ವಿದೇಶಿಗರ ಮೊಬೈಲ್ ಕದ್ದು ನೋಡುತ್ತಿದೆ ಚೀನಾ!..ಮತ್ತೊಮ್ಮೆ ನೀಚ ಬುದ್ದಿ ಬಹಿರಂಗ!

|

ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನೀಯರ ವೇಗಕ್ಕೆ ಸಾಟಿಯಿಲ್ಲ ಎಂಬುದು ನಿಜ. ಆದರೆ, ಅವರು ತಮ್ಮ ಬಳಿ ಇರುವ ತಂತ್ರಜ್ಞಾನವನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮತ್ತೊಂದು ಅಧ್ಯಯನ ದೃಢಪಡಿಸಿದೆ. ಚೀನಾ ದೇಶಕ್ಕೆ ವಿದೇಶಿಯರು ತೆರಳುವಾಗ ಅವರ ಫೋನ್‌ಗಳಲ್ಲಿ ಮಾಲ್‌ವೇರ್ ಡೌನ್‌ಲೋಡ್ ಮಾಡಲು ಚೀನಾ ಸರ್ಕಾರ ಒತ್ತಾಯಿಸುತ್ತಿದೆ ಎಂಬುದು ಇದೀಗ ವರದಿಯಾಗಿದೆ.

ವಿದೇಶಿಗರ ಮೊಬೈಲ್ ಕದ್ದು ನೋಡುತ್ತಿದೆ ಚೀನಾ!..ಮತ್ತೊಮ್ಮೆ ನೀಚ ಬುದ್ದಿ ಬಹಿರಂಗ!

ಹೌದು, ಚೀನಾ ದೇಶಕ್ಕೆ ತೆರಳುವ ಎಲ್ಲಾ ವಿದೇಶಿಯರ ಮೊಬೈಲ್ ಫೋನ್​ಗಳ ಮೇಲೆ ತನ್ನದೇ ಮಾಲ್​ವೇರ್ ಅನ್ನು ಇನ್​ಸ್ಟಾಲ್ ಮಾಡಲಾಗುತ್ತಿದೆ ಎಂಬ ಅಚ್ಚರಿಯ ವಿಷಯವೊಂದು ಇದೀಗ ಬಹಿರಂಗವಾಗಿದೆ. ಪ್ರವಾಸಿಗರಿಂದ ಫೋನ್​ಗಳನ್ನು ವಶಕ್ಕೆ ಪಡೆಯುವ ಚೀನಾದ ಸೆಕ್ಯೂರಿಟಿ ಫೋರ್ಸ್​ ಮೊಬೈಲ್​ನಲ್ಲಿನ ಮೆಸೇಜ್​, ವಿಡಿಯೋಗಳನ್ನು ಪರಿಶೀಲಿಸುತ್ತದೆ. ಈ ಮಾಲ್‌ವೇರ್ ಸುಮಾರು 73,000 ಇತರ ಫೈಲ್‌ಗಳನ್ನು ಸ್ಕ್ಯಾನ್ ಮಾಡುತ್ತದೆ ಎಂದು ವರದಿಯಾಗಿದೆ.

ನ್ಯೂಯಾರ್ಕ್ ಟೈಮ್ಸ್, ವೈಸ್, Süddeutsche Zeitung ಮತ್ತು ಜರ್ಮನ್ ಬ್ರಾಡ್​ಕಾಸ್ಟರ್​ ಚೀನಿ ಮಾಲ್​ವೇರ್ ಇನ್​ಸ್ಟಾಲ್​ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ಇಂತಹದೊಂದು ಜಾಲವನ್ನು ಚೀನಿಯರು ಸ್ಥಾಪಿಸಿರುವ ವಿಷಯ ತಿಳಿದು ಬಂದಿದೆ. ಇದರಿಂದ ಚೀನಾ ಸರ್ಕಾರ ಮತ್ತು ಚೀನಾ ತಂತ್ರಜ್ಞಾನ ಕಂಪೆನಿಗಳ ಮೇಲೆ ಅನುಮಾನ ಮತ್ತಷ್ಟು ಹೆಚ್ಚಿದೆ ಎಂದು ಹೇಳಬಹುದು. ಹಾಗಾದರೆ, ಚೀನಾ ಏಕೆ ವಿದೇಶಿಗರನ್ನು ಟಾರ್ಗೆಟ್ ಮಾಡಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಶಾಕಿಂಗ್ ರಿಪೋರ್ಟ್?

ಏನಿದು ಶಾಕಿಂಗ್ ರಿಪೋರ್ಟ್?

ಚೀನಾ ದೇಶಕ್ಕೆ ಭೇಟಿ ನೀಡುಡು ವಿದೇಶಿಯರ ಸಂಪೂರ್ಣ ಮೊಬೈಲ್ ಫೋನ್​ನನ್ನು ಹ್ಯಾಕ್ ಮಾಡಬಹುದಾದಂತಹ ಸಾಫ್ಟ್​ವೇರ್​ ಅಥವಾ ಮಾಲ್​ವೇರ್​ ಅನ್ನು ಚೀನಿಯರು ಇನ್​ಸ್ಟಾಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಚೀನಾದವರು ವಿದೇಶಿಯರ ಮೊಬೈಲ್​ ಮೇಲೆ ಸಂಪೂರ್ಣ ನಿಯಂತ್ರಣ ಪಡೆದುಕೊಳ್ಳುತ್ತಿದ್ದಾರೆ ಎಂದು ತನಿಖೆ ಮೂಲ ತಿಳಿದುಬಂದಿದೆ.

ಹ್ಯಾಕ್ ಮಾಡುತ್ತಿರುವುದು ಹೇಗೆ?

ಹ್ಯಾಕ್ ಮಾಡುತ್ತಿರುವುದು ಹೇಗೆ?

ಚೀನಾದ ಗಡಿಯನ್ನು ದಾಟಿ ಕ್ಸಿನ್ಜಿಯಾಂಗ್ ಪ್ರದೇಶಕ್ಕೆ ಬರುವ ಪ್ರವಾಸಿಗರ ಫೋನ್‌ಗಳನ್ನು ಅಲ್ಲಿಮ ಗಡಿ ಕಾವಲುಗಾರರು ವಶಪಡಿಸಿಕೊಂಡಿದ್ದಾರೆ, ನಂತರ ಅವರು BXAQ ಅಥವಾ ಫೆಂಗ್ ಕೈ ಎಂಬ ಆಂಡ್ರಾಯ್ಡ್ ಮಾಲ್‌ವೇರ್ ಅನ್ನು ಸ್ಥಾಪಿಸುತ್ತಾರೆ. ಈ ಆಂಡ್ರಾಯ್ಡ್ ಮಾಲ್‌ವೇರ್ ಮೂಲಕ ಸಾರ್ವಜನಿಕರ ಎಲ್ಲಾ ಮಾಹಿತಿಗಳನ್ನು ತನ್ನದೇ ಸರ್ವರ್‌ನಲ್ಲಿ ಸಂಗ್ರಹಿಸುತ್ತಿದೆ.

ಹ್ಯಾಕ್ ಮಾಡುತ್ತಿರುವುದು ಏಕೆ?

ಹ್ಯಾಕ್ ಮಾಡುತ್ತಿರುವುದು ಏಕೆ?

ವಿದೇಶಿಯರ ಡೇಟಾಗಳನ್ನು ಚೀನಾವು ತನ್ನ ಬಾರ್ಡರ್ ಆಫೀಸ್ ಸ್ಥಳೀಯ ಇಂಟರ್​ನೆಟ್​ ಸರ್ವರ್‌ನಲ್ಲಿ ಸಂಗ್ರಹಿಸುತ್ತಿದೆ. ಈ ಮೂಲಕ ಸ್ಮಾರ್ಟ್​ಫೋನ್ ಬಳಕೆದಾರರಿಗೆ ತಿಳಿಯದಂತೆ ಅವರ ಎಲ್ಲಾ ಮಾಹಿತಿಯನ್ನು ಚೀನಾ ಸರ್ಕಾರ ಸಂಗ್ರಹಿಸಿದೆ. ಇದರಿಂದ ವಿದೇಶಿಯರ ಎಲ್ಲಾ ಚಲನವಲನಗಳ ಮೇಲೆ ಚೀನಿಯರು ಹೆಚ್ಚು ನಿಗಾ ಇಟ್ಟಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಏನೆಲ್ಲಾ ಚೆಕ್ ಮಾಡುತ್ತಿದ್ದಾರೆ?

ಏನೆಲ್ಲಾ ಚೆಕ್ ಮಾಡುತ್ತಿದ್ದಾರೆ?

ಈ ಮಾಲ್‌ವೇರ್ ಮೂಲಕ ವಿದೇಶಿಯರ ಬಗ್ಗೆ ಚೀನಾ ಸ್ಪೈ ಮಾಡುತ್ತಿದೆ ಎನ್ನಲಾಗಿದೆ. ಆದರೆ, ಮತ್ತೊಂದು ಮಾಹಿತಿ ಮೂಲದ ಪ್ರಕಾರ, ಈ ಆಂಡ್ರಾಯ್ಡ್ ಮಾಲ್‌ವೇರ್ ಇಸ್ಲಾಮಿಕ್ ವಿಷಯವನ್ನು ಸಹ ಹುಡುಕುತ್ತದೆ ಎಂದು ಹೇಳಲಾಗಿದೆ. ಅಂದರೆ, ದೇಶದೊಳಗೆ ಎಂಟ್ರಿ ನೀಡುವ ಮೂಲಭೂತವಾದಿಗಳನ್ನು ಹುಡುಕುವ ಸಲುವಾಗಿ ಈ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಮೂಲಭೂತವಾದ ಚೆಕ್?

ಮೂಲಭೂತವಾದ ಚೆಕ್?

'ಕ್ಸಿನ್‌ಜಿಯಾಂಗ್ ನಿವಾಸಿಗಳು, ವಿಶೇಷವಾಗಿ ಮುಸ್ಲಿಮರು ಬಹುಆಯಾಮದ ಕಣ್ಗಾವಲುಗೆ ಒಳಗಾಗುತ್ತಾರೆ ಎಂದು ನಮಗೆ ಈಗಾಗಲೇ ತಿಳಿದಿದೆ" ಎಂದು ಮದರ್ಬೋರ್ಡ್ ಹ್ಯೂಮನ್ ರೈಟ್ಸ್ ವಾಚ್ ಹಿರಿಯ ಸಂಶೋಧಕ ಮಾಯಾ ವಾಂಗ್ ಹೇಳಿದ್ದಾರೆ. ಅಂದರೆ, ಚೀನಾದವರು ಮೊಬೈಲ್ ಮೂಲಕ ಮೂಲಭೂತವಾದಿಗಳನ್ನು ಹುಡುಕುತ್ತಿದ್ದಾರೆ ಎಂದು ಇದು ಸೂಚಿಸುತ್ತದೆ.

ಅನುಮಾನಕ್ಕೆ ಪುಷ್ಠಿ!

ಅನುಮಾನಕ್ಕೆ ಪುಷ್ಠಿ!

ಬಳಕೆದಾರರಿಗೆ ತಿಳಿಯದಂತೆ ಅವರ ಮೊಬೈಲ್ ಮಾಹಿತಿಯನ್ನು ಚೀನಾ ಸರ್ಕಾರ ಸಂಗ್ರಹಿಸಿದೆ. ಇನ್ನು ಈ ಮೂಲಕ ನಿಮ್ಮ ಚಲನವಲನಗಳ ಮೇಲೂ ಕೂಡ ಚೀನಿಯರು ನಿಗಾ ಇಟ್ಟಿದ್ದಾರೆ ಎಂಬ ವಿಚಾರವನ್ನು ಅಲ್ಲಗೆಳೆಯುವಂತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ವಿದೇಶದಲ್ಲಿರುವ ಇತರೆ ಚೀನಾ ಮೊಬೈಲ್ ಕಂಪೆನಿಗಳ ಮೇಲೂ ಅನುಮಾನ ಮೂಡುವಂತೆ ಮಾಡಿದೆ.

ಇದು ದೊಡ್ಡ ಅಪರಾಧ!

ಇದು ದೊಡ್ಡ ಅಪರಾಧ!

ಚೀನಾದ ಟೆಕ್ ದೈತ್ಯ ಹುವಾವೇ ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿದೆ ಎಂಬ ಆರೋಪವು ಇತ್ತೀಚಿಗೆ ಸದ್ದು ಮಾಡಿತ್ತು. ಆದರೆ, ಹುವಾವೇ ಇದನ್ನು ಪದೇ ಪದೇ ನಿರಾಕರಿಸಿದೆ.ಏನೇ ಆದರೂ ಚೀನಾವು ವಿದೇಶಗರ ಮೇಲೆ ಈ ರೀತಿ ಸ್ಪೈ ಮಾಡುವುದು ಎಷ್ಟು ಸರಿ ಎಂದು ಹೇಳಲಾಗಿದೆ. ಭದ್ರತೆ ವಿಷಯಕ್ಕೆ ಸ್ಪೈ ಮಾಡಿದ್ದರೂ ಕೂಡ ಅದು ಅಪರಾಧ ಎನ್ನುತ್ತಾರೆ ತಜ್ಞರು.

Best Mobiles in India

English summary
The China government is reportedly forcing foreigners to download malware onto their phones when crossing into the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X