Chandrayaan-3: ಚಂದ್ರನಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಮತ್ತೆ ಲ್ಯಾಂಡ್ ಮಾಡಿಸಿದ ಇಸ್ರೋ!
ಇಸ್ರೋ ಕಡೆಯಿಂದ ಚಂದ್ರಯಾನ-3 ಗೆ ಸಂಬಂಧಿಸಿದಂತೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ಅಂಗಳದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅನ್ನು ಮತ್ತೊಮ್ಮೆ ಲ್ಯಾಂಡ್ ಮಾಡಲಾಗಿದೆ ಎಂದು ಹೇಳಿದೆ. ಈ ಮೂಲಕ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಇಸ್ರೋದ ಯೋಜನೆಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.
ಹೌದು, ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಹ್ಯಾಪ್ ಪರೀಕ್ಷೆ ಮಾಡಲಾಗಿದೆ. ಚಂದ್ರನ ಅಂಗಳದಲ್ಲಿ ಇರುವಾಗಲೇ ಇಸ್ರೋ ವಿಕ್ರಮ್ ಲ್ಯಾಂಡರ್ ಅನ್ನು ಮತ್ತೊಂದು ಕಡೆಗೆ ಜಿಗಿತವಾಗುವ ಪರೀಕ್ಷೆ ನಡೆಸಿದೆ. ಇದು ಯಶಸ್ವಿ ಕೂಡ ಆಗಿದ್ದು, ಮುಂದಿನ ದಿನಗಳಲ್ಲಿ ಮಾನವ ಸಹಿತ ಚಂದ್ರಯಾನಕ್ಕೆ ಸಹಾಯವಾಗಲಿದೆ ಎಂದು ಇಸ್ರೋ ಹೇಳಿದೆ. ಅಷ್ಟಕ್ಕೂ ಇಸ್ರೋ ಚಂದ್ರನ ಅಂಗಳದಲ್ಲಿ ಮತ್ತೊಮ್ಮೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಭಾರತ ಚರಿತ್ರೆ ಸೃಷ್ಟಿಯಾಗಿತ್ತು. ಇದೀಗ ಅದೇ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದಿದ್ದ ಶಿವಶಕ್ತಿ ಪಾಯಿಂಟ್‌ನಿಂದ 30 - 40 ಸೆಂ.ಮೀ ದೂರದಲ್ಲಿ ಮತ್ತೊಮ್ಮೆ ಲ್ಯಾಂಡ್ ಆಗಿದೆ. ಅಂದರೆ ಇಸ್ರೋ ವಿಕ್ರಮ್ ಲ್ಯಾಂಡರ್ ಹ್ಯಾಪ್ ಪರೀಕ್ಷೆಯನ್ನು ನಡೆಸಿದೆ. ಅದರಂತೆ ವಿಕ್ರಮ್ ಲ್ಯಾಂಡರ್ ತನ್ನ ಇಂಜಿನ್ ಹಾರಿಸಿದ್ದು ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿ, 30 - 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಈ ಜಿಗಿತವು ಭಾರತ ಭವಿಷ್ಯದಲ್ಲಿ ಚಂದ್ರನಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಯೋಜನೆಗಳಿಗೆ ಸಹಾಯ ಮಾಡಲಿದೆ. ಅಂದರೆ ಯೋಜನೆಗಳ ಉದ್ದೇಶ ಮುಗಿದ ಬಳಿಕ ಲ್ಯಾಂಡರ್‌ಗಳನ್ನು ಮರಳಿ ಭೂಮಿಗೆ ತರುವ ಹಾಗೂ ಮಾನವ ಸಹಿತ ಯೋಜನೆಗಳನ್ನು ಉತ್ತೇಜಿಸಲು ಸಾದ್ಯವಾಗಲಿದೆ. ಸದ್ಯ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸ್ಲೀಪ್ ಮೋಡ್‌ಗೆ ಹೋಗಲಿದೆ ಎಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಹೇಳಿದೆ.
ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪ್ ಮೋಡ್‌ಗೆ ಸೆಟ್ ಮಾಡಲಾಗಿದೆ. ಸದ್ಯ ಹೊಸ ಸ್ಥಳದಲ್ಲಿ ChaSTE, RAMBHA-LP ಮತ್ತು ILSA ಪೇಲೋಡ್‌ಗಳಿಂದ ಸ್ಥಳದಲ್ಲೇ ಪ್ರಯೋಗಗಳನ್ನು ನಡೆಸಲಾಗುತ್ತದೆ. ಸಂಗ್ರಹಿಸಿದ ಡೇಟಾವನ್ನು ಭೂಮಿಯಲ್ಲಿ ಸ್ವೀಕರಿಸಲಾಗಿದ್ದು, ಪೇಲೋಡ್‌ಗಳನ್ನು ಈಗ ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್‌ಗಳನ್ನು ಮಾತ್ರ ಆನ್‌ನಲ್ಲಿ ಇರಿಸಲಾಗಿದೆ. ಆದರಿಂದ ಬ್ಯಾಟರಿ ಖಾಲಿಯಾದ ನಂತರ ವಿಕ್ರಮ್ ಪ್ರಗ್ಯಾನ್ ಪಕ್ಕದಲ್ಲಿ ಸ್ಲಿಪ್ ಮೋಡ್‌ಗೆ ಹೋಗಲಿದ್ದಾನೆ ಎನ್ನಲಾಗಿದೆ.
ಪ್ರಗ್ಯಾನ್ ರೋವರನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ ಸ್ಟಾಪ್ ಮಾಡಿ ಸ್ಲೀಪ್ ಮೋಡ್‌ಗೆ ಸೆಟ್ ಮಾಡಲಾಗಿದೆ. ಪ್ರಸ್ತುತ, ಇದರ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದ್ದು, ಚಂದ್ರನಂಗಳದಲ್ಲಿ ಸೆಪ್ಟೆಂಬರ್ 22, 2023 ರಂದು ಮತ್ತೆ ಸೂರ್ಯೋದಯವಾಗುತ್ತಿದ್ದ ಹಾಗೇ ಬೆಳಕನ್ನು ಸ್ವೀಕರಿಸಲು ರಿಸೀವರ್ ಅನ್ನು ಇರಿಸಲಾಗಿದೆ. ಇದು ಯಶಸ್ವಿಯಾದರೆ ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ಅಂಗಳದಲ್ಲಿ ಇನ್ನಷ್ಟು ದಿನಗಳ ಕಾಲ ಅಧ್ಯಯನ ನಡೆಸಬಹುದಾಗಿದೆ.
ಸದ್ಯ ಚಂದ್ರನಂಗಳದಲ್ಲಿ ರಾತ್ರಿ ಆಗುತ್ತಿದೆ. ಈ ಸಮಯದಲ್ಲಿ 230 ಡಿಗ್ರಿ ತಾಪಮಾನ ಇರುತ್ತದೆ. ಇದರಿಂದ ಪ್ರಗ್ಯಾನ್ ರೋವರ್ ಯಾವುದೇ ರೀತಿಯ ಸಂಶೋಧನೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಾಗಿ ರೋವರನ್ನು ಇಸ್ರೋ ಸುರಕ್ಷಿತವಾಗಿ ನಿಲುಗಡೆ ಮಾಡಿದೆ. ಒಂದು ವೇಳೆ ಪ್ರಗ್ಯಾನ್ ರೋವರ್ ಸೆಪ್ಟೆಂಬರ್ 22ರಂದು ಚಂದ್ರನಂಗಳದಲ್ಲಿ ಸೂರ್ಯೋದಯವಾದಾಗಲೂ ಮುಂದಡಿ ಇಡದೇ ಹೋದರೆ ಇಸ್ರೋದ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಅದರ ನೆನಪಿನ ಕುರುಹಾಗಿ ಚಂದ್ರನಂಗಳದಲ್ಲಿ ಉಳಿದುಕೊಳ್ಳಲಿದೆ.


Click it and Unblock the Notifications








