ಅಮೆರಿಕ ಗೆಲ್ಲಲು ಚೀನಾ ರೆಡಿ ಮಾಡಿಕೊಂಡಿದೆ ಪಂಚ ವಾರ್ಷಿಕ 'ಟೆಕ್'‌ ಪ್ಲಾನ್‌..!

By Gizbot Bureau
|

ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೊರೊನಾ ವೈರಸ್‌ನ ಆರ್ಥಿಕ ಅನಿಶ್ಚಿತತೆಗಳಿಂದ ಚೀನಾದ ಟೆಕ್‌ ಉದ್ಯಮ ಭಾರೀ ನಷ್ಟ ಅನುಭವಿಸಿದೆ. ಆದರೆ, ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೆ ಗತವೈಭವಕ್ಕೆ ಮರಳಲು ಚೀನಾ ಉತ್ಸುಕವಾಗಿದ್ದು, ತಯಾರಿ ನಡೆಸುತ್ತಿದೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಇತ್ತೀಚೆಗೆ ನಡೆದ ವಾರ್ಷಿಕ ಪಕ್ಷದ ಸಭೆಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಒಟ್ಟಾರೆ ಅಭಿವೃದ್ಧಿಗೆ ಸಹಾಯ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಐದು ವರ್ಷಗಳ ಯೋಜನೆಯನ್ನು ಚೀನಾ ರೂಪಿಸಿದೆ.

ಅಮೆರಿಕ ಗೆಲ್ಲಲು ಚೀನಾ ರೆಡಿ ಮಾಡಿಕೊಂಡಿದೆ ಪಂಚ ವಾರ್ಷಿಕ 'ಟೆಕ್'‌ ಪ್ಲಾನ್‌..!

ತಂತ್ರಜ್ಞಾನ ಪಂಚವಾರ್ಷಿಕ ಯೋಜನೆಯಲ್ಲಿ ಚೀನಾ ಪ್ರಯೋಗಾಲಯಗಳನ್ನು ರಚಿಸುತ್ತದೆ. ಶೈಕ್ಷಣಿಕ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ ಮತ್ತು ಎಐ, ಬಯೋಟೆಕ್, ಸೆಮಿಕಂಡಕ್ಟರ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಹೆಚ್ಚಿಸುವ ಬಗ್ಗೆ ಡ್ರಾಗನ್‌ ರಾಷ್ಟ್ರ ಯೋಜನೆ ಹಾಕಿಕೊಂಡಿದೆ.

ಚೀನಾ ಸರಕಾರವು ಮೂಲಭೂತ ಸಂಶೋಧನೆಗಳ ವೆಚ್ಚವನ್ನು 2021ರಲ್ಲಿ ಶೇ.10.6ರಷ್ಟು ಹೆಚ್ಚಿಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ 10 ವರ್ಷಗಳ ಸಂಶೋಧನಾ ಕಾರ್ಯತಂತ್ರವನ್ನು ಕೂಡ ರಚಿಸಲು ಮುಂದಾಗಿದೆ.

ಅಮೆರಿಕ ಗೆಲ್ಲಲು ಚೀನಾ ರೆಡಿ ಮಾಡಿಕೊಂಡಿದೆ ಪಂಚ ವಾರ್ಷಿಕ 'ಟೆಕ್'‌ ಪ್ಲಾನ್‌..!

ಚೀನಾ 5ಜಿ, ಎಐ ರಿಯಾಲಿಟಿಯಂತಹ ಅನೇಕ ಮುಂದುವರೆದ ತಂತ್ರಜ್ಞಾನದ ಅನುಕೂಲಗಳನ್ನು ಈಗಾಗಲೇ ಹೊಂದಿದೆ. ಸಂಪೂರ್ಣ ಚಾಲಕ ರಹಿತ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿರುವ ಕೆಲವೇ ದೇಶಗಳಲ್ಲಿ ಚೀನಾ ಕೂಡ ಒಂದು. ಅದೇ ಉತ್ಸಾಹದಲ್ಲಿ ಚೀನಾವೂ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಕೆಲವು ಬಲವಾದ ಅಂಶಗಳನ್ನು ದೃಢಪಡಿಸುತ್ತಿದೆ.

ಅಮೆರಿಕ ಗೆಲ್ಲಲು ಚೀನಾ ರೆಡಿ ಮಾಡಿಕೊಂಡಿದೆ ಪಂಚ ವಾರ್ಷಿಕ 'ಟೆಕ್'‌ ಪ್ಲಾನ್‌..!

ಇದು ಕೇವಲ ಅಭಿವೃದ್ಧಿ ಮಾತಷ್ಟೇ ಅಲ್ಲದೇ ರಕ್ಷಣಾತ್ಮಕ ವಿಷಯವೂ ಆಗಿರಬಹುದು. ಹುವಾವೇ ಮತ್ತು ZTE ನಂತಹ ಕಂಪನಿಗಳ ಮೇಲೆ ಅಮೆರಿಕ ವ್ಯಾಪಾರ ನಿರ್ಬಂಧ ಹೇರಿರುವುದರಿಂದ ಅತ್ಯಾಧುನಿಕ ಚಿಪ್ ತಯಾರಿಕೆಯ ಕೊರತೆಯುಂಟಾಗಿದೆ. ಒಟ್ಟಾರೆ ಸಂಶೋಧನೆಯಲ್ಲಿ ಅಮೆರಿಕ ಸಹ ಮುಂಚೂಣಿಯಲ್ಲಿದೆ. ಪ್ರೆಸಿಡೆಂಟ್‌ ಜೋ ಬಿಡೆನ್‌ ಆಡಳಿತವು 5 ಜಿ, ಎಐ ಮತ್ತು ಎಲೆಕ್ಟ್ರಿಕ್ ಕಾರುಗಳ ಸಂಶೋಧನೆಯಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದೆ. ಅಮೆರಿಕದ ಇತ್ತೀಚಿನ ಪ್ರಯತ್ನಗಳನ್ನು ಎದುರಿಸದಿದ್ದರೆ ಚೀನಾ ಕೆಲವು ಕ್ಷೇತ್ರಗಳಲ್ಲಿ ಹಿಂದೆ ಬೀಳುವ ಅಪಾಯ ಹೊಂದಿದೆ.

Best Mobiles in India

Read more about:
English summary
China Plans For AI, Quantum Computing Super Power: Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X