ವಾಹನಗಳಲ್ಲಿ ಗ್ಯಾಸ್ ಇಂಜಿನ್ ಗಳ ಬದಲಾಗಿ ಕಡಿಮೆ ಬೆಲೆಯ ಇಂಧನ ಸೆಲ್ ಗಳ ಬಳಕೆ

By Gizbot Bureau
|

ಹೊಗೆ ಉಗುಳುವಿಕೆಯ ವಿರುದ್ಧ ನಡೆಯುತ್ತಿರುವ ಸಂಶೋಧನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಇಂಧನ ಸೆಲ್ ಗಳು ತಂತ್ರಜ್ಞಾನವನ್ನು ಇನ್ನಷ್ಟು ಅಗ್ಗವಾಗಿಸಿ ಸಾಂಪ್ರದಾಯಿಕವಾಗಿ ವಾಹನಗಳಲ್ಲಿರುವ ಗ್ಯಾಸೋಲಿನ್ ಇಂಜಿನ್ ಗಳ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಅಧ್ಯಯನವೊಂದು ಹೇಳಿದೆ.

ವಾಹನಗಳಲ್ಲಿ ಗ್ಯಾಸ್ ಇಂಜಿನ್ ಗಳ ಬದಲಾಗಿ ಕಡಿಮೆ ಬೆಲೆಯ ಇಂಧನ ಸೆಲ್ ಗಳ ಬಳಕೆ

ಕೆನಡಾದಲ್ಲಿರುವ ವಾಟರ್ ಲೋ ಯುನಿವರ್ಸಿಟಿ ಅಧ್ಯಯನಕಾರರು ಹೊಸ ಇಂಧನ ಸೆಲ್ ನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಸದ್ಯ ಇರುವ ತಂತ್ರಗಾರಿಕೆಯ 10 ಪಟ್ಟು ಹೆಚ್ಚು ಇರುತ್ತದೆ.

ಈ ಇಂಧನ ಸೆಲ್ ಗಳನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿ ನಿರ್ಮಾಣ ಮಾಡಿದರೆ ಅಥವಾ ತಯಾರಿಸಿದರೆ ಎಲೆಕ್ಟ್ರಿಸಿಟಿ ಮೂಲಕ ವೆಹಿಕಲ್ ಗಳನ್ನು ರನ್ ಮಾಡುವ ತಂತ್ರಗಾರಿಕೆಯು ಮತ್ತೊಂದು ಹೆಜ್ಜೆ ಮುಂದೆ ಸಾಗಿದಂತಾಗುತ್ತದೆ.

ಗ್ಯಾಸೋಲಿನ್ ಇಂಜಿನ್

ಗ್ಯಾಸೋಲಿನ್ ಇಂಜಿನ್

ಗ್ಯಾಸೋಲಿನ್ ಇಂಜಿನ್ ಗಿಂತ ಇದರ ಬೆಲೆಯು ಬಹಳ ಕಡಿಮೆಯಾಗುತ್ತದೆ ಎಂದು ವಾಟರ್ ಲೋದಲ್ಲಿರುವ ಫ್ಯುಯೆಲ್ ಸೆಲ್ ಮತ್ತು ಗ್ರೀನ್ ಎನರ್ಜಿ ಲ್ಯಾಬಿನ ಡೈರೆಕ್ಟರ್ ಆಗಿರುವ ಶಿಯಾಂಗೋ ಲಿ ಅವರು ತಿಳಿಸಿದ್ದಾರೆ.

ಹೈಬ್ರಿಡ್ ವೆಹಿಕಲ್

ಹೈಬ್ರಿಡ್ ವೆಹಿಕಲ್

ಭವಿಷ್ಯ ಬಹಳ ಉಜ್ವಲವಾಗಿದೆ ಮತ್ತು ಇದು ಬಹಳ ಶುದ್ಧವಾಗಿರುವ ಶಕ್ತಿಯಾಗಿದ್ದು ಬಳಕೆಗೆ ಅತೀ ಯೋಗ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಧ್ಯಯನಕಾರರು ಪ್ರಾರಂಭಿಕವಾಗಿ ಕೇವಲ ಹೈಬ್ರಿಡ್ ವೆಹಿಕಲ್ ಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರು. ಈಗ ಈ ಹೈಬ್ರಿಡ್ ವೆಹಿಕಲ್ ಗಳಲ್ಲಿ ಸದ್ಯ ಗ್ಯಾಸ್ ಇಂಜಿನ್ ಮತ್ತು ಬ್ಯಾಟರಿಗಳು ಇದ್ದು ನಿಯಮಿತ ಡ್ರೈವಿಂಗ್ ರೇಂಜ್ ಮತ್ತು ಗರಿಷ್ಟ ಚಾರ್ಜಿಂಗ್ ಟೈಮ್ ನ್ನು ಇವು ಬೇಡುತ್ತಿವೆ ಮತ್ತು ಇದು ಗ್ರಾಹಕರಿಗೆ ಸಮಸ್ಯೆಗೆ ಕಾರಣವಾಗಿದೆ.

ರೀಚಾರ್ಜ್

ರೀಚಾರ್ಜ್

ಸದ್ಯ ಇರುವ ಫ್ಯೂಯೆಲ್ ಸೆಲ್ ಗಳು ಆ ಗ್ಯಾಸ್ ಇಂಜಿನ್ ಗಳನ್ನು ಸೈದ್ಧಾಂತಿಕವಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ವೆಹಿಕಲ್ ಗಳು ಕಾರ್ಯಾಚರಣೆಯಲ್ಲಿರುವಾಗ ಇದರ ಪವರ್ ಜನರೇಟರ್ ಗಳನ್ನು ರೀಚಾರ್ಜ್ ಮಾಡಲು ಬಳಸಲಾಗುವ ವಿದ್ಯುತ್ ಉತ್ಪಾದಕಗಳು ಸದ್ಯ ಬಹಳ ದುಬಾರಿಯಾಗಿದ್ದು ಅವುಗಳನ್ನು ಪ್ರಾಯೋಗಿಕವಾಗಿ ಬಳಸುವುದು ಕಷ್ಟವಾಗಿದೆ.

ಇದೀಗ ಅಧ್ಯಯನಕಾರರು ಈ ಸಮಸ್ಯೆಯನ್ನು ಪರಿಹರಿಸಿದ್ದು ಈಗ ತಯಾರಿಸಲಾಗಿರುವ ಡಿಸೈನ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಹೆಚ್ಚು ಸ್ಥಿರವಾಗಿರುತ್ತದೆ ಅಷ್ಟೇ ಅಲ್ಲ ಅಧಿಕ ವಿದ್ಯುಚ್ಛಕ್ತಿಯನ್ನು ಒದಗಿಸುವ ಸಾಮರ್ಥ್ಯವನ್ನು ಇವು ಹೊಂದಿವೆ.

ಆಮ್ಲಜನಕ

ಆಮ್ಲಜನಕ

ಹೈಡ್ರೋಜನ್ ಮತ್ತು ಆಕ್ಸಿಜನ್ ಅಂದರೆ ಜನಜನಕ, ಆಮ್ಲಜನಕ ರಾಸಾಯನಿಕ ಪ್ರಕ್ರಿಯೆಯ ಮೂಲಕ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಜೀವಕೋಶಗಳು ತುಂಬಾ ಸರಳವಾಗಿರುತ್ತದೆ ಮತ್ತು ಕಡಿಮೆ ಬೆಲೆಯದ್ದಾಗಿರುತ್ತದೆ.

ನಾವು ಅತೀ ಹೆಚ್ಚು ಕಾಲ ಬಾಳಿಕೆ ಬರುವ ಕಡಿಮೆ ಬೆಲೆಯ ಮತ್ತು ಉತ್ತಮ ಪ್ರದರ್ಶನದ ಸೆಲ್ ಗಳನ್ನು ಕಂಡುಹಿಡಿದಿದ್ದೇವೆ ಎಂದು ಲಿ ಅಭಿಪ್ರಾಯ ಪಟ್ಟಿದ್ದಾರೆ. ಸಾರಿಗೆ ವಿಚಾರದಲ್ಲಿ ಹೊಗೆ ಉಗುಳದ ಅಭಿವೃದ್ಧಿಯನ್ನು ಸಾಧಿಸುವಾಗ ಆರ್ಥಿಕ ಗುರಿಯನ್ನು ಮುಟ್ಟುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ ಎಂಬುದು ಲಿ ಅವರ ಅಭಿಪ್ರಾಯ. ದೊಡ್ಡ ತಯಾರಿಕೆಯನ್ನು ಕಡಿಮೆ ವೆಚ್ಚದಲ್ಲಿ ಸಾಧಿಸಿ ಅಧಿಕ ಲಾಭ ಗಳಿಸುವ ಉದ್ದೇಶ ಈ ಪ್ರೊಜೆಕ್ಟ್ ನಲ್ಲಿದೆ.

Best Mobiles in India

Read more about:
English summary
Cheaper fuel cells could replace gas engines in vehicles

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X