CES 2022: ಇಂಟೆಲ್‌ ಸಂಸ್ಥೆಯಿಂದ ಹೊಸ ವೇಗದ ಪ್ರೊಸೆಸರ್‌ ಅನಾವರಣ!

|

ಪ್ರಸಕ್ತ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES 2022) ಈಗಾಗಲೇ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಟೆಕ್‌ ಜಗತ್ತಿನ ದೈತ್ಯ ಕಂಪೆನಿಗಳೆಲ್ಲಾ ತಮ್ಮ ವಿವಿಧ ಮಾದರಿಯ ಗ್ಯಾಜೆಟ್ಸ್‌ಗಳನ್ನು ಅನಾವರಣಗೊಳಿಸಿವೆ. ಹಲವು ಅಚ್ಚರಿ ಗ್ಯಾಜೆಟ್ಸ್‌ಗಳನ್ನು ಪ್ರದರ್ಶನ ಮಾಡುವ ಮೂಲಕ ಟೆಕ್‌ ವಲಯದಲ್ಲಿ ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಇದರ ನಡುವೆ ಪ್ರಮುಖ ಪ್ರೊಸೆಸರ್‌ ಕಂಪೆನಿ ಇಂಟೆಲ್‌ ತನ್ನ ಹೊಸ ಪ್ರೊಸೆಸರ್‌ ಅನ್ನು ಅನಾವರಣಗೊಳಿಸಿದೆ.

ಇಂಟೆಲ್‌

ಹೌದು, ಇಂಟೆಲ್‌ ಕಂಪೆನಿ CES 2022ರಲ್ಲಿ ಹೊಸ ಇಂಟೆಲ್ ಕೋರ್ i9-12900KS ಅನ್ನು ಪ್ರಕಟಿಸಿದೆ. ಇದು 12 ನೇ ಜನ್ ಇಂಟೆಲ್ ಕೋರ್ 'ಆಲ್ಡರ್ ಲೇಕ್' CPU ಒಂದೇ ಕೋರ್‌ನಲ್ಲಿ 5.5GHz ಬೂಸ್ಟ್ ಕ್ಲಾಕ್‌ ಸ್ಪೀಡ್‌ ನೀಡಲಿದೆ ಎನ್ನಲಾಗಿದೆ. ಇದು ಮಲ್ಟಿ-ಕೋರ್ ಕಾರ್ಯಗಳನ್ನು ನಿರ್ವಹಿಸುವಾಗ ಎಲ್ಲಾ ಕೋರ್‌ಗಳಲ್ಲಿ 5.2GHz ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂಟೆಲ್‌ನಿಂದ ಡೆಸ್ಕ್‌ಟಾಪ್‌ಗಳಿಗಾಗಿ ಪರಿಚಯಿಸಿರುವ ಮೊದಲ ವಿಶೇಷ ಆವೃತ್ತಿ ಪ್ರೊಸೆಸರ್ ಆಗಿದೆ. ಹಾಗಾದ್ರೆ ಇಂಟೆಲ್‌ನ ಹೊಸ ಪ್ರೊಸೆಸರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟೆಲ್‌

ಇಂಟೆಲ್‌ ಕಂಪೆನಿ CES 2022ರಲ್ಲಿ ಹೊಸದಾಗಿ ಪರಿಚಯಿಸಿರುವ ಹೊಸ ಪ್ರೊಸೆಸರ್ ಕೋರ್ i9-12900K CPU ಮಾದರಿಯನ್ನೇ ಹೋಲುತ್ತದೆ. ಇದು ಎಂಟು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ಎಂಟು ದಕ್ಷತೆಯ ಕೋರ್‌ಗಳನ್ನು ಹೊಂದಿದೆ. ಇಂಟೆಲ್‌ ಕಂಪನಿಯ ಪ್ರಕಾರ, ಹೊಸ 12 ನೇ ಜನರಲ್ ಆಲ್ಡರ್ ಲೇಕ್ ಇಂಟೆಲ್ ಕೋರ್ i9-12900KS 40% ಹೈಯರ್ ಪರ್ಫಾರ್ಮೆನ್ಸ್ ನೀಡುತ್ತದೆ. ಇನ್ನು ಈ ಕಾರ್ಯಕ್ರಮದಲ್ಲಿ ಇಂಟೆಲ್‌ ಕಂಪೆನಿ CPU ಚಾಲನೆಯಲ್ಲಿರುವ Hitman 3 ನ ಲೈವ್ ಡೆಮೊವನ್ನು ಕೂಡ ನಡೆಸಿದೆ. ಈ ಡೆಮೊದಲ್ಲಿ ಹೊಸ ಪ್ರೊಸೆಸರ್‌ನ CPU ಎಲ್ಲಾ ಎಂಟು ಕಾರ್ಯಕ್ಷಮತೆಯ ಕೋರ್‌ಗಳಲ್ಲಿ 5.2GHz ಕ್ಲಾಕ್‌ ಸ್ಪೀಡ್‌ ಅನ್ನು ನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಇಂಟೆಲ್

ಇದಲ್ಲದೆ ಇಂಟೆಲ್ ಕೋರ್ i9-12900KS ಅನ್ನು ವಿಶೇಷವಾಗಿ ಹೆಚ್ಚಿನ ಕಾರ್ಯಕ್ಷಮತೆಗಾಗಿ ಬಿನ್ ಮಾಡಲಾಗಿದೆ. ಈ ವಿಶೇಷ ಆವೃತ್ತಿಯ ಚಿಪ್ ಇಂಟೆಲ್ ಕೋರ್ i9-9900KS CPU ಅನ್ನು ಅನುಸರಿಸುತ್ತದೆ ಎನ್ನಲಾಗಿದೆ. ಹೊಸ ಪ್ರೊಸೆಸರ್‌ 9 ನೇ ತಲೆಮಾರಿನ ಇಂಟೆಲ್‌ ಕೋರ್‌ 'Ice Lake' 10nm CPU ಬಳಕೆದಾರರಿಗೆ ನೀಡಿರುವುದನ್ನು ಗಮನಿಸಬಹುದಾಗಿದೆ. ಈ ಎಲ್ಲಾ ಕೋರ್‌ಗಳಲ್ಲಿ CPU ಅನ್ನು 5.0GHz ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಈ ಹೊಸ ಕೋರ್ i9-12900KS ಒಂದೇ ಕೋರ್‌ನಲ್ಲಿ 5.5GHz ಬೂಸ್ಟ್ ಕ್ಲಾಕ್‌ ಅನ್ನು ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಈ ಎಲ್ಲಾ ಕೋರ್‌ಗಳಲ್ಲಿ 5.2GHz ಅನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಇಂಟೆಲ್‌

ಇನ್ನು ಇಂಟೆಲ್‌ ಕಂಪನಿಯ ಪ್ರಕಾರ, ಹೊಸ ಇಂಟೆಲ್ ಕೋರ್ i9-12900KS ತಯಾರಕರಿಗೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಹಿಂದಿನ ಇಂಟೆಲ್‌ ಕೋರ್‌ i9-9900KS ವಿಶೇಷ ಆವೃತ್ತಿಯ CPU ಮಾದರಿಯಲ್ಲಿಯೇ ಗ್ರಾಹಕರು ಹೊಸ CPU ಅನ್ನು ರಿಟೇಲ್‌ ಸ್ಟೋರ್‌ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಈ ಕೋರ್ i9-12900KS AMD ಯ ಹೊಸ Ryzen 7 5800X3D ಯೊಂದಿಗೆ ಸ್ಪರ್ಧಿಸುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಕೆಲವು ಗೇಮಿಂಗ್ ಮಾನದಂಡಗಳಲ್ಲಿ ಇಂಟೆಲ್‌ ಕೋರ್‌ i9-12900K ಅನ್ನು ಮೀರಿಸುತ್ತದೆ ಎಂದು ಡೆಮೋದಲ್ಲಿ ತೋರಿಸಲಾಗಿದೆ.

Best Mobiles in India

English summary
Intel Core i9-12900KS was announced by the company at CES 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X