Chandrayaan-3 ಅನ್ನು ಟ್ರ್ಯಾಕಿಂಗ್ ಮಾಡುತ್ತಿರುವುದು ಹೇಗೆ? ಇದಕ್ಕೆ ಯಾವೆಲ್ಲಾ ಸಂಸ್ಥೆಗಳು ಬೆಂಬಲಿಸಿವೆ ಗೊತ್ತಾ?
ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತದ ಚಂದ್ರಯಾನ 3 ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಈ ಕ್ಷಣಕ್ಕಾಗಿ ದೇಶದ ಸಮಸ್ತ ಜನರು ಕೂಡ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇದರ ನಡುವೆ ಚಂದ್ರಯಾನ 3 ಮಿಷನ್ ಅನ್ನು ಇಸ್ರೋ ಹೇಗೆ ಟ್ರ್ಯಾಕ್ ಮಾಡುತ್ತಿದೆ. ಚಂದ್ರಯಾನ 3 ನೌಕೆ ವಿಕ್ರಮ್ ಲ್ಯಾಂಡರ್ ಮೇಲೆ ಯಾವೆಲ್ಲಾ ಬಾಹ್ಯಕಾಶ ಸಂಸ್ಥೆಗಳು ಕಣ್ಣಿಟಿವೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ.
ಹೌದು, ಬಾಹ್ಯಾಕಾಶದಲ್ಲಿರುವ ಚಂದ್ರಯಾನ 3 (Chandrayaan-3)ಮಿಷನ್ ಅನ್ನು ಇಸ್ರೋ ಹೇಗೆ ಟ್ರ್ಯಾಕ್ ಮಾಡುತ್ತಿದೆ. ಆದರಿಂದ ಸೈಂಟಿಫಿಕ್ ಡೇಟಾವನ್ನು ಹೇಗೆ ಪಡೆದುಕೊಳ್ಳಲಿದೆ ಅನ್ನೊದು ಕುತೂಹಲಕಾರಿಯಾಗಿದೆ. ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಇಸ್ರೋ ಇತರೆ ಬಾಹ್ಯಾಕಾಶ ಸಂಸ್ಥೆಗಳ ಸಹಾಯವನ್ನು ಕೂಡ ಪಡೆದುಕೊಂಡಿದೆ. ಹಾಗಾದ್ರೆ ಚಂದ್ರಯಾನ 3 ನೌಕೆಯನ್ನು ಟ್ರ್ಯಾಕ್ ಮಾಡುತ್ತಿರುವುದು ಹೇಗೆ? ಬಾಹ್ಯಕಾಶದಲ್ಲಿರುವ ನೌಕೆಯನ್ನು ಇಲ್ಲಿಂದಲ್ಲೇ ನಿರ್ವಹಿಸುವುದಕ್ಕೆ ಏನೆಲ್ಲಾ ಅವಕಾಶವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದಮಾಮನ ದಕ್ಷಿಣ ಧ್ರುವವನ್ನು ಮುಟ್ಟುವ ತವಕದಲ್ಲಿ ಚಂದ್ರಯಾನ-3 ನೌಕೆ ವಿಕ್ರಮ್ ಲ್ಯಾಂಡರ್ ಚಿತ್ತ ಹರಿಸಿದೆ. ಕೆಲವು ಗಂಟೆಗಳಲ್ಲಿ ಈ ಕಾರ್ಯ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಇಡೀ ದೇಶವಿದೆ. ಚಂದ್ರಯಾನ-3 ಗೆ ಸಂಬಂಧಿಸಿದಂತೆ ಇಸ್ರೋ ನೀಡುತ್ತಿರುವ ಅಪ್ಡೇಟ್‌ಗಳು ದೇಶವಾಸಿಗಳ ಹೃದಯಬಡಿತವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಚಂದ್ರಯಾನ-3 ನೌಕೆ ಸಾಗುತ್ತಿರುವ ಪ್ರತಿ ಹಾದಿಯ ಮಾಹಿತಿಯನ್ನು ಇಸ್ರೋ ನೀಡುತ್ತಿದೆ. ಅಷ್ಟಕ್ಕೂ ಚಂದ್ರಯಾನ-3 ಅನ್ನು ಇಸ್ರೋ ವಿಜ್ಞಾನಿಗಳು ಟ್ರ್ಯಾಕ್ ಮಾಡುತ್ತಿರುವುದು ಕೇಳಿದರೆ ರೋಮಾಂಚನವಾಗಲಿದೆ.
ನಿಜ, ಭೂಮಿಯಿಂದ ಚಂದ್ರನೆಡೆಗೆ ಸಾಗಿರುವ ಚಂದ್ರಯಾನ-3 ಅನ್ನು ಪ್ರತಿ ಹಂತದಲ್ಲಿಯೂ ಟ್ರ್ಯಾಕ್ ಮಾಡಲಾಗುತ್ತಿದೆ. ಇದನ್ನು ಕೇವಲ ಇಸ್ರೋ ಸಂಸ್ಥೆ ಮಾತ್ರ ಮಾಡುತ್ತಿಲ್ಲ. ಇಸ್ರೋದ ಈ ಸಾಹಸಕ್ಕೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಕೂಡ ಬೆಂಬಲವನ್ನು ನೀಡುತ್ತಿವೆ. ಅಂದರೆ ಭೂಮಿಯಿಂದ ಚಂದ್ರಯಾನ-3 ನೌಕೆಯನ್ನು ಟ್ರ್ಯಾಕ್ ಮಾಡುವುದಕ್ಕೆ ಈ ಸಂಸ್ಥೆಗಳು ಸಹಾಯ ಮಾಡುತ್ತಿವೆ.

ಚಂದ್ರಯಾನ-3 ಅನ್ನು ಟ್ರ್ಯಾಕ್ ಮಾಡುತ್ತಿರುವುದು ಹೇಗೆ?
ಇಸ್ರೋ ತನ್ನ ಬಾಹ್ಯಾಕಾಶ ನೌಕೆಯಿಂದ ಟೆಲಿಮೆಟ್ರಿ ಮತ್ತು ವೈಜ್ಞಾನಿಕ ಡೇಟಾವನ್ನು ಪತ್ತೆಹಚ್ಚಲು ಹಲವು ಕ್ರಮಗಳನ್ನು ಅನುಸರಿಸುತ್ತಿದೆ. ಅದರಂತೆ ಚಂದ್ರಯಾನ-3 ಟ್ರ್ಯಾಕ್ ಮಾಡಲು, ಕಮಾಂಡ್ ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವ ಆಳವಾದ ಬಾಹ್ಯಾಕಾಶ ಟ್ರ್ಯಾಕಿಂಗ್ ಸ್ಟೇಷನ್ ಅನ್ನು ನಿರ್ವಹಿಸುತ್ತದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಇಸ್ಟ್ರಾಕ್) ಇಸ್ರೋದ ಉಪಗ್ರಹ ಮತ್ತು ಉಡಾವಣಾ ಕಾರ್ಯಾಚರಣೆಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ರಿಮೋಟ್ ಸೆನ್ಸಿಂಗ್ ಮತ್ತು ವೈಜ್ಞಾನಿಕ ಉಪಗ್ರಹಗಳಿಗಾಗಿ ಮಿಷನ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ಅಲ್ಲದೆ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೇವೆಗಳನ್ನು ಉಡಾವಣೆಯಿಂದ ಕಕ್ಷೆಯಲ್ಲಿ ಉಪಗ್ರಹ ನಿಯೋಜನೆಯವರೆಗೆ ಒದಗಿಸುತ್ತದೆ. ಜೊತೆಗೆ ಉಪಗ್ರಹದ ಆರಂಭಿಕ ಕಕ್ಷೆಯನ್ನು ಅಂದಾಜು ಮಾಡುತ್ತದೆ. ಹಾಗೆಯೇ ಇಸ್ಟ್ರಾಕ್ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಬಗ್ಗೆ ನಿಗಾ ಇಡಲು ಸಹಾಯ ಮಾಡಿದೆ.
ಚಂದ್ರಯಾನ-3 ನೌಕೆ ಟ್ರ್ಯಾಕ್ ಮಾಡುವಲ್ಲಿ ಇವರ ಬೆಂಬಲ ಅತ್ಯಗತ್ಯ
ಚಂದ್ರಯಾನ-3 ನೌಕೆಯು ಇಸ್ರೋ ಆಂಟೆನಾದ ವ್ಯೂ ಫಿಲ್ಡ್‌ನಿಂದ ಹೊರಗಿರುವಾಗ ಅದನ್ನು ಟ್ರ್ಯಾಕ್ ಮಾಡುವ ಅಗತ್ಯವಿರುತ್ತದೆ. ಇಂತಹ ಸನ್ನಿವೇಶದಲ್ಲಿ ಟ್ರ್ಯಾಕಿಂಗ್ ಮಾಡುವುದಕ್ಕೆ ಜಾಗತಿಕ ನೆಟ್‌ವರ್ಕ್ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಸ್ರೋ ಬಾಹ್ಯಾಕಾಶ ಏಜೆನ್ಸಿಗಳಾದ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೊಂದಿಗೆ ಸಹಕಾರವನ್ನು ಪಡೆದುಕೊಳ್ಳುತ್ತಿದೆ.
ಅದರಂತೆ ಹವಾಯಿಯಲ್ಲಿ ಸೌತ್ ಪಾಯಿಂಟ್ ಸ್ಯಾಟಲೈಟ್ ಸ್ಟೇಷನ್, ಕ್ಯಾಲಿಫೋರ್ನಿಯಾದ ಗೋಲ್ಡ್ ಸ್ಟೋನ್, ಫ್ರೆಂಚ್ ಗಯಾನಾದ ಕೌರೌ, ಸ್ಪೇನ್‌ನ ಮ್ಯಾಡ್ರಿಡ್, ಯುಕೆಯಲ್ಲಿ ಗೂನ್‌ಹಿಲ್ಲಿ ಮತ್ತು ಆಸ್ಟ್ರೇಲಿಯಾದ ಕ್ಯಾನ್‌ಬೆರಾ ಸೇರಿದಂತೆ ವಿಶ್ವಾದ್ಯಂತ ಮಲ್ಟಿ ಟ್ರ್ಯಾಕಿಂಗ್ ಸ್ಟೇಷನ್‌ಗಳನ್ನು ಹೊಂದಿದ್ದಾರೆ. ಈ ಸ್ಟೇಷನ್‌ಗಳು ಕೂಡ ಚಂದ್ರಯಾನ-3 ಅನ್ನು ವಿವಿಧ ಕೋನಗಳಿಂದ ನಿರಂತರವಾಗಿ ಟ್ರ್ಯಾಕ್ ಮಾಡುತ್ತಿವೆ. ಇದೇ ಕಾರಣಕ್ಕೆ ಚಂದ್ರಯಾನ-3 ಚಂದ್ರನ ಕಡೆಗೆ ಸುರಕ್ಷಿತವಾಗಿ ಸಾಗುವುದಕ್ಕೆ ಮಾರ್ಗದರ್ಶನ ಮಾಡಬಹುದು ಎನ್ನಲಾಗಿದೆ.
ಇನ್ನು ಚಂದ್ರಯಾನ-3 ಉಡಾವಣೆಯಾದ ನಂತರದ ದಿನಗಳಲ್ಲಿ ಫ್ರೆಂಚ್ ಗಯಾನಾದ ಕೌರೌನಲ್ಲಿರುವ ESA ಮೂಲಕವೇ ಚಂದ್ರಯಾನ-3 ನೌಕೆ ಎಲ್ಲಿದೆ ಅನ್ನೊದನ್ನ ಪತ್ತೆ ಹಚ್ಚುವುದಕ್ಕೆ ಬಳಸಲಾಗಿತ್ತು ಅನ್ನೋ ವಿಚಾರ ಬಹಿರಂಗವಾಗಿದೆ. ಬಾಹ್ಯಾಕಾಶ ನೌಕೆಯು ಭೂಮಿಯಿಂದ ಹಿಂದೆ ಸರಿಯುತ್ತಿದ್ದಂತೆ, UK ಯಲ್ಲಿಯಲ್ಲಿರುವ ಗೂನ್‌ಹಿಲ್ಲಿ ಅರ್ಥ್ ಸ್ಟೇಷನ್ ನಿರ್ವಹಿಸುವ ಆಂಟೆನಾದಿಂದ ESA ಟ್ರ್ಯಾಕಿಂಗ್ ಬೆಂಬಲವನ್ನು ಸಂಯೋಜಿಸಿತು. ಅಲ್ಲದೆ ಗೂನ್‌ಹಿಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ಗಳನ್ನು ಬೆಂಬಲಿಸುವಂತೆ ಮಾಡಿವೆ.
ಇದರೊಂದಿಗೆ ಆಸ್ಟ್ರೇಲಿಯಾದ ನ್ಯೂ ನಾರ್ಸಿಯಾದಲ್ಲಿ ESA ದ 35-ಮೀಟರ್ ಡೀಪ್ ಸ್ಪೇಸ್ ಆಂಟೆನಾವು ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಗೆ ಇಳಿಯುವ ಸಮಯದಲ್ಲಿ ಟ್ರ್ಯಾಕಿಂಗ್ ಬೆಂಬಲವನ್ನು ಒದಗಿಸುತ್ತಿದೆ. ಇನ್ನು ನಾಸಾ ಡೀಪ್ ಸ್ಪೇಸ್ ನೆಟ್‌ವರ್ಕ್ ತಡೆರಹಿತ ಮಾನಿಟರಿಂಗ್ ಅನ್ನು ಖಚಿತಪಡಿಸುತ್ತದೆ. ಇದು ಟ್ರ್ಯಾಕಿಂಗ್ ಕವರೇಜ್ ಮತ್ತು ಟೆಲಿಮೆಟ್ರಿ ಸಹಾಯವನ್ನು ಒದಗಿಸುತ್ತಿದೆ. ಕ್ಯಾನ್‌ಬೆರಾ ಡೀಪ್ ಸ್ಪೇಸ್ ಕಮ್ಯುನಿಕೇಷನ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಡೀಪ್ ಸ್ಪೇಸ್ ಸ್ಟೇಷನ್‌ಗಳಾದ DSS-36 ಮತ್ತು DSS-34 ಮೂಲಕ ಈ ಪ್ರಮುಖ ಕಾರ್ಯವನ್ನು ನಿರ್ವಹಿಸಲಾಗುತ್ತದೆ.


Click it and Unblock the Notifications








