ಚಂದ್ರಾಯಣ 2 ಮೂನ್ ಮಿಷನ್ ಉಡಾವಣೆ ದಿನಾಂಕ ಮರುನಿಗದಿ

By Gizbot Bureau
|

ಚಂದ್ರಯಾಣ-2 ಗೆ ಭಾರತದ ಮಹತ್ವಾಕಾಂಕ್ಷೆಯ ಎರಡನೇ ಮಿಷನ್ ಇದೀಗ ಜುಲೈ 22 ರಂದು ಮಧ್ಯಾಹ್ನ 2.43 ಕ್ಕೆ ನಡೆಯಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ. ಜಿಎಸ್ಎಲ್ವಿ-ಎಂಕೆ-3 ರಾಕೆಟ್ ನಲ್ಲಿನ ತಾಂತ್ರಿಕ ಸ್ನ್ಯಾಗ್ ನಿಂದ ಉಡಾವಣೆಯನ್ನು ಸ್ಥಗಿತಗೊಳಿಸಿದ ಮೂರು ದಿನಗಳ ನಂತರ ಮರುಉಡಾವಣೆಗೆ ದಿನಾಂಕ ನಿಗದಿಗೊಳಿಸಲಾಗಿದೆ.

ಟ್ವೀಟ್ ಮಾಡಿದ ಇಸ್ರೋ:

ಟ್ವೀಟ್ ಮಾಡಿದ ಇಸ್ರೋ:

ಬಾಹುಬಲಿ ಎಂದು ಕರೆಯಲ್ಪಡುವ ಬಹಳ ಶಕ್ತಿಶಾಲಿಯಾಗಿರುವ ಜಿಎಸ್ಎಲ್ ವಿ-ಎಂಕೆ-3ರಾಕೆಟ್ ನಲ್ಲಿ ಹಾರಿಸಲ್ಪಡುವ ಚಂದ್ರಯಾನ್-2 "ಚಂದ್ರನತ್ತ ಒಂದು ಶತಕೋಟಿ ಕನಸುಗಳನ್ನು ಕೊಂಡೊಯ್ಯಲು" ಸಿದ್ಧವಾಗಿದೆ ಎಂದು ಭಾರತೀಯ ಸಂಶೋಧನಾ ಸಂಸ್ಥೆ ಟ್ವೀಟರ್ ನಲ್ಲಿ ತಿಳಿಸಿದೆ.

ಜುಲೈ 15 ರಂದು ಉಡಾವಣೆ ಸ್ಥಗಿತ:

ಜುಲೈ 15 ರಂದು ಉಡಾವಣೆ ಸ್ಥಗಿತ:

ನಿಗದಿಯಾಗಿದ್ದ ಜುಲೈ 15 ರಂದು ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಗಳ ಮುನ್ನ ಅನಿರೀಕ್ಷಿತವಾಗಿ ಉಡಾವಣೆಯನ್ನು ನಿಲ್ಲಿಸಲಾಯಿತು ಮತ್ತು ರಾಕೆಟ್ ನಲ್ಲಿದ್ದ ತಾಂತ್ರಿಕ ದೋಷದ ಕಾರಣ ಬಾಹ್ಯಾಕಾಶ ನಿಲ್ದಾಣ ಶ್ರೀಹರಿಕೋಟಾದಿಂದ 1.55ಎಎಂಗೆ ಉಡಾವಣೆಯಾಗಬೇಕಿದ್ದನ್ನ ನಿಲ್ಲಿಸಲಾಯಿತು.

ಜುಲೈ,22.2019 ಕ್ಕೆ ಮಧ್ಯಾಹ್ನ 2.43 ಕ್ಕೆ:

ಜುಲೈ,22.2019 ಕ್ಕೆ ಮಧ್ಯಾಹ್ನ 2.43 ಕ್ಕೆ:

ಚಂದ್ರಯಾನ-2 ಬಿಡುಗಡೆಯನ್ನು ತಾಂತ್ರಿಕ ಕಾರಣದಿಂದ ಜುಲೈ 15,2019 ರಂದು ನಿಲ್ಲಿಸಲಾಗಿರುವುದನ್ನ ಸೋಮವಾರ ಅಂದರೆ ಜುಲೈ 22,2019 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2.43ಕ್ಕೆ ನಿಗದಿಗೊಳಿಸಲಾಗಿದೆ ಎಂದು ಇಸ್ರೋ ಟ್ವೀಟರ್ ನಲ್ಲಿ ತಿಳಿಸಿದೆ. ಜನರ ಬೆಂಬಲಕ್ಕಾಗಿ ಇಸ್ರೋ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದೆ.

ಭೌತಶಾಸ್ತ್ರ ಮತ್ತು ನಂಬಿಕೆ:

ಭೌತಶಾಸ್ತ್ರ ಮತ್ತು ನಂಬಿಕೆ:

ಹೆಚ್ಚಿನ ಎತ್ತರವನ್ನು ತಲುಪುವುದು ಭೌತಶಾಸ್ತ್ರದ ಒಂದು ಭಾಗವೂ ಹೌದು ಮತ್ತು ನಂಬಿಕೆಯೂ ಹೌದು. ನಮಗೆ ಹೆಚ್ಚಿನ ನಂಬಿಕೆಯನ್ನುನೀಡಿದಕ್ಕಾಗಿ ಧನ್ಯವಾದಗಳು ಎಂದು ಇಸ್ರೋ ಟ್ವೀಟ್ ನಲ್ಲಿ ಬರೆದಿದೆ.

ಹಿಂದಿಗಿಂತಲೂ ಶಕ್ತಿಶಾಲಿ:

ಹಿಂದಿಗಿಂತಲೂ ಶಕ್ತಿಶಾಲಿ:

ಈ ಹಿಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಚಂದ್ರಯಾನ-2 ಚಂದ್ರನ ಮೇಲಿನ ಬಿಲಿಯನ್ ಗಟ್ಟಲೆ ಕನಸುಗಳನ್ನು ತೆಗೆದುಕೊಂಡು ಹೋಗಲು ಸಿದ್ಧವಾಗಿದೆ. ಸೋಮವಾರ-22 ಜುಲೈ,2019 ಕ್ಕೆ ಭಾರತೀಯ ಕಾಲಮಾನ ಮಧ್ಯಾಹ್ನ 2.43ಕ್ಕೆ ನಮ್ಮೊಂದಿಗೆ ಉಡಾವಣೆಗಾಗಿ ಸಿದ್ಧರಾಗಿ. ಎಂದು ಅದು ಹೇಳಿದೆ.

976 ಕೋಟಿ ಪ್ರೊಜೆಕ್ಟ್:

976 ಕೋಟಿ ಪ್ರೊಜೆಕ್ಟ್:

ದ್ರವ ಪ್ರೊಪಲೆಂಟ್ ನ್ನು ರಾಕೆಟ್ ನ ಸ್ಥಳೀಯ ಕ್ರಯೋಜನಿಕ್ ಮೇಲಿನ ಹಂತದ ಎಂಜಿನ್ ಗೆ ಲೋಡ್ ಮಾಡಿದಾಗ ತೊಂದರೆ ಕಾಣಿಸಿಕೊಂಡಿತ್ತು.ಹಲವಾರು ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶ ಏಜೆನ್ಸಿಯನ್ನು ದೊಡ್ಡ ವಿಪತ್ತಿಗೆ ಗಡಿಬಿಡಿಪಡಿಸುವ ಬದಲು ಉಡಾವಣೆಯನ್ನು ನಿಲ್ಲಿಸಿದ್ದಕ್ಕಾಗಿ ಪ್ರಶಂಸಿಸಬೇಕು.

ಈ ಸಮಸ್ಯೆಯ ತೀವ್ರತೆಯ ಬಗ್ಗೆ ಭಾರತೀಯ ಸ್ಪೇಸ್ ಏಜೆನ್ಸಿಯ ವಿಜ್ಞಾನಿಗಳು 976 ಕೋಟಿಯ ಮಹತ್ವಾಕಾಂಕ್ಷಿ ಭಾರತದ ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸದ್ದಕ್ಕಾಗಿ ನಿರ್ಣಯ ಮಾಡುತ್ತಿದ್ದಾರೆ.

3,850 ಕೆಜಿ

3,850 ಕೆಜಿ

ಜನವರಿ ಮೊದಲ ವಾರಕ್ಕೆ ಇಸ್ರೋ ಈ ಉಡಾವಣೆಯನ್ನು ಮೊದಲು ನಿಗದಿಪಡಿಸಿತ್ತು ನಂತರ ಜುಲೈ 15 ಕ್ಕೆ ಮುಂದೂಡಿತ್ತು. 3,850 ಕೆಜಿ ತೂಕದ ಮೂರು ಘಟಕಗಳ ಬಾಹ್ಯಾಕಾಶ ನೌಕೆಯ ಲಿಫ್ಟ್-ಆಫ್ ಮತ್ತು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಆಂಧ್ರಪ್ರದೇಶದ ಕರಾವಳಿಯಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿಗದಿಗೊಳಿಸಲಾಗಿತ್ತು.

ದಕ್ಷಿಣ ದ್ರುವದ ಅನ್ವೇಷಣೆ:

ದಕ್ಷಿಣ ದ್ರುವದ ಅನ್ವೇಷಣೆ:

ಇಸ್ರೋದ ಯಶಸ್ವಿ ಚಂದ್ರಯಾನ -1 ಯಶಸ್ವಿಯಾದ 11 ವರ್ಷಗಳ ಬಳಿಕ ಚಂದ್ರನ ಸುತ್ತ 3,400 ಕ್ಕೂ ಹೆಚ್ಚು ಕಕ್ಷೆಗಳನ್ನು ನಿರ್ಮಿಸಿತು ಮತ್ತು ಅಗಸ್ಟ್ 29,2009 ರಿಂದ ಇಂದಿನ ವರೆಗೆ 312 ದಿನಗಳು ಕಾರ್ಯನಿರ್ವಹಿಸಿದೆ. ಇದೀಗ ಈ ಚಂದ್ರಯಾನ-2 ಚಂದ್ರನ ದಕ್ಷಿಣ ದ್ರುವವನ್ನು ಅನ್ವೇಷಣೆ ಮಾಡಬೇಕಿದೆ.

54 ದಿನಗಳು ಬೇಕು:

ಚಂದ್ರಯಾನ-2 ಚಂದ್ರನ ಮೇಲೆ ಇಳಿಯುವ ಕಾರ್ಯಕ್ಕೆ ನಿಖರವಾಗಿ ಯೋಜಿಸಿದ ಕಕ್ಷೀಯ ಹಂತಗಳ ಮೂಲಕ 54 ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.

ನಾಲ್ಕನೇ ರಾಷ್ಟ್ರ:

ಇಸ್ರೋ ಪ್ರಾರಂಭವಾದಾಗಿನಿಂದ ಕೈಗೊಂಡ ಅತ್ಯಂತ ಸಂಕೀರ್ಣ ಮತ್ತು ಪ್ರತಿಷ್ಟಿತ ಮಿಷನ್ ಇದಾಗಿದ್ದು ರಷ್ಯಾ, ಚೀನಾ ಮತ್ತು ಯುಎಸ್ ನಂತರ ಚಂದ್ರನ ಮೇಲ್ಮೈ ಮೇಲೆ ರೂವರ್ ವನ್ನು ಮೃದುವಾಗಿ ಇಳಿಸುವ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

Best Mobiles in India

Read more about:
English summary
Chandrayaan-2, aka, Baahubali Launch Scheduled For July 22

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X