್ ಮತ್ತು USB 2.0 ಪೋರ್ಟ್ ಕೂಡ ಲಭ್ಯವಿದೆ.

ಹೈಪರ್‌ಎಕ್ಸ್ ಕ್ಲೌಡ್ II ಗೇಮಿಂಗ್ ಹೆಡ್‌ಸೆಟ್

ಹೈಪರ್‌ಎಕ್ಸ್ ಕ್ಲೌಡ್ II ಗೇಮಿಂಗ್ ಹೆಡ್‌ಸೆಟ್

ಇನ್ನು ಹೈಪರ್‌ಎಕ್ಸ್ ಕ್ಲೌಡ್ II ಗೇಮಿಂಗ್ ಹೆಡ್‌ಸೆಟ್ 53 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು 10Hz ನಿಂದ 23,000Hz ಫ್ರಿಕ್ವೆನ್ಸಿ ರೇಂಜ್‌ ನೀಡಲಿದೆ. ಇದಲ್ಲದೆ ಹೈಪರ್ಎಕ್ಸ್ ವರ್ಚುವಲ್ 7.1 ಸರೌಂಡ್ ಸೌಂಡ್ ಅನ್ನು ಸಹ ಹೊಂದಿವೆ.

ಹೈಪರ್‌ಎಕ್ಸ್ ಕ್ಲೌಡ್ ಕೋರ್ ಗೇಮಿಂಗ್ ಹೆಡ್‌ಸೆಟ್

ಹೈಪರ್‌ಎಕ್ಸ್ ಕ್ಲೌಡ್ ಕೋರ್ ಗೇಮಿಂಗ್ ಹೆಡ್‌ಸೆಟ್

ಇನ್ನು ಹೈಪರ್‌ X ಘೋಷಿಸಿದ ಮೂರನೇ ಹೆಡ್‌ಸೆಟ್ ಹೈಪರ್‌ಎಕ್ಸ್ ಕ್ಲೌಡ್ ಕೋರ್ ಗೇಮಿಂಗ್ ಹೆಡ್‌ಸೆಟ್ ಆಗಿದೆ. ಇದು 3D ಪ್ರಾದೇಶಿಕ ಆಡಿಯೊದೊಂದಿಗೆ DTS ಹೆಡ್‌ಫೋನ್‌ಎಕ್ಸ್ ಆಡಿಯೊವನ್ನು ಹೊಂದಿದೆ.

ವಾಯರ್‌ಲೆಸ್ ಗೇಮಿಂಗ್ ಕಂಟ್ರೋಲರ್

ವಾಯರ್‌ಲೆಸ್ ಗೇಮಿಂಗ್ ಕಂಟ್ರೋಲರ್

ಈ ಗೇಮಿಂಗ್‌‌ ಕಂಟ್ರೋಲರ್‌ ಅನ್ನು ಬ್ಲೂಟೂತ್ v4.2 ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಬಳಸಲು ಅನುಕೂಲವಾಗಲಿದೆ. ಇದರಲ್ಲಿ USB ಟೈಪ್-ಎ ಟು ಟೈಪ್-ಸಿ ಕೇಬಲ್ ಅಥವಾ 2.4GHz ವೈರ್‌ಲೆಸ್ ರಿಸೀವರ್ ಬಳಸಿ ಲ್ಯಾಪ್‌ಟಾಪ್‌ಗಳಿಗೆ ಕನೆಕ್ಟ್‌ ಮಾಡುವ ಅವಕಾಶ ಹೊಂದಿದೆ. ಇದು 660mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 19 ಗಂಟೆಗಳವರೆಗಿನ ಬಾಳಿಕೆ ನೀಡಲಿದೆ. ಜೊತೆಗೆ ಡಿಟ್ಯಾಚೇಬಲ್ ಸೆಟ್‌ ಮಾಡಬಹುದಾದ ಮೊಬೈಲ್ ಫೋನ್ ಕ್ಲಿಪ್ ಅನ್ನು ಸಹ ಒಳಗೊಂಡಿದ್ದು, ಇದನ್ನು 44mm ನಿಂದ 86mm ಗೆ ಸೆಟ್‌ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ಗೇಮಿಂಗ್ ಹೆಡ್‌ಸೆಟ್‌ನ ಬೆಲೆ $199.99 (ಅಂದಾಜು 14,900ರೂ)ಆಗಿದ್ದು, ಫೆಬ್ರವರಿಯಲ್ಲಿ ಲಭ್ಯವಿರುತ್ತದೆ. ಇನ್ನು ಹೈಪರ್‌ಎಕ್ಸ್ ಕ್ಲೌಡ್ II ಗೇಮಿಂಗ್ ಹೆಡ್‌ಸೆಟ್ $99.99 (ಅಂದಾಜು 7,400ರೂ) ಬೆಲೆ ಹೊಂದಿದ್ದು, ಮಾರ್ಚ್‌ನಿಂದ ಲಭ್ಯವಿರುತ್ತದೆ. ಇದಲ್ಲದೆ ಹೈಪರ್‌ಎಕ್ಸ್ ಕ್ಲೌಡ್ ಕೋರ್ ಗೇಮಿಂಗ್ ಹೆಡ್‌ಸೆಟ್ ಜನವರಿಯಿಂದ $69.99 (ಸುಮಾರು 5,200ರೂ) ಗೆ ಲಭ್ಯವಿರುತ್ತದೆ. ಹೈಪರ್‌ಎಕ್ಸ್ ಕ್ಲಚ್ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಬೆಲೆ $49.99 (ಸುಮಾರು ರೂ. 3,700)ಆಗಿದೆ.

Best Mobiles in India

English summary
HyperX Cloud Alpha Wireless Gaming Headset offers up to 300 hours of battery life on a single charge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+