CES 2022: ಜೆಬಿಎಲ್ ಸಂಸ್ಥೆಯಿಂದ ಹೊಸ ಮಾದರಿಯ ಬ್ಲೂಟೂತ್ ಸ್ಪೀಕರ್ ಅನಾವರಣ!
ಟೆಕ್ ಮಾರುಕಟ್ಟೆಯಲ್ಲಿ ಜೆಬಿಎಲ್ ಕಂಪೆನಿ ಗುಣಮಟ್ಟದ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಬ್ಲೂಟೂತ್ ಸ್ಪೀಕರ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES 2022)ನಲ್ಲಿ ಬ್ಲೂಟೂತ್ ಸ್ಪೀಕರ್ ಲೈನ್‌ಅಪ್ ಮತ್ತು ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್ ಸರಣಿಯನ್ನು ಬಿಡುಗಡೆ ಮಾಡಿದೆ. ಇವುಗಳನ್ನು JBL ಪಲ್ಸ್ 5 ಮತ್ತು JBL ಬೂಮ್‌ಬಾಕ್ಸ್ 3 ಎಂದು ಹೇಳಲಾಗಿದೆ. ಈ ಸ್ಪೀಕರ್‌ಗಳು ಬ್ಲೂಟೂತ್ v5.3 ಕನೆಕ್ಟಿವಿಟಿ ನೀಡಲಿದ್ದು, ವಾಯರ್‌ಲೆಸ್ ಜೋಡಣೆಯನ್ನು ನೀಡುತ್ತದೆ.

ಹೌದು, ಜೆಬಿಎಲ್ ಕಂಪೆನಿ ಹೊಸ ಬ್ಲೂಟೂತ್ ಸ್ಪೀಕರ್ ಮತ್ತು ವಾಯರ್ ಲೆಸ್ ಗೇಮಿಂಗ್ ಹೆಡ್‌ಸೆಟ್ ಸಿರೀಸ್ ಅನ್ನು ಪರಿಚಯಿಸಿದೆ. ಇದರಲ್ಲಿ ಜೆಬಿಎಲ್ ಪಲ್ಸ್ 5, ಜೆಬಿಎಲ್ ಬೂಮ್‌ಬಾಕ್ಸ್ 3, ಜೆಬಿಎಲ್ ಪಾರ್ಟಿಬಾಕ್ಸ್ ಎನ್ಕೋರ್ ಗಳು ಸೇರಿವೆ. JBL ಪಲ್ಸ್ 5 ಜೋಡಿಗಳು LED ಲೈಟ್ ಶೋ ನೀಡಲಿದೆ. ಇನ್ನು JBL ಬೂಮ್‌ಬಾಕ್ಸ್ 3 ಮೂರು-ಮಾರ್ಗದ ಅಕೌಸ್ಟಿಕ್ ಸ್ಪೀಕರ್ ವಿನ್ಯಾಸವನ್ನು ಹೊಂದಿದೆ ಮತ್ತು 24 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತದೆ. ಹಾಗಾದ್ರೆ ಜೆಬಿಎಲ್ ಪರಿಚಯಿಸಿರುವ ಹೊಸ ಮಾದರಿಯ ಸ್ಪೀಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

JBL ಪಲ್ಸ್ 5 ಜೋಡಿ 360-ಡಿಗ್ರಿ ತಲ್ಲೀನಗೊಳಿಸುವ ಸೌಂಡ್ ಸಿಸ್ಟಂ ಅನ್ನು ನೀಡಲಿದೆ. ಹಾಗೆಯೇ JBL ಬೂಮ್‌ಬಾಕ್ಸ್ 3 ಮೂರು-ಮಾರ್ಗದ ಅಕೌಸ್ಟಿಕ್ ಸ್ಪೀಕರ್ ವಿನ್ಯಾಸವನ್ನು ಹೊಂದಿದೆ. ಈ ಎರಡೂ ಡಿವೈಸ್‌ಗಳು ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.3 ಅನ್ನು ಹೊಂದಿವೆ. ಜೊತೆಗೆ ಸ್ಪೀಕರ್‌ಗೆ ಎರಡು ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಿಗೆ ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ನೀಡುತ್ತವೆ. ಈ ಸ್ಪೀಕರ್‌ಗಳು ವಾಟರ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟ್ ಮಾಡಲ್ಪಟ್ಟಿದೆ. ಇದಲ್ಲದೆ ಗೂಗಲ್ ಪ್ಲೇ ಮತ್ತು ಆಪಲ್ ನ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ JBL ಪೋರ್ಟಬಲ್ ಅಪ್ಲಿಕೇಶನ್ ಮೂಲಕ ಬಳಕೆದಾರರು ಕಲರ್ ಮತ್ತು ಎಫೆಕ್ಟ್‌ಗಳನ್ನು ಆಯ್ಕೆ ಮಾಡಬಹುದು. ಹಾಗೆಯೇ JBL ಪಲ್ಸ್ 5 ಮತ್ತು JBL ಬೂಮ್‌ಬಾಕ್ಸ್ 3 ಅನ್ನು ಸ್ಟಿರಿಯೊ ಸೌಂಡ್‌ಗಾಗಿ ಎರಡು JBL ಪಾರ್ಟಿಬೂಸ್ಟ್ ಸೆಟ್ ಸ್ಪೀಕರ್‌ಗಳೊಂದಿಗೆ ಜೋಡಿಸಬಹುದಾಗಿದೆ. JBL ಪಲ್ಸ್ 5 ಸಿಂಗಲ್ ಚಾರ್ಜ್‌ನಲ್ಲಿ 12 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಇನ್ನು JBL ಬೂಮ್‌ಬಾಕ್ಸ್ 3 ಸಬ್ ವೂಫರ್ ಎರಡು ಮಿಡ್‌ರೇಂಜ್ ಆಡಿಯೋ ಡ್ರೈವರ್‌ಗಳು ಮತ್ತು ಎರಡು ಟ್ವೀಟರ್‌ಗಳನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೆ ಪೋರ್ಟಬಲ್ ಸ್ಪೀಕರ್ ಪೂರ್ವವರ್ತಿಗಳಿಗಿಂತ ಡೀಪ್ ಬಾಸ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. JBL ಬೂಮ್‌ಬಾಕ್ಸ್ 3 ಪ್ಲೇಟೈಮ್ 24 ಗಂಟೆಗಳವರೆಗೆ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಇಂಟರ್‌ಬಿಲ್ಟ್ ಪವರ್ ಬ್ಯಾಂಕ್ ಅನ್ನು ಹೊಂದಿರಲಿದೆ. ಇದಲ್ಲದೆ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಅನುಮತಿಸುತ್ತದೆ.

ಜೆಬಿಎಲ್ ಕಂಪೆನಿ ಬಿಡುಗಡೆ ಮಾಡಿರುವ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಜೆಬಿಎಲ್ ಪಾರ್ಟಿಬಾಕ್ಸ್ ಎನ್ಕೋರ್ ಕೂಡ ಸೇರಿದೆ. ಇದರಲ್ಲಿ ಡಿಜಿಟಲ್ ವಾಯರ್‌ಲೆಸ್ ಮೈಕ್ರೊಫೋನ್‌ಗಳೊಂದಿಗೆ ಬರುತ್ತದೆ. ಇದಲ್ಲದೆ JBL ಪಾರ್ಟಿಬಾಕ್ಸ್ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಲೈಟ್‌ಶೋ ಅನ್ನು ಕಸ್ಟಮೈಸ್ ಮಾಡಬಹುದು. ಇದು 100W ನ ಸ್ಪೀಕರ್ ಔಟ್‌ಪುಟ್ ಶಕ್ತಿಯನ್ನು ಹೊಂದಿದ್ದು, JBL ಪಾರ್ಟಿಬಾಕ್ಸ್ ಲೈಟ್‌ಶೋನೊಂದಿಗೆ 10 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತದೆ. ಇದು USB ಮತ್ತು ಆಕ್ಸ್-ಇನ್ ಇನ್‌ಪುಟ್ ಅನ್ನು ಹೊಂದಿದೆ. JBL ಪಾರ್ಟಿಬಾಕ್ಸ್ ಎನ್ಕೋರ್ ಅನ್ನು ಸ್ಟಿರಿಯೊ ಸೌಂಡ್‌ಗಾಗಿ ಎರಡು ಸ್ಪೀಕರ್‌ಗಳನ್ನು ಒಟ್ಟಿಗೆ ಜೋಡಿಸಲು ಬಳಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ
ಹೊಸ JBL ಪಲ್ಸ್ 5 ಬೆಲೆ ಯುರೋ 249 (ಸುಮಾರು ರೂ. 20,900) ಹೊಂದಿದೆ. ಇನ್ನು JBL ಬೂಮ್‌ಬಾಕ್ಸ್ 3 ಬೆಲೆ ಯುರೋ 549 (ಸುಮಾರು ರೂ. 46,200) ಗೆ ಮಾರಾಟವಾಗಲಿದೆ. ಇದಲ್ಲದೆ ಹೆಚ್ಚುವರಿಯಾಗಿ, JBL ಪಾರ್ಟಿಬಾಕ್ಸ್ ಎನ್ಕೋರ್ ಯುರೋ 349 (ಅಂದಾಜು 29,300ರೂ) ಬೆಲೆಗೆ ಮಾರಾಟವಾಗಲಿದೆ. ಇದರಲ್ಲಿ JBL ಬೂಮ್‌ಬಾಕ್ಸ್ 3 ಕಪ್ಪು ಮತ್ತು ಸ್ಕ್ವಾಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇತರ ಎರಡು ಡಿವೈಸ್‌ಗಳ ಬಣ್ಣ ಆಯ್ಕೆಗಳನ್ನು JBL ಇನ್ನೂ ಬಹಿರಂಗಪಡಿಸಿಲ್ಲ.


Click it and Unblock the Notifications








