CES 2022: ಲೆನೊವೊ ಕಂಪೆನಿಯಿಂದ ಥಿಂಕ್‌ಪ್ಯಾಡ್ Z-ಸರಣಿ ಲ್ಯಾಪ್‌ಟಾಪ್‌ ಅನಾವರಣ!

|

CES 2022 (ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ) ಇಂದಿನಿಂದ ಲಾಸ್‌ ವೇಗಸ್‌ನಲ್ಲಿ ಶುರುವಾಗಲಿದೆ. ಈ ಕಾರ್ಯಕ್ರಮದಲ್ಲಿ ಟೆಕ್‌ ಕಂಪೆನಿಗಳು ತಮ್ಮ ಗ್ಯಾಜೆಟ್ಸ್‌ಗಳನ್ನು ಪ್ರದರ್ಶನ ಮಾಡುತ್ತವೆ. ಈ ಕಾರ್ಯಕ್ರಮದಲ್ಲಿ ಹಲವಾರು ಅಚ್ಚರಿಯ ಪ್ರಾಡಕ್ಟ್‌ಗಳು ಕೂಡ ಪ್ರದರ್ಶನವಾಗಲಿವೆ. ಜಾಗತಿಕವಾಗಿ ಟೆಕ್‌ ಕಂಪೆನಿಗಳು ತಮ್ಮ ಗ್ಯಾಜೆಟ್ಸ್‌ಗಳನ್ನು ಪ್ರದರ್ಶನ ಮಾಡುವುದರಿಂದ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಇದೀಗ CES 2022ಯಲ್ಲಿ ಲೆನೊವೊ ಕಂಪೆನಿ ತನ್ನ ಹೊಸ ಮಾದರಿಯ ಥಿಂಕ್‌ಪ್ಯಾಡ್‌ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ CES 2022ರಲ್ಲಿ ಹೊಸ ಥಿಂಕ್‌ಪ್ಯಾಡ್‌ ಸರಣಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ವಿನ್ಯಾಸದಲ್ಲಿ ಹೆಚ್ಚಾಗಿ ಮೃದುವಾಗಿರುತ್ತವೆ ಮತ್ತು ಬ್ಯಸಿನೆಸ್‌ ಬಳಕೆದಾರರಿಗೆ ಇದು ಸೂಕ್ತವಾಗಿದೆ ಎನ್ನಲಾಗಿದೆ. ಇನ್ನು ಹೊಸ ಥಿಂಕ್‌ಪ್ಯಾಡ್ Z-ಸರಣಿ ಲ್ಯಾಪ್‌ಟಾಪ್‌ಗಳು ರಿಸೈಕಲ್ಡ್ ವೇಗಾನ್ ಲೆದರ್, ರಿಸೈಕಲ್ಡ್ ಅಲ್ಯೂಮಿನಿಯಂ ಬಳಸಿ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಥಿಂಕ್‌ಪ್ಯಾಡ್ Z13

ಲೆನೊವೊ ಥಿಂಕ್‌ಪ್ಯಾಡ್ Z13

ಲೆನೊವೊ ಥಿಂಕ್‌ಪ್ಯಾಡ್ Z13 ಲ್ಯಾಪ್‌ಟಾಪ್‌ 2880x1620 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 13.5-ಇಂಚಿನ IPS OLED ಡಾಲ್ಬಿ ವಿಷನ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 91.6% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 16:10 ರ ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಮೇಲ್ಭಾಗದಲ್ಲಿ ನಾಚ್ ಅಥವಾ ಕಮ್ಯುನಿಕೇಷನ್ಸ್ ಬಾರ್ ಅನ್ನು ಹೊಂದಿದೆ. ಜೊತೆಗೆ ಇದು 1080p ವೆಬ್‌ಕ್ಯಾಮ್ ಮತ್ತು ಡ್ಯುಯಲ್-ಅರೇ ಮೈಕ್ರೊಫೋನ್‌ಗಳನ್ನು ಹೊಂದಿದ್ದು, ಜೂಮ್ ಕರೆಗಳಿಗೆ ಉತ್ತಮವಾಗಿದೆ ಎಂದು ಲೆನೊವೊ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಎಎಮ್‌ಡಿ ರೈಜೆನ್ ಪ್ರೊ ಯು-ಸಿರೀಸ್ ಪ್ರೊಸೆಸರ್ ಬಲವನ್ನು ಒಳಗೊಂಡಿದೆ. ಇದು 32GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ.

ಲೆನೊವೊ Z13 ಲ್ಯಾಪ್‌ಟಾಪ್‌

ಇನ್ನು ಲೆನೊವೊ Z13 ಲ್ಯಾಪ್‌ಟಾಪ್‌ ಜೊತೆಯಲ್ಲಿ 4.7-ಇಂಚಿನ ಹ್ಯಾಪ್ಟಿಕ್ ಟಚ್‌ಪ್ಯಾಡ್, ಮ್ಯಾಚ್-ಆನ್-ಚಿಪ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ನೀಡಿದೆ. ವಾಯರ್‌ಲೆಸ್‌ ಕಮ್ಯೂನಿಕೇಶನ್‌ಗಾಗಿ ಈ ಲ್ಯಾಪ್‌ಟಾಪ್ Wi-Fi 6E, ಬ್ಲೂಟೂತ್ 5.2 ಮತ್ತು LTE ನೊಂದಿಗೆ ಬರುತ್ತದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 3.5mm ಆಡಿಯೋ ಜ್ಯಾಕ್ ಮತ್ತು ಎರಡು USB-C ಪೋರ್ಟ್‌ಗಳನ್ನು ಒಳಗೊಂಡಿದ್ದು, ಇವೆರಡೂ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.

ಲೆನೊವೊ ಥಿಂಕ್‌ಪ್ಯಾಡ್‌ Z16

ಲೆನೊವೊ ಥಿಂಕ್‌ಪ್ಯಾಡ್‌ Z16

ಲೆನೊವೊ ಥಿಂಕ್‌ಪ್ಯಾಡ್‌ Z16 ಲ್ಯಾಪ್‌ಟಾಪ್‌ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 16 ಇಂಚಿನ IPS OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ಅನ್ನು ಹೊಂದಿದ್ದು, 92.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಅಲ್ಲದೆ ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ. ಇದು ಡಾಲ್ಬಿ ವಿಷನ್ ವಿಷಯವನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 1080p ವೆಬ್‌ಕ್ಯಾಮ್ ಮತ್ತು ಡ್ಯುಯಲ್-ಅರೆ ಮೈಕ್‌ಗಳೊಂದಿಗೆ ನಾಚ್ ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಎಎಮ್‌ಡಿ ರೈಜೆನ್ ಪ್ರೊ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ 32GB RAM ಮತ್ತು 2TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6E, LTE ಮತ್ತು ಬ್ಲೂಟೂತ್ 5.2 ಅನ್ನು ಒಳಗೊಂಡಿವೆ. ಇದು USB-C ಪೋರ್ಟ್‌ಗಳು, 3.5mm ಹೆಡ್‌ಫೋನ್ ಜ್ಯಾಕ್ ಮತ್ತು SD ಕಾರ್ಡ್ ರೀಡರ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ ಸ್ಪೀಕರ್‌ಗಳು Dolby Atmos ಅನ್ನು ಬೆಂಬಲಿಸಲಿದ್ದು, ಮೈಕ್ರೊಫೋನ್‌ ಕರೆಗಳಿಗಾಗಿ Dolby Voice AI ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಬಳಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ 70Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಥಿಂಕ್‌ಪ್ಯಾಡ್ Z13 ಲ್ಯಾಪ್‌ಟಾಪ್‌ ಬೆಲೆ $1,549 (ಅಂದಾಜು 1,15,600ರೂ) ರಿಂದ ಪ್ರಾರಂಭವಾಗುತ್ತದೆ. ಆದರೆ ಥಿಂಕ್‌ಪ್ಯಾಡ್ Z16 ಬೆಲೆಯು $2,099 (ಅಂದಾಜು 1,56,700ರೂ) ಗಳಿಂದ ಪ್ರಾರಂಭವಾಗುತ್ತದೆ. ಇನ್ನು ಲೆನೊವೊ ಕಂಪೆನಿ ಹೊಸ ಥಿಂಕ್‌ಪ್ಯಾಡ್ ಲ್ಯಾಪ್‌ಟಾಪ್‌ಗಳಿಗಾಗಿ ಮೇ ತಿಂಗಳ ಬಿಡುಗಡೆಯ ಟೈಮ್‌ಲೈನ್ ಅನ್ನು ಹೊಂದಿದೆ.

Best Mobiles in India

English summary
Lenovo's new ThinkPad laptops use recycled vegan leather and aluminium.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X