ಚಾಟಿಂಗ್, ವೀಡಿಯೋ ಕಾಲ್ ಮಾಡಲು ಮೊಬೈಲ್ ಬೇಕಿಲ್ಲ, ಕೇವಲ ಲ್ಯಾಂಡ್ ಲೈನ್ ಸಾಕು...!
ಮೂಲೆಗೆ ಸರಿಯುತ್ತಿದ್ದ ಲ್ಯಾಂಡ್ ಲೈನ್ ಗಳಿಗೆ ಈಗ ಮತ್ತೆ ಜೀವ ಬರುವ ಸಾಧ್ಯತೆಗಳಿವೆ. ಹೌದು ಲ್ಯಾಂಡ್ ಲೈನ್ ಗೆ ಆಫರ್ ಗಳ ಮೇಲೆ ಆಫರ್ ಗಳ ಸುರಿಮಳೆಯಾಗುತ್ತಿದೆ. ಲ್ಯಾಂಡ್ ಲೈನ್ ಗಳು ಮೊಬೈಲ್ ಗಳಲ್ಲಿರುವಂತೆಯೇ ಹಲವು ವೈಶಿಷ್ಟ್ಯಗಳನ್ನು ಹೊಂದಲು ಆರಂಭವಾಗಿದೆ. ಹೌದು ಇನ್ನು ಮುಂದೆ ಲ್ಯಾಂಡ್ ಲೈನ್ ಮೂಲಕ ಚಾಟಿಂಗ್, ವೀಡಿಯೋ ಕಾಲ್ ಮಾಡಬಹುದಾಗಿದೆ.. ನಿಮಗೆ ಆಶ್ಚರ್ಯವಾಗುತ್ತಿರಬಹುದು.. ಸಂಪೂರ್ಣ ಸುದ್ದಿಗಾಗಿ ಮುಂದೆ ಓದಿ...

ರಾಜಸ್ತಾನದಲ್ಲಿರುವ ಟೆಲಿಫೋನ್ ಎಕ್ಸ್ ಚೇಂಜ್ ಗಳನ್ನು ಅಪ್ ಗ್ರೇಡ್ ಮಾಡುತ್ತಿರುವ ಬಿಎಸ್ ಎನ್ ಎಲ್, ಮೇಸೇಜ್ ಕಳಿಸುವುದು, ಚಾಟಿಂಗ್ ಮತ್ತು ವೀಡಿಯೋ ಕಾಲ್ ಮಾಡಲು ಅವಕಾಶ ನೀಡಲಿದೆ ಎಂದು ಕಂಪೆನಿಯ ಅಧಿಕೃತ ಮೂಲಗಳು ತಿಳಿಸಿವೆ. ನೆಕ್ಸ್ಟ್ ಜನರೇಷನ್ ನೆಟ್ವರ್ಕಿಂಗ್ (NGN) ಟೆಕ್ನಾಲಜಿಗೆ ಟೆಲಿಫೋನ್ ಎಕ್ಸ್ ಚೇಂಜ್ ಗಳನ್ನು ಅಪ್ ಗ್ರೇಡ್ ಮಾಡುತ್ತಿದ್ದು ಈಗಾಗಲೇ ರಾಜಸ್ತಾನದ ಬೂಂದಿ ಜಿಲ್ಲೆಯಲ್ಲಿ ಈ ಕಾರ್ಯ ಆರಂಭವಾಗಿದೆ.
ಮೊದಲ ಹಂತವಾಗಿ ಬೂಂದಿ ಮತ್ತು ಹಿಂಡೋಲಿ ಜಿಲ್ಲೆಗಳಲ್ಲಿ ಅಪ್ ಗ್ರೇಡ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದೆಲ್ಲ ಪ್ರದೇಶವನ್ನು ಪರಿಗಣಿಸಲಾಗುವುದು ಎಂದು ಟೆಲಿಕಾಂ ಜಿಲ್ಲಾ ಮ್ಯಾನೇಜರ್ ಆಗಿರುವ ಬಿ.ಕೆ. ಅಗರವಾಲ್ ತಿಳಿಸಿದ್ದಾರೆ.
ಮೊಬೈಲ್ ಫೋನ್ ಗಳಲ್ಲಿರುವ ಫೆಸಿಲಿಟಿಗಳಾಗಿರುವ ಚಾಟಿಂಗ್, ವೀಡಿಯೋ ಕಾಲ್ ಮಾಡುವುದು, ಮೆಸೇಜ್ ಮಾಡುವುದು, ಪಿಆಪ್ ಬಿಡಿ ಅಂದರೆ ವಯಕ್ತಿಕ ರಿಂಗ್ ಬ್ಯಾಕ್ ಟೋನ್ ಗಳನ್ನು ಸೆಟ್ ಮಾಡಿಕೊಳ್ಳುವುದು ಇತ್ಯಾದಿ ವೈಶಿಷ್ಟ್ಯಗಳು ಇನ್ನು ಮುಂದೆ ಲ್ಯಾಂಡ್ ಲೈನ್ ನಲ್ಲೂ ಲಭ್ಯವಾಗಲಿದೆ.
ಈ ವೈಶಿಷ್ಟ್ಯಗಳನ್ನು ಲ್ಯಾಂಡ್ ಲೈನ್ ಫೋನ್ ನಲ್ಲಿ ನೀಡುವ ಉದ್ದೇಶದಿಂದ ಲ್ಯಾಂಡ್ ಲೈನ್ ಫೋನ್ ಗಳನ್ನು ಐಪಿ ಫೋನ್ ಗಳ ಜೊತೆಗೆ ಅಪ್ ಗ್ರೇಡ್ ಮಾಡಲಾಗುತ್ತಿದೆ. ಈ ಮೂಲಕ ಗ್ರಾಹಕರು ಲ್ಯಾಂಡ್ ಲೈನ್ ಫೋನ್ ಗಳನ್ನು ಮೊಬೈಲ್ ಫೋನ್ ಗಳಂತೆ ಬಳಸಿಕೊಳ್ಳಬಹುದು ಮತ್ತು ಯಾವುದೇ ಪ್ರದೇಶದಿಂದ ಮೊಬೈಲ್ ಮೂಲಕ ಲ್ಯಾಂಡ್ ಲೈನ್ ಗ್ರಾಹಕರನ್ನು ಮೊಬೈಲ್ ನಲ್ಲಿ ಸಂಪರ್ಕಿಸಿದಂತ ಅನುಭವ ಪಡೆಯಬಹುದು.

ಲ್ಯಾಂಡ್ ಲೈನ್ ಫೋನ್ ಗಳಿಗೆ ಬರುವ ಕರೆಗಳನ್ನು ಮೊಬೈಲ್ ಫೋನ್ ಗಳಿಗೆ ಬರುವಂತೆಯೂ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಲ್ಯಾಂಡ್ ಲೈನ್ ಫೋನ್ ಗಳ ಬಳಿ ಇಲ್ಲದೇ ಇದ್ದ ಸಂದರ್ಬದಲ್ಲಿ ಯಾವುದೇ ಕರೆಯನ್ನು ತಪ್ಪಿಸಿಕೊಳ್ಳುವ ಅಗತ್ಯವಿಲ್ಲ ಬದಲಾಗಿ ಅಂತಹ ಕರೆಗಳು ಮೊಬೈಲ್ ಫೋನ್ ಗೆ ಬರುವಂತೆ ಮಾಡಿಕೊಳ್ಳಬಹುದು.
2ಜಿ ಟವರ್ ಗಳನ್ನೂ ಕೂಡ ಅಪ್ ಗ್ರೇಡ್ ಮಾಡಿ 3ಜಿ ಸರ್ವೀಸ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆಯಂತೆ. ಆ ಮೂಲಕ ನೆಟ್ ವರ್ಕ್ ವೀಕ್ ಇರುತ್ತೆ ಎಂದು ಪರಿತಪಿಸುವ ಅಗತ್ಯವಿಲ್ಲ. ಈಗಾಗಲೇ ಸುಮಾರು 86 ಮೊಬೈಲ್ ಟವರ್ ಗಳು ಬೂಂದಿಯಲ್ಲಿ ಸುಮಾರು 20ಟವರ್ ಗಳನ್ನು ಅಪ್ ಗ್ರೇಡ್ ಮಾಡಲಾಗಿದ್ದು, ವೇಗವಾದ ಅಂತರ್ಜಾಲ ಸೇವೆಯನ್ನು ಹಳ್ಳಿಗಳಲ್ಲೂ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.


Click it and Unblock the Notifications