'ಲೇಸರ್ AK-47' ತಯಾರಿಸಿ ಕಾಲ್ಪನಿಕ ಗನ್ ಅನ್ನು ನಿಜ ಮಾಡಿದ 'ಚೀನಾ'!!

|

ಹಾಲಿವುಡ್‌ನ ಸ್ಟಾರ್‌ವಾರ್ ಸಿನಿಮಾ ಸರಣಿಗಳನ್ನು ನೊಡಿದವರಿಗೆ ಅದರಲ್ಲಿನ ಕಾಲ್ಪನಿಕ ಲೇಸರ್ ಆಯುಧಗಳು ಅಸಾಮಾನ್ಯವಾಗಿ ಕಾಣಬಹುದು. ಆದರೆ, ಅಂತಹ ಲೇಸರ್ ಆಯುಧ ಇನ್ನು ಕಾಲ್ಪನಿಕವಲ್ಲ. ಏಕೆಂದರೆ, ಚೀನಾದ ಸಂಶೋಧಕರು ಅಭಿವೃದ್ದಿಪಡಿಸಿರುವ ನೂತನ ಲೆಸರ್ ಗನ್ ಒಂದು ಕಾಲ್ಪನಿಕ ಸಿನಿಮಾಗಳನ್ನು ಮೀರಿಸುವಂತಹ ಶಕ್ತಿಯನ್ನು ಹೊಂದಿದೆ.

ಹೌದು, ಚೀನಾದ ಸಂಶೋಧಕರು ಪೊಲೀಸರ ಬಳಕೆಗೆಂದೇ ಈ ಲೇಸರ್‌ ಗನ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಈ ಗನ್‌ನಿಂದ ಒಂದು ಕಿ.ಮೀ. ದೂರದಲ್ಲಿರುವ ವ್ಯಕ್ತಿಗೂ ಶೂಟ್‌ ಮಾಡಬಹುದು. ಹಾಗಂತ, ಶೂಟ್‌ ಮಾಡಿ ದೊಡನೆ ವ್ಯಕ್ತಿಯು ಸಾಯುವುದಿಲ್ಲ. ಆದರೆ, ಶೂಟ್ ಮಾಡಿದ ಪರಿಣಾಮ ಮಾತ್ರ ಅವನ ಮೇಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

 'ಲೇಸರ್ AK-47' ತಯಾರಿಸಿ ಕಾಲ್ಪನಿಕ ಗನ್ ಅನ್ನು ನಿಜ ಮಾಡಿದ 'ಚೀನಾ'!!

ಚೀನಾದ ನ್ಯಾಷನಲ್ ಸಿವಿಲ್-ಮಿಲಿಟರಿ ಪರಿಚಯಿಸಿರುವ ಈZKZM-500 ಲೇಸರ್ ರೈಫಲ್ ಈಗ ತನ್ನ ವಿಶೇಷತೆಗಳಿಂದಲೇ 'ಲೇಸರ್ AK-47' ಎಂದು ಹೆಸರಾಗಿದೆ. ವಿಶ್ವದಲ್ಲಿಯೇ ಹೆಚ್ಚು ಹೆಸರುವಾಗಿ AK-47 ಗನ್ ಹೆಸರಿನಿಂದ ಕರೆಯಲ್ಪಡುತ್ತಿರುವ ZKZM-500 ಲೇಸರ್ ರೈಫಲ್ ವಿಶೇಷವಾಗಿ "ಮಾರಕವಲ್ಲದ ಶಸ್ತ್ರಾಸ್ತ್ರ" ಎಂದು ಕರೆಯಲ್ಪಡುತ್ತಿದೆ ಎಂಬುದು ಕೂಡ ಆಶ್ಚರ್ಯವೆ.

ಏಕೆಂದರೆ ಈ 'ಲೇಸರ್ AK-47ನಿಂದ ಶೂಟ್ ಮಾಡಿದರೆ, ದುರದಲ್ಲಿರುವ ಪ್ರಾಣಕ್ಕೇನೂ ಅಪಾಯ ವಾಗುವುದಿಲ್ಲ. ಬದಲಿಗೆ, ಆತನ ಕೂದಲಿಗೆ ಅಥವಾ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಪ್ರತಿಭಟನಾಕಾರರ ಕೈಯಲ್ಲಿರುವ ಬ್ಯಾನರ್‌ಗಳನ್ನು ಸುಟ್ಟು ಹಾಕಲೂ ಇದನ್ನು ಬಳಸಬಹುದು ಎಂದು ಗನ್‌ ತಯಾರಿಸಿರುವ ಝೆಡ್‌ಕೆಝೆಡ್‌ಎಂ ಫೈಬರ್‌ ಲೇಸರ್‌ ಕಂಪನಿ ಹೇಳಿದೆ.

 'ಲೇಸರ್ AK-47' ತಯಾರಿಸಿ ಕಾಲ್ಪನಿಕ ಗನ್ ಅನ್ನು ನಿಜ ಮಾಡಿದ 'ಚೀನಾ'!!

3 ಕೆ.ಜಿ. ತೂಕ ಹೊಂದಿರುವ ಈ ಲೇಸರ್ ಗನ್ 800 ಮೀ. ದೂರದ ಗುರಿ ತಲುಪಬಲ್ಲದು. ಗಾಜು ಸೇರಿದಂತೆ ಪಾರದರ್ಶಕ ವಸ್ತುಗಳ ಮೂಲಕವೂ ಇದು ಹಾದುಹೋಗಬಲ್ಲದು. ವ್ಯಕ್ತಿಗೆ ತಾಗಿದೊಡನೆ ಆತನಿಗೆ ಸ್ವಲ್ಪ ಹೊತ್ತು ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಇನ್ನು ಪೊಲೀಸರು ಸುಮಾರು ಒಂದು ಕಿ.ಮೀ. ದೂರದಲ್ಲಿ ನಿಂತು ಪ್ರತಿಭಟನಾಕಾರರನ್ನು ಚದುರಿಸಬಹುದು.

ಉತ್ತರ ಕೋರಿಯಾಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳು ಚೀನಾದಲ್ಲಿವೆ!

ಉತ್ತರ ಕೋರಿಯಾಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳು ಚೀನಾದಲ್ಲಿವೆ!

ಚೀನಾ ಎಂಬ ಹೆಸರು ಕೇಳಿದರೆ ಸಾಕು ಭಾರತದ ಶತ್ರು ರಾಷ್ಟ್ರ, ಮೊಬೈಲ್ ಮಾರುಕಟ್ಟೆಯ ದಿಗ್ಗಜ ಎಂಬೆಲ್ಲಾ ವಿಷಯಗಳು ನಮ್ಮ ತಲೆಯಲ್ಲಿ ಹರಿದಾಡುತ್ತವೆ. ಆದರೆ, ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ದೇಶವು ನಾವು ಕಂಡು ಕೇಳಿರದ ವಿಷಯಗಳನ್ನು ಸಂಗ್ರಹಿಸಿಕೊಂಡಿದೆ ಎಂಬ ಊಹೆ ಕೂಡ ನಿಮಗಿರುವುದಿಲ್ಲ.
ಹೌದು, ಕಮ್ಯುನಿಷ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಹಲವು ಕಾನೂನುಗಳು ನಮಗಿಂತ ಭಿನ್ನವಾಗಿವೆ. ನೀವು ತಿಳಿದಿರುವ ಉತ್ತರ ಕೋರಿಯಾ ಕಾನೂನುಗಳಿಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳನ್ನು ಚೀನಾ ಹೊಂದಿದೆ. ಇಂದು ವಿಶ್ವದ ದೊಡ್ಡ ದೇಶಗಳಲ್ಲಿ ಮತ್ತು ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಚೀನಾದಲ್ಲಿ ಈ ರೀತಿ ಕಾನೂನು ಇವೆಯಾ ಎಂಬ ಆಶ್ಚರ್ಯ ಮೂಡಿಸುತ್ತದೆ.

ಉದಾಹರಣೆಗೆ ಚೀನಾದಲ್ಲಿ ಪರೀಕ್ಷೆಗಳಲ್ಲಿ ನಕಲು ಮಾಡುವಾಗ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಯಿದೆ ಎಂದರೆ ನೀವು ನಂಬಲೇಬೇಕು. ಇಂತಹ ಅನೇಕ ವಿಷಯಗಳು ಚೀನಾದ ಒಡಲಲ್ಲಿವೆ. ಹಾಗಾಗಿ, ನೆರೆ ರಾಷ್ಟ್ರ ಚೀನಾದಲ್ಲಿ ನಾವು ಕಂಡು ಕೇಳಿರದ ವಿಚಿತ್ರ ವಿಷಯಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.

‘ಚೀನಾ’ ಎಂಬ ಹೆಸರು ಬಂದಿದ್ದೇಗೆ?

‘ಚೀನಾ’ ಎಂಬ ಹೆಸರು ಬಂದಿದ್ದೇಗೆ?

ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ಎಂದ ಕೂಡಲೇ, ನಮ್ಮ ನೆರೆಯ ರಾಷ್ಟ್ರ ಚೀನಾ ಎಂದು ಥಟ್ ಎಂದು ಉತ್ತರಿಸುತ್ತೇವೆ. ‘ಚೀನಾ' ಅಥವಾ ‘ಚೈನಾ' ಎಂದು ಕರೆಯುವುವ ಈ ಪದವು ‘Qin' ಎಂಬ ರಾಜವಂಶದ ಹೆಸರಿನಿಂದ ಬಂದಿದೆ. ಇದನ್ನು ಚಿನ್ ಎಂದು ಉಚ್ಚರಿಸಲಾಗುತ್ತದೆ.

ಗಣಿತ ಕಲಿಯುವುದು ಕಡ್ಡಾಯ.!!

ಗಣಿತ ಕಲಿಯುವುದು ಕಡ್ಡಾಯ.!!

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಚೀನಾದಲ್ಲಿ ಶಿಕ್ಷಣ ವಿಧಾನ ಕಠಿಣವಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ವೊಕೇಷನಲ್ ಮತ್ತು ಟೆರಿಟರಿ ಎಂಬ ಐದು ಹಂತಗಳಲ್ಲಿ ಇಲ್ಲಿ ಶಿಕ್ಷಣ ಕಲಿಯಬೇಕಾಗುತ್ತದೆ. ಮಾಂಡರಿನ್ ಭಾಷೆಯಲ್ಲಿ ಇಲ್ಲಿ ಶಿಕ್ಷಣ ಕಲಿಸಲಾಗುತ್ತದೆ. ಈ ಎಲ್ಲ ಹಂತಗಳಲ್ಲೂ ಮಾಂಡರಿನ್ ಮತ್ತು ಗಣಿತ ಕಲಿಯುವುದು ಕಡ್ಡಾಯ.!

ಏಳು ವರ್ಷ ಜೈಲು ಶಿಕ್ಷೆ!!

ಏಳು ವರ್ಷ ಜೈಲು ಶಿಕ್ಷೆ!!

ಚೀನಾದಲ್ಲಿ ಭಾರತಕ್ಕಿಂತ ಹೆಚ್ಚು ವಿಷಯಗಳನ್ನು ಕಲಿಯಬೇಕಾಗುತ್ತದೆ. ನಿಮಗೆ ಗೊತ್ತಾ?. ಚೀನಾ ದೇಶದಲ್ಲಿ ಪರೀಕ್ಷೆಗಳಲ್ಲಿ ನಕಲು ಮಾಡುವಾಗ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ. ನಕಲು ಮಾಡಿದ ವಿದ್ಯಾರ್ಥಿಯೋರ್ವ ಏಳು ವರ್ಷ ಜೈಲು ಅನುಭವಿಸುತ್ತಿದ್ದಾನೆ.

ಕೆಂಪು ಬಣ್ಣ ಹೆಚ್ಚು ಬಳಕೆ!!

ಕೆಂಪು ಬಣ್ಣ ಹೆಚ್ಚು ಬಳಕೆ!!

ಚೀನಾ ದೇಶದಲ್ಲಿ ಕೆಂಪು ಬಣ್ಣ ಹೆಚ್ಚು ಬಳಕೆಯಾಗುವುದನ್ನು ನೀವು ನೋಡಬಹುದು. ಚೀನಿಯರು ಕೆಂಪು ಬಣ್ಣವನ್ನು ಸಂತೋಷದ ಪ್ರತೀಕವಾಗಿ ಭಾವಿಸುತ್ತಾರೆ. ಹಾಗಾಗಿ ವಿವಿಧ ಹಬ್ಬಗಳಲ್ಲಿ, ಸಭೆ ಸಮಾರಂಭಗಳಲ್ಲಿ ಚೀನಿಯರು ಕೆಂಪು ಬಣ್ಣ ಎದ್ದು ಕಾಣುವಂತೆ ಮನೆಗಳನ್ನು ಅಲಂಕಾರ ಮಾಡಿರುತ್ತಾರೆ.

ಫೇಸ್‌ಬುಕ್, ಟ್ವಿಟರ್‌ ಯಾರೂ ಬಳಸುವುದಿಲ್ಲ!!

ಫೇಸ್‌ಬುಕ್, ಟ್ವಿಟರ್‌ ಯಾರೂ ಬಳಸುವುದಿಲ್ಲ!!

ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಂತ ಸಾಮಾಜಿಕ ಜಾಲತಾಣಗಳ ಮೇಲೆ ಇಲ್ಲಿ 2009ರವರೆಗೆ ನಿಷೇಧ ಹೇರಲಾಗಿದ್ದ ವಿಷಯ ನಿಮಗೆ ಗೊತ್ತು. ಆದರೆ, ನಂತರ ನಿಯಮ ಸಡಿಲಿಸಿ ಇವುಗಳ ಬಳಕೆಯನ್ನು ಮುಕ್ತವಾಗಿಸಿದರೂ ಸಹ ಇಲ್ಲಿ ಫೇಸ್‌ಬುಕ್, ಟ್ವಿಟರ್ ಅನ್ನು ಯಾರೂ ಬಳಸುವುದಿಲ್ಲ.!

ಆಟಿಕೆಗಳ ರಾಜ!

ಆಟಿಕೆಗಳ ರಾಜ!

ನೀವೆಲ್ಲರೂ ಊಹೆ ಮಾಡಿದಂತೆ ಚೀನಾ ದೇಶ ಇಡೀ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಆಟಿಕೆಗಳನ್ನು ತಯಾರಿಸುವ ದೇಶವಾಗಿದೆ. ವಿಶ್ವದ ಶೇ 70ರಷ್ಟು ಆಟಿಕೆಗಳು ಈ ದೇಶದಲ್ಲೇ ತಯಾರಾಗುತ್ತವೆ ಎಂದರೆ ಈ ದೇಶದ ಆಟಿಕೆಗಳ ಉಧ್ಯಮ ಎಷ್ಟು ದೊಡ್ಡದಾಗಿದೆ ಎಂಬುದು ಕಲ್ಪನೆಗೆ ಕೂಡ ಸಿಗುವುದಿಲ್ಲ.

ಎತ್ತರದ ಭವನಗಳು!!

ಎತ್ತರದ ಭವನಗಳು!!

ಅಮೆರಿಕಾ ಸೇರಿದಂತೆ ವಿಶ್ವದ ಇತರೆ ದೇಶಗಳ ನಗರಗಳಿಗೆ ಹೋಲಿಸಿಕೊಂಡರೆ ಚೀನಾದ ಪ್ರಮುಖ ನಗರಗಳಲ್ಲಿ ಅತೀ ಎತ್ತರದ ಭವನಗಳು ನಿರ್ಮಾಣವಾಗುತ್ತಿವೆ. ಸರಾಸರಿ ಐದು ದಿನಗಳಿಗೊಮ್ಮೆ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ಹಲವು ವರದಿಗಳು ತಿಳಿಸಿವೆ.

ರಫ್ತು ಮಾಡುವ ದೇಶ!!

ರಫ್ತು ಮಾಡುವ ದೇಶ!!

ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ವಸ್ತು ಮತ್ತು ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಹಾಗೆಯೇ ವಸ್ತು ಮತ್ತು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಕಚ್ಚಾ ಪದಾರ್ಥಗಳನ್ನು ಚೀನಾ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.

ದೇಶಕ್ಕೆ ನಿಷ್ಠರಾಗಿರಬೇಕು!!

ದೇಶಕ್ಕೆ ನಿಷ್ಠರಾಗಿರಬೇಕು!!

ಚೀನಾದವರು ದೇಶಕ್ಕೆ ನಿಷ್ಠ ದೇಶಾಭಿಮಾನಿಯಾಗಿರಬೇಕು ಎಂಬ ಕಾನೂನು ಅಲ್ಲಿದೆ. ಮಾನವೀಯ ಮೌಲ್ಯಗಳಿಗೆ ಹೋರಾಡುವವರನ್ನು ನಿರ್ದಾಕ್ಷಣ್ಯವಾಗಿ ಹತ್ತಿಕ್ಕಲಾಗುತ್ತದೆ. ಇಂತಹ ಹೋರಾಟಗಾರರನ್ನು ಹೊರ ಪ್ರಪಂಚಕ್ಕೆ ತಿಳಿಯದಂತೆ ಕೊಲೆ ಮಾಡಿರುವ ಉದಾಹರಣೆಗಳು ಇವೆ. ವೈಯಕ್ತಿಕ ಸ್ವಾತಂತ್ರ್ಯ ಇಲ್ಲಿ ಕಡಿಮೆ ಇದೆ.

ಈಗಲೂ ಗುಹೆ ವಾಸ!!

ಈಗಲೂ ಗುಹೆ ವಾಸ!!

ವಿರ್ಶವದ ಪ್ರಭಲ ರಾಷ್ಟ್ರಗಳಲ್ಲಿ ಒಂದು ಎಂಬ ಹೆಸರನ್ನು ಪಡೆದಿರುವ ಚೀನಾದಲ್ಲಿ ಈಗಲೂ ಗುಹೆ ವಾಸ ಮಾಡುತ್ತಿರುವವರ ಸಂಖ್ಯೆ ಚೆಚ್ಚು ಬೀಳಿಸುತ್ತದೆ. ಚೀನಾದಲ್ಲಿ ಸುಮಾರು 35 ಮಿಲಿಯನ್ ಜನರು ಈಗಲೂ ಗುಹೆಯಲ್ಲಿಯೇ ವಾಸವಾಗಿದ್ದಾರೆ ಎಂದ ವಿಷಯ ನಿಮಗೆ ಆಶ್ಚರ್ಯವಾಗದೇ ಇರದು.!

Best Mobiles in India

English summary
CHINA DEVELOPS STAR WARS-STYLE 'LASER AK-47' THAT CAN SET FIRE TO TARGETS AND PASS THROUGH WINDOWS. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X