ಚಂದ್ರಯಾನ-2 ಆರ್ಬಿಟರ್‌ನ ಕಕ್ಷೆ ಕಡಿಮೆಗೊಳಿಸುವುದು ಅಪಾಯಕಾರಿ..!

By Gizbot Bureau
|

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ, ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್‌ ಜೊತೆ ಸಂಪರ್ಕ ಸಾಧಿಸಲು ಇಸ್ರೋ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ, ದುರ್ಬಲ ಸಂಕೇತಗಳನ್ನು ಸ್ವೀಕರಿಸಲು ಹಾಗೂ ವಿಕ್ರಮ್‌ ಲ್ಯಾಂಡರ್‌ ಹತ್ತಿರಕ್ಕೆ ಹೋಗಲು ಚಂದ್ರಯಾನ್ -2 ಆರ್ಬಿಟರ್‌ನ ಕಕ್ಷೆ ಕಡಿಮೆ ಮಾಡುವ ಕ್ರಮಕ್ಕೆ ಇಸ್ರೋ ಮುಂದಾಗಿದೆ. ಆದರೆ, ಬಾಹ್ಯಾಕಾಶ ವಿಜ್ಞಾನಿಗಳು ಈ ಕ್ರಮವನ್ನು ಅಪಾಯಕಾರಿ ಎನ್ನುತ್ತಿದ್ದಾರೆ.

100 ರಿಂದ 50 ಕಿ.ಮೀಗೆ ಇಳಿಕೆ

100 ರಿಂದ 50 ಕಿ.ಮೀಗೆ ಇಳಿಕೆ

ಮೂಲಗಳ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ್ -2 ಆರ್ಬಿಟರ್‌ನ ಕಕ್ಷೆಯನ್ನು 100 ಕಿ.ಮೀ ನಿಂದ 50 ಕಿ.ಮೀ.ಗೆ ಇಳಿಸಲು ಪ್ರಯತ್ನಿಸುತ್ತಿದೆ. ಆದರೆ,

ಆರ್ಬಿಟರ್‌ನ ಕಕ್ಷೆಯನ್ನು ಕಡಿಮೆ ಮಾಡುವುದು ಅಪಾಯಕಾರಿ ಉಪಾಯ ಎಂದು ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಕ್ರಮ್‌ ಪುನರುಜ್ಜೀವನ ಅಸಾಧ್ಯ

ವಿಕ್ರಮ್‌ ಪುನರುಜ್ಜೀವನ ಅಸಾಧ್ಯ

ಆರ್ಬಿಟರ್‌ನ ಕಕ್ಷೆ ಕಡಿಮೆ ಮಾಡುವ ಕ್ರಮದಿಂದ ಇಸ್ರೋ ಏನು ಗಳಿಸಲಿದೆ ಎಂಬುದು ತಿಳಿದಿಲ್ಲ. ಆರ್ಬಿಟರ್ ಎಲ್ಲಾ ಸಂಭವನೀಯತೆಯಲ್ಲೂ ದುರ್ಬಲ ಸಂಕೇತಗಳನ್ನು ಸ್ವೀಕರಿಸಲು ಸಮರ್ಥನಾಗಿದ್ದರೂ, ವಿಕ್ರಮ್ ಲ್ಯಾಂಡರ್‌ನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಆರ್ಬಿಟರ್ ಜೀವಿತಾವಧಿ ಕಡಿತ

ಆರ್ಬಿಟರ್ ಜೀವಿತಾವಧಿ ಕಡಿತ

100 ಕಿಮೀ ಎತ್ತರದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ಆರ್ಬಿಟರ್ ಸುರಕ್ಷಿತವಾಗಿರುತ್ತದೆ. ಆದರೆ, 50 ಕಿಮೀಗೆ ಇಳಿಸಿದರೆ ಆರ್ಬಿಟರ್‌ನ್ನು ನಿರ್ವಹಿಸಬೇಕಾಗುತ್ತದೆ. ಆನ್-ಬೋರ್ಡ್ ಇಂಜಿನ್‌ಗಳ ಫೈರಿಂಗ್‌ ಅಗತ್ಯವಿರುತ್ತದೆ. ಈ ಪ್ರಕ್ರಿಯೆ ಮಾಡದಿದ್ದರೆ ಆರ್ಬಿಟರ್ ನಿಧಾನವಾಗಿ ಕೆಳಗೆ ಹೋಗುತ್ತದೆ. ಆರ್ಬಿಟರ್‌ನ ಆನ್-ಬೋರ್ಡ್ ಎಂಜಿನ್‌ಗಳನ್ನು ಹಾರಿಸುವುದರಿಂದ ಇಂಧನ ವೆಚ್ಚವಾಗುತ್ತದೆ. ಇದರಿಂದದ ಆರ್ಬಿಟರ್‌ನ ಜೀವಿತಾವಧಿ ಕಡಿಮೆಯಾಗುತ್ತದೆ ಎನ್ನುತ್ತಾರೆ.

ಅಪಾಯ ಬೇಡ

ಅಪಾಯ ಬೇಡ

ಆರ್ಬಿಟರ್‌ನ್ನು ಕೆಳಗೆ ತರಲು ಮೋಟರ್‌ಗಳಿಗೆ ಇಸ್ರೋ ಬೆಂಕಿಯಿಡಬೇಕು. ನಂತರ ಅದನ್ನು 50 ಕಿ.ಮೀ ಎತ್ತರದಲ್ಲಿ ಉಳಿಸಿಕೊಳ್ಳಲು ಇಂಧನ ಖರ್ಚು ಮಾಡಬೇಕಾಗುತ್ತದೆ. ಮತ್ತೆ ಅದನ್ನು 100 ಕಿಮೀ ಎತ್ತರಕ್ಕೆ ತರಬೇಕಾದದರೆ ಹೆಚ್ಚಿನ ಇಂಧನ ಖರ್ಚು ಮಾಡಬೇಕಾಗುತ್ತದೆ. ಆರ್ಬಿಟರ್ ಅಮೂಲ್ಯವಾಗಿದ್ದು, ಈ ಹಂತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಾರದು. ವಿಕ್ರಮ್ ಲ್ಯಾಂಡರ್ ಹೋಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ವಿಕ್ರಮ್‌ ಲ್ಯಾಂಡರ್ ಪತ್ತೆ

ವಿಕ್ರಮ್‌ ಲ್ಯಾಂಡರ್ ಪತ್ತೆ

ಸೆಪ್ಟೆಂಬರ್ 8ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್‌ ಇರುವಿಕೆಯನ್ನು ಪತ್ತೆ ಮಾಡಿತ್ತು. ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಬಿದ್ದಿದೆ ಮತ್ತು ತಲೆಕೆಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದು, ವಿಕ್ರಮ್‌ ಸಂಪರ್ಕದ ಆಸೆಯನ್ನು ಕಮರಿಸಿದೆ.

978 ಕೋಟಿ ರೂ. ಯೋಜನೆ

978 ಕೋಟಿ ರೂ. ಯೋಜನೆ

978 ಕೋಟಿ ರೂ. ಮೊತ್ತದ ಬೃಹತ್ ಚಂದ್ರಯಾನ್ -2 ಯೋಜನೆಯನ್ನು ಜುಲೈ 22 ರಂದು ಜಿಎಸ್‌ಎಲ್‌ವಿ-ಮಾರ್ಕ್ 3 ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು. ಚಂದ್ರಯಾನ್ -2 ಬಾಹ್ಯಾಕಾಶ ನೌಕೆ ಆರ್ಬಿಟರ್ (2,379 ಕೆಜಿ ತೂಕ, ಎಂಟು ಪೇಲೋಡ್‌ಗಳು), 'ವಿಕ್ರಮ್' (1,471 ಕೆಜಿ, ನಾಲ್ಕು ಪೇಲೋಡ್‌ಗಳು) ಮತ್ತು 'ಪ್ರಜ್ಞಾನ್' (27 ಕೆಜಿ, ಎರಡು ಪೇಲೋಡ್‌ಗಳು) ಮೂರು ವಿಭಾಗಗಳನ್ನು ಒಳಗೊಂಡಿತ್ತು.

ಯಶಸ್ವಿಯಾಗಿ ಚಂದ್ರನ ಕಕ್ಷೆಗೆ

ಯಶಸ್ವಿಯಾಗಿ ಚಂದ್ರನ ಕಕ್ಷೆಗೆ

ಭೂಮಿಯಿಂದ ಐದು ಕಕ್ಷೆಯನ್ನು ಹೆಚ್ಚಿಸುವ ಚಟುವಟಿಕೆಗಳ ನಂತರ, ಚಂದ್ರಯಾನ್ -2 ಅನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು. ಸೆಪ್ಟೆಂಬರ್ 2ರಂದು ಆರ್ಬಿಟರ್‌ನಿಂದ ವಿಕ್ರಮ್‌ನ್ನು ಬೇರ್ಪಡಿಸಲಾಯಿತು. ಆದರೆ, ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡಿಂಗ್‌ ಆಗುವಾಗ ಸಂಪರ್ಕ ಕಳೆದುಕೊಂಡಿತು. ವಿಕ್ರಮ್‌ ಲ್ಯಾಂಡರ್‌ ಬಗ್ಗೆ ಏನಾದರೂ ಅಪ್‌ಡೇಟ್‌ಗಳಿದ್ದರೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಇಸ್ರೋ ಹೇಳಿದೆ.

Best Mobiles in India

Read more about:
English summary
Chandrayaan-2 Project Might Get Into Danger If Orbiter's Orbits Are Reduced

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X