ಭಾರತದಲ್ಲಿ 'ಹುವಾವೇ' ಕಥೆಯೇನು?..ಭೀತಿಯಿಂದ ತತ್ತರಿಸಿದ ಚೀನಾದಿಂದ ಮನವಿ!!

|

ಚೀನಾದ ದೈತ್ಯ ಹುವಾವೇಗೆ ಅಮೆರಿಕ ನಿಷೇಧ ಹೇರಿದ ನಂತರ ಇದೀಗ ಚೀನಾ ಕಣ್ಣು ಭಾರತದ ಮೇಲೆ ಬಿದ್ದಿದೆ. ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಹುವಾವೇ ಮೇಲೆ ನಿಷೇಧ ಹೇರಿರುವುದರಿಂದ ಕಂಪೆನಿಗೆ ಹೊಡೆತ ಬಿದ್ದಿದ್ದು, ಇದೀಗ ಬಹುದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿರುವ ಭಾರತದಲ್ಲೂ ಸಹ ಸಮಸ್ಯೆಯನ್ನು ಎದರಿಸುವ ಭೀತಿಯಿಂದ ಚೀನಾ ತತ್ತರಿಸಿದೆ.

ಭಾರತದಲ್ಲಿ 'ಹುವಾವೇ' ಕಥೆಯೇನು?..ಭೀತಿಯಿಂದ ತತ್ತರಿಸಿದ ಚೀನಾದಿಂದ ಮನವಿ!!

ಹೌದು, ದೇಶದಲ್ಲಿ ಹುವಾವೇ ಕಾರ್ಯಾಚರಣೆಗಳ ಬಗ್ಗೆ 'ಸ್ವತಂತ್ರ ತೀರ್ಪು' ನೀಡುವಂತೆ ಚೀನಾವು ಭಾರತವನ್ನು ಒತ್ತಾಯಿಸಿದೆ. ದೇಶದಲ್ಲಿ ಚೀನಾದ ವ್ಯವಹಾರಗಳಿಗೆ ಪಕ್ಷಪಾತವಿಲ್ಲದ ಮತ್ತು ತಾರತಮ್ಯರಹಿತ ವಾತಾವರಣವನ್ನು ಒದಗಿಸಬೇಕೆಂದು ಕೇಳಿಕೊಂಡಿರುವ ಚೀನಾ, ಭಾರತದಲ್ಲಾದರೂ ಹುವಾವೇ ಗಟ್ಟಿಯಾಗಿ ನೆಲೆಯೂರುವಂತೆ ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ.

ಈ ವರೆಗೂ ಭಾರತ ಹುವಾವೇ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆದರೆ, ಮುಂಬರುವ 5 ಜಿ ಪ್ರಯೋಗಗಳಲ್ಲಿ ಭಾಗವಹಿಸಲು ಹುವಾವೇಗೆ ಭಾರತ ಅವಕಾಶ ನೀಡುತ್ತದೆಯೇ ಅಥವಾ ಹುವಾವೇ ಮೇಲೆ ನಿರ್ಬಂಧ ಹೇರಲು ಉದ್ದೇಶಿಸಿದೆಯೇ ಎಂಬುದು ಇನ್ನು ಗುಟ್ಟಾಗಿಯೇ ಉಳಿದಿದೆ. ಹಾಗಾಗಿ, ಚೀನಾ 'ಸ್ವತಂತ್ರ ತೀರ್ಪು' ನೀಡುವಂತೆ ಭಾರತವನ್ನು ಕೇಳಿಕೊಂಡಿದೆ.

ಭಾರತದಲ್ಲಿ 'ಹುವಾವೇ' ಕಥೆಯೇನು?..ಭೀತಿಯಿಂದ ತತ್ತರಿಸಿದ ಚೀನಾದಿಂದ ಮನವಿ!!

ಟೆಲಿಕಾಂ ಸಲಕರಣೆಗಳಲ್ಲಿ ವಿಶ್ವದ ಅಗ್ರಗಣ್ಯ ಮತ್ತು ಸ್ಮಾರ್ಟ್‌ಫೋನ್ ಉತ್ಪಾದಕತೆಯಲ್ಲಿ ಎರಡನೇ ಸ್ಥಾನದಲ್ಲಿರುವ ಹುವಾವೇಯನ್ನು ಅಮೆರಿಕಾದ ಭದ್ರತೆಯ ಕಳವಳದಿಂದ ನಿಷೇಧಿಸಿದೆ. ಇದಾದ ನಂತರ ಹಲವು ರಾಷ್ಟ್ರಗಳು ಹುವಾವೇಯಿಂದ ದೂರಾಗಿರುವುದನ್ನು ನೋಡಬಹುದು. ಹಾಗಾದರೆ, ಹುವಾವೇ ಮೇಲೆ ಏಕಿಷ್ಟು ಅಪನಂಬಿಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಈ ಕಥೆ ಶುರುವಾಗುವುದು ದಶಕದ ಹಿಂದೆ!

ಅಮೆರಿಕವು ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿ ಹುವಾವೆ ವಿರುದ್ಧ ಹಲವು ನಿರ್ಭಂಧಗಳನ್ನು ವಿಧಿಸಿರುವ ವಿಷಯ ಈಗ ಸುದ್ದಿಯಲ್ಲಿರಬಹುದು. ಆದರೆ, ಈ ವಿಷಯವು ಸುಮಾರು ಏಳು ವರ್ಷ ಹಿಂದಕ್ಕೆ ಹೋಗಿ ನಿಲ್ಲುತ್ತದೆ. 2012ರಲ್ಲಿ ಝೆಡ್‌ಟಿಇ ಕಂಪನಿಯ ಜೊತೆಗೆ ಅಮೆರಿಕ ಸಂಬಂಧ ಕಡಿದುಕೊಂಡಿದ್ದು ನಿಮಗೆ ತಿಳಿದಿರಬಹುದು. ಇಂತಹುದೇ ಪ್ರಕರಣ ಇದಾಗಿದೆ. ಹುವಾವೇಗೂ ಚೀನಾ ಕಮ್ಯುನಿಸ್ಟ್‌ ಪಾರ್ಟಿಗೂ ನೇರ ಸಂಪರ್ಕವಿದೆ ಎಂಬುದು ಅಮೆರಿಕದ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹುವಾವೇ ಚೀನಾ ಸರ್ಕಾರದ ಕಂಪೆನಿ?

ಹುವಾವೇ ಕೇವಲ ಮೊಬೈಲ್ ಕಂಪನಿಯಷ್ಟೇ ಅಲ್ಲ. ಇದು ವಿಶ್ವಾದ್ಯಂತ ಟೆಲಿಕಾಂ ಸಾಧನಗಳನ್ನು ಉತ್ಪಾದಿಸುವ ಅತಿದೊಡ್ಡ ಕಂಪನಿಯಾಗಿದೆ. ಇದರ ಜತೆಗೆ ಹುವಾವೆಗೂ ಚೀನಾದ ಕಮ್ಯುನಿಸ್ಟ್ ಪಾರ್ಟಿಗೂ ನೇರ ಸಂಪರ್ಕವಿದೆ ಎಂಬುದು ಅಮೆರಿಕದ ಆತಂಕ. ಅಂದರೆ, ಒಂದು ಮೂಲಗಳ ಪ್ರಕಾರ ಹುವಾವೇ ಕಂಪೆನಿಯನ್ನು ಚೀನಾ ಸರ್ಕಾರವೇ ನಡೆಸುತ್ತಿದೆ ಎಂಬ ಅನುಮಾನಗಳಿವೆ. ಚೀನಾದ ಸೇನೆಯಲ್ಲಿ ಹಲವು ವರ್ಷ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದ ರೆನ್‌ ಝೆಂಗ್ ಫೀ ಈ ಕಂಪನಿಯ ಸ್ಥಾಪಕ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಹುವಾವೇ ಸರ್ಕಾರದ ಕಂಪೆನಿ ಎನ್ನಲು ಸಾಕ್ಷಗಳು!

ಇಂದು ಚೀನಾ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. 1983ರಲ್ಲಿ ಚೀನಾ ಆರ್ಥಿಕತೆ ಚೇತರಿಸಿಕೊಳ್ಳುವಾಗ ಹುಟ್ಟಿದ ಈ ಕಂಪನಿಯನ್ನು ಕೆಲವೇ ವರ್ಷಗಳಲ್ಲಿ ಚೀನಾ ಸರ್ಕಾರ ತಂತ್ರಜ್ಞಾನ ಸಲಕರಣೆಯ ಏಕಸ್ವಾಮ್ಯದ ಕಂಪನಿ ಎಂಬಂತೆ ಬಿಂಬಿಸಿದ್ದನ್ನು ಅಮೆರಿಕಾ ಸೇರಿದಂತೆ ವಿಶ್ವವೇ ನೋಡಿದೆ. ಕಂಪನಿ ವರ್ಷದಿಂದ ವರ್ಷಕ್ಕೆ ಶೇ. 10 ರಷ್ಟು ದರದಲ್ಲಿ ಪ್ರಗತಿ ಸಾಧಿಸಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಇದಾದ ನಂತರ ಹುವಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಟ್ಟಾಗ ಜಾಗತಿಕ ತಂತ್ರಜ್ಞಾನ ಪ್ರಪಂಚ ಒಂದು ರೀತಿ ಭಯಪಟ್ಟಿದೆ.

ಸರ್ಕಾರದ ಕಂಪೆನಿಯಾದರೆ ಭಯವೇಕೆ?

ಅಮೆರಿಕಾವನ್ನು ಮೀರಿ ವಿಶ್ವದ ಬಲಿಷ್ಠ ರಾಷ್ಟ್ರವಾಗಬೇಕು ಎಂಬ ಆಸೆಯನ್ನು ಚೀನಾ ಹೊತ್ತಿದೆ. ಇದಕ್ಕೆ ಪ್ರಸ್ತುತ ಮುಖ್ಯವಾಗಿರುವುದು ವ್ಯಾಪಾರ ವಹಿವಾಟು ಮತ್ತು ತಂತ್ರಜ್ಞಾನ. ಈಗಾಗಲೇ ಅಮೆರಿಕಾ ತಂತ್ರಜ್ಞಾನದ ಸಹಾಯದಿಂದ ಬಲಿಷ್ಠವಾಗಿರುವುದರಿಂದ ಚೀನಾ ಇದರ ಮೇಲೆ ಕಣ್ಣಿಟ್ಟಿದೆ. ಮಾಹಿತಿ ಯುಗ ಇದಾಗಿರುವುದರಿಂದ ತಾನು ತಂತ್ರಜ್ಞಾನದಲ್ಲಿ ಮುಂದುವರೆಯಬೇಕು ಎಂದು ಕುತಂತ್ರ ಮಾಡುತ್ತಿದೆ ಎಂದು ಅಮೆರಿಕಾ ಅಂದುಕೊಳ್ಳುತ್ತಿದೆ. ಇತ್ತೀಚಿಗೆ ಹುವಾವೇ ಮೇಲೆ ಬಂದ ಒಂದು ಕಪ್ಪುಚುಕ್ಕಿ ಕೂಡ ಇದಕ್ಕೆ ಕಾರಣ ಎಂದು ಹೇಳಬಹುದು.

ಹುವಾವೇ ವಿಶ್ವಾಸಾರ್ಹತೆಯ ಮೇಲೆ ಅನುಮಾನ!

ಇತ್ತೀಚಿಗೆ ಚೀನಾ ಮತ್ತು ಆಫ್ರಿಕಾ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಾಗಿ ವ್ಯಾಪಾರ ವಹಿವಾಟು ಹೆಚ್ಚಾದ ನಂತರ ಹುವಾವೇ ಇಥಿಯೋಪಿಯಾದಲ್ಲಿ ಒಂದು ಕಚೇರಿ ತೆರೆದಿತ್ತು. 2018ರಲ್ಲಿ ಲೆ ಮೊಂಡೆ ಎಂಬ ಪತ್ರಿಕೆಯು ಈ ಕೇಂದ್ರದಲ್ಲಿನ ಎಲ್ಲ ಮಾಹಿತಿಯೂ ಶಾಂಘೈಗೆ ರವಾನೆ ಆಗುತ್ತಿವೆ. ಇದರ ಸರ್ವರ್‌ಗಳು ಶಾಂಘೈಗೆ ಡೇಟಾ ರವಾನಿಸುತ್ತಿದೆ ಎಂದು ಹೇಳಿತ್ತು. ಇದಕ್ಕೆ ತಂತ್ರಜ್ಞಾನ ಒದಗಿಸಿದ್ದೇ ಹುವಾವೇ ಕಂಪನಿ ಎಂಬ ವರದಿ ಭಾರಿ ಆಘಾತ ಸೃಷ್ಟಿಸಿತ್ತು. ಇದರಿಂದ ಅಮೆರಿಕಾ ಮಾತ್ರವಲ್ಲ ವಿಶ್ವದ ದೃಷ್ಟಿಯಲ್ಲೂ ಕುಡ ಹುವಾವೇ ಕಳನಾಯಕನಾಗಿತ್ತು.

ವಿಶ್ವದ ಮೇಲೆ ಚೀನಾ ಸ್ಪೈ ಮಾಡುತ್ತಿದೆಯಾ?

ಕಳೆದ ಒಂದು ದಶಕದಲ್ಲಿ ಚೀನಾವು ತಂತ್ರಜ್ಞಾನಗಳನ್ನು ಕದ್ದೊಯ್ಯುವ ಒಂದು ಭಾರಿ ಜಾಲವನ್ನೇ ಚೀನಾ ಸೃಷ್ಟಿಸಿದೆ. ಈಗ ನಾವು ಕೈಯಲ್ಲಿ ಹಿಡಿದುಕೊಂಡಿರುವ ಎಲ್ಲ ಚೀನಾ ಮೂಲದ ಮೊಬೈಲ್‌ಗ‌ಳಲ್ಲೂ ಈ ಕಳ್ಳ ದಾರಿಯಿಂದ ಸಿಕ್ಕ ತಂತ್ರಜ್ಞಾನಗಳೇ. ಇದೇ ತಂತ್ರಜ್ಞಾನದ ಸಹಾಯದಿಂದ ವಿಶ್ವದ ಬಹುತೇಕ ಡೇಟಾ ಕದ್ದು ಚೀನಾ ಅದನ್ನು ಕದ್ದು ನೋಡುತ್ತಿದೆ ಎನ್ನಲಾಗಿದೆ. ದೇಶದಲ್ಲಿ ತಂತ್ರಜ್ಞಾನ ಕಂಪೆನಿಗಳಿಗೆ ಸಹಾಯ ಮಾಡುವ ಮೂಲಕ ಭವಿಷ್ಯದಲ್ಲಿ ತಾನು ನಂ.1 ಆಗಲು ಏನೆಲ್ಲಾ ಬೇಕೋ ಅದನ್ನೇ ಮಾಡಿಕೊಳ್ಳುತ್ತಿದೆ ಎನ್ನುತ್ತವೆ ಹಲವು ವರದಿಗಳು.

ಭಾರತೀಯರು ಎಚ್ಚರವಾಗಿರಬೇಕು!

ಜಗತ್ತಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾ ಮೊಬೈಲ್ ಕಂಪೆನಿಗಳ ಬಗ್ಗೆ ಭಾರತ ಕೂಡ ಎಚ್ಚರವಹಿಸಬೇಕಾಗಿದೆ. ಭಾರತೀಯರ ಕೋಟ್ಯಂತರ ಗ್ರಾಹಕರ ಡೇಟಾ ಚೀನಾ ಮೊಬೈಲ್ ಕಂಪೆನಿಗಳ ಕೈಯಲ್ಲಿ ಈಗಾಗಲೇ ಸೇರಿಕೊಂಡಿದೆ. ಚೀನಾ ಸರ್ಕಾರದ ಆ ಡೇಟಾವನ್ನು ಕೇಳಿದರೆ ಆ ಕಂಪೆನಿಗಳು ಅದನ್ನು ಕೊಡದೇ ಇರಲು ಸಾಧ್ಯವಿಲ್ಲ. ಅಂದರೆ, ಚೀನಾ ಮೊಬೈಲ್ ಬಳಸುವ ಪ್ರತಿ ಭಾರತೀಯ ಮತ್ತು ಆತನ ವರ್ತನೆಗಳ ಬಗ್ಗೆ ಚೀನಾ ಸರ್ಕಾರಕ್ಕೆ ಮಾಹಿತಿ ಇರುತ್ತದೆ ಎಂದರ್ಥ.

Most Read Articles
Best Mobiles in India

English summary
Earlier this month, India's Telecom Minister Ravi Shankar Prasad had said India has its security issues over allowing Huawei to participate in the upcoming 5G trials.to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more