ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಹುಟ್ಟಿತು!!

|

ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಕುಡಿಯೊಡೆದಿರುವಂತಹ ವಿಶೇಷ ಸುದ್ದಿ ಇದೀಗ ವರದಿಯಾಗಿದೆ. ಇದೇ ತಿಂಗಳ ಆರಂಭದಲ್ಲಿ ಚಂದ್ರನ ಕತ್ತಲು ಭಾಗದಲ್ಲಿ ಲ್ಯಾಂಡ್ ಆಗಿದ್ದ ಚೀನಾದ ಮಹತ್ವಾಕಾಂಕ್ಷಿ ಚಾಂಗ್ ಇ-4 ನೌಕೆಯಲ್ಲಿ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಕುಡಿಯೊಡೆರುವುದನ್ನು ಅಲ್ಲಿನ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಗಾಳಿ, ನೀರು ಹಾಗೂ ಮಣ್ಣು ಇರುವ 7 ಇಂಚಿನ ಡಬ್ಬಿಯೊಂದನ್ನು ತಯಾರಿಸಿ ಅದರಲ್ಲಿ ಹತ್ತಿ, ಆಲೂಗಡ್ಡೆ ಹಾಗೂ ಇತರೆ ಬೀಜಗಳನ್ನು ನೆಡಲಾಗಿತ್ತು. ನೌಕೆಯು ಚಂದ್ರನತ್ತ ಪ್ರಯಾಣ ಬೆಳೆಸಿದಾಗ ಬೀಜದಲ್ಲಿ ಮೊಳಕೆ ಕಾಣಿಸಿ ಕೊಂಡಿತ್ತು. ಅದು ಚಂದ್ರನ ಅಂಗಳ ಪ್ರವೇಶಿಸಿದ ಬಳಿಕ ಮೊಳಕೆಯಲ್ಲಿ ಹಸಿರು ಎಲೆಗಳ ಚಿಗುರು ಕಂಡು ಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಹುಟ್ಟಿತು!!

ಚೀನಾ ವಿಜ್ಞಾನಿಗಳ ಚಾಂಗ್ ಇ-4 ನೌಕೆಯಲ್ಲಿ ಸಸ್ಯ ಬೆಳೆಯುವ ಸವಲತ್ತು ಕಲ್ಪಿಸಿ ನೌಕೆಯನ್ನು ಈ ವರ್ಷದ ಆರಂಭದಲ್ಲಿ ಉಡಾವಣೆ ಮಾಡಿದ್ದರು. ಆ ನಂತರ ನೌಕೆಯು ಚಂದ್ರನತ್ತ ಪ್ರಯಾಣ ಬೆಳೆಸಿದಾಗ ಬೀಜದಲ್ಲಿ ಮೊಳಕೆ ಕಾಣಿಸಿಕೊಂಡರೆ, ನಂತರ ಮೊಳಕೆಯಲ್ಲಿ ಹತ್ತಿ ಬೀಜದ ಹಸಿರು ಎಲೆಗಳ ಚಿಗುರು ಕಂಡುಬಂದಿರುವ ಚಿತ್ರಗಳನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ.

ಚೀನಾ ಇದೇ ಜನವರಿ 3ರಂದು ಚಂದ್ರನ ಕತ್ತಲು ಪ್ರದೇಶದ ಮೇಲೆ ಚಾಂಗ್ ನೌಕೆಯನ್ನು ಇಳಿಸಿತ್ತು. ಚೀನಾದ ಪುರಾಣಗಳಲ್ಲಿ ಚಂದ್ರನನ್ನು ದೇವರು ಎನ್ನಲಾಗಿದ್ದು, ಚಾಂಗ್ ಎಂಬ ಹೆಸರಿದೆ. ಹಾಗಾಗಿ ನೌಕೆಗೂ ಅದೇ ಹೆಸರಿಡಲಾಗಿದೆ. ಇದರಿಂದ ಭೂಮಿಗೆ ಕಾಣಿಸದ (ಚಂದ್ರನ ಮತ್ತೊಂದು ಭಾಗ) ಈ ಪ್ರದೇಶದಲ್ಲಿ ಮೊದಲ ಬಾರಿಗೆ ನೌಕೆ ಇಳಿಸಿದ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಹುಟ್ಟಿತು!!

infnu ಭೂಮಿಯಾಚೆಗೆ ಹಸಿರು ಕುಡಿಯ ಬಗ್ಗೆ, ಚಂದ್ರನ ಮೇಲ್ಮೈ ಮೇಲೆ ಮಾನವರು ಮಾಡಿದ ಮೊದಲ ಜೈವಿಕ ಬೆಳವಣಿಗೆ ಪ್ರಯೋಗ ಇದು ಎಂದು ಚಾಂಗ್ಕ್ವಿಂಗ್ ವಿಶ್ವವಿದ್ಯಾಲಯದ ಕ್ಸಿ ಜೆನ್‌ಕ್ಸಿಂಗ್ ಅವರು ಹೇಳಿದ್ದಾರೆ. ಆದರೆ, ಇತ್ತೀಚಿನ ಸುದ್ದಿಯೊಂದರ ಪ್ರಕಾರ ಚಂದ್ರನ ಅಂಗಳದಲ್ಲಿ ಮೊಳಕೆಯಾದ ಬೀಜ ಕಡಿಮೆ ತಾಪಮಾನದಿಂದ ಸತ್ತಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Seeds taken up to the Moon by China's Chang'e-4 mission have sprouted, says China National Space Administration. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X