ಪಬ್‌ಜಿ ಪ್ರಿಯರಿಗೆ ಶಾಕಿಂಗ್ ಸುದ್ದಿ!..ಹೀಗೆ ಮಾಡಿದ್ರೆ ಬರೋಬ್ಬರಿ 10ವರ್ಷ ಬ್ಯಾನ್!

|

ವಿಶ್ವದಾದ್ಯಂತ ಭಾರೀ ಕ್ರೇಜ್ ಹುಟ್ಟು ಹಾಕಿರುವ ಪಬ್‌ಜಿ ಗೇಮ್ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. 'ಪಬ್​ಜಿ' ಗೇಮ್ ಸಂಸ್ಥೆ ತನ್ನ ಗೇಮಿಂಗ್ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಆಟಗಾರರಿಗೆ 10 ವರ್ಷ ಪಬ್​ಜಿ ಆಟದಿಂದಲೇ ನಿಷೇಧ ಹೇರುವ ಕಠಿಣ ನಿರ್ಧಾರ ಕೈಗೊಂಡಿದ್ದು, 'ಪಬ್​ಜಿ' ಡೆವಲಪರ್ ರೂಲ್ಸ್ ಬ್ರೇಕ್ ಮಾಡಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ಇತರೆ ಭಿನ್ನ ಮಾರ್ಗದ ಮೂಲಕ ಗೇಮ್ ಆಡುವ ಆಟಗಾರರಿಗೆ ಬರೋಬ್ಬರಿ 10 ವರ್ಷಗಳ ಕಾಲ ನಿಷೇಧದ ಬಿಸಿ ತಟ್ಟಲಿದೆ ಎಂದು ಕಂಪೆನಿ ತಿಳಿಸಿದೆ.

‘ಪಬ್​ಜಿ‘ ಗೇಮ್

ಹೌದು, ‘ಪಬ್​ಜಿ‘ ಗೇಮ್ ಡೆವಲಪರ್ ಸಂಸ್ಥೆ 'ಟೆನ್ಸೆಂಟ್ ಗೇಮ್ಸ್' ಈ ಬಗ್ಗೆ ಎಚ್ಚರಿಕೆ ನೀಡಿದ್ದು, ನ್ಯಾಯಯುತ ಮತ್ತು ಮೋಜಿನ ಪಬ್‌ಜಿ ಆಟವಾಡುವಿಕೆಯನ್ನು ಖಚಿತಪಡಿಸಿಕೊಳ್ಳಲು ಮೋಸ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಪಬ್‌ಜಿ ಆಟದಲ್ಲಿ ಭಿನ್ನತೆಗಳು ಮತ್ತು ಚೀಟ್‌ಗಳನ್ನು ಬಳಸುವುದನ್ನು ನಿಷೇಧಿಸಿರುವ ಕಂಪೆನಿ, ಅಂತಹ ಆಟಗಾರರ ಖಾತೆಗಳನ್ನು ಅಥವಾ ಅವರ ಐಡಿಗಳನ್ನು ನಿಷೇಧಿಸಿದೆ೩. ಇನ್ನು ನಿಷೇಧಿಸಿರುವ 3,500 ಕ್ಕೂ ಹೆಚ್ಚು ಆಟಗಾರರ ಪಟ್ಟಿಯನ್ನು ಸಹ ಪಬ್‌ಜಿ ಮೊಬೈಲ್ ಬಹಿರಂಗಪಡಿಸಿದೆ.

ಶ್ರಮಿಸುತ್ತಿದ್ದೇವೆ.

ನಾವು ಯಾವಾಗಲೂ ಪ್ರತಿಯೊಬ್ಬ ಆಟಗಾರನಿಗೆ ನ್ಯಾಯಯುತ ಮತ್ತು ಆನಂದದಾಯಕವಾದ ಗೇಮಿಂಗ್ ಪರಿಸರವನ್ನು ತಲುಪಿಸಲು ಶ್ರಮಿಸುತ್ತಿದ್ದೇವೆ. ಅದಕ್ಕಾಗಿ ನಾವು ಮೋಸವನ್ನು ತಡೆಯುತ್ತೇವೆ. ಈ ವಿಷಯವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಉಲ್ಲಂಘನೆಯ ಪ್ರತಿ ಖಾತೆಗೆ 10 ವರ್ಷಗಳ ನಿಷೇಧವನ್ನು ಹೇರಲಾಗಿದೆ. ನ್ಯಾಯಯುತ ಮತ್ತು ವಿನೋದದ ಆಟದ ಮಹತ್ವದ ಬಗ್ಗೆ ನಾವು ಎಲ್ಲಾ ಆಟಗಾರರಿಗೆ ನೆನಪಿಸಲು ಬಯಸುತ್ತೇವೆ. ಧನ್ಯವಾದಗಳು ಎಂದು ಪಬ್‌ಜಿ ಸಂಸ್ಥೆ ತನ್ನ ಆಟಗಾರರಿಗೆ ಹೇಳಿದೆ.

ಕಠಿಣ ಶಿಸ್ತು

ನಾವು ಮೋಸಗಾರರ ವಿರುದ್ಧ ಕಠಿಣ ಶಿಸ್ತು ಜಾರಿಗೊಳಿಸುವುದನ್ನು ಮುಂದುವರಿಸುತ್ತೇವೆ ಮತ್ತು ಮೋಸಗಾರರ ಐಡಿಗಳನ್ನು ಪ್ರಕಟಿಸುತ್ತೇವೆ". ಇದರೊಂದಿಗೆ, ಯಾವುದೇ ಆಟಗಾರನು ಮೋಸ ಮಾಡಿದರೆ ಅಥವಾ ಅನಧಿಕೃತ ತೃತೀಯ ಅಪ್ಲಿಕೇಶನ್ ಅನ್ನು ಆಟದಲ್ಲಿ ಅನಗತ್ಯ ಲಾಭ ಪಡೆಯಲು ಅವರು ಅನುಮಾನಿಸಿದರೆ ಆಟದ ಅಂತರ್ನಿರ್ಮಿತ ವರದಿ ವೈಶಿಷ್ಟ್ಯವನ್ನು ಬಳಸಿಕೊಂಡು ವರದಿ ಮಾಡಬಹುದು. ಪ್ರತಿ ವರದಿಯನ್ನು ಕೂಲಂಕಷವಾಗಿ ತನಿಖೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಪಬ್‌ಜಿ ತಿಳಿಸಿದೆ.

'ಇತ್ತೀಚಿನ' ವಿಭಾಗ

ಇನ್ನು ಆಟಗಾರನನ್ನು ಹೇಗೆ ವರದಿ ಮಾಡಬೇಕೆಂದು ತಿಳಿದಿಲ್ಲದವರಿಗೆ, ಈ ಹಂತಗಳನ್ನು ಅನುಸರಿಸಿ ಅಂದು ಸಹ ಪಬ್‌ಜಿ ತಿಳಿಸಿದೆ. ಪಬ್‌ಜಿ ಗೇಮ್ ತೆರೆದಾ್ 'ಆಹ್ವಾನಿಸು' ಗುಂಡಿಯನ್ನು ಟ್ಯಾಪ್ ಮಾಡಿ ಮತ್ತು 'ಇತ್ತೀಚಿನ' ವಿಭಾಗಕ್ಕೆ ಹೋಗಿ. ಅಲ್ಲಿ ಆಟಗಾರನ ಹೆಸರನ್ನು ಟ್ಯಾಪ್ ಮಾಡಿ ಮತ್ತು ಅವರ ಪ್ರೊಫೈಲ್ ಹೆಸರು ಅಥವಾ ಐಡಿಯನ್ನು ನಕಲಿಸಿ 'ವರದಿ' ಆಯ್ಕೆಯನ್ನು ಆರಿಸಿ. ಈಗ, 'ಇತರರು' ಅನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆ ಮಾಡಿ ಪ್ಲೇಯರ್ ಐಡಿ ಅಥವಾ ಅಡ್ಡಹೆಸರಿನೊಂದಿಗೆ ಸಮಸ್ಯೆಯನ್ನು ಉಲ್ಲೇಖಿಸಿ.

Most Read Articles
Best Mobiles in India

English summary
"PUBG MOBILE says, "We have always strived to deliver a gaming environment that is fair and enjoyable for each and every player and prevent cheating. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more