ಚಂದ್ರಯಾನ-2 ಯಶಸ್ವಿ ಉಡಾವಣೆ: ನೀವು ತಿಳಿಯಲೇಬೇಕಾದ ಕುತೂಹಲ ಮಾಹಿತಿಗಳು!

|

ಇಡೀ ವಿಶ್ವವೇ ಕಣ್ಣರಳಿಸಿ ನೋಡುತ್ತಿರುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಂದು ಮಧ್ಯಾಹ್ನ 2.43ಕ್ಕೆ ಸರಿಯಾಗಿ ಭಾರತದ ಅತ್ಯಂತ ಬಲಿಷ್ಠ ಉಡಾಹಕ ಎನಿಸಿಕೊಂಡಿರುವ ಜಿಎಸ್​ಎಲ್​ವಿ ಮಾರ್ಕ್​ 3 ನೌಕೆಯು ಚಂದ್ರಯಾನ್​-2 ಉಪಗ್ರಹ ಮತ್ತು ಪ್ರಜ್ಞಾನ್​ ರೋವರ್ ಅನ್ನು ಹೊತ್ತೊಯ್ದಿದ್ದು, ಚಂದ್ರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಕಳುಹಿಸುತ್ತಿರುವ ವಿಶ್ವದ ಮೊಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುತ್ತಿದೆ.

ಚಂದ್ರಯಾನ-2 ಯಶಸ್ವಿ ಉಡಾವಣೆ: ನೀವು ತಿಳಿಯಲೇಬೇಕಾದ ಕುತೂಹಲ ಮಾಹಿತಿಗಳು!

ಚಿತ್ರ ಕೃಪೆ: ಡಿಡಿ

ಹೌದು, ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್​ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತವು ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿರುವ ರಾಷ್ಟ್ರ ಎಂಬ ಪಟ್ಟವನ್ನು ಸಹ ಪಟೆಯಲಿದೆ. ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲವಾದುದರಿಂದ ಚಂದ್ರಯಾನ-2 ಯೋಜನೆಯನ್ನು ವಿಶ್ವವೇ ಕಣ್ಣರಳಿಸಿ ನೋಡುತ್ತಿದೆ.

10 ವರ್ಷಗಳ ಹಿಂದೆ ಸ್ವದೇಶಿ ನಿರ್ಮಿತ ಚಂದ್ರಯಾನ-1 ಯೋಜನೆ ಯಶಸ್ವಿಯಾಗಿತ್ತು. ಇದಾದ 10 ವರ್ಷಗಳ ನಂತರ ಭಾರತೀಯ ಇಸ್ರೋ ಚಂದ್ರನ ಅಂಗಳಕ್ಕೆ ಮತ್ತೊಂದು ಉಪಗ್ರಹ ಉಡಾವಣೆ ಮಾಡಿದೆ. ರೋವರ್​ ಪ್ರಜ್ಞಾನ್ ಮತ್ತು ವಿಕ್ರಂ ಎಂಬ ಹೆಸರಿನ ಲ್ಯಾಂಡರ್​ ಸೇರಿ ಒಟ್ಟು 14 ವೈಜ್ಞಾನಿಕ ಪ್ರಯೋಗಗಳಿಗೆ ಅವಕಾಶ ಕಲ್ಪಿಸುವ ಸೂಟ್​ ಅನ್ನು ಚಂದ್ರುಯಾನ 2 ಕೊಂಡೊಯ್ಯಲಿದೆ. ಹಾಗಾದರೆ, ಚಂದ್ರಯಾನ-2 ಯೋಜನೆಯ ಇನ್ನಿತರ ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

3,877 ಕೆಜಿ ತೂಕದ ಉಪಗ್ರಹ

3,877 ಕೆಜಿ ತೂಕದ ಉಪಗ್ರಹ

ಉಪಗ್ರಹದ ಒಟ್ಟಾರೆ ತೂಕ 3,877 ಕೆಜಿ​ ಆಗಿದ್ದು, ರೋವರ್​ ಪ್ರಜ್ಞಾನ್​ 27 ಕೆ.ಜಿ. ಭಾರವಿದೆ. ಇನ್ನು ಲ್ಯಾಂಡರ್​ ವಿಕ್ರಮ್ ಅನ್ನು​ ಆರ್ಬಿಟರ್​ನ ಮೇಲ್ಭಾಗದಲ್ಲಿ ಇರಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹದ ಒಳಭಾಗದಲ್ಲಿನ ಭಾರಿ ತಾಪಮಾನವನ್ನು ತಡೆದುಕೊಳ್ಳಲು ಅನುವಾಗುವಂತೆ ಚಿನ್ನದ ಫಿಲಂನಲ್ಲಿ ಇದನ್ನು ಸುತ್ತಿರಿಸಲಾಗಿದೆ. ಆರು ಗಾಲಿಗಳನ್ನು ಹೊಂದಿರುವ ಇದು ಇದುವರೆಗೂ ಯಾರೊಬ್ಬರೂ ಅನ್ವೇಷಿಸದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆ ಕಾರ್ಯ ನಡೆಸಲಿದೆ.

ಇದೊಂದು ರೋಬಾಟಿಕ್​ ಯೋಜನೆ

ಇದೊಂದು ರೋಬಾಟಿಕ್​ ಯೋಜನೆ

ಇನ್ನು ಲ್ಯಾಂಡರ್​ನ ಒಳಭಾಗದಲ್ಲಿ ರೋವರ್​ ಪ್ರಜ್ಞಾನ್​ ಅನ್ನು ಇರಿಸಲಾಗಿದ್ದು, ಇದೊಂದು ರೋಬಾಟಿಕ್​ ಯೋಜನೆಯಾಗಿದ್ದು, ಇದರಲ್ಲಿ ಬಾಹ್ಯಾಕಾಶಯಾನಿಗಳು ಪ್ರಯಾಣಿಸುವುದಿಲ್ಲ. 10 ವರ್ಷಗಳ ನಂತರ ಎರಡನೇ ಬಾರಿಗೆ ಭಾರತ ಚಂದ್ರಯಾನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್ ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು.

ಚಂದ್ರನ ಅಂಗಳಕ್ಕೆ ರೋವರ್

ಚಂದ್ರನ ಅಂಗಳಕ್ಕೆ ರೋವರ್

ಚಂದ್ರನ ಮೇಲ್ಮೈನ ಚಿತ್ರವನ್ನು ಸರೆಹಿಡಿಯಲಿರುವ ಆರ್ಬಿಟರ್​ ಚಂದ್ರನ ಅಂಗಳದಲ್ಲಿರುವ ಖನಿಜ ಸಂಪತ್ತನ್ನು ಆಮೂಲಾಗ್ರವಾಗಿ ಪರಿಶೀಲಿಸಲಿದೆ. ಲ್ಯಾಂಡರ್​ನಲ್ಲಿ ವ್ಯವಸ್ಥೆಗೊಳಿಸಲಾಗಿರುವ ರ್ಯಾಂಪ್​ ಅನ್ನು ಬಳಸಿಕೊಂಡು ಚಂದ್ರನ ಅಂಗಳಕ್ಕೆ ರೋವರ್​ ಇಳಿಯಲಿದೆ. ಒಟ್ಟು 1,471 ಕೆ.ಜಿ. ಭಾರವಿರುವ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಉಂಟಾಗುವ ಕಂಪನಗಳು ಮತ್ತು ಅಲ್ಲಿನ ತಾಪಮಾನ ಕುರಿತು ಅಧ್ಯಯನ ನಡೆಯಲಿದೆ. ಚಂದ್ರ ಮಣ್ಣಿನ ವಿಶ್ಲೇಷಣೆ ನಡೆಸಲು ಅನುವಾಗುವಂತೆ​ ಪ್ರಜ್ಞಾನ್​ನಲ್ಲಿ ಕ್ಯಾಮರಾಗಳು ಮತ್ತು ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ.

ಯೋಜನೆಯ ಉದ್ದೇಶವೇನು?

ಯೋಜನೆಯ ಉದ್ದೇಶವೇನು?

ಈ ಉಪಗ್ರಹ ಟೆರ್ರೇನ್​ ಮ್ಯಾಪಿಂಗ್​ ಕ್ಯಾಮರಾ 2 ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ 20 ಕೆಜಿ ತೂಕದ ರೋವರ್​, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್​ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್​-ರೋವರ್​ನ ಆಯುಷ್ಯ 14 ದಿನಗಳಿದ್ದರೆ ಆರ್ಬಿಟರ್​ 1 ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಉಪಗ್ರಹ ಹೊಂದಿರುವ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ.

ಕೇವಲ 978 ಕೋಟಿ ರೂ ವೆಚ್ಚ!

ಕೇವಲ 978 ಕೋಟಿ ರೂ ವೆಚ್ಚ!

ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಚ ಕೇವಲ 978 ಕೋಟಿ ರೂಪಾಯಿ. ಇಷ್ಟು ಕಡಿಮೆ ವೆಚ್ಚದಲ್ಲಿ ಯಾವ ದೇಶವೂ ಸಹ ಇಂತಹ ಮಹಾನ್ ಯೋಜನೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ನಿಮಗೆ ಗೊತ್ತಾ? ಇತ್ತೀಚಿಗೆ ಬಿಡುಗಡೆಯಾದ ಹಾಲಿವುಡ್​ನ 'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾ ಬಜೆಟ್​ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. 'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು. ಬಾಹುಬಲಿ ಸಿನಿಮಾ ಗಳಿಗಿಂತ ಕಡಿಮೆ ಎಂಬುದು ಸಹ ವಿಶೇಷವೇ.!

ಭಾರತದ ಹೆಮ್ಮೆಯ ಚಂದ್ರಯಾನ-2 ಯೋಜನೆಯನ್ನು ನೇರವಾಗಿ ವೀಕ್ಷಿಸಿ.

Best Mobiles in India

English summary
Chandrayaan-2 Launch LIVE : History With Second Moon Mission

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X