ಭಾರತೀಯನ ಕಲೆಗೆ ಮನಸೋತಿತು ಆಪಲ್... ಕ್ಯಾಲ್ಜಿ 3 ಗೆ ಆಪಲ್ ಡಿಸೈನ್ ಅವಾರ್ಡ್..!
ಆಪಲ್ ನ WWDC 2018ರಲ್ಲಿ ಭಾರತಕ್ಕೆ ಮತ್ತೊಂದು ಸಿಹಿ ಸುದ್ದಿ ಇದೆ. WWDC ಸ್ಕಾಲರ್ ಶಿಪ್ ನಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಮೊದಲನೆಯದಾದರೆ, ಚೆನ್ನೈ ಮೂಲದ ಆಪ್ ಗೆ ಆಪಲ್ ಡಿಸೈನ್ ಅವಾರ್ಡ್ ಬಂದಿರುವುದು ಮತ್ತೊಂದು ವಿಶೇಷ. ಆಪಲ್ ಪ್ಲಾಟ್ ಫಾರ್ಮ್ಸ್ ನಲ್ಲಿ ಉತ್ತಮ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ಪರಿಚಯಿಸಿದವರಿಗೆ ಕೊಡುವ ಆಪಲ್ ಡಿಸೈನ್ ಅವಾರ್ಡ್ ಗೆ ಕ್ಯಾಲ್ಯುಕ್ಲೇಟರ್ ಆಪ್ Calzy 3 ಅಭಿವೃದ್ಧಿಪಡಿಸಿ ಚೆನ್ನೈನ ರಾಜಾ ವಿಜಯರಾಮ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ವಿಜಯರಾಮನ್ ಕೆಲವು ವರ್ಷಗಳ ಕಾಲ ಸಿನಿಮಾಕ್ಷೇತ್ರದಲ್ಲಿ ದಲ್ಲಿ VFX ತಜ್ಞರಾಗಿ ಸೇವೆ ಸಲ್ಲಿಸಿದ್ದು, ರಜನಿಕಾಂತ ಮತ್ತಿತರ ಸ್ಟಾರ್ ನಟರ ಜತೆ ಕೆಲಸ ಮಾಡಿರುವ ಇವರು ಬುಧವಾರ ಬೆಳಿಗ್ಗೆ ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿರುವ ವಿಜಯರಾಮನ್ ಆಪಲ್ ಸ್ಟೋರ್ ಗೆ ಧನ್ಯವಾದ ಹೇಳಿದ್ದಾರೆ. ಕ್ಯಾಲ್ಜಿ ಆಪ್ 150ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಾಗುತ್ತಿದೆ. ಆಪಲ್ ಸಮುದಾಯ ಸ್ಫೂರ್ತಿ ನೀಡಿದ್ದು, ಬಹಳಷ್ಟು ಸಹಾಯ ಮಾಡಿದೆ ಎಂದಿದ್ದಾರೆ.
ಇನ್ನು ತಮ್ಮ ವೃತ್ತಿ ಜೀವನದ ಬಗ್ಗೆ ಅನುಭವ ಹಂಚಿಕೊಂಡಿರುವ ವಿಜಯರಾಮ್ 5 ವರ್ಷದ ಹಿಂದೆ ವೃತ್ತಿ ಜೀವನ ಪ್ರಾರಂಭವಾದಾಗ ನನಗೆ ಯಾರ ಪರಿಚಯವು ಇದ್ದಿಲ್ಲ, ಸಾಫ್ಟ್ ವೇರ್ ಮಾರಾಟದ ಅನುಭವವು ಇದ್ದಿಲ್ಲ, ಪ್ರೋಗ್ರಾಮಿಂಗ್ ಮತ್ತು ಯುಐ/ಯುಎಕ್ಸ್ ಡಿಸೈನಿಂಗ್ ಕಲಿಯುವುದಕ್ಕೆ ಕಾಲೇಜುಗಳಿದ್ದಿಲ್ಲ. ಆದರೆ, ನನ್ನ ಬಳಿ ಅರ್ಥ ನನ್ನ ಮಾಡಿಕೊಳ್ಳುತ್ತಿದ್ದ ಕುಟುಂಬ, ಸ್ನೇಹಿತರು, ಒಂದು ಮ್ಯಾಕ್ ಬುಕ್ ಪ್ರೋ, ಐಪೋನ್ ಮತ್ತು ಆಪ್ ಅಭಿವೃದ್ಧಿಪಡಿಸಲು ಆಸಕ್ತಿಯಿತ್ತಷ್ಟೇ ಎಂದು ಹೇಳಿದ್ದಾರೆ.

ಕ್ಯಾಲ್ಜಿ 3 ಕಸ್ಟಮೈಸೆಬೆಲ್ ಕ್ಯಾಲ್ಯುಕ್ಲೇಟರ್ ಆಗಿದ್ದು, iOS ತಂತ್ರಜ್ಞಾನ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮಲ್ಟಿ ಟಾಸ್ಕಿಂಗ್, ಫೇಸ್ ಐಡಿ ಮತ್ತು ಟಚ್ ಐಡಿ ಆಯ್ಕೆಗಳಿವೆ. ಕ್ಯಾಲ್ಜಿ 3ರಲ್ಲಿ ಮಲ್ಟಿಪಲ್ ಸಂಖ್ಯಾ ಮೌಲ್ಯಗಳನ್ನು ಶೇಖರಿಸಬಹುದು ಮತ್ತು ಅದನ್ನು ಯಾವಾಗ ಬೇಕಾದರೂ ಡ್ರಾಗ್ & ಡ್ರಾಪ್ ವಿಧಾನದ ಮೂಲಕ ಬಳಸಿಕೊಳ್ಳಬಹುದು.


ಕ್ಯಾಲ್ಯುಕ್ಲೇಷನ್ ಹಿಸ್ಟರಿಯನ್ನು ಸಹ ಯಾವಾಗ ಬೇಕಾದರು ಬಳಸಬಹುದಾಗಿದೆ. ವಿಶಿಷ್ಠ ಬುಕ್ ಮಾರ್ಕಿಂಗ್ ಆಯ್ಕೆ ನೀಡಿದ್ದು, ಕ್ಯಾಲ್ಯುಕ್ಲೇಷನ್ ಅನ್ನು ದಿನಾಂಕ ಮತ್ತು ಹೆಸರು ಕೊಟ್ಟು ಸೇವ್ ಮಾಡಿಕೊಳ್ಳಬಹುದಾಗಿದೆ. ಕ್ಯಾಲ್ಜಿ 3 ಇಂಗ್ಲೀಷ್ ಸೇರಿದಂತೆ 65 ಭಾಷೆಗಳಲ್ಲಿ ತನ್ನ ಉತ್ತರ ನೀಡುವ ವಿಶೇಷತೆ ಹೊಂದಿದೆ. 159 ರೂ. ಮೌಲ್ಯ ಹೊಂದಿರುವ ಕ್ಯಾಲ್ಜಿ 3 iOSನಲ್ಲಿ ಮಾತ್ರ ಲಭ್ಯವಿದೆ. ಆದರೆ, ಮ್ಯಾಕ್ ನಿಂದಿಡದು ಆಪಲ್ ವಾಚ್ ಗಳಲ್ಲೆಲ್ಲ ಬಳಸಬಹುದಾಗಿದೆ. 2014ರಲ್ಲಿ ಕ್ಯಾಲ್ಜಿಯ ಮೊದಲ ಆವೃತ್ತಿ ಬಿಡುಗಡೆಯಾಗಿತ್ತು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಆವೃತ್ತಿ 2014ರ ಆವೃತ್ತಿಯನ್ನು ಮೀರಿಸಿದೆ.


Click it and Unblock the Notifications