ಶೀಘ್ರದಲ್ಲೇ ಶುರುವಾಗಲಿದೆ ಚಂದ್ರಯಾನ-3 ಯೋಜನೆ!

|

ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲಗೊಂಡಿದ್ದು ಎಲ್ಲರಿಗೂ ಗೊತ್ತಿರುವಂತಹದ್ದೆ. ವಿಜ್ಞಾನಿಗಳ ಅವಿರತ ಪ್ರಯತ್ನದ ನಡುವೆಯೂ ಕೊನೆಕ್ಷಣದಲ್ಲಿ ಉಂಟಾದ ಅನಿರೀಕ್ಷಿತ ಹಿನ್ನಡೆ ಇಡೀ ದೇಶದ ಜನತೆಯನ್ನೇ ದಿಗ್ಬ್ರಮೆ ಗೊಳಿಸಿತ್ತು. ಇದೀಗ ಮತ್ತೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ನಿರೀಕ್ಷೆಯಂತೆ ಇಸ್ರೋ ಅಧ್ಯಕ್ಷ ಕೆ. ಶಿವನ್​ ಬೆಂಗಳೂರಿನಲ್ಲಿ ಹೊಸವರ್ಷದ ಪ್ರಯುಕ್ತ​ ಸುದ್ದಿಗೋಷ್ಠಿ ನಡೆಸಿ ಚಂದ್ರಯಾನ-3 ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೌದು

ಹೌದು, ಭಾರತದ ಹೆಮ್ಮೆಯ ಭಾಹ್ಯಕಾಶ ಸಂಸ್ಥೆ ಇಸ್ರೋ ಮತ್ತೆ ಚಂದ್ರನ ದಕ್ಷಿಣ ದೃವದ ತುದಿಗೆ ತನ್ನ ವಿಕ್ರಮ್‌ಲ್ಯಾಂಡರ್‌ ಅನ್ನ ಲ್ಯಾಂಡ್‌ ಮಾಡಿಸಲು ಯೋಜನೆಯನ್ನ ಸಿದ್ದಪಡಿಸುತ್ತಿದೆ. ಈ ವರ್ಷವೇ ಚಂದ್ರಯಾನ-3 ಯೋಜನೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್​ ಘೋಷಣೆ ಮಾಡಿದ್ದಾರೆ. ಚಂದ್ರಯಾನ- 3, ಇನ್ನೂ ಕಡಿಮೆ ವಚ್ಚದಲ್ಲಿ ಈ ಯೋಜನೆ ಸಿದ್ದಗೊಳ್ಳಲಿದ್ದು, ಚಂದ್ರಯಾನ- 2ರಂತೆಯೇ ಇರಲಿದೆ. ಚಂದ್ರಯಾನ- 2ರಲ್ಲಿನ ಲ್ಯಾಂಡರ್​ ಹಾಗೂ ರೋವರ್​ನ್ನು ಚಂದ್ರಯಾನ-3 ರಲ್ಲಿಯೂ ಬಳಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಜೊತೆಗೆ

ಇದರ ಜೊತೆಗೆ ಇದೇ ಮೊದಲ ಬಾರಿಗೆ ಚಂದ್ರಯಾನ-2 ಯೋಜನೆ ಯಾಕೆ ವಿಫಲವಾಯ್ತು ಅನ್ನುವುದರ ಬಗ್ಗೆ ಇಸ್ರೋ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಚಂದ್ರಯಾನ 2 ಯೋಜನೆಯನ್ನು ಚೆನ್ನಾಗಿ ಸಂಪೂರ್ಣಗೊಳಿಸಿದ್ದೆವು. ಆದರೆ ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಂನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್ ಲ್ಯಾಂಡಿಂಗ್ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಇಂಟರ್‌ನೆಟ್ ಮೊಬೈಲ್ ಜಿಪಿಎಸ್ ಮಾಡಲಿದ್ದು ಈ ರೋವರ್ ಹಾಗೂ ಲ್ಯಾಂಡರ್ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತೇವೆ ಎಂಬ ವಿಶ್ವಾಸವನ್ನ ಇಸ್ರೋ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

ಸಹ

ಇದೇ ವೇಳೆ, 2020ರಲ್ಲಿ ಇಸ್ರೋ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಸಹ ಇಸ್ರೋ ಅಧ್ಯಕ್ಷರು ವಿವರಣೆ ನೀಡಿದ್ದು, 2020ರಲ್ಲಿ ಗಗನಯಾನ ಮಾಡುವುದು ನಮ್ಮ ಟಾರ್ಗೆಟ್‌ ಆಗಿದ್ದು, 2020ರ ಗಗನಯಾನಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. 6 ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಜನವರಿ 26ರಂದು‌ ಗಗನಯಾನ ಮಿಷನ್ ಆರಂಭವಾಗಲಿದೆ. ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಪೂರಕ ತರಬೇತಿ ನೀಡಲಾಗಿದೆ. 4ನೇ ಗಗನಯಾತ್ರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ವರ್ಷ

ಈ ವರ್ಷ ಇಸ್ರೋ 25ಕ್ಕೂ ಹೆಚ್ಚು ಮಿಷನ್‌ಗಳ ಪೂರೈಸುವ ಗುರಿ ಹೊಂದಿದ್ದು, ವರ್ಷದ ಕೊನೆಯಲ್ಲಿ ಮಾನವ ಸಹಿತ ಮಿಷನ್ ಉಡಾವಣೆ ಮಾಡಲಿದೆ. ಇದಕ್ಕಾಗಿ ತೂತುಕುಡಿಯಲ್ಲಿ ಇದರ ಕಾರ್ಯ ಆರಂಭವಾಗಿದೆ. ದೇಶದಲ್ಲಿ ಇಸ್ರೋದ 2ನೇ ಬಾಹ್ಯಾಕಾಶ ಪೋರ್ಟ್​ನ ಕಾರ್ಯವೂ ನಡೆಯುತ್ತಿದ್ದು. ತಮಿಳುನಾಡಿನ ತೂತುಕುಡಿಯಲ್ಲಿ ಇದರ ಕಾರ್ಯ ನಡೆಯುತ್ತಿದೆ. ಜೊತೆಗೆ ಐಎಎಫ್​​​​ನಿಂದ 4 ಯಾತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ರಷ್ಯಾದಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. 4 ಯಾತ್ರಿಗಳಿಗೆ ಅಲ್ಲಿಯೇ ಟೆಸ್ಟ್‌ ನಡೆಸಲಾಗುತ್ತೆ ಎಂದಿದ್ದಾರೆ.

ನಾವು

ಇದಲ್ಲದೆ ನಾವು ಮುಖ್ಯವಾಗಿ ಬಾಹ್ಯಕಾಶಕ್ಕೆ ಸಂಬಂಧಿಸಿದ ರಿಸರ್ಚ್‌ಗಳನ್ನು ಉನ್ನತ ಮಟ್ಟಕ್ಕೆ ಏರಿಸಬೇಕಾಗಿದ್ದು. ಇದಕ್ಕಾಗಿ 4 ನೇ ರೀಜಿನಲ್ ರಿಸರ್ಚ್ ಅಕಾಡೆಮಿಯನ್ನು ಮಾಡಲಾಗುವುದು. ಇದರಲ್ಲಿ ಮಕ್ಕಳಿಗೆ 2 ವಾರಗಳ ಕಾಲ ಸ್ಪೇಸ್ ರಿಸರ್ಚ್ ಬಗ್ಗೆ ತಿಳಿಸಲಾಗುತ್ತದೆ. ಜೊತೆಗೆ ಪಿಎಸ್​ಎಲ್​ವಿ ಮಿಷನ್‌ನ್ನು ಲಾಂಚ್ ಮಾಡಲಾಗುತ್ತಿದ್ದು, ಇದರ ಕಾರ್ಯವೂ ಕೂಡ ನಡೆಯುತ್ತಿದೆ. ಚಂದ್ರಯಾನ-3 ಕೆಲಸ ಈಗಾಗಲೇ ಆರಂಭವಾಗಿದೆ. ಗಗನಯಾನ ಮಿಷನ್​ ಕೂಡಾ ಈ ವರ್ಷವೇ ಉಡಾವಣೆಗೊಳ್ಳಲಿದೆ. ಆದರೆ ಲಾಂಚ್ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಎಂದು ಹೇಳಿದ್ದಾರೆ.

Most Read Articles
Best Mobiles in India

Read more about:
English summary
India’s last mission to the moon wasn’t exactly the success that the brilliant team back at ISRO expected. However, the organization has revealed that another attempt to reach the moon in the form of Chandrayaan 3 is in the works. Further, the new mission will cost Rs 6.51 billion. This would make Chandrayaan 3 less expensive than the Chandrayaan 2 mission. The latter, was already the least expensive moon mission in history.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more