Home
ಸುದ್ದಿಜಾಲ

CES 2024:ಲೆನೊವೊ ಸಂಸ್ಥೆಯಿಂದ ಬಜೆಟ್‌ ಸ್ನೇಹಿ ಟ್ಯಾಬ್‌ ಲಾಂಚ್‌!..7,040mAh ಸಾಮರ್ಥ್ಯದ ಬ್ಯಾಟರಿ!

ಟೆಕ್‌ ಲೋಕದ ಮಹತ್ವದ ಈವೆಂಟ್‌ ಎನಿಸಿಕೊಂಡಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2024 ಈಗಾಗಲೇ ಶುರುವಾಗಿದೆ. ಜಾಗತಿಕ ವಲಯದಲ್ಲಿ ಟೆಕ್‌ ದಿಗ್ಗಜ ಕಂಪೆನಿಗಳು ತಮ್ಮ ಟೆಕ್ನಾಲಜಿಯನ್ನು ಪ್ರದರ್ಶಿಸುವ ಈ ಮೇಳದಲ್ಲಿ ಹಲವು ಹೊಸತನದ ಡಿವೈಸ್‌ಗಳ ಅನಾವರಣ ಆಗಿದೆ. ಇದಕ್ಕೆ ಲೆನೋವೊ ಕೂಡ ಹೊರತಾಗಿಲ್ಲ, CES 2024ನಲ್ಲಿ ತನ್ನ ಹೊಸ ಟ್ಯಾಬ್ಲೆಟ್‌ ಅನ್ನು ಘೋಷಣೆ ಮಾಡಿದೆ.

ಹೌದು, CES 2024 ಈವೆಂಟ್‌ನಲ್ಲಿ ಲೆನೊವೊ ಕಂಪೆನಿ ಬಜೆಟ್ ಸ್ನೇಹಿ ಟ್ಯಾಬ್ಲೆಟ್ Lenovo Tab M11 ಅನ್ನು ಘೋಷಿಸಿದೆ. ಇದು ಕಲಿಕೆ-ಕೇಂದ್ರಿತ ಟ್ಯಾಬ್ಲೆಟ್ ಆಗಿದ್ದು ಬರವಣಿಗೆ ಮತ್ತು ರೇಖಾಚಿತ್ರಕ್ಕಾಗಿ ಲೆನೊವೊ ಟ್ಯಾಬ್ ಪೆನ್ ಸ್ಟೈಲಸ್‌ನೊಂದಿಗೆ ಬರಲಿದೆ. ಇದಲ್ಲದೆ ಈ ಸ್ಟೈಲಸ್ ಅನ್ನು ಬಳಸುವುದಕ್ಕೆ ಲೆನೊವೊ ಹಲವು ಅಪ್ಲಿಕೇಶನ್‌ಗಳನ್ನು ನೀಡಲಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ ಟ್ಯಾಬ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಸಂಸ್ಥೆಯಿಂದ ಬಜೆಟ್‌ ಸ್ನೇಹಿ ಟ್ಯಾಬ್‌ ಲಾಂಚ್‌! 7,040mAh ಬ್ಯಾಟರಿ!

Lenovo Tab M11 ಫೀಚರ್ಸ್‌ ಹೇಗಿದೆ?
ಲೆನೊವೊ ಟ್ಯಾಬ್‌ M11 11 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಇದು ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ.

ಲೆನೊವೊ ಟ್ಯಾಬ್‌ M11 ಟ್ಯಾಬ್ಲೆಟ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಲೆನೊವೊ ಟ್ಯಾಬ್‌ M11 ಟ್ಯಾಬ್ಲೆಟ್‌ 7,040mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11ac, ಬ್ಲೂಟೂತ್ 5.1 ಮತ್ತು USB-C ಪೋರ್ಟ್‌ನಂತಹ ಆಯ್ಕೆಗಳನ್ನು ನೀಡಲಿದೆ. ಈ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು 3.5mm ಆಡಿಯೋ ಜ್ಯಾಕ್‌ನಂತಹ ಇತರ ಫೀಚರ್ಸ್‌ಗಳೊಂದಿಗೆ ಬರಲಿದೆ.

ಲೆನೊವೊ ಸಂಸ್ಥೆಯಿಂದ ಬಜೆಟ್‌ ಸ್ನೇಹಿ ಟ್ಯಾಬ್‌ ಲಾಂಚ್‌! 7,040mAh ಬ್ಯಾಟರಿ!

ಲೆನೊವೊ ಟ್ಯಾಬ್‌ M11 ಬೆಲೆ ಮತ್ತು ಲಭ್ಯತೆ
ಲೆನೊವೊ ಟ್ಯಾಬ್‌ M11 ಏಪ್ರಿಲ್‌ನಲ್ಲಿ 4GB RAM + 64 GB ಸ್ಟೋರೇಜ್‌ ಮತ್ತು 8 GB RAM + 128 GB ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು $179 ರ ಆರಂಭಿಕ ಬೆಲೆಯನ್ನು ಹೊಂದಿರುತ್ತದೆ. ಇದನ್ನು ಲೂನಾ ಗ್ರೇ ಮತ್ತು ಸೀಫೊಮ್‌ ಕಲರ್‌ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

ಇದಲ್ಲದೆ ಲೆನೊವೊ ಕಂಪೆನಿ CES 2024 ಈವೆಂಟ್‌ನಲ್ಲಿ ಹೊಸದಾಗಿ ಮೈಕ್ರೋಸಾಫ್ಟ್ ವಿಂಡೋಸ್ 11 'ಯೋಗ' ಲ್ಯಾಪ್‌ಟಾಪ್‌ಗಳ ಹೊಸ ಶ್ರೇಣಿಯನ್ನು ಅನಾವರಣಗೊಳಿಸಿದೆ. ಇದು ಲೆನೊವೊ ಯೋಗ ಕ್ರಿಯೇಟರ್ ಝೋನ್‌ನೊಂದಿಗೆ ಸಜ್ಜುಗೊಂಡಿದೆ. ಇದರಲ್ಲಿ ಯೋಗ ಪ್ರೊ 9i, ಯೋಗ 9i 2-in-1 ಲ್ಯಾಪ್‌ಟಾಪ್‌ಗಳು ಸೇರಿವೆ. ಇದರೊಂದಿಗೆ Lenovo ಯೋಗ ಸ್ಲಿಮ್ 7i, Lenovo ಯೋಗ ಪ್ರೊ 7i, ಲೆನೊವೊ ಯೋಗ ಪ್ರೊ 7, Lenovo ಯೋಗ ಪುಸ್ತಕ 9i, Lenovo ಯೋಗ 7i 2-in-1 ಲ್ಯಾಪ್‌ಟಾಪ್‌ಗಳನ್ನು ಘೋಷಣೆ ಮಾಡಿದೆ.

Best Mobiles in India

English summary
CES 2024: Lenovo Tab M11 with 7,040mAh battery launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+