Chandrayaan-3: ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್!
ಚಂದ್ರಯಾನ 3 ನೌಕೆಯಿಂದ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಚಂದ್ರನ ದಕ್ಷಿಣ ಧ್ರುವ ಸೇರುವ ಮುನ್ನ ನಡೆಯಬೇಕಿದ್ದ ಮಹತ್ತರ ಪ್ರಕ್ರಿಯೆ ಇದೀಗ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳುವ ಚಂದ್ರಯಾನ 3 ನೌಕೆಯ ಹಾದಿ ಸುಗಮವಾಗಿದೆ. ಇದು ಭಾರತ ಚಂದ್ರಯಾನ 3 ಮಿಷನ್‌ನ ಯಶಸ್ಸಿಗೆ ಇನ್ನಷ್ಟು ಹತ್ತಿರವಾದಂತೆ ಮಾಡಿದೆ.
ಹೌದು, ಚಂದ್ರಯಾನ 3 ನೌಕೆಯ ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಈ ಮೂಲಕ ಚಂದ್ರನ ಅಂಗಳಕ್ಕೆ ಸಾಗುವ ಪಯಣದಲ್ಲಿ ಇಸ್ರೋ ಮಹತ್ವದ ಕಾರ್ಯವನ್ನು ಸಾಧಿಸಿದಂತಾಗಿದೆ. ಅಷ್ಟಕ್ಕೂ ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸಿದ್ದು ಯಾವಾಗ? ಈ ಪ್ರಕ್ರಿಯೆ ಹೇಗೆ ನಡೆದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಂದ್ರಯಾನ 3 ಪಾಲಿಗೆ ಇಂದು ಮಹತ್ವದ ದಿನವಾಗಿತ್ತು. ಚಂದ್ರನ ದಕ್ಷಿಣ ಧ್ರುವ ತಲುಪುವ ನಿಟ್ಟಿನಲ್ಲಿ ಈ ದಿನ ಬಹಳ ಮಹತ್ವ ಪಡೆದುಕೊಂಡಿತ್ತು. ಇದಕ್ಕೆ ಕಾರಣ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ನೌಕೆ ಮತ್ತು ಅದರ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟಿದೆ. ಇದರಿಂದ ಚಂದ್ರನ ಅಂಗಳ ತಲುಪುವ ದಿಕ್ಕಿಗೆ ಯಶಸ್ವಿಯಾಗಿ ದಾವಿಸಿದೆ. ಇದರಿಂದ ವಿಕ್ರಮ್ ಇದೇ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಕಳೆದ ತಿಂಗಳು ಚಂದ್ರಯಾನ 3 ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ದಕ್ಷಿಣ ಧ್ರುವ ತಲುಪುವ ಈ ಮಹತ್ವದ ಮಿಷನ್ ಇಸ್ರೋ ಅಂದುಕೊಂಡ ರೀತಿಯಲ್ಲಿಯೇ ಹಂತಹಂತವಾಗಿ ಯಶಸ್ಸು ಸಾದಿಸುತ್ತಾ ಬಂದಿದೆ. ಅದರಂತೆ ಈ ವಾರದ ಆರಂಭದಲ್ಲಿ, ಬಾಹ್ಯಾಕಾಶ ನೌಕೆಯು ಚಂದ್ರನಿಗೆ ಹತ್ತಿರವಾಗುವ ಮೂಲಕ ಯಶಸ್ವಿನ ಸೂಚನೆ ನೀಡಿತ್ತು. ಅಲ್ಲದೆ ಚಂದ್ರನ ಕಕ್ಷೆಗೆ ದಾವಿಸುವ ಮೂಲಕ ಚಂದ್ರನ ಫೋಟೋಗಳನ್ನು ಕೂಡ ಸೆರೆ ಹಿಡಿದು ಇಸ್ರೋಗೆ ರವಾನಿಸಿತ್ತು.
ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಬೇರ್ಪಡಿಸುವುದು ಅಂದ್ರೆ ಉಡ್ಡಯನ ವಾಹಕವನ್ನು ಪ್ರತ್ಯೇಕಿಸಲಾಗುತ್ತಿದೆ. ಇದು ರೋವರ್ ಅನ್ನು ಒಳಗೊಂಡಿರುವ ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಘಟಕವನ್ನು ಒಳಗೊಂಡಿರುವ ಬಾಹ್ಯಾಕಾಶ ನೌಕೆಯು ನಿರ್ವಹಿಸಿದ ನಾಲ್ಕನೇ ಮತ್ತು ಅಂತಿಮ ಕಕ್ಷೆ-ಕಡಿತಗೊಳಿಸುವ ಕುಶಲತೆಯಾಗಿದೆ.
ಇದೀಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ ಬೇರ್ಪಟ್ಟಿರುವುದರಿಂದ ಚಂದಮಾಮನ ಅಂಗಳಕ್ಕೆ ತಲುಪುವ ಕನಸ್ಸಿಗೆ ಇನ್ನಷ್ಟು ಹತ್ತಿರ ಬಂದಂತೆ ಆಗಿದೆ. ಇಸ್ರೋದ ಈ ಮಿಷನ್ ಯಶಸ್ಸು ಸಾಧಿಸಬೇಕಾದರೆ ಮುಂದಿನ ಹೆಜ್ಜೆಗಳು ಸಾಕಷ್ಟು ಸವಾಲಿನಿಂದ ಕೂಡಿರಲಿದೆ ಅನ್ನೊದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಅದರಂತೆ ಎಲ್ಲವೂ ಅಂದುಕೊಂಡಂತೆ ನಡೆದರೆ ಚಂದ್ರಯಾನ 3 ಯಶಸ್ವಿಯಾಗಲಿದೆ. ಸದ್ಯ ಚಂದ್ರನ ಕಕ್ಷೆಯಲ್ಲಿ ಪ್ರೊಪಲ್ಷನ್ ಮಾಡ್ಯೂಲಿನಿಂದ ಬೇರ್ಪಟ್ಟಿರುವ ವಿಕ್ರಮ್ ಲ್ಯಾಂಡರ್ ಇನ್ನೆರಡು ಸುತ್ತು ಚಂದ್ರನ ಸುತ್ತಾ ಸುತ್ತಬೇಕಾಗಿದೆ.
ಇನ್ನು ಎರಡು ಸುತ್ತುಗಳನ್ನು ಚಂದ್ರನ ಸುತ್ತ ಸುತ್ತಿದ ನಂತರ ವಿಕ್ರಮ್ ಲ್ಯಾಂಡರ್ ತನ್ನ ವೇಗವನ್ನು ಡಿ ಬೂಸ್ಟ್ ಮಾಡಿಕೊಂಡು ಚಂದ್ರನ ಅಂಗಳದಲ್ಲಿ ಮೃದುವಾಗಿ ಇಳಿಯಬೇಕಾಗಿದೆ. ಇಸ್ರೋ ಯೋಚಿಸಿದಂತೆ ಎಲ್ಲವೂ ನಡೆದರೆ ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.
ಚಂದ್ರಯಾನ 3 ಅಂತಿಮ ಹಂತದಲ್ಲಿ ಇಂದು ನಡೆದಿರುವ ಘಟನೆ ಮಹತ್ವದ ಪ್ರಕ್ರಿಯೆಯಾಗಿದೆ. ಇನ್ಮುಂದೆ ನಡೆಯುವ ಪ್ರತಿಯೊಂದು ಹಂತವು ಕೂಡ ಮಹತ್ವದಾಗಿದೆ. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿದರೆ ಚಂದ್ರನ ದಕ್ಷಿನ ಧ್ರುವದಲ್ಲಿ ಚಂದ್ರಯಾನ 3 ಹೊಸ ಇತಿಹಾಸ ಸೃಷ್ಟಿಸಲಿದೆ.


Click it and Unblock the Notifications








