ChatGPT 'ಗ್ರೂಪ್ ಚಾಟ್' ಸೌಲಭ್ಯ ಈಗ ಎಲ್ಲರಿಗೂ ಲಭ್ಯ!
ಕಳೆದ ವಾರವಷ್ಟೇ OpenAI ತನ್ನ ಜನಪ್ರಿಯ AI ಚಾಟ್‌ಬಾಟ್ ChatGPTಗೆ 'ಗ್ರೂಪ್ ಚಾಟ್' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಇದೀಗ ಗುರುವಾರದಂದು ಜಾಗತಿಕವಾಗಿ ಈ ವೈಶಿಷ್ಟ್ಯವನ್ನು ಬಿಡಗಡೆ ಮಾಡಿದೆ. ಇದೀಗ ಭಾರತ ಸೇರಿದಂತೆ ಎಲ್ಲೆಡೆ ChatGPTಗ ಬಳಕೆದಾರರು ಗ್ರೂಪ್ ಚಾಟ್‌ಗಳನ್ನು ರಚಿಸಲು ಮತ್ತು ಅಗತ್ಯವಿರುವಲ್ಲೆಲ್ಲಾ AI ಚಾಟ್‌ಬಾಟ್‌ನ ಸಹಾಯವನ್ನು ಪಡೆಯಲು ಸಾಧ್ಯವಿದೆ. ಮತ್ತು ಈ ವೈಶಿಷ್ಟ್ಯವು ChatGPT ಉಚಿತ, ಗೋ, ಪ್ಲಸ್ ಮತ್ತು ಪ್ರೊ ಯೋಜನೆಗಳಲ್ಲಿ ಲಾಗಿನ್ ಆಗಿರುವ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ಹಾಗಾದರೆ, ಏನಿದು ಹೊಸ 'ಗ್ರೂಪ್ ಚಾಟ್' ವೈಶಿಷ್ಟ್ಯ?, ಇದರ ಉಪಯೋಗಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
'ಗ್ರೂಪ್ ಚಾಟ್' ಎಂದರೇನು?
OpenAI ಪರಿಚಯಿಸಿರುವ 'ಗ್ರೂಪ್ ಚಾಟ್' ವೈಶಿಷ್ಟ್ಯವು ಬಳಕೆದಾರರಿಗೆ ಒಂದೇ ಚಾಟ್‌ನಲ್ಲಿ ಹಲವರು ಸೇರಿ ಯೋಜನೆ ರೂಪಿಸುವುದು, ಚರ್ಚೆಗಳು ನಡೆಸುವುದು ಹಾಗೂ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಲು ಅನುವು ಮಾಡಿಕೊಡಲಿದೆ. ಅಂದರೆ, ನೀವು ಈಗ ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು, ವಿದ್ಯಾರ್ಥಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಒಂದೇ ಒಂದು ಜಾಗದಲ್ಲಿ ಸೇರಿ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು.!

ಹೇಗೆ ಬಳಸುವುದು?
ChatGPT ಆಪ್‌ನಲ್ಲಿ ಮೇಲ್ಭಾಗದಲ್ಲಿರುವ ಹೊಸ 'People' ಐಕಾನ್ ಕ್ಲಿಕ್ ಮಾಡಿದರೆ ಒಂದು ವಿಶೇಷ URL ರಚನೆಗೊಳ್ಳುತ್ತದೆ. ಅದನ್ನು ಇತರ ChatGPT ಬಳಕೆದಾರರಿಗೆ ಹಂಚಿದರೆ, ಈ ಲಿಂಕ್ ಮೂಲಕ ಯಾರಾದರೂ ಗ್ರೂಪ್‌ಗೆ ಸೇರಬಹುದು. ಪ್ರತಿಯೊಂದು ಗ್ರೂಪ್ ಚಾಟ್‌ಗೆ ಗರಿಷ್ಠ 20 ಮಂದಿ ಸೇರಿಸಬಹುದು ಎಂದು ತಿಳಿಸಲಾಗಿದೆ. ಈ ವೈಶಿಷ್ಟ್ಯದ ಆಕರ್ಷಕ ಸಂಗತಿ ಎಂದರೆ, ಹಳೆಯ ಸಂಭಾಷಣೆಯನ್ನು ಕೂಡ ಗ್ರೂಪ್ ಆಗಿ ಪರಿವರ್ತಿಸಬಹುದು. ಆದರೆ ಮೂಲ ಸಂಭಾಷಣೆ ಬದಲಾಗದೆ ಉಳಿಯುತ್ತದೆ, ಏಕೆಂದರೆ ಪ್ಲಾಟ್‌ಫಾರ್ಮ್ ನಕಲಿ ಪ್ರತಿಯನ್ನು ಗ್ರೂಪ್‌ಗೆ ಬಳಸುತ್ತದೆ.
ಹೀಗೆ ಗ್ರೂಪ್‌ಗೆ ಸೇರ್ಪಡೆಯಾಗುವಾಗ ಬಳಕೆದಾರರು ಹೆಸರು, ಫೋಟೋ ಮತ್ತು ಯೂಸರ್‌ನೇಮ್ ಸೇರಿಸಬೇಕು. ಇದರಿಂದ ಚಾಟ್‌ನಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಸುಲಭವಾಗಿ ತಿಳಿದುಬರುವುದು. ರಚಿಸಿದ ಗ್ರೂಪ್‌ಗಳು ಸೈಡ್ಬಾರ್‌ನಲ್ಲಿ ಪ್ರತ್ಯೇಕ ವಿಭಾಗದಲ್ಲಿ ತೋರಿಸಲಾಗುತ್ತವೆ.ಗ್ರೂಪ್ ರಚಿಸಿದ ವ್ಯಕ್ತಿಗೆ ಸದಸ್ಯರನ್ನು ಸೇರಿಸುವ ಮತ್ತು ತೆಗೆದುಹಾಕುವ ಅಧಿಕಾರವಿದೆ. ಇತರ ಸದಸ್ಯರು ಚಾಟ್ ಹೆಸರನ್ನು ಬದಲಾಯಿಸುವುದು ಮತ್ತು ಅಧಿಸೂಚನೆಯನ್ನು ಮ್ಯೂಟ್ ಮಾಡುವುದೂ ಮಾಡಬಹುದು. ಇದು ಒಂದು ರೀತಿಯಲ್ಲಿ ಗೂಗಲ್ ಮೀಟ್‌ನಲ್ಲಿನ ಅಧಿಕಾರ ವ್ಯಾಪ್ತಿಯಂತಿದೆ.
ಇನ್ನು ಈ ವೈಶಿಷ್ಟ್ಯದಲ್ಲಿ ChatGPT ಸಂಭಾಷಣೆಯ ವೇಗ ಮತ್ತು ವಿಷಯವನ್ನು ಗಮನಿಸಿ ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ತಾನೇ ನಿರ್ಧರಿಸುತ್ತದೆ. ಬಳಕೆದಾರರು @ChatGPT ಎಂದು ಮೆನ್ಷನ್ ಮಾಡಿದರೆ ಅದು ತಕ್ಷಣ ಉತ್ತರಿಸುತ್ತದೆ. ಹೊಸ ಅಪ್ಡೇಟ್‌ನಲ್ಲಿ ChatGPT ಸಂದೇಶಗಳಿಗೆ ಇಮೋಜಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವೂ ಸೇರಿಸಲಾಗಿದೆ. ಪ್ರತಿ ಗ್ರೂಪ್‌ಗಾಗಿ ಪ್ರತ್ಯೇಕ ಕಸ್ಟಮ್ ಸೂಚನೆಗಳನ್ನೂ ಸೆಟ್ ಮಾಡಬಹುದು. ಇದು ನಿಮ್ಮ ನೈಜ (primary) ChatGPT ಅನುಭವಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಜೊತೆಗೆ ಇಲ್ಲಿ ಗೌಪ್ಯತೆ ಮತ್ತು ಭದ್ರತೆಗೂ ಕೂಡ ಒತ್ತು ನೀಡಲಾಗಿದೆ.
ಗ್ರೂಪ್ ಚಾಟ್‌ಗಳಲ್ಲಿ ಯಾರದ್ದೇ ವೈಯಕ್ತಿಕ ChatGPT ಮೆಮೊರಿ ಬಳಸಲಾಗುವುದಿಲ್ಲ ಹಾಗೂ ಹಂಚಿಕೊಳ್ಳುವ ಸಂದೇಶಗಳಿಂದ ಹೊಸ ಮೆಮೊರಿ ರಚನೆಯಾಗುವುದಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗ್ರೂಪ್‌ಗೆ ಸೇರಿದರೆ, ವಿಷಯವು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ. ಪೋಷಕರು ಬಯಸಿದರೆ ಗ್ರೂಪ್ ಚಾಟ್ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು. ಮತ್ತು ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ಕಳೆದ ನವೆಂಬರ್ 14 ರಂದು ಈ ವೈಶಿಷ್ಟ್ಯವನ್ನು ಮೊದಲ ಹಂತದಲ್ಲಿ ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳಲ್ಲಿ ಮಾತ್ರ ಪರಿಚಯಿಸಲಾಗಿತ್ತು.
ChatGPTಗೆ ಬಂದಿರುವ ಈ ಹೊಸ ಗ್ರೂಪ್ ಚಾಟ್ ವೈಶಿಷ್ಟ್ಯವು ಒಂದು ವಿಷಯದ ಕುರಿತು ಹಲವರು ಏಕಕಾಲದಲ್ಲಿ ಮಾಹಿತಿ ಸಂಗ್ರಹಣೆಗೆ, ಚರ್ಚೆಗೆ ಮತ್ತು ಮೀಟಿಂಗ್‌ಗಳಿಗೂ ಹೇಳಿ ಮಾಡಿಸಿದಂತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








