Chandrayaan-3: ವಿಕ್ರಮ್ ಲ್ಯಾಂಡರ್ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್.. ಟ್ರೆಂಡ್ ಆಯ್ತು ತಿಮ್ಮಪ್ಪನ ಕಿರೀಟ!
ಇಡೀ ವಿಶ್ವವೇ ಎದುರು ನೋಡುತ್ತಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ -3 ಮಿಷನ್ ಸಕ್ಸಸ್ ಆಗಿದೆ. ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಲ್ಯಾಂಡ್ ಮಾಡುವ ಮೂಲಕ ವಿಶ್ವದ ಯಾವ ರಾಷ್ಟ್ರವೂ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಇದೇ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ಕಿರೀಟದ ಫೋಟೋ ಭಾರಿ ವೈರಲ್ ಆಗಿದೆ.
ಹೌದು, ಚಂದ್ರನ ಅಂಗಳದಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್‌ನ ವಿನ್ಯಾಸ ಹಾಗೂ ತಿರುಪತಿ ತಿಮ್ಮಪ್ಪನ ಕಿರೀಟ ಎರಡನ್ನು ಹೋಲಿಸಿ ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಟ್ವಿಟ್ ಮಾಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳು ರಾಕೆಟ್ ಉಡಾವಣೆಗೂ ಮುನ್ನ ತಿರುಪತಿಗೆ ಬೇಟಿ ನೀಡುವ ವಿಚಾರ ಹಾಗೂ ತಿಮ್ಮಪ್ಪನ ಕಿರೀಟದ ವಿನ್ಯಾಸ ಎರಡರ ಬಗ್ಗೆ ಇದೀಗ ಭಾರಿ ಚರ್ಚೆ ನಡೆಯುತ್ತಿದೆ.

ಕೊನೆಗೂ ತಿರುಪತಿ ತಿಮ್ಮಪ್ಪನ ನಂಬಿದವರ ಕೈ ಬಿಡಲಿಲ್ಲ ಎಂದು ಎಲ್ಲೆಡೆ ಟ್ವಿಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಇಸ್ಟೋ ವಿಜ್ಞಾನಿಗಳು ಹಾಗೂ ತಿರುಪತಿ ತಿಮ್ಮಪ್ಪನ ದೇಗುಲದ ನಡುವಿನ ಅವಿನಭಾವ ಸಂಬಂಧವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನಿಮಗೆಲ್ಲಾ ತಿಳಿದಿರುವಂತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ -3 ಉಡಾವಣೆಗೂ ಮುನ್ನದಿನಾ ತಿರುಪತಿ ತಿಮ್ಮಪ್ಪನ ಆಲಯಕ್ಕೆ ಬೇಟಿ ನೀಡಿದ್ದರು. ಅಲ್ಲದೆ ಚಂದ್ರಯಾನ -3 ರಾಕೆಟ್ ಮಾದರಿಯನ್ನು ತಿಮ್ಮಪ್ಪನ್ನ ಸನ್ನಿಧಿಯಲ್ಲಿರಿಸಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿಗಳು ರಾಕೆಟ್ ಉಡಾವಣೆಗೂ ಮುನ್ನ ದೇವರ ಮೊರ ಹೋಗುವುದು ಎಷ್ಟು ಸರಿ ಎಂಬೆಲ್ಲಾ ಚರ್ಚೆ ನಡೆದಿತ್ತು. ಆದರೆ ಇದೀಗ ಚಂದ್ರಯಾನ 3 ಯಶಸ್ವಿಯಾಗ್ತಿದ್ದ ಹಾಗೇ ತಿಮ್ಮಪ್ಪನ ಪವಾಡಗಳ ಬಗ್ಗೆ ಚರ್ಚೆ ನಡೆದಿದೆ.
ಕೊನೆಗೂ ತಿರುಪತಿ ತಿಮ್ಮಪ್ಪ ನಂಬಿದವರ ಕೈ ಬಿಡಲಿಲ್ಲ. ಇದು ನಿಜಕ್ಕೂ ತಿರುಪತಿ ತಿಮ್ಮಪ್ಪನ ಅರ್ಶೀವಾದ ಫಲವೆಂದು ಒಂದು ವರ್ಗ ವಾದಮಾಡುತ್ತಿದ್ದರೆ, ಇದು ವಿಜ್ಞಾನಿಗಳ ಪರಿಶ್ರಮಕ್ಕೆ ಸಂದ ಯಶಸ್ಸು ಎಂಬೆಲ್ಲಾ ಚರ್ಚೆ ನಡೆಯುತ್ತಿದೆ. ಆದರೆ ಟೀಕೆ ಟಿಪ್ಪಣಿ ಏನೇ ಇರಲಿದೆ ಇದೆಲ್ಲವನ್ನೂ ಮೀರಿ ಇಸ್ರೋ ಗೆದ್ದು ಬೀಗಿದೆ. ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿಸುವ ಮೂಲಕ ಭಾರತ ಎಂದೆಂದಿಗೂ ತ್ರಿವಿಕ್ರಮ ಅನ್ನೊದನ್ನ ಸಾಧಿಸಿ ತೋರಿಸಿದೆ.
ತಿಮ್ಮಪ್ಪನಿಗೂ ರಾಕೆಟ್‌ಗೂ ಸಂಬಂಧ ಏನಿದೆ?
ಸಾಮಾನ್ಯವಾಗಿ ವಿಜ್ಞಾನಿಗಳ ಪರಿಶ್ರಮದಿಂದ ನಡೆಯುವ ರಾಕೆಟ್ ಉಡಾವಣೆ ವಿಚಾರದಲ್ಲಿ ದೇವರ ದರ್ಶನ ಏಕೆ ಅನ್ನೊದು ಕೆಲವರ ಪ್ರಶ್ನೆಯಾಗಿದೆ. ಆದರೆ ಹೇಳಿಕೇಳಿ ದಾರ್ಮಿಕವಾಗಿ ಸಾಕಷ್ಟು ನಂಬಿಕೆಗಳನ್ನು ಹೊಂದಿರುವ ಭಾರತದಲ್ಲಿ ಪ್ರತಿಯೊಂದು ನಂಬಿಕೆಗೂ ತನ್ನದೇ ಆದ ವಿಶೇಷತೆ ಇದೆ. ಇದರಲ್ಲಿ ತಿರುಪತಿ ತಿಮ್ಮಪ್ಪನ ಮೇಲಿರುವ ನಂಬಿಕೆಯು ಕೂಡ ಒಂದಾಗಿದೆ. ಕೆಲವರ ಪ್ರಕಾರ ವಿಷ್ಣುವಿನ ಅವತಾರವಾಗಿರುವ ತಿಮ್ಮಪ್ಪನ ವಾಹನ ಕೂಡ ಗರುಡವಾಗಿದೆ. ಗರುಡ ಅಗಸದಲ್ಲಿ ಮುಗಿಲೆತ್ತರಕ್ಕೆ ಕ್ಷಣಾರ್ಧದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
ಇದಲ್ಲದೆ ತಿರುಪತಿ ತಿಮ್ಮಪ್ಪ ಧರಿಸುವ ಕಿರೀಟ ಕೂಡ ರಾಕೆಟ್ ಮಾದರಿಯಲ್ಲಿಯೇ ಇರಲಿದೆ. ಇದೇ ಕಾರಣಕ್ಕೆ ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನನ್ನು ದರ್ಶನ ಮಾಡುವುದಕ್ಕೆ ಒಂದು ಕಾರಣ ಎಂದು ನಂಬಲಾಗಿದೆ. ಅದರಂತೆ ಇದೀಗ ತಿಮ್ಮಪ್ಪನ ಕಿರೀಟ ಹಾಗೂ ವಿಕ್ರಮ್ ಲ್ಯಾಂಡರ್‌ನ ವಿನ್ಯಾಸದ ಚಿತ್ರ ಎರಡನ್ನು ಕೂಡ ಶೇರ್ ಮಾಡಲಾಗ್ತಿದೆ.
ಇನ್ನು ವಿಜ್ಞಾನಿಗಳು ದೇವರನ್ನು ನಂಬಬಾರದು ಅನ್ನೋದು ಸೂಕ್ತವಲ್ಲ. ಭಾರತದಂತಹ ದೇಶದಲ್ಲಿ ಪ್ರತಿಯೊಂದರಲ್ಲೂ ದೇವರ ಅಂಶವನ್ನು ಕಾಣುವ ನಾವುಗಳ ಉತ್ತಮ ಕಾರ್ಯಗಳನ್ನು ಶುರುಮಾಡುವ ಮುನ್ನ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ. ಅದರಂತೆ ಇಸ್ರೋ ವಿಜ್ಞಾನಿಗಳು ಸಹ ಪ್ರತಿಯೊಂದು ಹಂತದಲ್ಲಿಯೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಂದುವರೆಯುತ್ತಾರೆ. ಇದಕ್ಕೆ ಕಾಕಾತಾಳೀಯ ವೆಂಬಂತೆ ನೆನ್ನೆಯು ಕೂಡ ಬೆಂಗಳೂರಿನಲ್ಲಿರುವ ಬಾಲಾಜಿ ದೇಗುಲಕ್ಕೆ ಇಸ್ರೋ ವಿಜ್ಞಾನಿಗಳು ಬೇಟಿ ನೀಡಿದ್ದರು ಅನ್ನೋದು ಅಚ್ಚರಿಯ ವಿಷಯವಾಗಿದೆ.


Click it and Unblock the Notifications








