ಕೊರೊನಾ ಮಾಹಿತಿ ನೀಡಲು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಸ ಆಪ್‌ ಬಿಡುಗಡೆ!

|

ಪ್ರಸ್ತುತ ಇಡೀ ವಿಶ್ವವೇ ಕೊರೊನಾ ಹಾವಳಿಯಿಂದ ನಲುಗಿ ಹೋಗಿದೆ. ಇನ್ನೇನು ಕೊರೊನಾ ವೈರಸ್‌ಗೆ ವ್ಯಾಕ್ಸಿನ್‌ ಬಿಡುಗಡೆ ಆಗಲಿದೆ ಎನ್ನುವ ಸಮಯದಲ್ಲಿಯೇ ಕೊರೊನಾ ವೈರಸ್‌ ರೂಪಾಂತರ ವೈರಸ್‌ ಜಗತ್ತಿಗೆ ಕಂಟಕವಾಗುವ ಸೂಚನೆ ನೀಡುತ್ತಿದೆ. ಈಗಾಗಲೇ ಯುರೋಪಿಯನ್‌ ರಾಷ್ಟ್ರಗಳು ರತೂಪಾಂತರಗೊಂಡ ಕೊರೊನಾ ವೈರಸ್‌ನಿಂದ ಕಂಗಾಲಾಗಿವೆ. ಇದೇ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌-19 ವಿರುದ್ದ ಹೋರಾಡಲು ಹೊಸದೊಂದ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ.

WHO

ಹೌದು, ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚಿನ COVID-19 ವೈರಸ್‌ ಕುರಿತಾದ ಮಾರ್ಗದರ್ಶನ ಮತ್ತು ಅಪ್ಡೇಟ್‌ ಒದಗಿಸುವ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಹೊಸ ಅಪ್ಲಿಕೇಶನ್ ಆರೋಗ್ಯ ತಜ್ಞರಿಂದ ವೈರಸ್ ಬಗ್ಗೆ "ವಿಶ್ವಾಸಾರ್ಹ" ಮಾಹಿತಿಯನ್ನು ಒದಗಿಸಲಿದೆ. ಇದು ಜಗತ್ತಿನಾದ್ಯಂತ ಹಲವಾರು ಸರ್ಕಾರಗಳು ಬಿಡುಗಡೆ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಂಟ್ಯಾಕ್ಟ್‌ ಟ್ರ್ಯಾಕ್‌ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬದಲಿಗೆ ಹೊಸದಾದ ವಿನ್ಯಾಸವನ್ನು ಒಳಗೊಂಡಿದ್ದು, ಸಾಕಷ್ಟು ಉಪಯುಕ್ತವಾಗಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಅಪ್ಲಿಕೇಶನ್‌‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆರೋಗ್ಯ

ಇನ್ನು ನಿಮಗೆಲ್ಲಾ ತಿಳಿದಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌-19 ಆರಂಭದಲ್ಲೇ ಅಂದರೆ ಏಪ್ರಿಲ್‌ನಲ್ಲಿ ತನ್ನ ಕೊರೊನಾವೈರಸ್-ಫೋಕಸ್ಡ್ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿತ್ತು. ಆದರೆ ಇದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಪ್ಲಿಕೇಶನ್ ಪ್ಲೇ ಸ್ಟೋರ್‌ಗಳಿಂದ ತೆಗೆದುಹಾಕಲಾಗಿತ್ತು. ಆಂಡ್ರಾಯ್ಡ್ ಪೋಲಿಸ್ ವರದಿಯಂತೆ, WHO COVID-19 ಅಪ್‌ಡೇಟ್ಸ್‌ ಅಪ್ಲಿಕೇಶನ್ ಈ ವರ್ಷದ ಆರಂಭದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಮೂಲ ಮೊಬೈಲ್ ಅಪ್ಲಿಕೇಶನ್‌ಗೆ ಹೋಲುತ್ತದೆ. ಸುರಕ್ಷತಾ ಸಲಹೆ ಮತ್ತು ನವೀಕೃತ ಮಾಹಿತಿಯನ್ನು ಒದಗಿಸುವ ಮೂಲಕ COVID-19 ಹರಡುವುದನ್ನು ಮಿತಿಗೊಳಿಸಲು ಇದನ್ನು ಸಾಮಾನ್ಯ ಉದ್ದೇಶದ ಅಪ್ಲಿಕೇಶನ್‌ನಂತೆ ವಿನ್ಯಾಸಗೊಳಿಸಲಾಗಿದೆ.

ಆರೋಗ್ಯ

ವಿಶ್ವ ಆರೋಗ್ಯ ಸಂಸ್ಥೆ COVID-19 ಅಪ್ಡೇಟ್ಸ್‌ ಅಪ್ಲಿಕೇಶನ್ ನಿಮ್ಮ ಸ್ಥಳವನ್ನು ಆಧರಿಸಿ ಇತ್ತೀಚಿನ ಸ್ಥಳೀಯ ಸುದ್ದಿ ಮತ್ತು ಮಾಹಿತಿ ಮತ್ತು ರಿಯಲ್‌-ಟೈಂ ನೋಟಿಫಿಕೇಶನ್‌ಗಳನ್ನು ನೀಡುತ್ತದೆ. ಕರೋನವೈರಸ್ ಹರಡಿರುವ ಪ್ರದೇಶಗಳ ಮಾಹಿತಿಯನ್ನು ಜನರಿಗೆ ತಿಳಿಸಲಿದೆ. ಇದಕ್ಕಾಗಿ ರಾಷ್ಟ್ರೀಯ ಮತ್ತು ಜಾಗತಿಕ ಪ್ರಕರಣಗಳನ್ನು ಹೋಮ್ ಸ್ಕ್ರೀನ್‌ನಲ್ಲಿ ತೋರಿಸುತ್ತದೆ. ಎಲ್ಲಾ ಮೂಲಭೂತ ನೈರ್ಮಲ್ಯ ಅಭ್ಯಾಸಗಳನ್ನು ನೋಡಲು ನೀವು ಕೆಳಗೆ ಸ್ಕ್ರಾಲ್ ಮಾಡಬಹುದು. WHO ನ COVID-19 ಪ್ರತಿಕ್ರಿಯೆ ನಿಧಿಗೆ ದೇಣಿಗೆ ನೀಡಲು ಅಪ್ಲಿಕೇಶನ್ ನಿಮಗೆ ಲಿಂಕ್ ಅನ್ನು ಸಹ ಒದಗಿಸಲಾಗಿದೆ.

COVID-19

ಇನ್ನು COVID-19 ರೋಗಲಕ್ಷಣಗಳ ಬಗ್ಗೆ ವಿವರಗಳನ್ನು ಒದಗಿಸಲು, ಅಪ್ಲಿಕೇಶನ್ ಗಂಭೀರ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಪಟ್ಟಿ ಮಾಡುವ ಚೆಕ್-ಅಪ್ ಟ್ಯಾಬ್ ಅನ್ನು ಹೊಂದಿದೆ. ಪ್ರಯಾಣದ ಬಗ್ಗೆ ಸಲಹೆ ಪಡೆಯಲು ಮತ್ತು ವೈರಸ್‌ನಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ನೀವು ಅಪ್ಲಿಕೇಶನ್‌ನಲ್ಲಿ ಕಲಿಯಿರಿ ಟ್ಯಾಬ್‌ಗೆ ಹೋಗಬಹುದು. ಅಪ್ಲಿಕೇಶನ್ ಮಿಥ್ ಬಸ್ಟರ್‌ಗಳನ್ನು ಪಟ್ಟಿ ಮಾಡುತ್ತದೆ ಮತ್ತು COVID-19 ರ ಸುತ್ತಲಿನ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇದರಲ್ಲಿ ನೀವು ಇರುವ ಸ್ಥಳೀಯ ಪ್ರದೇಶ ಮತ್ತು ಜಾಗತಿಕವಾಗಿ ಇತ್ತೀಚಿನ COVID-19 ಪ್ರಕರಣಗಳನ್ನು ನೋಡಲು ನಿಮಗೆ ಅವಕಾಶ ಮಾಡಿಕೊಡಲು ಮೀಸಲಾದ ಅಂಕಿಅಂಶಗಳ ಟ್ಯಾಬ್ ಇದೆ.

WHO

ಸದ್ಯ WHO ಬಿಡುಗಡೆ ಮಾಡಿರುವ COVID-19 ಅಪ್ಡೇಟ್ಸ್‌ ಅಪ್ಲಿಕೇಶನ್ Android ಮತ್ತು iOS ಎರಡೂ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದಕ್ಕೆ ಕನಿಷ್ಠ ಆಂಡ್ರಾಯ್ಡ್ 4.4 ಅಥವಾ ಐಒಎಸ್ 9.0 ಅಗತ್ಯವಿದೆ. ಅಪ್ಲಿಕೇಶನ್ ಆರಂಭದಲ್ಲಿ ನೈಜೀರಿಯಾಕ್ಕೆ ಸೀಮಿತವಾಗಿದೆ ಮತ್ತು ಶೀಘ್ರದಲ್ಲೇ ಇಂಗ್ಲಿಷ್ ಮಾತನಾಡುವ ಇತರ ದೇಶಗಳಲ್ಲೂ ಲಭ್ಯವಾಗುವ ನಿರೀಕ್ಷೆಯಿದೆ. ಆದರೂ, ನೈಜೀರಿಯಾದ ಹೊರಗೆ ಉಳಿದುಕೊಂಡಿರುವ ಆಂಡ್ರಾಯ್ಡ್ ಬಳಕೆದಾರರು ಅದರ ಎಪಿಕೆ ಫೈಲ್ ಅನ್ನು ಎಪಿಕೆ ಮಿರರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅದನ್ನು ತಮ್ಮ ಸಾಧನಗಳಲ್ಲಿ ಸೈಡ್‌ಲೋಡ್ ಮಾಡಬಹುದು. ಪ್ರಸ್ತುತ ಹಂತದಲ್ಲಿ ಅದರ ಸೀಮಿತ ಲಭ್ಯತೆಯ ಹೊರತಾಗಿಯೂ, ಅಪ್ಲಿಕೇಶನ್ ಎಲ್ಲಾ ಪ್ರಮುಖ ಪ್ರದೇಶಗಳಿಗೆ ದೇಶ-ನಿರ್ದಿಷ್ಟ ಡೇಟಾವನ್ನು ಒದಗಿಸುತ್ತದೆ.

Best Mobiles in India

English summary
World Health Organization (WHO) has launched a mobile app to provide latest COVID-19 guidance and updates.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X