ಫೇಸ್‌ಬುಕ್‌ಗೆ ಒಂದು ಇ-ಮೇಲ್ ಮಾಡಿದ ಭಾರತೀಯ ಟೆಕ್ಕಿಗೆ ಸಿಕ್ತು 20 ಲಕ್ಷ ಬಹುಮಾನ!

|

ಫೇಸ್‌ಬುಕ್ ಒಡೆತನದ ಫೋಟೋ ಅಪ್ಲಿಕೇಶನ್ ಆಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ ನೂನ್ಯತೆ ಕಂಡುಹಿಡಿದ ಭಾರತೀಯ ಭದ್ರತಾ ಸಂಶೋಧಕರೋರ್ವರಿಗೆ 20 ಲಕ್ಷ ರೂ. ಬಹುಮಾನವಾಗಿ ಸಿಕ್ಕಿದೆ. ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್ ಮುತ್ತಯ್ಯ ಎಂಬುವವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ದೋಷವೊಂದನ್ನು ಪತ್ತೆಹಚ್ಚಿ ಕಂಪೆನಿಗೆ ತಿಳಿಸಿದ್ದರು. ಇದಕ್ಕಾಗಿ ಫೇಸ್‌ಬುಕ್ ಬಹುಮಾನವಾಗಿ ಹಣವಾಗಿ 30,000 ಅಮೆರಿಕನ್ ಡಾಲರ್ (ಅಂದಾಜು 20,67,483 ರೂ.) ಮೊತ್ತವನ್ನು ನೀಡಿದೆ.

ಫೇಸ್‌ಬುಕ್‌ಗೆ ಒಂದು ಇ-ಮೇಲ್ ಮಾಡಿದ ಭಾರತೀಯ ಟೆಕ್ಕಿಗೆ ಸಿಕ್ತು 20 ಲಕ್ಷ ಬಹುಮಾನ!

ಕೆಲವು ದಿನಗಳ ಹಿಂದೆಯಷ್ಟೇ 'ಯಾವುದೇ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ' ಎಂದು ಮುತ್ತಯ್ಯ ಅವರು ಕಂಡುಹಿಡಿದಿದ್ದರು. ಇನ್‌ಸ್ಟಾಗ್ರಾಮ್ ಖಾತೆಯೊಂದನ್ನು ವ್ಯಕ್ತಿಯ ಅರಿವಿಗೆ ಬಾರದಂತೆಯೇ ಹ್ಯಾಕ್ ಮಾಡುವ ಲೋಪ ಇದಾಗಿದ್ದು, ಈ ಕುರಿತು ಕಂಪೆನಿಗೆ ಇ ಮೇಲ್ ಮೂಲಕ ತಿಳಿಸಿದ್ದರು. ಆದರೆ ಮೊದಲು ಪ್ರತಿಕ್ರಿಯೆ ಬಾರದಿದ್ದರಿಂದ, ನಂತರ ವಿಡಿಯೋ, ದಾಖಲೆ ಮತ್ತು ಸ್ಕ್ರೀನ್ ಶಾಟ್ ಸಮೇತ ಅವರಿಗೆ ಭದ್ರತಾ ಲೋಪವನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನು ಗಮನಿಸಿದ ಇನ್‌ಸ್ಟಾಗ್ರಾಂ ಮಾಲಿಕ ಸಂಸ್ತೆ ಫೇಸ್‌ಬುಕ್ , ಬಗ್ ಬೌಂಟಿ ಯೋಜನೆಯಡಿ ಮುತ್ತಯ್ಯಗೆ 30,000 ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ನೀಡಿದೆ. ಜತೆಗೆ ಸಮಸ್ಯೆಯನ್ನು ಸರಿಪಡಿಸಿದೆ. ಅಲ್ಲದೆ ಅಂತಹ ಸಮಸ್ಯೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಂಡಿದೆ ಎಂದು ಇನ್‌ಸ್ಟಾಗ್ರಾಂ ಹೇಳಿದೆ. ಸೈಬರ್ ಸೆಕ್ಯುರಿಟಿ ಮೇಜರ್ ಸೋಫೋಸ್‌ನ ಹಿರಿಯ ತಂತ್ರಜ್ಞ ಪಾಲ್ ಡಕ್ಲಿನ್, ಮುತ್ತಯ್ಯ ಅವರು ಕಂಡುಕೊಂಡ ದುರ್ಬಲತೆ ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ಗೆ ಒಂದು ಇ-ಮೇಲ್ ಮಾಡಿದ ಭಾರತೀಯ ಟೆಕ್ಕಿಗೆ ಸಿಕ್ತು 20 ಲಕ್ಷ ಬಹುಮಾನ!

ಭದ್ರತಾ ಸಂಶೋಧಕ ಲಕ್ಷ್ಮಣ್ ಮುತ್ತಯ್ಯ ಅವರು ಕಂಡುಹಿಡಿದಿರುವಂತೆ, ಫೋಟೋ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬಂದ ಮೊದಲ ದೋಷವು ನಿಮ್ಮ ಪಾಸ್‌ವರ್ಡ್ ತಿಳಿಯದೆ ನಿಮ್ಮ ಎಲ್ಲಾ ಫೋಟೋಗಳನ್ನು ಜ್ಯಾಪ್ ಮಾಡಬಹುದಿತ್ತು. ಎರಡನೆಯದು ನಿಮ್ಮ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ನೀಡದೆ ನಿಮ್ಮ ಎಲ್ಲಾ ಫೇಸ್‌ಬುಕ್ ಚಿತ್ರಗಳನ್ನು ಕಾಣುವಂತಹ ಮೊಬೈಲ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ನಿಮ್ಮನ್ನು ಮೋಸಗೊಳಿಸಬಹುದಾಗಿತ್ತು ಎನ್ನಲಾಗಿದೆ. ಈಗ ಈ ಎರಡೂ ಸಮಸ್ಯೆಗಳು ಬಗೆಹರಿದಿವೆ.

ಡೇಟಿಂಗ್ ವೆಬ್‌ಸೈಟ್ ನಂಬಿ 62 ಲಕ್ಷ ಕಳೆದುಕೊಂಡ ಭೂಪ!ಡೇಟಿಂಗ್ ವೆಬ್‌ಸೈಟ್ ನಂಬಿ 62 ಲಕ್ಷ ಕಳೆದುಕೊಂಡ ಭೂಪ!

ಇದನ್ನು ಸುಲಭವಾಗಿ ಹೇಳಬೆಕೆಂದರೆ, ಇನ್‌ಸ್ಟಗ್ರಾಂ ಪಾಸ್ವರ್ಡ್ ಮರುಹೊಂದಿಕೆಯನ್ನು ಪ್ರಚೋದಿಸುವ ಮೂಲಕ, ಮರುಪಡೆಯುವಿಕೆ ಕೋಡ್ ಅನ್ನು ವಿನಂತಿಸುವ ಮೂಲಕ ಅಥವಾ ಖಾತೆಯ ವಿರುದ್ಧ ಸಂಭವನೀಯ ಮರುಪಡೆಯುವಿಕೆ ಕೋಡ್‌ಗಳನ್ನು ತ್ವರಿತವಾಗಿ ತಿರುಚುವ ಮೂಲಕ ಇನ್ನೊಬ್ಬರ ಇನ್‌ಸ್ಟಾಗ್ರಾಮ್ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿತ್ತು. ಇದರ ಪರಿಣಾಮವಾಗಿ ಖಾಸಾಗಿತನ ಸಾರ್ವಜನಿಕವಾಗುವ ಅಪಾಯವು ಸಹ ಕಂಡುಬಂದಿತ್ತು.

Best Mobiles in India

English summary
The Chennai-based security researcher won $30,000 as a part of a bug bounty programme after he spotted a flaw in Instagram that allowed him to “hack any Instagram account without consent permission”. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X