5ಜಿ ಅಭಿವೃದ್ಧಿ ಕಾರ್ಯದಿಂದ 'ಹುವಾವೆ' ಹೊರಕ್ಕೆ!..ಬ್ರಿಟನ್ ನಡೆಗೆ ಚೀನಾ ಕಂಗಾಲು!
5ಜಿ ನೆಟ್‌ವರ್ಕ್ ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿರುವ ಚೀನಾ ಕಂಪೆನಿಗಳ ವಿರುದ್ಧ ತಾರತಮ್ಯ ತರವಲ್ಲ ಎಂದು ಚೀನಾವು ಬ್ರಿಟನ್‌ಗೆ ಒತ್ತಾಯಿಸಿದೆ. ಮುಖ್ಯವಾಗಿ 5G ನೆಟ್‌ವರ್ಕ್ ಮತ್ತು ಟೆಲಿಕಾಂ ಉಪಕರಣಗಳನ್ನು ತಯಾರಿಸುವಲ್ಲಿ ಮುಂದಿರುವ ತಂತ್ರಜ್ಞಾನ ಸಂಸ್ಥೆ ಹುವಾವೆ ಕುರಿತು ಯಾವುದೇ ತಾರತಮ್ಯ ಅನುಸರಿಸಬೇಡಿ ಎಂದು ಬ್ರಿಟನ್‌ಗೆ ಒತ್ತಾಯ ಮಾಡಿದೆ ಎನ್ನಲಾಗಿದೆ.
ಹೌದು, ಚೀನಿಯರ ಬೇಹುಗಾರಿಕೆ ಇರುವ 'ಹುವಾವೆ' ಕಂಪನಿ ತಂತ್ರಜ್ಞಾನವನ್ನು ಬಳಸಬಾರದು ಎಂದು ಅಮೆರಿಕ ಸಂಯುಕ್ತ ಸಂಸ್ಥಾನ ತನ್ನ ಮಿತ್ರರಾಷ್ಟ್ರಗಳಿಗೆ ತಿಳಿಸಿತ್ತು. ನಂತರ ಹುವಾವೆ ಕಂಪೆನಿ ತೀವ್ರ ಪರಿಶೀಲನೆಗೆ ಒಳಪಟ್ಟಿತ್ತು. ಅದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ಹುವಾವೆಯನ್ನು 5G ನೆಟ್‌ವರ್ಕ್ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಲು ಹಿಂಜರಿದಿದೆ ಎನ್ನಲಾಗಿದೆ.

ಇದಕ್ಕೆ ಸಿಟ್ಟಾಗಿರುವ ಚೀನಾ, ಬ್ರಿಟನ್ ರಾಷ್ಟ್ರೀಯ ಭದ್ರತಾ ಮಂಡಳಿಯು (ಎನ್ಎಸ್ಸಿ) ದೇಶದ 5ಜಿ ಜಾಲದ ಎಲ್ಲಾ ಪ್ರಮುಖ ಭಾಗಗಳಿಂದ ಹುವಾವೆ ಕಂಪೆನಿಯನ್ನು ನಿಷೇಧಿಸಲು ನಿರ್ಧರಿಸಿದೆ. ಆದರೆ, ಬ್ರಿಟನ್ ದೇಶವು ಹುವಾವೆ ಕುರಿತು ಪೂವಾಗ್ರಹ ಹೊಂದಬಾರದು. ತನ್ನ ನೆಟ್‌ವರ್ಕ್ ಮತ್ತು ಸಂಬಂಧಿತ ಕಾರ್ಯದಲ್ಲೂ ಹುವಾವೆಯನ್ನು ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಭದ್ರತೆ ಮತ್ತು ಗೌಪ್ಯತೆಯ ನೆಪದಲ್ಲಿ ಬ್ರಿಟನ್ ಹುವಾವೆಗೆ ಮಣೆಹಾಕುತ್ತಿಲ್ಲ. ಆದರೆ, ಹುವಾವೆ ಕಂಪೆನಿಯು ಭದ್ರತೆಯ ಉತ್ತಮ ದಾಖಲೆಯನ್ನು ಹೊಂದಿದೆ.ಹಾಗಾಗಿ, ಬ್ರಿಟನ್ ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಚೀನಾದ ರಾಯಭಾರಿ ಲಿಯು ಕ್ಸಿಯಾಮಿಂಗ್ ಅವರು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಹುವಾವೆ ಟೆಕ್ನಾಲಜೀಸ್ ಕಂಪೆನಿ ಕುರಿತು ಅಮೆರಿಕ ಈಗಾಗಲೇ ಕೆಲವೊಂದು ನಿರ್ಬಂಧ ಹೇರಿದ್ದು, ಹುವಾವೆ ಕಂಪೆನಿಯು ಚೀನಾಗೆ ಗ್ರಾಹಕರ ಮಾಹಿತಿಯನ್ನು ಮಾಹಿತಿಯನ್ನು ಕದ್ದು ರವಾನಿಸುತ್ತವೆ ಎಂದು ಹೇಳಿಕೊಂಡಿತ್ತು. ಆದರೆ, ಹುವಾವೆ ಕಂಪೆನಿಯು ತನ್ನ ತಂತ್ರಜ್ಞಾನವು ಚೀನಿ ಬೇಹುಗಾರಿಕೆಗೆ ಬಳಕೆಯಾಗುತ್ತಿದೆ ಎಂಬುದನ್ನು ಅಲ್ಲಗಳೆದಿರುವುದನ್ನು ನೋಡಬಹುದು.
ಓದಿರಿ: ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!..ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!!


Click it and Unblock the Notifications