Subscribe to Gizbot

ಚೆನ್ನೈ ಅಳಲಿಗೆ ದನಿಯಾದ ಟೆಲಿಕಾಂ ಕಂಪನಿಗಳು

Written By:

ಪ್ರವಾಹದ ಸುಳಿಯಲ್ಲಿ ಸಿಲುಕಿರುವ ಚೆನ್ನೈಗೆ ಈಗ ಹಲವು ದೂರವಾಣಿ ಕಂಪನಿಗಳು ತಮ್ಮ ಚೆನ್ನೈ ಗ್ರಾಹಕರಿಗೆ ಒಂದು ವಾರದ ಮಟ್ಟಿಗೆ ಉಚಿತವವಾಗಿ ಕರೆ ಸೌಲಭ್ಯ ಮತ್ತು ಡಾಟಾ ಪ್ಯಾಕ್‌ಗಳನ್ನು ಒದಗಿಸಿವೆ. ಇದು ಚೆನ್ನೈನ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಂಡ್‌ಲೈನ್‌ ಗ್ರಾಹಕರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೆ ಎಂಬುದು ಮಾತ್ರ ಪ್ರಶ್ನಾರ್ಥಕ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಚೆನ್ನೈನ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಂಡ್‌ಲೈನ್‌ ಬಳಕೆದಾರರಿಗೆ ಯಾವ ಯಾವ ರೀತಿ ಕರೆ ಮತ್ತು ಡಾಟಾ ಸೌಲಭ್ಯ ಉಚಿತವಾಗಿ ಸಿಗಲಿದೆ ಎಂಬ ಬಗ್ಗೆ ಮಾಹಿತಿ ನೀಡಲಿದೆ.

ಓದಿರಿ: ಹದಿಹರೆಯದ ಹುಡುಗಿಯನ್ನು ಬಲಿತೆಗೆದುಕೊಂಡ ವೈಫೈ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೆನ್ನೈನಲ್ಲಿ ಲ್ಯಾಂಡ್‌ಲೈನ್‌ ಕರೆಗಳು ಉಚಿತ

ಚೆನ್ನೈನಲ್ಲಿ ಲ್ಯಾಂಡ್‌ಲೈನ್‌ ಕರೆಗಳು ಉಚಿತ

ಚೆನ್ನೈನಲ್ಲಿ ಲ್ಯಾಂಡ್‌ಲೈನ್‌ ಬಳಕೆದಾರರಿಗೆ ಒಂದು ವಾರದವರೆಗೆ ಉಚಿತ ಕರೆ ಸೌಲಭ್ಯವನ್ನು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್ ಘೋಷಿಸಿದ್ದಾರೆ. ಅಲ್ಲದೇ ಬಿಲ್‌ ಪಾವತಿ ಮಾಡದ ಲ್ಯಾಂಡ್‌ಲೈನ್‌ ಬಳಕೆದಾರರಿಗೂ ಸಹ 15 ದಿನಗಳವರೆಗೆ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಮಾಧ್ಯಮ ವರದಿಗಾರರೊಂದಿಗೆ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸೌಲಭ್ಯ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸೌಲಭ್ಯ

ಬಿಎಸ್‌ಎನ್‌ಎಲ್‌ ಸಹ ತನ್ನ ಬಳಕೆದಾರರಿಗೆ ಉಚಿತ ಸ್ಥಳೀಯ ಕರೆಗಳು ಮತ್ತು ಎಸ್‌ಟಿಡಿ ಕರೆಗಳನ್ನು 7 ದಿನಗಳಕಾಲ ಒದಗಿಸಿದ್ದು, ಜೊತೆಗೆ 100MB ಡಾಟಾವನ್ನು ತನ್ನ ಪ್ರಿಪೇಡ್‌ ಗ್ರಾಹಕರಿಗೆ ನೀಡಿದೆ.

 ಇತರ ಮೊಬೈಲ್‌ ನೆಟ್‌ವರ್ಕ್‌ಗಳು

ಇತರ ಮೊಬೈಲ್‌ ನೆಟ್‌ವರ್ಕ್‌ಗಳು

ಚೆನ್ನೈಗೆ ಇತರೆ ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ ಸೇವೆಯ ಎಲ್ಲಾ ಕಂಪನಿಗಳು ಸಹ ಹಿಂದೆ ಉಳಿಯದೇ ಉಚಿತ ಟಾಕ್‌ ಟೈಮ್‌ ಸೇವೆ ನೀಡಿವೆ.

ಏರ್‌ಟೆಲ್‌

ಏರ್‌ಟೆಲ್‌

ಚೆನ್ನೈನ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಂಡ ಕಾರಣ ಏರ್‌ಟೆಲ್‌ ಸೇವೆ ಕೆಲವು ಪ್ರದೇಶಗಳಿಗೆ ತಲುಪಿಲ್ಲ. ಏರ್‌ಟೆಲ್‌ ಚೆನ್ನೈ ಪ್ರಿಪೇಡ್‌ ಗ್ರಾಹಕರಿಗೆ 30 ರೂಪಾಯಿಗಳ ಟಾಕ್‌ಟೈಮ್‌ ಉಚಿತವಾಗಿ ನೀಡಿದೆ. 50MB ಡಾಟಾವನ್ನು ಸಹ ಎರಡು ದಿನಗಳ ವ್ಯಾಲಿಟಿಡಿಯೊಂದಿಗೆ ಉಚಿತವಾಗಿ ನೀಡಿದೆ.

ಏರ್‌ಟೆಲ್

ಏರ್‌ಟೆಲ್

ಏರ್‌ಟೆಲ್ ತನ್ನ ಚೆನ್ನೈ ಪೋಸ್ಟ್‌ಪೇಡ್ ಗ್ರಾಹಕರಿಗೆ ಬಿಲ್‌ ಪಾವತಿಯ ಗಡುವನ್ನು ವಿಸ್ತರಿಸಿದೆ.

ವೊಡಾಫೋನ್‌ ಆಫರ್‌

ವೊಡಾಫೋನ್‌ ಆಫರ್‌

ವೊಡಾಫೋನ್‌ ತನ್ನ ಗ್ರಾಹಕರಿಗೆ 10 ರೂಪಾಯಿಗಳ ಉಚಿತ ಟಾಕ್‌ಟೈಮ್‌ ನೀಡಿದ್ದು, ವೊಡಾಫೋನ್‌ ಟು ವೊಡಾಫೋನ್‌ ಗ್ರಾಹಕರು 10 ನಿಮಿಷಗಳು ಉಚಿತವಾಗಿ ಮಾತನಾಡುವ ಹಾಗೂ 100MB ಡಾಟಾವನ್ನು ಆಫರ್‌ ನೀಡಿದೆ.

 ಏರ್‌ಸೆಲ್‌ ಆಫರ್

ಏರ್‌ಸೆಲ್‌ ಆಫರ್

ಏರ್‌ಸೆಲ್ ಟು ಏರ್‌ಸೆಲ್‌ 10 ನಿಮಿಷಗಳು ಉಚಿತವಾಗಿ ಮಾತನಾಡುವ ಸೌಲಭ್ಯವನ್ನು ಏರ್‌ಸೆಲ್‌ ಸಹ ನೀಡಿದೆ. ಚೆನ್ನೈನ ಏರ್‌ಸೆಲ್‌ ಗ್ರಾಹಕರೊಂದಿಗೆ ಭಾರತದ ಯಾವುದೇ ಪ್ರದೇಶದ ಏರ್‌ಸೆಲ್‌ ಗ್ರಾಹಕ ಉಚಿತವಾಗಿ ಮುಂದಿನ ಮೂರುದಿನಗಳ ವರೆಗೆ ಮಾತನಾಡುವ ಸೌಲಭ್ಯ ನೀಡಿದೆ. ಜೊತೆಗೆ ಮೂರು ದಿನಗಳ ವರೆಗೆ 100MB 3G/2G ಡಾಟಾವನ್ನು ಉಚಿತವಾಗಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Landline calls in the Chennai circle will remain free for a week while telephones for which dues are yet to be paid will not be disconnected for 15 days, said Union Telecom Minister Ravi Shankar Prasad on Wednesday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot