ಉಸೇನ್ ಬೋಲ್ಟ್ ಗಿಂತಲು ವೇಗದ 'ಚೀತಾ' ರೊಬೊಟ್‌!

Posted By: Staff
ಉಸೇನ್ ಬೋಲ್ಟ್ ಗಿಂತಲು ವೇಗದ 'ಚೀತಾ' ರೊಬೊಟ್‌!

ಪೆಂಟಗನ್‌ನಲ್ಲಿ ಸಿದ್ಧ ಪಡಿಸಲಾಗಿರುವ 'ಚೀತಾ' ರೊಬೊಟ್‌ ಗಂಟೆಗೆ 45.5 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ವಿಶ್ವದ ಅತೀ ವೇಗದ ಓಟಗಾರ ಉಸೇನ್‌ಬೋಲ್ಟ್ ಅವರ ದಾಖಲೆಯನ್ನು ಮೀರಿಸಿದೆ.

ಜಮೈಕಾದ ಓಟಗಾರ ಗಂಟೆಗೆ 44.7 ಕಿ.ಮೀ ವೇಗದಲ್ಲಿ ಓಡುವ ಮೂಲಕ ವಿಶ್ವದ ಏಕಮಾನ್ಯ ಅತೀ ವೇಗದ ಓಟಗಾರ ಎಂದೆನಿಸಿಕೊಂಡಿದ್ದಾರೆ. ಆದರೆ ಅಮೆರಿಕಾದ ಭದ್ರತಾ ವಿಭಾಗದ ಬೋಸ್ಟನ್‌ ಡೈನಾಮಿಕ್ಸ್ ಡರ್ಪ ನೆರವಿನೊಂದಿಗೆ ನಿರ್ಮಿಸಿರುವ 'ಚೀತಾ' ಉಸೇನ್‌ಬೋಲ್ಟ್ ದಾಖಲೆಯೊಂದಿಗೆ ತನ್ನಯ ಈ ಹಿಂದಿನ 29 ಕಿ.ಮೀ ವೇಗದ ದಾಖಲೆಯನ್ನು ಕೂಡ ಅಳಿಸಿ ಹಾಕಿದೆ.

ಆದರೆ 'ಚೀತಾ' ಪ್ರಯೋಗಾಲಯದಲ್ಲಿ ಗಾಳಿಯ ಒತ್ತಡ ಹಾಗೂ ಯಾವುದೇ ರೀತಿಯ ಇತರೆ ಒತ್ತಡಗಳಿಲ್ಲದೆ ಈ ವೇಗವನ್ನು ಧಾಖಲಿಸಿದರೆ ಬೋಲ್ಟ್ ನಿಜ ಜೀವನದಲ್ಲಿ ಕೇವಲ ದೈಹಿಕ ಸಾಮರ್ತ್ಯದಿಂದಾಗಿ ದಾಖಲೆ ನಿರ್ಮಿಸಿದ  ಅದ್ಬುತ ಕ್ರೀಡಾಪಟು ಆಗಿದ್ದಾರೆ ಎಂದು ಬೋಸ್ಟನ್‌ ಡೈನಮಿಕ್ಸ್ ತಿಳಿಸಿದೆ.

ಹೊರ ಪ್ರಪಂಚದಲ್ಲಿ ಆರಾಮವಾಗಿ ಹಾಗೂ ಅತೀ ವೇಗದಲ್ಲಿ ಚಲಿಸಬಲ್ಲ ರೊಬೊಟ್‌ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಅದಕ್ಕಾಗಿಯೇ ವೈಲ್ಡ್ ಕ್ಯಾಟ್ ಎಂಬ ಹೊಸಾ ಮಾದರಿಯ ರೊಬೊಟ್‌ ನಿರ್ಮಿಸುತ್ತಿದ್ದು ಮುಂದಿನ ವರ್ಷದಲ್ಲಿ ಪ್ರಯೋಗಕ್ಕೆ ತರಲಿದ್ದೇವೆ ಎಂದು ಚೀತಾ ಯೋಜನೆಯ ಮುಖ್ಯಸ್ಥ ಡಾ. ಆಲ್ಫರ್ಡ್ ರಿಜ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಹನಗಳು ತಲುಪಲು ಸಾಧ್ಯವಾಗದಂತಹ ತುರ್ತು ಪರಿಸ್ಥಿತಿಗಳಲ್ಲಿ ನೆರವಾಗುವ ಸಲುವಾಗಿ 'ಚೀತಾ' ಅಭಿವೃಧಿ ಪಡಿಸಲಾಗಿದ್ದು ಇತರೆ ಭದ್ರತಾ ಕಾರ್ಯಗಳಲ್ಲಿಯೂ ಬಳಸಿ ಕೊಳ್ಳಲಾಗುವುದು ಎಂದು ಅಮೇರಿಕಾದ ಭದ್ರತಾ ವಿಭಾಗ ತಿಳಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot