Home
ಸುದ್ದಿಜಾಲ

ಚಂದ್ರಯಾನ-3 ಲ್ಯಾಂಡಿಂಗ್‌ ದಿನಾಂಕದಲ್ಲಿ ಬದಲಾವಣೆ ಆಗಲಿದೆಯಾ...ಇಸ್ರೋ ವಿಜ್ಞಾನಿಗಳು ಹೇಳಿದ್ದೇನು?

ಚಂದ್ರಯಾನ-3 ನೌಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಇಳಿಯುವುದಕ್ಕೆ ಒಂದು ದಿನವಷ್ಟೇ ಬಾಕಿ ಇದೆ. ಇದೇ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳಿಂದ ಮಹತ್ವದ ವಿಚಾರವೊಂದು ಬಹಿರಂಗವಾಗಿದೆ. ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ವಿಕ್ರಮ್‌ ಲ್ಯಾಂಡರ್‌ ಅನ್ನು ಆಗಸ್ಟ್‌ 23ರ ಸಂಜೆ 6.04ಕ್ಕೆ ಇಳಿಸುವುದಕ್ಕೆ ತಯಾರಿ ನಡೆಸಲಾಗಿದೆ. ಇದರ ನಡುವೆ ಲ್ಯಾಂಡಿಂಗ್‌ನಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಲ್ಯಾಡಿಂಗ್‌ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಸ್ವತಃ ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್‌ ಮಾಡ್ಯೂಲ್‌ನ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಲ್ಯಾಂಡಿಂಗ್‌ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಲ್ಯಾಂಡಿಂಗ್‌ ಪ್ರಕ್ರಿಯೆ ದಿನಾಂಕ ಬದಲಾಗುತ್ತಾ? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರಯಾನ-3 ಲ್ಯಾಂಡಿಂಗ್‌ ದಿನಾಂಕದಲ್ಲಿ ಬದಲಾವಣೆ ಆಗಲಿದೆಯಾ!

ಇಡೀ ದೇಶವೇ ಸಾಕಷ್ಟು ಕುತೂಹಲದಿಂದ ಕಾಯುತ್ತಿರುವ ಚಂದ್ರಯಾನ-3ರ ನೌಕೆ ಲ್ಯಾಂಡಿಂಗ್‌ ಪ್ರಕ್ರಿಯೆ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಇಸ್ರೋದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್​ನ ನಿರ್ದೇಶಕ ನಿಲೇಶ್ ಎಂ. ದೇಸಾಯಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಚಂದ್ರಯಾನ-3 ರ ವಿಕ್ರಮ್‌ ಲ್ಯಾಂಡರ್‌ ಲ್ಯಾಂಡಿಂಗ್‌ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಅವರು ಚಂದ್ರಯಾನ ಲ್ಯಾಂಡಿಂಗ್​ನಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಂದ್ರಯಾನ-3 ಲ್ಯಾಂಡಿಂಗ್‌ ಪ್ರಕ್ರಿಯೆಗಾಗಿ ಇಡೀ ದೇಶವೇ ಕಾತುರದಿಂದ ಕಾದಿದೆ. ಆದರೆ ಇಸ್ರೋ ವಿಜ್ಞಾನಿಗಳ ಪ್ರಕಾರ ಚಂದ್ರಯಾನ-3 ರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಬಗ್ಗೆ ತಿಳಿಯಬೇಕಿದೆ. ಅಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ಹೇಳಿದ್ದಾರೆ.

ಅದರಂತೆ ಚಂದ್ರಯಾನ-3 ಲ್ಯಾಂಡಿಂಗ್‌ ಪ್ರಕ್ರಿಯೆಗೆ ಆಗಸ್ಟ್‌ 23ರಂದು ಸೂಕ್ತ ವಾತಾವರಣ ಸಿಗದಿದ್ದರೆ ಆಗಸ್ಟ್‌ 27ಕ್ಕೆ ಮುಂದೂಡುವ ಸಾಧ್ಯತೆಯಿದೆ. ಸದ್ಯ ಇಸ್ರೋ ಚಂದ್ರಯಾನ 3 ಅನ್ನು ಆಗಸ್ಟ್‌ 23ರಂದೇ ಚಂದ್ರನ ಅಂಗಳದಲ್ಲಿ ಇಳಿಸುವ ಅಗಾದ ವಿಶ್ವಾಸದಲ್ಲಿದೆ. ಇದಕ್ಕೆ ತಕ್ಕಂತೆ ಪ್ರತಿಯೊಂದು ಹಂತದ ಪ್ರಕ್ರಿಯೆ ಕೂಡ ಇಲ್ಲಿಯವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಇದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ಕೂಡ ನಡೆದಿದೆ. ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಮತ್ತು ಚಂದ್ರಯಾನ -2 ಆರ್ಬಿಟರ್ ನಡುವೆ ದ್ವಿಮುಖ ಸಂವಹನವನ್ನು ಸ್ಥಾಧಿಸಿದೆ.

ಈ ಮೂಲಕ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ ಸಾಧಿಸುವುದಕ್ಕೆ ಇದು ಮಹತ್ವದ ದಾಪುಗಾಲು ಎಂದು ಹೇಳಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಂದ್ರನ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಲಿದೆ. ಈ ಮೂಲಕ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಏಕೈಕ ದೇಶವಾಗಲಿದೆ.

ಇನ್ನು ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್‌ ಪ್ರಕ್ರಿಯೆ ಬಗ್ಗೆ ಮಾತನಾಡಿರುವ ಇಸ್ರೋದ ಮಾಜಿ ನಿರ್ದೇಶಕ ಮತ್ತು ಚಂದ್ರಯಾನ-2 ನ ಉಸ್ತುವಾರಿ ಕೆ ಶಿವನ್ ಚಂದ್ರಯಾನ-3 ಮಿಷನ್ "ಗ್ರ್ಯಾಂಡ್ ಸಕ್ಸಸ್" ಆಗಲಿದೆ ಎಂದು ಹೇಳಿದ್ದಾರೆ. ನಾವು ನಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ನಾವು ಯಾವುದೇ ಸಮಸ್ಯೆಯಿಲ್ಲದೆ ಮೃದುವಾದ ಲ್ಯಾಂಡಿಂಗ್ ಅನ್ನು ಸ್ಥಾಪಿಸುತ್ತೇವೆ. ಆದರೆ ಇದು ಸಂಕೀರ್ಣ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

ಇದರ ನಡುವೆ ಚಂದ್ರಯಾನ-3 ಲ್ಯಾಂಡರ್‌ ಚಂದ್ರನ ಮೇಲ್ಮೈನ ಹೊಸ ಫೋಟೋಗಳನ್ನು ಇಸ್ರೋಗೆ ಕಳುಹಿಸಿದೆ. ಇಸ್ರೋ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC) ಮೂಲಕ ಈ ಫೋಟೋಗಳನ್ನು ಸೆರೆಹಿಡಿದಿದೆ. ಈ ಕ್ಯಾಮರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಅದರಂತೆ ಬಂಡೆಗಳಿಲ್ಲದ, ಯಾವುದೇ ಆಳವಾದ ಕಂದಕಗಳಿಲ್ಲದ ಪ್ರದೇಶವನ್ನು ಪತ್ತೆ ಮಾಡಲಿದೆ.

Best Mobiles in India

English summary
Chandrayaan-3: Chandrayaan-3 Landing Could Be Shifted to August 27! Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+