ಚಂದ್ರಯಾನ-2: ಮುಂದಿನ 14 ದಿನದೊಳಗೆ 'ವಿಕ್ರಮ್ ಲ್ಯಾಂಡರ್' ಸಂಪರ್ಕ ಸಾಧ್ಯ?

|

ಇಡೀ ದೇಶಕ್ಕೆ ದೇಶವೇ ಕೈಮುಗಿದು ಪ್ರಾರ್ಥಿಸುತ್ತಿರುವ ದೇಶದ ಮಹತ್ವದ ಯೋಜನೆ ಚಂದ್ರಯಾನ-2 ಹೊಸ ಆಶಯ ಮೂಡಿಸಿದೆ. ಚಂದ್ರಯಾನ-2 ಕೊನೆಯ ಹಂತದಲ್ಲಿ ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಹಚ್ಚುವಲ್ಲಿ ಇಸ್ರೋ ಯಶಸ್ವಿಯಾಗಿದೆ. ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್‌ನ ಕ್ಯಾಮೆರಾ ಪತ್ತೆಹಚ್ಚಿದ್ದು, ಮುಂದಿನ 14 ದಿನದೊಳಗೆ ಸಂಪರ್ಕ ಸಾಧ್ಯವಾಗಬಹುದು ಎಂಬ ಹೊಸ ಆಸೆ ವಿಜ್ಞಾನಿಗಳಿಗೆ ಚಿಗುರಿದೆ.

ಚಂದ್ರನ ಮೇಲೆ ಇಳಿದಿರೋದು ಪತ್ತೆ

ಕೊನೆ ಕ್ಷಣದಲ್ಲಿ ವಿಜ್ಞಾನಿಗಳಿಂದ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ ವಿಕ್ರಮ್ ಲ್ಯಾಂಡರ್‌ನ ಫೋಟೋಗಳು ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸುತ್ತೇವೆ. ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲೂ ಕೆಲ ಕೂಡ ಸಮಸ್ಯೆಗಳು ಕಾಣಿಸಿಕೊಂಡಿವೆ.

ಅವಿರತ ಪ್ರಯತ್ನ

ವಿಕ್ರಮ್ ಲ್ಯಾಂಡರ್‌ ಜೊತೆಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳು ಅವಿರತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಈಗಲೂ ಸೌರ ಫಲಕದ ಮೂಲಕ ಬ್ಯಾಟರಿ ರೀಚಾರ್ಜ್‌ ಆಗಬಹುದು. ಆದರೆ ಒಂದೊಂದು ಕ್ಷಣ ಕಳೆದಂತೆ ಸಂಪರ್ಕ ಸಾಧಿಸುವ ಅವಕಾಶ ಕಡಿಮೆಯಾಗುತ್ತಿದೆ' ಎಂದು ಇಸ್ರೊದ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಅಲ್ಲದೇ, ಚಂದ್ರನ ಮೇಲ್ಮೈಗೆ ಅಪ್ಪಳಿಸುವಾಗ ಲ್ಯಾಂಡರ್‌ಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಕೆಲವು ಬಾಹ್ಯಾಕಾಶ ತಜ್ಞರು ಅಂದಾಜಿಸಿದ್ದಾರೆ.

ವೇಗ ಕಡಿತಗೊಳಿಸಲು ಸಾಧ್ಯವಾಗಲಿಲ್ಲ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುತ್ತಿದ್ದ ಲ್ಯಾಂಡರ್‌ನ ವೇಗವನ್ನು ನಿಗದಿತ ರೀತಿಯಲ್ಲಿ ಕಡಿತಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದು ಚಂದ್ರನ ಅಂಗಳದಲ್ಲಿ ಅಪ್ಪಳಿಸಿದ ರೀತಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ತಿಳಿಸಿದ್ದಾರೆ. ಹಾಗಾದರೆ, ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ವಿಜ್ಞಾನಿಗಳ ಪರಿಶ್ರಮ ಹೇಗಿದೆ?, 100 ಕಿ.ಮಿ ಎತ್ತರದಿಂದ ವಿಕ್ರಮ್ ಲ್ಯಾಂಡರ್‌ನ ಛಾಯಾಚಿತ್ರಗಳನ್ನು ಚಿತ್ರಿಸಿದ್ದು ಹೇಗೆ ಎಂಬ ಕುತೂಹಲ ವಿಷಗಳನ್ನು ಮುಂದೆ ಓದಿ ತಿಳಿಯಿರಿ.

100 ಕಿ.ಮಿ ಎತ್ತರದಿಂದಲೇ ವಿಕ್ರಮ್ ಲ್ಯಾಂಡರ್‌ ಪತ್ತೆ!

ನಿಮಗೆಲ್ಲಾ ತಿಳಿದಿರುವಂತೆ ಕೊನೆ ಕ್ಷಣದಲ್ಲಿ ವಿಜ್ಞಾನಿಗಳಿಂದ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ. ಆರ್ಬಿಟರ್‌ನಲ್ಲಿರುವ ಕ್ಯಾಮೆರಾದ ಗುಣಮಟ್ಟ ಇದುವರೆಗೆ ರವಾನಿಸಲಾದ ಯಾವುದೇ ಚಂದ್ರಯಾನ ವ್ಯೋಮನೌಕೆಗಳ ಪೈಕಿ ಅತ್ಯಂತ ಶಕ್ತಿಶಾಲಿಯಾದುದು. ಹೀಗಾಗಿಯೇ 100 ಕಿ.ಮೀ. ಎತ್ತರದಿಂದಲೇ ಚಂದ್ರನ ಅಂಗಳದ 0.3 ಮೀಟರ್‌ ಪ್ರದೇಶದಲ್ಲಿನ ಚಿತ್ರವನ್ನೂ ಗ್ರಹಿಸುವ ಸಾಮರ್ಥ್ಯ ಪಡೆದಿದೆ. ಹೀಗಾಗಿ ಅದರ ಕಣ್ಣಿಗೆ ಲ್ಯಾಂಡರ್‌ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಚಂದ್ರನಲ್ಲಿ ಹೇಗಿರಬಹುದು ವಿಕ್ರಮ್ ಲ್ಯಾಂಡರ್‌?

ಚಂದ್ರನ ಮೇಲ್ಮೈಗೆ ಅಪ್ಪಳಿಸುವಾಗ ಲ್ಯಾಂಡರ್‌ಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಕೆಲವು ಬಾಹ್ಯಾಕಾಶ ತಜ್ಞರು ಅಂದಾಜಿಸಿದ್ದಾರೆ. ಲ್ಯಾಂಡರ್‌ ಅನ್ನು ಹಗುರವಾಗಿ, ಸುರಕ್ಷಿತವಾಗಿ ಚಂದ್ರನಲ್ಲಿ ಇಳಿಯುವಂತೆ ಮಾಡುವುದು ಸಾಧ್ಯವಾಗಲಿಲ್ಲ. ಧಾವಿಸಿ ಬಂದು ಅಪ್ಪಳಿಸಿದ ರೀತಿಯಲ್ಲಿ ಇಳಿದುದರಿಂದ ಅದು ತನ್ನ ನಾಲ್ಕು ಕಾಲುಗಳಲ್ಲಿ ನಿಲ್ಲುವುದು ಸಾಧ್ಯವಾಗಿರಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದ ಲ್ಯಾಂಡರ್‌ ಸಂಪರ್ಕಕ್ಕೆ ತೊಂದರೆಯಾಗಬಹುದು ಎಂದು ವಿಜ್ಞಾನಿಗಳು ಅಂದುಕೊಂಡಿದ್ದರೂ, ಸಂಪರ್ಕ ಪಡೆಯುವ ಚಿಕ್ಕ ಆಸೆಯನ್ನು ಹೊಂದಿದ್ದಾರೆ.

ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಹೇಳಿದ್ದೇನು?

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಛಾಯಾಚಿತ್ರಗಳನ್ನು ಬೆಂಗಳೂರಿನ ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಿದೆ. ಚಂದಿರನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರರ್‌ನ ಕೆಲ ಚಿತ್ರಗಳು ಇಸ್ರೋಗೆ ಲಭ್ಯವಾಗಿವೆ. ‘ಸದ್ಯಕ್ಕೆ ಚಂದ್ರನ ಅಂಗಳದಲ್ಲಿರುವ ಲ್ಯಾಂಡರ್‌ನ ಚಿತ್ರವನ್ನು ಮಾತ್ರ ಆರ್ಬಿಟರ್ ಸೆರೆ ಹಿಡಿದಿದೆ. ಲ್ಯಾಂಡರ್‌ ಇನ್ನೂ ಇಸ್ರೊದ ಸಂಪರ್ಕಕ್ಕೆ ಬಂದಿಲ್ಲ. ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನ ಸಾಗಿದೆ' ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

Best Mobiles in India

English summary
ISRO Chief K Sivan has confirmed that the lander Vikram suffered a hard landing on the moon. it's possible that the lander is still functional though and the damage is currently being evaluated. More details here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X