CES 2022: ವಿಶ್ವದ ಮೊದಲ ಕನ್ಸೂಮರ್ ಕ್ವಾಂಟಮ್ ಡಾಟ್ OLED TV ಪರಿಚಯಿಸಿದ ಸೋನಿ ಸಂಸ್ಥೆ!

|

ಟೆಕ್‌ ಕಂಪೆನಿಗಳ ಗ್ಯಾಜೆಟ್ಸ್‌ಗಳ ಪ್ರದರ್ಶನಕ್ಕೆ ವೇದಿಕೆಯಾಗಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2022 ಇಂದಿನಿಂದ ಶುರುವಾಗಿದೆ. ಈ ಕಾರ್ಯಕ್ರಮದಲ್ಲಿ ಟೆಕ್‌ ವಲಯದ ಎಲ್ಲಾ ಕಂಪೆನಿಗಳು ತಾವು ಪರಿಚಯಿಸುವ ಗ್ಯಾಜೆಟ್ಸ್‌ಗಳನ್ನು ಪ್ರದರ್ಶನ ಮಾಡಲಿವೆ. ಇನ್ನು ಈ ಕಾರ್ಯಕ್ರಮದಲ್ಲಿ ಸೋನಿ ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಆನಾವರಣಗೊಳಿಸಿದೆ. ಇದರಲ್ಲಿ ವಿಶ್ವದ ಮೊದಲ ಕನ್ಸೂಮರ್ ಕ್ವಾಂಟಮ್ ಡಾಟ್ OLED TV ಅಥವಾ QD-OLED ಟಿವಿಯನ್ನು ಸಹ ಬಿಡುಗಡೆ ಮಾಡಿದೆ.

ಸೋನಿ ಕಂಪೆನಿ CES 2022

ಹೌದು, ಸೋನಿ ಕಂಪೆನಿ CES 2022ರಲ್ಲಿ ಹೊಸ ಸ್ಮಾರ್ಟ್‌ಟಿವಿಗಳನ್ನು ಅನಾವರಣಗೊಳಿಸಿದೆ. ಸೋನಿ LG ಡಿಸ್‌ಪ್ಲೇಯಿಂದ OLED ಸ್ಕ್ರೀನ್‌ಗಳನ್ನು ಬಳಸುತ್ತಿದೆ ಎನ್ನಲಾಗಿದೆ. ಇದಲ್ಲದೆ ಸೋನಿ ಕಂಪೆನಿ ಸೋನಿ ಬ್ರಾವಿಯಾ XR A95K TV ಸ್ಮಾರ್ಟ್‌ಟಿವಿ ಜೊತೆಗೆ ಇನ್ನು ಎರಡು ಹೊಸ ಸ್ಮಾರ್ಟ್‌ಟಿವಿಯನ್ನು ಸಹ ಲಾಂಚ್‌ ಮಾಡಿದೆ. ಇದು OLED ಮತ್ತು MicroLED ನಡುವಿನ ಸ್ಕ್ರೀನ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ OLED ಮತ್ತು LCD ಸ್ಕ್ರೀನ್‌ ಟೆಕ್ನಾಲಜಿ ನಡುವಿನ ಮಿಡಲ್‌ ಗ್ರೌಂಡ್‌ ಹೊಂದಿದೆ. ಹಾಗಾದ್ರೆ ಸೋನಿ ಕಂಪೆನಿ ಲಾಂಚ್‌ ಮಾಡಿರುವ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

OLED

ಸೋನಿ ಕಂಪೆನಿ ವಿಶ್ವದ ಮೊದಲ ಕನ್ಸೂಮರ್‌ ಡಾಟ್‌ OLED TVಯನ್ನು ಪರಿಚಯಿಸಿದೆ. ಈ ಮೂಲಕ ಸ್ಯಾಮ್‌ಸಂಗ್‌ ಕಂಪೆನಿಗೂ ಮೊದಲೇ QD-OLED ಟಿವಿಗಳನ್ನು ಅನಾವರಣಗೊಳಸಿದೆ. ಇನ್ನು OLED ಡಿಸ್‌ಪ್ಲೇಗಳನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಚಿತ್ರದ ಗುಣಮಟ್ಟವನ್ನು ಇನ್ನುಷ್ಟು ಉತ್ತಮವಾಗಿ ನೀಡಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ QD-OLED ಸ್ಕ್ರೀನ್‌ಗಳು OLED ಸ್ಕ್ರೀನ್‌ಗಳ ಇನ್ಫಿನೈಟ್‌ ಬ್ಲಾಕ್ಸ್‌, ಕಾಂಟ್ರಾಸ್ಟ್ ಮತ್ತು ಕಲರ್‌ ರಿಚ್‌ನೆಸ್‌ ಅನ್ನು ಉಳಿಸಿಕೊಳ್ಳುತ್ತದೆ. ಜೊತೆಗೆ ಕ್ವಾಂಟಮ್ ಡಾಟ್ LED ಪ್ಯಾನೆಲ್‌ಗಳ ಉತ್ತಮತೆ, ಉತ್ತಮ ಬ್ರೈಟ್‌ನೆಸ್‌ ಅನ್ನು ಸಹ ಹೊಂದಿದೆ.

ಸೋನಿ

ಇನ್ನು ಸೋನಿ ಕಂಪೆನಿಯ ಪ್ರಮುಖ ಮಾದರಿಯು ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಟೋ HDR ಟೋನ್ ಮ್ಯಾಪಿಂಗ್‌ನಂತಹ ಫೀಚರ್ಸ್‌ಗಳನ್ನು ಪ್ಲೇಸ್ಟೇಷನ್ 5 ಕನ್ಸೋಲ್‌ಗಳು ಹೈ-ಗ್ರಾಫಿಕ್ಸ್ ಗೇಮ್‌ಗಳಲ್ಲಿ ಹೊಂದಿದೆ. ಇದಲ್ಲದೆ ಸೋನಿ 2022 ಕ್ಕೆ ತನ್ನ ಟಿವಿಗಳಲ್ಲಿ ಗೂಗಲ್‌ ಟಿವಿ ಇಂಟರ್ಫೇಸ್ ಅನ್ನು ಬಳಸುತ್ತಿದೆ, ಅಂದರೆ ನೀವು ಗೂಗಲ್‌ನ ಇತ್ತೀಚಿನ ಸಾಫ್ಟ್‌ವೇರ್ ಅನ್ನು ಕಾಣಬಹುದಾಗಿದೆ. ಆದರೆ ಈ ಸ್ಮಾರ್ಟ್‌ಟಿವಿಗಳಲ್ಲಿ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಇದು ಸ್ಟ್ಯಾಂಡ್ ಆಗಿರುತ್ತದೆ. ಒಂದು ರೀತಿಯ ಮತ್ತು ಟಿವಿ ಪ್ಯಾನೆಲ್ ಅನ್ನು ಸ್ಟ್ಯಾಂಡ್‌ನ ಮುಂಭಾಗಕ್ಕೆ ಅಥವಾ ಅದರ ಹಿಂಭಾಗಕ್ಕೆ ತರಬಹುದಾಗಿದೆ.

ಸೋನಿ ಬ್ರಾವಿಯಾ XR

ಇದಲ್ಲದೆ ಸೋನಿ ಕಂಪೆನಿ ಸೋನಿ ಬ್ರಾವಿಯಾ XR A95K ಟಿವಿ ಜೊತೆಗೆ, ಬ್ರಾವಿಯಾ A90K ಮತ್ತು ಬ್ರಾವಿಯಾ A80K ಸ್ಮಾರ್ಟ್‌ಟಿವಿಗಳನ್ನು ಸಹ ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಟಿವಿಗಳು LG ಡಿಸ್‌ಪ್ಲೇಯಿಂದ ಪಡೆದ OLED ಡಿಸ್‌ಪ್ಲೇಗಳನ್ನು ಬಳಸುತ್ತವೆ. ಇನ್ನು ಸೋನಿ OLED ಅಲ್ಲದ ಟಿವಿಗಳ ಸರಣಿಯನ್ನು ಸಹ ಅನಾವರಣಗೊಳಿಸಿದೆ. ಇವುಗಳು MiniLED ಸ್ಕ್ರೀನ್‌ಗಳನ್ನು ಹೊಂದಿವೆ. ಇನ್ನು ಸೋನಿ ಬ್ರಾವಿಯಾ XR X95K 4K ಪ್ಯಾನೆಲ್ ಅನ್ನು ಬಳಸುತ್ತದೆ. ಆದರೆ Z9K 8K ಪ್ಯಾನೆಲ್ ಅನ್ನು ಬಳಸುತ್ತದೆ. ಸೋನಿ ಈ ಟಿವಿಗಳಲ್ಲಿ ಪೂರ್ಣ-ಶ್ರೇಣಿಯ ಸ್ಥಳೀಯ ಡಿಮ್ಮಿಂಗ್ ಬ್ಯಾಕ್‌ಲೈಟ್‌ನ ನಿಖರವಾದ ನಿಯಂತ್ರಣಕ್ಕಾಗಿ "ಬ್ಯಾಕ್‌ಲೈಟ್ ಮಾಸ್ಟರ್ ಡ್ರೈವ್" ಅನ್ನು ಬಳಸಲಿದೆ ಎಂದು ಹೇಳಲಾಗಿದೆ.

Best Mobiles in India

English summary
Sony launched the world’s first consumer Quantum Dot OLED TV, or QD-OLED TV, alongside a bunch of other televisions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X