Home
ಸುದ್ದಿಜಾಲ

ಸರಕಾರಿ ಕಂಪ್ಯೂಟರ್‌ಗಳಲ್ಲಿ ವಿಂಡೋಸ್ 8 ಗೆ ಚೀನಾ ನಿಷೇಧ

By Shwetha

ಮೈಕ್ರೋಸಾಫ್ಟ್‌ನ ವಿಂಡೋಸ್ 8 ಆಪರೇಟಿಂಗ್ ಸಿಸ್ಟಮ್ ಬಳಕೆಯನ್ನು ಚೀನಾ ಸರಕಾರ ನಿಷೇಧಿಸುತ್ತಿದ್ದು ಹೀಗೆಂದು ಒಂದು ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ. ಸರಕಾರಿ ಕಂಪ್ಯೂಟರ್‌ಗಳು ವಿಂಡೋಸ್ 8 ಅನ್ನು ಸ್ಥಾಪಿಸುವುದು ಅಥವಾ ಸಾಫ್ಟ್‌ವೇರ್‌ನೊಂದಿಗೆ ಹೊಸ ಸಾಧನಗಳನ್ನು ಖರೀದಿಸುವುದನ್ನು ಚೀನಾ ಸರ್ಕಾರ ನಿಷೇಧಿಸಿದೆ ಎಂದು ಚೀನಾ ಸುದ್ದಿ ಸೈಟ್ ಕೂಡ ವರದಿ ಮಾಡಿದೆ.

ಸರಕಾರದ ಈ ನಿರ್ಧಾರ ಏಕೆ ಹೀಗಿದೆ ಎಂಬುದು ಇನ್ನೂ ಸಂಶಯದಲ್ಲಿದ್ದರೂ ಅದು ಹೇಳುವಂತೆ ಉತ್ತಮ ಗುಣಮಟ್ಟದ ಐಟಿ ಉತ್ಪನ್ನಗಳನ್ನು ಈಗಿನಿಂದಲೇ ಖರೀದಿಸುವ ಇರಾದೆ ಸರ್ಕಾರದ್ದಾಗಿದೆ. ಆದ್ದರಿಂದಲೇ ಅದು ತನ್ನ ಡೆಸ್ಕ್ ಟಾಪ್ ಕಂಪ್ಯೂಟರ್‌ಗಳಿಗೆ, ಲ್ಯಾಪ್‌ಟಾಪ್‌ಗಳಿಗೆ ಮತ್ತು ಟ್ಯಾಬ್ಲೇಟ್‌ಗಳಿಗೆ ಉನ್ನತ ಮಟ್ಟದ ಸಾಫ್ಟ್‌ವೇರ್ ಅನ್ನು ಖರೀದಿಸುತ್ತಿದೆ.

ಸರಕಾರಿ ಕಂಪ್ಯೂಟರ್‌ಗಳಲ್ಲಿ ವಿಂಡೋಸ್ 8 ಗೆ ಚೀನಾ ನಿಷೇಧ

ಸರಕಾರ ತನ್ನ ಕಂಪ್ಯೂಟರ್‌ಗಳ ಸುರಕ್ಷತೆಗಾಗಿ ಈ ನಿಯಮವನ್ನು ಅನುಸರಿಸುತ್ತಿದ್ದು ಮೈಕ್ರೋಸಾಫ್ಟ್‌ನ ಮತ್ತೊಂದು ಉತ್ಪನ್ನವಾದ ವಿಂಡೋಸ್ ಎಕ್ಸ್‌ ಪಿ ಯನ್ನು ದೇಶಾದ್ಯಂತ ಹೆಚ್ಚಾಗಿ ಬಳಸುತ್ತಿದೆ. ವಿಂಡೋಸ್ ಎಕ್ಸ್‌ ಪಿ ಸಿಸ್ಟಮ್‌ಗಳು ಚೈನಾ ದೇಶದಲ್ಲಿ 44% ದಷ್ಟು ಬಳಸುತ್ತಿದ್ದು ವಿಂಡೋಸ್ 8 ಅನ್ನು 3.4% ಕಂಪ್ಯೂಟರ್‌ಗಳಲ್ಲಿ ಮಾತ್ರ ಇನ್‌ಸ್ಟಾಲ್ ಮಾಡಲಾಗಿದೆ.

ಚೀನಾದಿಂದ ಬಂದ ಒಂದು ಸುದ್ದಿಯಂತೆ ಮೈಕ್ರೋಸಾಫ್ಟ್ ತನ್ನೆಲ್ಲಾ ವಿಂಡೋಸ್ ಉತ್ಪನ್ನಗಳ ಮೇಲಿನ ದರವನ್ನು ಕಡಿಮೆ ಮಾಡಿದ್ದರೂ ಕೂಡ ಚೀನಾದಲ್ಲಿ ವಿಂಡೋಸ್ ಬಳಕೆ ತೀರಾ ಇಳಿಕೆಯಾಗಿದೆ. ಮೈಕ್ರೋಸಾಫ್ಟ್‌ನ ಅತಿ ದೊಡ್ಡ ಗ್ರಾಹಕರು ಚೀನಾ ದೇಶವಾಗಿದ್ದರೂ ಮೈಕ್ರೋಸಾಫ್ಟ್‌ನ ಬಳಕೆ ತೀರಾ ಇಳಿಕೆಯಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+