Home
ಸುದ್ದಿಜಾಲ

ಚಂದ್ರಯಾನ 3: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ವಿಕ್ರಮ್‌ ಲ್ಯಾಂಡರ್‌

ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ 3 ಸಾಫ್ಟ್‌ ಲ್ಯಾಂಡಿಂಗ್‌ ಯಶಸ್ವಿಯಾಗಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲಾಗಿದೆ. ಅಲ್ಲದೆ ಚಂದ್ರನ ದಕ್ಷಿಣ ಧ್ರುವ ಭಾಗವನ್ನು ಯಶಸ್ವಿಯಾಗಿ ತಲುಪಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಹೌದು, ಚಂದ್ರಯಾನ 3 ಮಿಷನ್‌ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದ್ದು, ಇಂದಿನಿಂದಲೇ ತನ್ನ ಅಧ್ಯಯನ ಕಾರ್ಯ ಶುರುಮಾಡಲಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ಏನೇನಿದೆ ಅನ್ನೊದನ್ನ ಪತ್ತೆ ಹಚ್ಚುವ ಕಾರ್ಯ ಪ್ರಾರಂಭವಾಗಲಿದೆ. ಅಷ್ಟಕ್ಕೂ ಚಂದ್ರಯಾನ 3 ಮಿಷನ್‌ ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಿಸಿದ್ದು ಹೇಗೆ? ಇಡೀ ಪ್ರಕ್ರಿಯೆಯನ್ನು ಇಸ್ರೋ ಕಣ್ಣಲ್ಲಿ ಕಣ್ಣಿಟ್ಟು ಜತನದಿಂದ ನಿರ್ವಹಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವುದಕ್ಕೂ ಮೊದಲು ಅಂತಿಮ 15 ರಿಂದ 20 ನಿಮಿಷಗಳು ಬಹಳ ನಿರ್ಣಾಯಕವಾಗಿತ್ತು. ಈ ಹಂತದಲ್ಲಿ ಇಸ್ರೋ ವಿಜ್ಞಾನಿಗಳ ತಾಳ್ಮೆ ಹಾಗೂ ಕಾರ್ಯಪರತೆಯನ್ನು ಮೆಚ್ಚುವಂತಹದ್ದೇ ಆಗಿದೆ. ಈ ಸಮಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಇಸ್ರೋ ಭಾರತವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದೆ. ಚಂದ್ರನ ಅಂಗಳದಲ್ಲಿ ಭಾರತದ ದ್ವನಿ ಮೊಳಗುವಂತೆ ಮಾಡಿದೆ. ಈ ಮೂಲಕ ಚಂದ್ರಯಾನ 2ರಲ್ಲಿ ಉಂಟಾಗಿದ್ದ ಹಿನ್ನಡೆಯನ್ನು ಮರೆಯುವಂತೆ ಮಾಡಿದೆ.

ಚಂದ್ರಯಾನ 3: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ವಿಕ್ರಮ್‌ ಲ್ಯಾಂಡರ್‌

ಇನ್ನು ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರನ ಮೇಲ್ಮೈನಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿಸುವ ಪ್ರಕ್ರಿಯೆ ಸಂಜೆ 5:44 ರಿಂದ ಶುರುವಾಗಿತ್ತು. ಈ ಹಂತದಿಂದ ಅದನ್ನು ಯಶಸ್ವಿಯಾಗಿ ಸರಿಯಾಗಿ ಸಂಜೆ 6.04ರಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿಸುವಲ್ಲಿ ಇಸ್ರೋ ಯಶಸ್ಸು ಸಾಧಿಸಿದೆ. ಬಹಳ ನಿರ್ಣಾಯಕ ಎನಿಸಿದ್ದ 20 ಅಥವಾ 17 ನಿಮಿಷಗಳ ಟೆರರ್‌ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಲಾಯ್ತು. ಈ ಸಮಯದಲ್ಲಿ ಇಸ್ರೋದ ಸಂಪರ್ಕಕ್ಕಿಂತ ವಿಕ್ರಮ್ ಲ್ಯಾಂಡರ್ ತನ್ನದೇ ಆದ ಎಂಜಿನ್‌ಗಳು ಉರಿಯುವ ಮೂಲಕ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ.

ಚಂದ್ರಯಾನ-3 ಮಿಷನ್ ಯಾಕೆ ಪ್ರಾಮುಖ್ಯತೆ ಪಡೆದಿದೆ?
ಚಂದ್ರಯಾನ-3 ಮಿಷನ್ ಮೂರು ಉದ್ದೇಶಗಳನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸುವ ಹಾಗೂ ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸಲು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಅಲ್ಲದೆ ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ಲ್ಯಾಂಡರ್‌ ಅನ್ನು ಇಳಿಸಿರುವುದರಿಂದ ಈ ಪ್ರದೇಶದಲ್ಲಿ ಹೆಪ್ಪುಗಟ್ಟಿದ ನೀರು ಮತ್ತು ಅಮೂಲ್ಯ ಖನಿಜಗಳ ಸಂಗ್ರಹ ಲಭ್ಯತೆ ಹೊಂದಿದೆ ಎಂದು ನಂಬಲಾಗಿದೆ.

ಚಂದ್ರಯಾನ-3 ಉಡಾವಣೆ ಮತ್ತು ಪೇಲೋಡ್
ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹುಬಲಿ ಲಾಂಚ್ ವೆಹಿಕಲ್ ಮಾರ್ಕ್-III (LVM-3) ನಲ್ಲಿ ಉಡಾವಣೆ ಮಾಡಲಾಯಿತು. ಇದು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಹೊಂದಿರುವ ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿತ್ತು.

ಚಂದ್ರಯಾನ-3 ಚಂದ್ರನನ್ನು ಹೇಗೆ ತಲುಪಿತು
ಉಡಾವಣಾ ರಾಕೆಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಗೆ ಸೇರಿಸಿತು ಮತ್ತು ಬಹು ಕುಶಲತೆಯ ನಂತರ, ಇಸ್ರೋ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಿತು. ಮತ್ತೊಮ್ಮೆ, ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಹತ್ತಿರ ತರಲು ಅನೇಕ ಕುಶಲತೆಗಳನ್ನು ಮಾಡಲಾಯಿತು. ಈ ಮೂಲಕ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ 3 ಮಿಷನ್‌ ಯಶಸ್ವಿಯಾಗಿದೆ.

Best Mobiles in India

English summary
chandrayaan 3 landed on moon successfully: Complete Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+