ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!

|

ಚೀನಾ ಎಂದರೆ ನಿಮಗೆ ನಕಲಿ ಉತ್ಪನ್ನಗಳ ಜನನ ಸ್ಥಳ ಎಂದು ನೆನಪಾಗುವುದು ಖಂಡಿತ. ಇಷ್ಟು ದಿನ ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಶೂಗಳು ಮತ್ತೀತರ ವಸ್ತುಗಳನ್ನು ಡುಪ್ಲಿಕೇಟ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವಲ್ಲಿ ಚೀನಾ ಮಂದಿ ಬಹಳಷ್ಟು ಪ್ರವೀಣರು. ಆದರೆ, ಈ ನಕಲಿತನವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿರುವ ಚೀನಾ ಚಂದ್ರನನ್ನೇ ಮರು ಸೃಷ್ಟಿಸಲು ಹೊರಟಿದೆ.

ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!

ಇದನ್ನು ನಾವು ಡುಪ್ಲಿಕೇಟ್‌ ಎನ್ನುವುದಕ್ಕಿಂತ ಮಾನವ ನಿರ್ಮಿತ ಅಥವಾ ಕೃತಕ ಚಂದ್ರನನ್ನು ಚೀನಾ 2022ರಷ್ಟರ ಹೊತ್ತಿಗೆ ಲಾಂಚ್‌ ಮಾಡಲು ನಿರ್ಧರಿಸಿದೆ. ಈ ಮೂಲಕ ಆಕಾಶದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಿದರು ಸ್ಥಾಪಿಸಬಹುದು. ಕೃತಕ ಚಂದ್ರನನ್ನು ಲಾಂಚ್‌ ಮಾಡುತ್ತಿರುವುದು ಚೀನಾದ ಬೀದಿಗಳನ್ನು ಬೆಳಗಿಸಲು ಎಂದು ಹೇಳಲಾಗಿದೆ. ಕೃತಕ ಚಂದ್ರನಿಂದ ವಿದ್ಯುತ್‌ನ್ನು ಕೂಡ ಉಳಿಸಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಆಗಿದ್ದರೆ, ಕೃತಕ ಚಂದ್ರ ಏನೇಲ್ಲಾ ವಿಶೇಷತೆ ಹೊಂದಿದ್ದಾನೆ. ವಿದ್ಯುತ್ ಹೇಗೆ ಉಳಿತಾಯವಾಗುತ್ತದೆ ಮುಂದೆ ನೋಡಿ.

ಎಲ್ಲಿ ಕೃತಕ ಚಂದ್ರ..?

ಎಲ್ಲಿ ಕೃತಕ ಚಂದ್ರ..?

ವಿಜ್ಞಾನಿಗಳು ನೈರುತ್ಯ ಚೀನಾದಲ್ಲಿನ ಸಿಚುವಾನ್‌ ಪ್ರಾಂತ್ಯದ ರಾಜಧಾನಿಯಾಗಿರುವ ಚೆಂಗಡು ನಗರದ ಮೇಲೆ ಮಾನವ ನಿರ್ಮಿತ ಚಂದ್ರನನ್ನು ಪ್ರತಿಷ್ಟಾಪಿಸಲು ಆಶಿಸುತ್ತಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ಉಪಗ್ರಹ ಚಂದ್ರನನ್ನು ಅನುಕರಣೆಯನ್ನು ಮಾಡುತ್ತದೆ. ಹಾಗೂ ಮೂಲಭೂತವಾಗಿ ಪ್ರಕಾಶಿತ ಉಪಗ್ರಹವಾಗಿದ್ದು, ಸೂರ್ಯನ ಬೆಳಕನ್ನು ಭೂಮಿಗೆ ನೀಡಲು ಪ್ರತಿಫಲನಗಳನ್ನು ಹೊಂದಿದ್ದು, ರಾತ್ರಿ ಕೃತಕ ಚಂದ್ರನಿಂದ ರಾತ್ರಿ ಸಮಯದಲ್ಲಿ ಬೀದಿ ದೀಪವನ್ನು ನೀಡುತ್ತದೆ.

ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನ

ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನ

ವಿಜ್ಞಾನಿಗಳ ಪ್ರಕಾರ ಮೂಲ ಚಂದ್ರಕ್ಕಿಂತ ಚೀನಾ ಲಾಂಚ್‌ ಮಾಡಲು ಉದ್ದೇಶಿಸಿರುವ ಕೃತಕ ಚಂದ್ರ ಎಂಟು ಪಟ್ಟು ಹೆಚ್ಚಿನ ಪ್ರಕಾಶಮಾನವಾಗಿರುತ್ತೆ ಎಂದು ಅಂದಾಜಿಸಲಾಗಿದೆ. ಅದಲ್ಲದೇ ಚಂದ್ರನಿಗಿಂತ ಬಹು ಹತ್ತಿರದಲ್ಲಿ ಇರುತ್ತದೆ. ಕೃತಕ ಚಂದ್ರ 500 ಕಿ.ಮೀ. (310 ಮೈಲು) ಭೂಮಿಯೊಂದಿಗೆ ಅಂತರ ಹೊಂದಿರುತ್ತೆ. ಆದರೆ, ಚಂದ್ರ ಭೂಮಿಯಿಂದ 3,80,000 ಕಿ.ಮೀ. (236,000 ಮೈಲು)ಅಂತರ ಹೊಂದಿದೆ.

ಇಡೀ ಆಕಾಶಕ್ಕೆಲ್ಲಾ ಬೆಳಕು ನೀಡಲ್ಲ

ಇಡೀ ಆಕಾಶಕ್ಕೆಲ್ಲಾ ಬೆಳಕು ನೀಡಲ್ಲ

ಮಾನವ ನಿರ್ಮಿತ ಚಂದ್ರ ಉಪಗ್ರಹವು ಸಂಪೂರ್ಣ ಆಕಾಶವನ್ನು ಬೆಳಗಿಸುವುದಿಲ್ಲ ಎಂದು ಟಿಯಾನ್ ಫು ನ್ಯೂ ಏರಿಯಾ ಸೈನ್ಸ್‌ ಸೊಸೈಟಿಯ ಮುಖ್ಯಸ್ಥ ವೂ ಚುನ್‌ಫೆಂಗ್‌ ಚೀನಾದ ಪತ್ರಿಕೆಯೊಂದಕ್ಕೆ ತಿಳಿಸಿದ್ದು, ಮಾನವರ ದೃಷ್ಟಿಯಲ್ಲಿ ಕೃತಕ ಚಂದ್ರನ ನಿರೀಕ್ಷಿತ ಹೊಳಪು ಸಾಮಾನ್ಯ ರಸ್ತೆ ದೀಪಗಳ ಐದನೇ ಒಂದು ಭಾಗವಾಗಿದೆ ಎಂದು ಆತ ಹೇಳಿದ್ದಾನೆ.

ವಿದ್ಯುತ್‌ ವೆಚ್ಚದಲ್ಲಿ ಭಾರೀ ಉಳಿಕೆ

ವಿದ್ಯುತ್‌ ವೆಚ್ಚದಲ್ಲಿ ಭಾರೀ ಉಳಿಕೆ

ಹೊಸ ನಿರೀಕ್ಷಿತ ಕೃತಕ ಚಂದ್ರ ವಿದ್ಯುತ್‌ನ್ನು ಭಾರೀ ಪ್ರಮಾಣದಲ್ಲಿ ಉಳಿಸಲಿದೆ. ಹೌದು, ಚೆಂಗಡು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗುತ್ತಿದ್ದ ವಾರ್ಷಿಕ ವಿದ್ಯುತ್‌ ವೆಚ್ಚ 173 ಡಾಲರ್ ಮಿಲಿಯನ್ ಹಣವನ್ನು ಉಳಿಸಲಿದೆ. ಅದಲ್ಲದೇ ಬ್ಲಾಕ್‌ಔಟ್‌ ಮತ್ತು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕೆ ನೆರವಾಗುತ್ತದೆ.

ಮೂರು ಚಂದ್ರ ಉಡಾವಣೆ

ಮೂರು ಚಂದ್ರ ಉಡಾವಣೆ

ಮೊದಲಿಗೆ ಚೆಂಗಡು ನಗರದ ಮೇಲೆ ಕೃತಕ ಚಂದ್ರನನ್ನು ಪ್ರತಿಷ್ಟಾಪಿಸಲಾಗುವುದು. ಈ ಯೋಜನೆ ಯಶಸ್ವಿಯಾದರೆ 2022ರ ಹೊತ್ತಿಗೆ ಕೃತಕ ಚಂದ್ರನ ಬಳಗಕ್ಕೆ ಇನ್ನು ಎರಡು ಮಾನವ ನಿರ್ಮಿತ ಚಂದ್ರಗಳು ಸೇರಿಕೊಳ್ಳಲ್ಲಿದ್ದು, ಒಟ್ಟು ಮೂರು ಕೃತಕ ಚಂದ್ರಗಳು ಚೀನಾವನ್ನು ಬೆಳಗಿಸಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಯೋಜನೆಯಿಂದ ಪರಿಸರಕ್ಕೆ ಹಾನಿವಿಲ್ಲವಂತೆ

ಯೋಜನೆಯಿಂದ ಪರಿಸರಕ್ಕೆ ಹಾನಿವಿಲ್ಲವಂತೆ

ಯೋಜನೆಯನ್ನು ಯಶಸ್ವಿಯಾಗಿಸಲು ಇನ್ನು ಹೆಚ್ಚಿನ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಯೋಜನೆ ಯಶಸ್ವಿಯಾಗಿ ಕೃತಕ ಚಂದ್ರ ಪ್ರತಿಷ್ಟಾಪನೆಯಾದರೆ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ ಎಂದಿದ್ದಾರೆ. ಆದರೆ, ಪರಿಸರಕ್ಕೆ ಹಗಲಿನಂತೆ ಕತ್ತಲು ಕೂಡ ಅವಶ್ಯಕವಾಗಿರುವುದರಿಂದ ಏನಾಗುತ್ತೋ ಕಾದು ನೋಡಬೇಕು.

ಎಲ್ಲಿ ಪರೀಕ್ಷೆ..?

ಎಲ್ಲಿ ಪರೀಕ್ಷೆ..?

ಈ ಯೋಜನೆಯ ಪರೀಕ್ಷೆಯನ್ನು ಜನರಿಲ್ಲದ ಮರಳುಗಾಡಿನಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಇಲ್ಲಿನ ಬೆಳಕಿನ ಕಿರಣಗಳು ಯಾವುದೇ ಜನರಿಗೆ ಅಥವಾ ಭೂಮಿಯ ಆಧಾರದ ಬಾಹ್ಯಾಕಾಶ ಪರಿವೀಕ್ಷಣಾ ಸಲಕರಣೆಗಳಿಗೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚೀನಾ ಮೊದಲಲ್ಲ..!

ಚೀನಾ ಮೊದಲಲ್ಲ..!

ಕೃತಕ ಚಂದ್ರನನ್ನು ತರುತ್ತಿರುವ ದೇಶಗಳಲ್ಲಿ ಚೀನಾ ಮೊದಲಲ್ಲ. 90ರ ದಶಕದಲ್ಲಿ ರಷ್ಯಾ ತನ್ನ ಸೂರ್ಯ ವಂಚಿತ ಉತ್ತರ ಭಾಗದ ಕೆಲವು ನಗರಗಳಲ್ಲಿ ಸೂರ್ಯನ ಬೆಳಕನ್ನು ಪ್ರತಿಫಲಿಸಲು ಕಕ್ಷೆಯ ಕನ್ನಡಿಯನ್ನು ಬಳಸಿಕೊಂಡು ಪ್ರಯೋಗ ಮಾಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಆದರೆ, ಕನ್ನಡಿ ಅನ್‌ಪೋಲ್ಡ್‌ ಆಗದೆ ಮತ್ತು ವಾತಾವರಣದಲ್ಲಿ ವೈಪರೀತ್ಯ ಪರಿಣಾಮಗಳು ಆಗಿದ್ದರಿಂದ ರಷ್ಯಾ ಈ ಯೋಜನೆಯನ್ನು 1999ರಲ್ಲಿ ಕೈಬಿಟ್ಟಿತು.

ಅಮೆರಿಕಾದಿಂದಲೂ ಪ್ರಯತ್ನ

ಅಮೆರಿಕಾದಿಂದಲೂ ಪ್ರಯತ್ನ

ಇದೇ ಜನೇವರಿಯಲ್ಲಿ ಅಮೆರಿಕಾದ ರಾಕೆಟ್‌ ಲ್ಯಾಬ್‌ ಸಂಸ್ಥೆ ಕೃತಕ ನಕ್ಷತ್ರವನ್ನು ಬಾಹ್ಯಾಕಾಶಕ್ಕೆ ಲಾಂಚ್‌ ಮಾಡಿತು. ಆದರೆ, ವಿಜ್ಞಾನಿಗಳಿಂದ ಈ ಯೋಜನೆ ತೀವ್ರ ಟೀಕೆಗೆ ಒಳಗಾಯಿತು. ಇಲ್ಲಿ ಪ್ರತಿಫಲಿತ ಮಿನಿ-ಉಪಗ್ರಹವನ್ನು ಡಬ್ ಮಾಡಲಾಗಿತ್ತು, ಅದಲ್ಲದೇ ಕೃತಕ ಬೆಳಕಿನ ಮಾಲಿನ್ಯ ಹಾಗೂ ಭೂಮಿಯ ಕಕ್ಷೆಯಲ್ಲಿ ಗೊಂದಲ ಆಗಿದ್ದರಿಂದ ಟೀಕೆಗೆ ಗುರಿಯಾಗಿತ್ತು.

ಹೇಗೆ ಕಾರ್ಯನಿರ್ವಹಿಸುತ್ತದೆ..?

ಹೇಗೆ ಕಾರ್ಯನಿರ್ವಹಿಸುತ್ತದೆ..?

ಕೃತಕ ಚಂದ್ರನಲ್ಲಿ ಮೂರು ಅತಿ ದೊಡ್ಡ ಕನ್ನಡಿಗಳಿದ್ದು, ಅವು 360 ಡಿಗ್ರಿ ಆರ್ಬಿಟಲ್‌ ಪ್ಲೇನ್‌ನ್ನು ವಿಭಜಿಸುತ್ತವೆ. ಇದರಿಂದ ನಿರಂತರವಾಗಿ 24 ಗಂಟೆಗಳ ಕಾಲ ಪ್ರದೇಶಕ್ಕೆ ಬೆಳಕು ಲಭ್ಯವಾಗುತ್ತದೆ, ಅದಲ್ಲದೆ ಪ್ರತಿಫಲಿತ ಸೂರ್ಯನ ಬೆಳಕು 3,600 ಚ.ಕಿ.ಮೀ ಯಿಂದ 6,400 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಬಹುದು.

Best Mobiles in India

English summary
China Plans to Launch an 'Artificial Moon' to Light Up the Night Skies. To know more this visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X