ಭಾರತ ಸರ್ಕಾರದ ನಿರ್ಧಾರದಿಂದ ಚೀನಾಗೆ ನೇರ ಹೊಡೆತ!..ಆತಂಕದಲ್ಲಿ ಚೀನಾ!
ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ 19 ಅನಗತ್ಯ ಸರಕುಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಿದ್ದು, ದೀರ್ಘಕಾಲಿಕವಾಗಿ ಇದು ಭಾರತೀಯ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜೊತೆಗೆ ಚೀನಾ ಹಾಗೂ ದಕ್ಷಿಣ ಕೊರಿಯಾ ಕಂಪೆನಿಗಳಿಗೆ ಹೊಡೆತ ನೀಡಲಿದೆ ಎಂದು ಚೀನಾದ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಚೀನಾದ ಸರಕುಗಳಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಭಾರತ ಸರ್ಕಾರದ ಹೊಸ ನಿಯಮ ನಮ್ಮ ದೇಶದ ಆರ್ಥಿಕತೆ ಮೇಲೆ ಭಾರಿ ಹೊಡೆತ ನೀಡಲಿದೆ ಎಂದು ಚೀನಾದ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಬೆಲೆ ಏರಿಕೆಯಾಗಿರುವ ಜೆಟ್ ಇಂಧನ, ಏರ್ ಕಂಡೀಷನರ್, ರೆಫ್ರಿಜರೇಟರ್, ವಾಷಿಂಗ್ ಮೆಷೀನ್, ಸ್ಪೀಕರ್ಗಳು, ರೇಡಿಯಲ್ ಕಾರ್ ಟೈರ್ಗಳ ಆಮದು ಚೀನಾದಿಂದಲೇ ಹೆಚ್ಚು ನಡೆಯುವ ಬಗ್ಗೆ ಅವರ ಆತಂಕ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿಯ ಮೌಲ್ಯ ಕುಸಿತವಾಗುತ್ತಿರುವುದು ಒಂದೆಡೆಯಾದರೆ, ಕಚ್ಚಾ ತೈಲದ ಬೆಲೆ ಸಹ ಏರು ಹಾದಿ ಹಿಡಿದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ಸರಕುಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಿತ್ತು. ವಿದೇಶದಿಂದ ಆಮದಾಗುವ ಸ್ಪೀಕರ್ಗಳು, ಏರ್ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ಆಮದು ಸುಂಕವನ್ನು ಏರಿಸಿ ಭಾರತ ಸರ್ಕಾರ ಆದೇಶ ಹೊರಡಿಸಿತ್ತು.
ವಿದೇಶದಿಂದ ಆಮದಾಗುವ 19 ಎಲೆಕ್ಟ್ರಾನಿಕ್ ಸಾಮಗ್ರಿಗಳ ವಸ್ತುಗಳ ಮೇಲೆ ಆಮದು ಸುಂಕ ದ್ವಿಗುಣಗೊಳಿಸಿದ್ದು, ಇದರಿಂದಾಗಿ ಈ ಎಲ್ಲ ವಸ್ತುಗಳ ದರ ಶೀಘ್ರವೇ ಏರಿಕೆಯಾಗಲಿದೆ. ಇನ್ನೊಂದು ವಾರದ ಒಳಗಾಗಿ ಹಳೆಯ ದರದಲ್ಲೇ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಬಹುದಾಗಿದ್ದು, ನಂತರ ಆಮದು ದರ ಸುಂಕ ಹೆಚ್ಚಳವಾಗುವುದರಿಂದ ಎಲ್ಲಾ ಎಲೆಕ್ಟ್ರಾನಿಕ್ ಸಂಸ್ಥೆಗಳು ಕೂಡ ಬೆಲೆ ಏರಿಕೆ ಮಾಡಲೇಬೇಕಾಗುತ್ತದೆ ಎನ್ನಲಾಗಿದೆ.

ಈ ದೀಪಾವಳಿ ಹಬ್ಬದ ವೇಳೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಖರೀದಿಸುವ ಅಭಿಲಾಷೆ ಹೊಂದಿದ್ದ ಗ್ರಾಹಕರು ಈಗಲೇ ಅವುಗಳನ್ನು ಖರೀದಿಸುವುದು ಉತ್ತಮ. ಇಲ್ಲವಾದರೆ, ಇನ್ನೊಂದು ವಾರದ ಒಳಗಾಗಿ ಏರ್ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ವಸ್ತುಗಳ ಬೆಲೆ ಶೇ. 10 ರಿಂದ 20 ಪರ್ಸೆಂಟ್ ವರೆಗೂ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.ಸರ್ಕಾರದ ಈ ನಿರ್ಧಾರ ಆನ್‌ಲೈನ್ ಮಾರುಕಟ್ಟೆಯ ಮೇಲೂ ಸಹ ತಟ್ಟಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಓದಿರಿ: 'ಮೊಬೈಲ್ ಬ್ಯಾಟರಿ' ಸುರಕ್ಷತೆ ಬಗ್ಗೆ ನೀವು ನಂಬಿರುವ ಹಸಿಬಿಸಿ ಸುಳ್ಳುಗಳಿವು!!


Click it and Unblock the Notifications