ಚೀನಾ ಕಂಪೆನಿಗಳ ಮೊಬೈಲ್ ಖರೀದಿಸುವ ಮೊದಲು ಈ ಶಾಕಿಂಗ್ ಸ್ಟೋರಿ ನೋಡಿ!!

|

ಭಾರತದ ವಿರೋಧಿ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಚೀನಾ ಮತ್ತೆ ತನ್ನ ಕಳ್ಳಬುದ್ದಿಯನ್ನು ತೋರಿಸಿದೆ. ತನ್ನ ದೇಶದಲ್ಲಿ ತಯಾರಿಸಿದ ಕಂಪ್ಯೂಟರುಗಳು ಮತ್ತು ಸರ್ವರುಗಳನ್ನು ಬಳಸಿ ಅಮೆರಿಕದ ತನಿಖಾ ಸಂಸ್ಥೆ FBI ಹಾಗೂ ಆಪಲ್‌ ಹಾಗೂ ಅಮೆಜಾನ್‌ ಕಂಪನಿಗಳು ಸೇರಿ ಒಟ್ಟು 28 ಕಂಪನಿಗಳ ಮೇಲೆ ಗೂಢಚಾರಿಕೆ ನಡೆಸಿದೆ ಆಘಾತಾಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಸೂಪರ್‌ ಮೈಕ್ರೋ ಎಂಬ ಕಂಪನಿಯಲ್ಲಿ ತಯಾರಾದ ಮದರ್‌ ಬೋರ್ಡ್‌ಗಳಲ್ಲಿ ಭತ್ತದಷ್ಟು ಚಿಕ್ಕ ಗಾತ್ರದ ಮೈಕ್ರೋಚಿಪ್ ಅಳವಡಿಸಿ ಚೀನಾ ಗೂಢಚಾರಿಕೆ ನಡೆಸಿದೆ ಎಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಚೀನಾದಲ್ಲಿ ತಯಾರಾದ ಸರ್ವರ್‌ಗಳು ಹಾಗೂ ಕಂಪ್ಯೂಟರ್‌ಗಳನ್ನು ಸಂಪರ್ಕಿಸಲು ಚೀನಾದ ಹ್ಯಾಕರ್‌ಗಳಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಚೀನಾ ಕಂಪೆನಿಗಳ ಮೊಬೈಲ್ ಖರೀದಿಸುವ ಮೊದಲು ಈ ಶಾಕಿಂಗ್ ಸ್ಟೋರಿ ನೋಡಿ!!

ಈ ಚಿಪ್‌ 2015ರಲ್ಲೇ ಕಂಡುಬಂದಿದ್ದು, ಕಾರ್ಪೊರೇಟ್ ಗೌಪ್ಯಗಳು ಮತ್ತು ಸೂಕ್ಷ್ಮವಾದ ಸರ್ಕಾರಿ ಮಾಹಿತಿಗಳನ್ನು ಈ ಚಿಪ್‌ ಬಳಸಿ ಚೀನಾ ಕದ್ದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಸುದ್ದಿ ಈಗ ಭಾರತಕ್ಕೂ ಭೀತಿಯನ್ನು ಉಂಟುಮಾಡಿದ್ದು, ದೇಶದಲ್ಲಿ ಚೀನಾದ ಮೊಬೈಲ್‌ ಹಾಗೂ ಕಂಪ್ಯೂಟರ್‌ಗಳು ಮಾರಾಟವಾಗುತ್ತಿರುವುದು ಸರ್ಕಾರಕ್ಕೂ ತಲೆನೋವಾಗಿದೆ ಎನ್ನಲಾಗಿದೆ.

ಇನ್ನು ಇತ್ತೀಚಿಗಷ್ಟೇ ಭಾರತದಲ್ಲಿ ಹೆಚ್ಚು ಸೈಬರ್ ವಂಚನೆಗಳನ್ನು ನಡೆಸುತ್ತಿರುವ ದೇಶ ಚೀನಾ ಎಂಬುದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿರುವ ನೂತನ ವರದಿಯೊಂದು ಬಹಿರಂಗವಾಗಿದೆ. ಹಾಗಾಗಿ, ನೀವು ಚೀನಾ ಕಂಪೆನಿಯ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸುವ ಮುನ್ನ ತಿಳಿಯಲೇಬೇಕಾದ ಶಾಕಿಂಗ್ ವಿಷಯಗಳು ಈ ಕೆಳಗಿನಂತಿವೆ.

ಖರೀದಿಸಲು ಸಹ ಭಯವಾಗುತ್ತದೆ.

ಖರೀದಿಸಲು ಸಹ ಭಯವಾಗುತ್ತದೆ.

ಕೇಂದ್ರ ಸರ್ಕಾರವು ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳಿಗೆ ನೋಟಿಸ್ ಸಹ ಜಾರಿ ಮಾಡಿದ್ದನ್ನು ನೆನಪಿಸಿಕೊಂಡರೆ ಚೀನಾ ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್‌ಗಳನ್ನು ಖರೀದಿಸಲು ಸಹ ಭಯವಾಗುತ್ತದೆ. ಚೀನಾ ಸ್ಮಾರ್ಟ್‌ಪೋನ್‌ಗಳು ಕೂಡ ನಮ್ಮ ವೈಯಕ್ತಿ ಮಾಹಿತಿ ಕದಿಯುತ್ತಿವೆಯೇ ಎಂಬ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.

ಹ್ಯಾಕ್ ಮಾಡುತ್ತಿವೆಯಾ ಚೀನಾ ಕಂಪನಿಗಳು?

ಹ್ಯಾಕ್ ಮಾಡುತ್ತಿವೆಯಾ ಚೀನಾ ಕಂಪನಿಗಳು?

ಬಹುತೇಕ ಮೊಬೈಲ್ ತಯಾರಿಕಾ ಕಂಪನಿಗಳು, ಬಳಕೆದಾರರ ಕರೆಯ ಪಟ್ಟಿ, ಸಂದೇಶ ಹಾಗೂ ಮತ್ತಿತರ ವೈಯುಕ್ತಿಕ ಮಾಹಿತಿಗಳನ್ನು ಕಳುವು ಮಾಡಿವೆ ಎಂಬ ಸಂಶಯ ವ್ಯಕ್ತಪಡಿಸಲಾಗಿತ್ತು. ಹಾಗಾಗಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಇತ್ತೀಚಿಗಷ್ಟೇ 21 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಅಮೆಜಾನ್‌ನಿಂದ ಪಾಠ

ಅಮೆಜಾನ್‌ನಿಂದ ಪಾಠ

ಚೀನಾ ಮೂಲಕ ಬ್ಲೂ ಕಂಪನಿ ಬಳಕೆದಾರರ ಮಾತಿಹಿಯನ್ನು ಕದಿಯುತ್ತಿದೆ ಎನ್ನುವ ಕಾರಣಕ್ಕೆ ಈ ಹಿಂದೆ ಅಮೆಜಾನ್ ಆ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಬಂದ್ ಮಾಡಿದನ್ನು ನೀವು ನೆನಪಿಸಿಕೊಳ್ಳಬಹುದು. ಇದರಿಂದದಾಗಿಯೇ ಕೇಂದ್ರ ಸರಕಾರವು ಎಚ್ಚೆತ್ತು ಕೊಂಡು ಚೀನಾದ ಮೊಬೈಲ್ ಕಂಪೆನಿಗಳಿಗೆ ನೋಟಿಸ್ ನೀಡಿದೆ ಎಂದು ಹೇಳಲಾಗಿತ್ತು.

ಮೊಬೈಲ್ ಬಳಕೆದಾರ ಮೇಲೆ ಕಣ್ಣು!

ಮೊಬೈಲ್ ಬಳಕೆದಾರ ಮೇಲೆ ಕಣ್ಣು!

ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ‘ಫಿಶಿಂಗ್' ಮತ್ತು ಕುತಂತ್ರಾಂಶ ದಾಳಿಯನ್ನು ಹ್ಯಾಕರ್‌ಗಳು ಈಗ ಕಂಪ್ಯೂಟರ್‌ಗಿಂತ ಮೊಬೈಲ್‌ನತ್ತ ಹೆಚ್ಚು ಕಣ್ಣಿಟ್ಟಿದ್ದಾರೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ. ಮೊದಲೇ ಭಯ ಹುಟ್ಟಿಸಿರುವ ಚೀನಾ ಕಂಪೆನಿಯ ಮೊಬೈಲ್‌ಗಳ ಮೇಲೆ ಇದು ಮತ್ತಷ್ಟು ಅನುಮಾನವನ್ನು ಮೂಡಿಸಲು ಕಾರಣವಾಗಿದೆ.

ಪರಿಶೀಲನೆ ಆರಂಭ?

ಪರಿಶೀಲನೆ ಆರಂಭ?

ಮೊಬೈಲ್ ಕಂಪೆನಿಗಳಿಗೆ ನೊಟಿಸ್ ನಿಡಿದ್ದ ಭಾರತ ಸರ್ಕಾರ ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಸರ್ಕಾರ ಚೀನಾದಿಂದ ಆಮದಾಗುವ ಮೊಬೈಲ್ ಫೋನ್‌ಗಳ ಮೇಲೆ ನಿಗಾ ವಹಿಸಲಿದೆ ಎಂದು ಹೇಳಲಾಗಿದೆ. ಆದರೆ, ಇದು ಎಷ್ಟು ಸತ್ಯ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕು.

ನೀವು ಎಚ್ಚರವಾಗಿರಿ.

ನೀವು ಎಚ್ಚರವಾಗಿರಿ.

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಗಳು ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಿಂದ ನಿಮ್ಮ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ನೀವು ವೈಯಕ್ತಿಕ ಮಾಹಿತಿಗಳನ್ನು ಹೆಚ್ಚಾಗಿ ಸ್ಮಾರ್ಟ್‌ಫೋನಿನಲ್ಲಿ ಇಡದಿರುವುದು ಉತ್ತಮ. ಏಕೆಂದರೆ, ಇಂಟರ್‌ನೆಟ್‌ನಲ್ಲಿ ಎಲ್ಲವೂ ಸೇಫ್ ಅಲ್ಲ.!

Best Mobiles in India

English summary
The attack by Chinese spies reached almost 30 U.S. companies, including Amazon and Apple, by compromising America’s technology supply chain, according to extensive interviews with government and corporate sources.to kn ow more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X