Home
ಸುದ್ದಿಜಾಲ

ಪ್ರೇಮಿಗಳ ದುರಂತಮಯ ಅಂತ್ಯಕ್ಕೆ ಕಾರಣವಾಯಿತಾ ವಾಟ್ಸ್‌ಆಪ್‌..?

ಮಾಹಿತಿ ಮತ್ತು ಮನರಂಜನೆಗಾಗಿ ಬಳಸುವ ಸಾಮಾಜಿಕ ಮಾಧ್ಯಮ ಜನಗಳಿಗೆ ವ್ಯಸನವಾಗುತ್ತಿದೆ. ವಿಶೇಷವಾಗಿ ಯುವಕರು ವಾಟ್ಸ್‌ಆಪ್‌, ಫೇಸ್‌ಬುಕ್‌ಗೆ ವ್ಯಸನಿಗಳಾಗುತ್ತಿದ್ದಾರೆ. ವಾಟ್ಸ್‌ಆಪ್, ಫೇಸ್ ಬುಕ್ ಚಾಟಿಂಗ್ನಲ್ಲಿ ಮುಳುಗಿ ಜಗತ್ತನ್ನೇ ಮರೆಯುತ್ತಿರುವ ಯುವಜನ ಕೊನೆಗೆ ಸಾಮಾಜಿಕ ಮಾಧ್ಯಮಗಳ ಕಾರಣದಿಂದಲೇ ದುರಂತ ಅಂತ್ಯ ಕಾಣುತ್ತಿರುವುದು ಬಹಳ ಆತಂಕಕಾರಿಯಾಗಿದೆ.

ಪ್ರೇಮಿಗಳ ದುರಂತಮಯ ಅಂತ್ಯಕ್ಕೆ ಕಾರಣವಾಯಿತಾ ವಾಟ್ಸ್‌ಆಪ್‌..?

ಹೌದು, ಎರಡು ದಿನಗಳ ಹಿಂದೆ ಸಿಕಂದರಾಬಾದ್‌ನ ಮರೇಡೆಪ್ಪಲ್ಲಿಯಲ್ಲಿ ವಾಟ್ಸ್‌ಆಪ್‌ ಚಾಟಿಂಗ್ ಇಬ್ಬರ ಸಾವಿಗೆ ಕಾರಣವಾಗಿರುವುದು ಸಾಮಾಜಿಕ ಮಾಧ್ಯಮಗಳ ವ್ಯಸನಕ್ಕೀಡಿದ ಕನ್ನಡಿಯಾಗಿದೆ. ಶಿವಕುಮಾರ್‌ (27) ಮತ್ತು ವೆನಿಲ್ಲಾ (19) ವಾಟ್ಸ್‌ಆಪ್‌ ಚಾಟಿಂಗ್‌ನಿಂದ ತಮ್ಮ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳು. ಆದರೆ, ಇವರ ಸಾವಿಗೆ ವಾಟ್ಸ್‌ಆಪ್‌ ಯಾವ ರೀತಿ ಕಾರಣವಾಯಿತು. ಸಾವಿನ ಹಿಂದೆ ಸಾಮಾಜಿಕ ಮಾಧ್ಯಮದ ಕೈ ಹೇಗೆ ಕೆಲಸ ಮಾಡಿದೆ ಎಂಬುದನ್ನು ಮುಂದೆ ನೋಡಿ.

ವಾಟ್ಸ್‌ಆಪ್‌ ಚಾಟಿಂಗ್‌

ವಾಟ್ಸ್‌ಆಪ್‌ ಚಾಟಿಂಗ್‌

ಸಿಕಂದರಾಬಾದ್ನ ಮರುಡುಪಲ್ಲಿಯ ವಾಲ್ಮೀಕಿನಗರದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಬಹಳ ದಿನಗಳಿಂದ ವಾಟ್ಸ್‌ಆಪ್‌ ಚಾಟಿಂಗ್‌ನಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಅದೇ ವಾಟ್ಸ್‌ಆಪ್‌ ಚಾಟಿಂಗ್‌ ಸಾವಿಗೆ ಕಾರಣವಾಗಿದ್ದು, ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.

ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದ ಶಿವಕುಮಾರ್

ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದ ಶಿವಕುಮಾರ್

ಆತ್ಮಹತ್ಯೆ ಮಾಡಿಕೊಂಡಿರುವ ಶಿವಕುಮಾರ್‌ಗೆ ಲಹರಿ ಎಂಬ ಹುಡುಗಿ ಜತೆ ತಿಂಗಳ ಹಿಂದೆ ಮದುವೆಯಾಗಿತ್ತು. ಆದರೆ,ಶಿವಕುಮಾರ್ ತನ್ನ ಪಕ್ಕದ ಮನೆಯಲ್ಲಿದ್ದ ಬಾಲ್ಯದ ಗೆಳತಿ ವೆನಿಲ್ಲಾ ಎಂಬ ಹುಡುಗಿ ಜತೆ ವಾಟ್ಸ್‌ಆಪ್‌ ಚಾಟ್‌ ಮಾಡುತ್ತಿದ್ದ. ಈ ಬಗ್ಗೆ ಶಿವಕುಮಾರನ ಪತ್ನಿ ಲಹರಿ ತನ್ನ ಕುಟುಂಬಕ್ಕೆ ತಿಳಿಸಿದಾಗ ಶಿವಕುಮಾರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಿಯತಮನ ಸಾವಿನಿಂದ ಕಂಗೆಟ್ಟ ವೆನೆಲ್ಲಾ ಆತ್ಮಹತ್ಯೆ

ಪ್ರಿಯತಮನ ಸಾವಿನಿಂದ ಕಂಗೆಟ್ಟ ವೆನೆಲ್ಲಾ ಆತ್ಮಹತ್ಯೆ

ಶಿವಕುಮಾರ ಆತ್ಮಹತ್ಯೆ ಮಾಡಿಕೊಂಡ ದಿನದಂದು ಸಂಜೆ ಕಂಗೆಟ್ಟಿದ್ದ ವೆನೆಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದ ಸದಸ್ಯರು ವೆನೆಲ್ಲಾಳನ್ನು ಗಾಂಧಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಪ್ರಕರಣ ದಾಖಲು

ಪ್ರಕರಣ ದಾಖಲು

ಒಟ್ಟಿನಲ್ಲಿ ವಾಟ್ಸ್‌ಆಪ್‌ ಚಾಟಿಂಗ್‌ ವಿಷಯಕ್ಕಾಗಿಯೇ ಪ್ರೇಮಿಗಳ ದುರ್ಮರಣವಾಗಿರುವುದಂತು ದುರಂತಮಯ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

Best Mobiles in India

English summary
Chatting on WhatsApp claims lives of married man and his girlfriend in Hyderabad. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+