India

CES 2022: ಸ್ಯಾಮ್‌ಸಂಗ್‌ನಿಂದ ಹೊಸ ಫೋಲ್ಡಬಲ್‌ ಡಿಸ್‌ಪ್ಲೇ ಟೆಕ್ನಾಲಜಿ ಅನಾವರಣ!

|

ಪ್ರಸ್ತುತ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES 2022) ಲಾಸ್‌ವೇಗಸ್‌ನಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಈ ಒಂದು ವೇದಿಕೆಯಲ್ಲಿ ಟೆಕ್‌ ವಲಯದ ಪ್ರಮುಖ ಕಂಪೆನಿಗಳು ತಮ್ಮ ಗ್ಯಾಜೆಟ್ಸ್‌ಗಳನ್ನು ಅನಾವರಣಗೊಳಿಸುತ್ತಿವೆ. ಸದ್ಯ ಇದೀಗ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ CES 2022ರಲ್ಲಿ ನಾಲ್ಕು ಫೋಲ್ಡಬಲ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಪ್ರದರ್ಶನ ಮಾಡಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದ ಮೂರು ಹೊಸ ಪ್ಯಾನೆಲ್‌ಗಳು ಮತ್ತು ಫೋಲ್ಡಬಲ್ ಲ್ಯಾಪ್‌ಟಾಪ್‌ಗಳಲ್ಲಿ ಬಳಸಬಹುದಾದ ಡಿಸ್‌ಪ್ಲೇ ಸೇರಿವೆ.

CES 2022

ಹೌದು, CES 2022ರಲ್ಲಿ ಸ್ಯಾಮ್‌ಸಂಗ್‌ ಕಂಪನಿಯು ನಾಲ್ಕು ಫೋಲ್ಡಬಲ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಅನಾವರಣಗೊಳಿಸಿದೆ. ಈ ಡಿಸ್‌ಪ್ಲೇಗಳನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಫೋಲ್ಡಬಲ್ ಹ್ಯಾಂಡ್‌ಸೆಟ್‌ಗಳಲ್ಲಿ ಬಳಸಬಹುದು ಎನ್ನಲಾಗಿದೆ. ಅಲ್ಲದೆ ಕಂಪನಿಯು ತನ್ನ ಫ್ಲೆಕ್ಸ್ ಎಸ್, ಫ್ಲೆಕ್ಸ್ ಜಿ ಮತ್ತು ಫ್ಲೆಕ್ಸ್ ಸ್ಲೈಡಬಲ್ ಪ್ಯಾನೆಲ್‌ಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ಬಳಸುವ ಗುರಿಯನ್ನು ಹೊಂದಿದೆ. ಹಾಗಾದ್ರೆ CES 2022ಯಲ್ಲಿ ಸ್ಯಾಮ್‌ಸಂಗ್‌ ಅನಾವರಣಗೊಳಿಸಿರುವ ಡಿಸ್‌ಪ್ಲೇ ಟೆಕ್ನಾಲಜಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲೆಕ್ಸ್ ಎಸ್

ಫ್ಲೆಕ್ಸ್ ಎಸ್

ಸ್ಯಾಮ್‌ಸಂಗ್‌ನ ಫ್ಲೆಕ್ಸ್ ಎಸ್ ಒಂದು ಟ್ರೈ-ಫೋಲ್ಡಿಂಗ್ ಡಿಸ್ಪ್ಲೇ ಆಗಿದ್ದು, ಸಾಂಪ್ರದಾಯಿಕ ಫೋಲ್ಡಬಲ್‌ಗಳಿಗಿಂತ ಭಿನ್ನವಾಗಿ, ಡಿಸ್ಪ್ಲೇಯಲ್ಲಿ ಮೂರು ಪಾಯಿಂಟ್‌ಗಳನ್ನು ಬಳಸಿ ಮಡಚಬಹುದು, ಎರಡು ಸಾಮಾನ್ಯ ಫೋಲ್ಡಬಲ್‌ಗಳಿಗೆ ವಿರುದ್ಧವಾಗಿ ಡಿವೈಸ್‌ ಅನ್ನು "S" ಆಕಾರದಲ್ಲಿ ಮಡಚಬಹುದು ಮತ್ತು ಬಿಚ್ಚಬಹುದು. ಆದ್ದರಿಂದ ಈ ಡಿಸ್‌ಪ್ಲೇಯನ್ನು ಫ್ಲೆಕ್ಸ್‌ ಎಸ್‌ ಎಂದು ಹೆಸರಿಸಲಾಗಿದೆ. ಫ್ಲೆಕ್ಸ್ ಎಸ್ ಸ್ಕ್ರೀನ್‌ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್‌ ಹೊಂದಿದೆ. ಇದರಿಂದ ಹೊರಮುಖವಾಗಿ ಗೀರುಗಳು ಮತ್ತು ಹಾನಿಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ.

ಫ್ಲೆಕ್ಸ್ ಜಿ

ಫ್ಲೆಕ್ಸ್ ಜಿ

ಫ್ಲೆಕ್ಸ್ ಜಿ ಕೂಡ ಫ್ಲೆಕ್ಸ್‌ S ಮಾದರಿಯಲ್ಲಿಯೇ ಮಲ್ಟಿ-ಪಾಯಿಂಟ್ ಮಡಿಸಬಹುದಾದ ಡಿವೈಸ್‌ ಆಗಿದೆ. ಇದನ್ನು "G" ಆಕಾರದಲ್ಲಿ ಎರಡು ಬಾರಿ ಒಳಮುಖವಾಗಿ ಮಡಚಬಹುದು. ಇದರಿಂದ ಡಿಸ್‌ಪ್ಲೇ ಸ್ಕ್ರೀನ್‌ ಸವೆಯಲು ಮತ್ತು ಹರಿದುಹೋಗುವುದಿಲ್ಲ ಇದು ಗೀರುಗಳಿಂದ ರಕ್ಷಿಸಲ್ಪಡುತ್ತದೆ.

ಫ್ಲೆಕ್ಸ್‌ ಸ್ಲೈಡೆಬಲ್‌

ಫ್ಲೆಕ್ಸ್‌ ಸ್ಲೈಡೆಬಲ್‌

ಇನ್ನು ಸ್ಯಾಮ್‌ಸಂಗ್‌ ಕಂಪನಿಯು CES 2022 ರಲ್ಲಿ ಫ್ಲೆಕ್ಸ್‌ ಸ್ಲೈಡೆಬಲ್‌ ಎನ್ನುವ ಫೋಲ್ಡ್‌ ಮಾಡಬಹುದಾದ ಟೆಕ್ನಾಲಜಿಯನ್ನ ಸಹ ಪ್ರದರ್ಶನ ಮಾಡಿದೆ. ಇದು ಒಪ್ಪೋ X 2021 ಸ್ಮಾರ್ಟ್‌ಫೋನ್ ಅನ್ನು ಹೋಲುವ ಪರಿಚಿತ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಫ್ಲೆಕ್ಸ್ ಸ್ಲೈಡಬಲ್ ಪ್ಯಾನೆಲ್ ಅನ್ನು ಕಾನ್ಸೆಪ್ಟ್ ಹ್ಯಾಂಡ್‌ಸೆಟ್‌ನಲ್ಲಿ ತೋರಿಸಲಾಗಿದೆ. ಅಲ್ಲದೆ ಸ್ಲೈಡಿಂಗ್ ಡಿಸ್‌ಪ್ಲೇ ಜೊತೆಗೆ ಹೆಚ್ಚುವರಿ ಸ್ಕ್ರೀನ್‌ ಸ್ಪೇಸ್‌ ನೀಡಲಿದೆ. ಇದು One UI Android ಸ್ಕಿನ್‌ನಲ್ಲಿ ಕಂಡುಬರುವ ಸ್ವೈಪ್ ಮಾಡಬಹುದಾದ ಶಾರ್ಟ್‌ಕಟ್ ಪ್ಯಾನೆಲ್‌ಗೆ ಹೋಲುತ್ತದೆ.

ಫ್ಲೆಕ್ಸ್ ನೋಟ್‌

ಫ್ಲೆಕ್ಸ್ ನೋಟ್‌

ಫ್ಲೆಕ್ಸ್ ನೋಟ್‌ 17.3-ಇಂಚಿನ OLED ಪ್ಯಾನೆಲ್ ಅನ್ನು ಹೊಂದಿದ್ದು, ಇದು ಸೆಟ್‌ ಆಗಲಿದೆ. ಇದನ್ನು ಮಡಿಸಿದಾಗ 13-ಇಂಚಿನ ಲ್ಯಾಪ್‌ಟಾಪ್‌ನ ಫಾರ್ಮ್ ಫ್ಯಾಕ್ಟರ್‌ಗೆ ಹಿತಕರವಾಗಿ ಹೊಂದಿಕೊಳ್ಳುತ್ತದೆ. ಇದರ ಮೂಲಕ ಡಿಸ್‌ಪ್ಲೇ ವಿನ್ಯಾಸದಲ್ಲಿ ಹೊಸ ಟೆಕ್ನಾಲಜಿಯನ್ನು ಪರಿಚಯಿಸಲು ಸ್ಯಾಮ್‌ಸಂಗ್‌ ಮುಂದಾಗಿದೆ. ಇದು ಭೌತಿಕ ಕೀಬೋರ್ಡ್ ಅನ್ನು ಬದಲಿಸುವ ಸ್ಕ್ರೀನ್‌ ಆಗಿದೆ. ಈ ಸ್ಕ್ರೀನ್‌ ನಿರಂತರ ಪ್ರದರ್ಶನ ನೀಡುವ ಲ್ಯಾಪ್‌ಟಾಪ್‌ಗಳ ಪರಿಕಲ್ಪನೆಯಾಗಿದೆ. ವರದಿಯ ಪ್ರಕಾರ, ಟಚ್ ಕೀಬೋರ್ಡ್ ಮತ್ತು ಇತರ ಇನ್‌ಪುಟ್ ಆಯ್ಕೆಗಳಿಗೆ ಪ್ರವೇಶವನ್ನು ಹೊಂದಿರುವಾಗ, ಮಾಧ್ಯಮ ಮತ್ತು ಇತರ ವಿಷಯವನ್ನು ಸೇವಿಸುವಾಗ ಬಳಕೆದಾರರು ಹೆಚ್ಚುವರಿ ಸ್ಕ್ರೀನ್ ರಿಯಲ್ ಎಸ್ಟೇಟ್‌ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

Most Read Articles
Best Mobiles in India

English summary
Samsung showed off four foldable display technologies at CES 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X