Home
ಸುದ್ದಿಜಾಲ

ಚಂದ್ರಯಾನ 3: ಚಂದ್ರನ ಅಂಗಳದಲ್ಲಿ ಕ್ರಾಂತಿ ಬರೆಯಲು ಕೌಂಟ್‌ಡೌನ್‌ ಶುರು!

ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ 3 ಸಾಫ್ಟ್‌ ಲ್ಯಾಂಡಿಂಗ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಚಂದ್ರನ ಅಂಗಳಕ್ಕೆ ವಿಕ್ರಮ್‌ ಲ್ಯಾಂಡರ್‌ ಕಾಲಿಡುವುದಕ್ಕೆ ಕೆಲವು ಗಂಟೆಗಳಷ್ಟೇ ಬಾಕಿಯಿದೆ. ಈ ಸಮಯದಲ್ಲಿ ಇಸ್ರೋ ಸಂಸ್ಥೆ ಬಿಗ್‌ ಆಪ್ಡೇಟ್‌ ಒಂದನ್ನು ನೀಡಿದ್ದು, ಭಾರತೀಯರು ಖುಷಿಪಡುವಂತೆ ಮಾಡಿದೆ.

ಹೌದು, ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಇಂದು ಚಂದಮಾಮನ ಅಂಗಳದಲ್ಲಿ ಲ್ಯಾಂಡ್‌ ಆಗಲಿದೆ. ಚಂದ್ರಯಾನ 3 ರ ನೌಕೆ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ಗೆ ಎಲ್ಲಾ ರೀತಿಯ ಅಂತಿಮ ತಯಾರಿ ನಡೆಸಿದ್ದು, ಇದು ಸಂಜೆ 5:44 ಕ್ಕೆ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಹಾಗಾದ್ರೆ ಚಂದ್ರಯಾನ 3 ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ವೀಕ್ಷಿಸುವುದು ಹೇಗೆ? ಈ ಪ್ರಕ್ರಿಯೆ ಹೇಗೆ ನಡೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರಯಾನ 3: ಚಂದ್ರನ ಅಂಗಳದಲ್ಲಿ ಕ್ರಾಂತಿ ಬರೆಯಲು ಕೌಂಟ್‌ಡೌನ್‌ ಶುರು!

ಚಂದ್ರಯಾನ 3 ಮಿಷನ್‌ ಯಶಸ್ಸಿಗೆ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ಚಂದಿರನ ಅಂಗಳದಲ್ಲಿ ಕ್ರಾಂತಿ ಬರೆಯಲು ಭಾರತ ಸರ್ವ ಸನ್ನದ್ದವಾಗಿ ನಿಂತಿದೆ. ಅಷ್ಟೇ ಅಲ್ಲ ಚಂದ್ರಯಾನ 3 ಮಿಷನ್‌ ಸಾಫ್ಟ್‌ ಲ್ಯಾಂಡಿಂಗ್‌ ಯಶಸ್ವಿಯಾಗಲೆಂದು ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದ ತನಕ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಇದೆಲ್ಲದರ ನಡುವೆ ಇಸ್ರೋದ ವಿಜ್ಞಾನಿಗಳು ಅಂತಿಮ ಹಂತದ ಲ್ಯಾಂಡಿಂಗ್‌ ಪ್ರಕ್ರಿಯೆಗಾಗಿ ಸರ್ವ ರೀತಿಯ ತಯಾರಿ ನಡೆಸಿದ್ದಾರೆ.

ಪ್ರಸ್ತುತ, ವಿಕ್ರಮ್ ಲ್ಯಾಂಡರ್ ಚಂದ್ರನಿಂದ 25 ಕಿಮೀ ದೂರದಲ್ಲಿದೆ ಎನ್ನಲಾಗಿದೆ. ಇಂದು ಸಂಜೆ 5:44 ರಿಂದ ಲ್ಯಾಂಡಿಂಗ್‌ ಪ್ರಕ್ರಿಯೆ ಶುರುವಾಗಲಿದ್ದು, ಇಂದು ಸಂಜೆ 6.04ರ ವೇಳೆಗೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್‌ನ ಸುರಕ್ಷಿತವಾಗಿ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ ಎಂದು ಇಸ್ರೋ ಹೇಳಿದೆ. ಇನ್ನು ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದಾಗ ಅಂತಿಮ 15 ರಿಂದ 20 ನಿಮಿಷಗಳು ಹೆಚ್ಚು ನಿರ್ಣಾಯಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರನ ಅಂಗಳದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಕೊನೆಯ 20 ನಿಮಿಷಗಳ ಅವಧಿಯ ಸಾಕಷ್ಟು ಕಠಿಣವಾಗಿದೆ. ಈ ಹಂತದಲ್ಲಿ ಯಶಸ್ಸು ಸಾಧಿಸಿದರೆ ಚಂದ್ರಯಾನ 3 ಯಶಸ್ವಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದೇ ಕಾರಣಕ್ಕೆ ಈ ಅವಧಿಯನ್ನು 20 ಅಥವಾ 17 ನಿಮಿಷಗಳ ಟೆರರ್‌ ಎಂದು ಕರೆಯುತ್ತಾರೆ. ಈ ಹಂತದಲ್ಲಿ, ಸಂಪೂರ್ಣ ಪ್ರಕ್ರಿಯೆಯು ಸ್ವಾಯತ್ತವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಇಸ್ರೋದ ಸಂಪರ್ಕಕ್ಕಿಂತ ವಿಕ್ರಮ್ ಲ್ಯಾಂಡರ್ ತನ್ನದೇ ಆದ ಎಂಜಿನ್‌ಗಳನ್ನು ಸರಿಯಾದ ಸಮಯ ಮತ್ತು ಎತ್ತರದಲ್ಲಿ ಉರಿಯಬೇಕಾಗುತ್ತದೆ.

ಸದ್ಯ ಇಸ್ರೋ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಐದು ಗಂಟೆಗಳ ಮೊದಲು, ಇಸ್ರೋ ಲ್ಯಾಂಡಿಂಗ್‌ನ ಕೊನೆಯ 20 ನಿಮಿಷಗಳಲ್ಲಿ ಪ್ರಾರಂಭವಾಗುವ ಸೆಟ್ ಕಾರ್ಯವಿಧಾನವನ್ನು ಅಪ್ಡೇಟ್‌ ಮಾಡಿದೆ. ಅದರ ಇತ್ತೀಚಿನ ಟ್ವೀಟ್‌ನಲ್ಲಿ, ವಿಕ್ರಮ್ ಎಲ್‌ಎಂ ಗೊತ್ತುಪಡಿಸಿದ ಬಿಂದುವನ್ನು ತಲುಪಿದ ನಂತರ ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ಎಎಲ್‌ಎಸ್) ಅನ್ನು ಪ್ರಾರಂಭಿಸುವುದಾಗಿ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

5:44 ಗಂಟೆಯ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ವಿಕ್ರಮ್‌ ಲ್ಯಾಂಡರ್ ಮಾಡ್ಯೂಲ್ (LM) ಆಗಮನಕ್ಕಾಗಿ ಕಾಯಲಾಗುತ್ತಿದೆ. IST ALS ಆಜ್ಞೆಯನ್ನು ಸ್ವೀಕರಿಸಿದ ನಂತರ, LM ಚಾಲಿತ ಇಳಿಯುವಿಕೆಗಾಗಿ ಥ್ರೊಟಲ್ ಎಂಜಿನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಮಿಷನ್ ಕಾರ್ಯಾಚರಣೆಗಳ ತಂಡವು ಆಜ್ಞೆಗಳ ಅನುಕ್ರಮ ಕಾರ್ಯಗತಗೊಳಿಸುವಿಕೆಯನ್ನು ದೃಢೀಕರಿಸುತ್ತದೆ. MOX ನಲ್ಲಿನ ಕಾರ್ಯಾಚರಣೆಗಳ ಲೈವ್‌ 5:20ರಿಂದಲೇ ಶುರುವಾಗಲಿದೆ ಎಂದು ಇಸ್ರೋ ಟ್ವೀಟ್‌ ಮಾಡಿದೆ.

Best Mobiles in India

English summary
Chandrayaan-3: All set to start Automatic Landing Sequence, says ISRO; How to watch live stream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+