ಐಫೋನ್ ಮರೆತುಬಿಡಿ, ಹುವಾವೆ ಟ್ರೈ ಮಾಡಿ: ಅಮೆರಿಕಾ ಕಾಲೆಳೆದ ಚೀನಾ!

|

ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರು ತಮ್ಮ ಐಫೋನ್ ಮೂಲಕ ಸ್ನೇಹಿತರೊಂದಿಗೆ ನಡೆಸಿರುವ ಮಾತುಕಥೆಯನ್ನು ಚೀನಾ ಹಾಗೂ ರಷ್ಯಾ ಗುಪ್ತಚರ ಸಿಬ್ಬಂದಿ ಕದ್ದಾಲಿಕೆ ಮಾಡಿದ್ದಾರೆ ಎಂಬ ದಿ ನ್ಯೂಯಾರ್ಕ್ ವರದಿಯನ್ನು ಚೀನಾ ಹಾಸ್ಯದ ಮೂಲಕ ಕಾಲೆಳೆದಿದೆ. ಅಮೆರಿಕಾ ಮತ್ತು ಚೀನಾದ ವ್ಯಾಪಾರ ಸಮರಕ್ಕೆ ಈಗ ಡೊನಾಲ್ಡ್ ಟ್ರಂಪ್ ಅವರ ಐಫೋನ್ ಕೂಡ ಕಾರಣವಾಗಿದೆ.

ಹೌದು, ಡೊನಾಲ್ಡ್ ಟ್ರಂಪ್ ಅವರ ಬಳಿ ಸರಕಾರದ ವತಿಯಿಂದ ನೀಡಲಾಗಿರುವ ಐಫೋನ್ ಮಾತ್ರ ಇದೆ ಎಂದು ಸ್ಪಷ್ಟನೆ ಇದ್ದು, ಟ್ರಂಪ್ ಅವರು ಅಸುರಕ್ಷಿತ ಮೊಬೈಲ್‌ ಫೋನ್‌ ಬಳಸುತ್ತಿರುವುದರಿಂದ ಚೀನಾ ಮತ್ತು ರಷ್ಯಾ ಅಧ್ಯಕ್ಷರ ಫೋನ್‌ ಕದ್ದಾಲಿಸುತ್ತಿವೆ ಎಂದು ಪತ್ರಿಕೆ ವರದಿ ಮಾಡಿತ್ತು. ಇದರಿಂದ ಗರಂ ಆಗಿರುವ ಚೀನಾ ಅಮೆರಿಕಾಕ್ಕೆ ಹಾಸ್ಯಚಟಾಕಿ ಹಾರಿಸಿದೆ.

ಐಫೋನ್ ಮರೆತುಬಿಡಿ, ಹುವಾವೆ ಟ್ರೈ ಮಾಡಿ: ಅಮೆರಿಕಾ ಕಾಲೆಳೆದ ಚೀನಾ!

ಟೈಮ್ಸ್ ವರದಿ ಶುದ್ದ ಸುಳ್ಳು ಸುದ್ದಿಯಾಗಿದ್ದು, ಸುಲ್ಳು ಸುದ್ದಿಗಳನ್ನು ಪ್ರಕಟಿಸುವಾಗ ಸಾಕ್ಷಿಗಳನ್ನು ಸೇರಿಸಲಿ. ಎರಡನೆಯದಾಗಿ ಅವರ ಐಫೋನಿನಿಂದ ಮಾತುಕತೆ ಕದ್ದಾಲಿಕೆಯಾಗುತ್ತದೆ ಎಂದು ಚೆಂತೆ ಕಾಡುತ್ತಿದ್ದರೆ, ಅವರು ಐಪೋನ್ ಬದಲು ಹುವಾವೆ ಪೋನ್‌ಗಳನ್ನು ಬಳಸಲು ಪ್ರಾರಂಭಿಸಲಿ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚಿನ್‌ಯಿಂಗ್ ಕುಟುಕಿದ್ದಾರೆ.

ಇಷ್ಟಕ್ಕೆ ನಿಲ್ಲಿಸದ ಹುವಾ ಚಿನ್‌ಯಿಂಗ್ ಅವರು, ಒಂದು ವೇಳೆ ಅವರಿಗೆ ಈಗಲೂ ನಂಬಿಕೆ ಬರದಿದ್ದರೆ ಸಂಪೂರ್ಣ ಭಧ್ರತೆಯ ಸಲುವಾಗಿ ಸಂವಹನಕ್ಕಾಗಿ ಅವಲಂಬಿಸಿರುವ ಆಧುನಿಕ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಲಿ. ಭದ್ರತೆಗಾಗಿ ಹೊರಜಗತ್ತಿನಿಂದ ದೂರ ಉಳಿಯಲಿ ಎಂದು ಹೇಳುವ ಮೂಲಕ ತಂತ್ರಜ್ಞಾನ ದೈತ್ಯ ದೇಶವನ್ನು ನಯವಾಗಿ ಕಾಲೆಳೆದಿದ್ದಾರೆ.

ಐಫೋನ್ ಮರೆತುಬಿಡಿ, ಹುವಾವೆ ಟ್ರೈ ಮಾಡಿ: ಅಮೆರಿಕಾ ಕಾಲೆಳೆದ ಚೀನಾ!

ಇನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ವರದಿಯನ್ನು ಶ್ವೇತ ಭವನ ಕೂಡ ತಿರಸ್ಕರಿಸಿದೆ. ಜತೆಗೆ ಅಧ್ಯಕ್ಷ ಟ್ರಂಪ್ ಕೂಡ ಟ್ವೀಟ್ ಮಾಡಿ ಅದೊಂದು ಸುಳ್ಳು ಸುದ್ದಿ ಎಂದು ಟೀಕಿಸಿದ್ದಾರೆ. ಸರ್ಕಾರದ ಪ್ರಮುಖ ಮಾಹಿತಿ ಸೋರಿಕೆಯಾಗಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಎಂಬುದನ್ನು ದಿ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.

ಓದಿರಿ: 'ನೋಕಿಯಾ 6.1 ಪ್ಲಸ್' ಖರೀದಿಸಲು ಎರಡು ಆಯ್ಕೆಗಳಿಲ್ಲ!..ಏಕೆ ಗೊತ್ತಾ?

Best Mobiles in India

English summary
China’s foreign ministry has some suggestions for the Trump administration if they are worried about foreign eavesdropping on the U.S. president’s iPhone: use a Huawei handset instead.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X