Just In
Don't Miss
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದ ಮೊಬೈಲ್ ಮಾರುಕಟ್ಟೆ ರಿಪೋರ್ಟ್!..ಯಾವ ಕಂಪೆನಿ ಪಾಲು ಎಷ್ಟೆಷ್ಟು?!
ಪ್ರತಿ ಹತ್ತು ಭಾರತೀಯರಲ್ಲಿ ಏಳು ಜನರು ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿರುವ ಸಾಧ್ಯತೆಗಳನ್ನು ಇತ್ತೀಚಿನ ರಿಪೋರ್ಟ್ ಒಂದು ತೆರೆದಿಟ್ಟಿದೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಮೊಬೈಲ್ ಕಂಪೆನಿಗಳ ಪಾಲು ಮತ್ತಷ್ಟು ಹೆಚ್ಚಾಗಿದ್ದು, ದೇಶದ ಮೊಬೈಲ್ ಮಾರುಕಟ್ಟೆಯ ಶೇ.65 ರಷ್ಟು ಚೀನಾ ಉತ್ಪಾದಕ ಕಂಪೆನಿಗಳು ಪಡೆದಿದೆ.
ಹೌದು, ಪ್ರತಿ ವರ್ಷ ಚೀನಾ ಕಂಪೆನಿಗಳ ಸ್ಮಾರ್ಟ್ಫೋನ್ಗಳು ಭಾರತದ ಮಾರುಕಟ್ಟೆಯಲ್ಲಿ ಶೇ.20 ರಷ್ಟು ಅಧಿಕವಾಗುತ್ತಿದ್ದು, ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಚೀನಾ ಕಂಪೆನಿಗಳು ಶೇ.65 ರಷ್ಟು ಮೊಬೈಲ್ ಮಾರುಕಟ್ಟೆಯನ್ನು ವಶಪಡಿಸಿಕೊಂಡಿವೆ. ಈ ಮೂಲಕ ಚೀನೀ ಬ್ರಾಂಡ್‌ಗಳು ಅಧಿಪತ್ಯ ಸಾಧಿಸಿವೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಹೇಳಿದೆ.

ಕಳೆದ ವರ್ಷದಂತೆಯೇ ಈ ವರ್ಷ ಕೂಡ ಅಗ್ರ ಐದು ಅತ್ಯುತ್ತಮ ಸ್ಮಾರ್ಟ್‌ಫೋನ್ ಮಾರಾಟ ಕಂಪೆನಿಗಳಲ್ಲಿ ಚೀನಾದ ನಾಲ್ಕು ಕಂಪೆನಿಗಳು ಸ್ಥಾನ ಪಡೆದಿವೆ. ಈ ಬಾರಿಯೂ ಶಿಯೋಮಿಯೇ ಅಗ್ರ ಸ್ಥಾನ ಪಡೆದುಕೊಂಡಿರುವುದನ್ನು ನಾವು ನೋಡಬಹುದಾಗಿದೆ. ಹಾಗಾದರೆ, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಯಾವ ಕಂಪೆನಿ ಪಾಲು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಈಗಲೂ ನಂಬರ್ 1 ಶಿಯೋಮಿ
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀವ್ರತರವಾದ ಪೈಪೋಟಿ ತಂದ ಶಿಯೋಮಿ ಈ ವರ್ಷವೂ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. 2018 ರಕೊನೆ ತ್ರೈಮಾಸಿಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದ ಶಿಯೋಮಿ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 31 ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಕಳೆದ ವರ್ಷ ಇದೇ ಅವದಿಯಲ್ಲಿ ಶೇ.29 ರಷ್ಟಿತ್ತು.

ಸ್ಯಾಮ್‌ಸಂಗ್ ಗಳಿಕೆ ಏರಿಕೆ!
2018ರ ಕೊನೆ ತ್ರೈಮಾಸಿಕದಲ್ಲಿ ಮೊದಲ ಸ್ಥಾನಕ್ಕೆ ಏರಿದ್ದ ಸ್ಯಾಮ್‌ಸಂಗ್ ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಜಾರಿದೆ. ಆದರೆ, ಕಳೆದ ವರ್ಷ ಮೊದಲ ತ್ರೈ ಮಾಸಿಕಕ್ಕೆ (ಶೇ.23) ಹೋಲಿಸಿದರೆ ಸ್ಯಾಮ್‌ಸಂಗ್ ಈ ಬಾರಿಗೆ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿಕೊಂಡಿದೆ. ಈ ಬಾರಿ ಸ್ಯಾಮ್‌ಸಂಗ್ ಶೇ.26 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ವಿವೊಗೆ ಮೂರನೇ ಸ್ಥಾನ!
ಕಳೆದ ವರ್ಷ ಶೀಯೋಮಿ ಅಲೆಗೆ ಕೊಚ್ಚಿಕೊಂಡು ಹೋಗಿದ್ದ ವಿವೊ ಕಂಪೆನಿ ಈ ಬಾರಿ ಉಸಿರಾಡಿಸಂತೆ ಕಂಡುಬಂದಿದೆ. 2019ರ ಮೊದಲ ತ್ರೈ ಮಾಸಿಕದಲ್ಲಿ ವಿವೊ ಕಂಪೆನಿ ಶೇ. 12 ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡು ನಿಟ್ಟುಸಿರು ಬಿಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ ಶೇ.6 ರಷ್ಟು ಮಾತ್ರ ಮಾರುಕಟ್ಟೆಯನ್ನು ವಿವೊ ಕಂಪೆನಿ ಹೊಂದಿದ್ದನ್ನು ನೋಡಬಹುದು.

ಆಶ್ಚರ್ಯ ಮೂಡಿಸಿದ ರಿಯಲ್‌ಮಿ!
ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ಲಾಂಚ್ ಆದ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ರಿಯಲ್‌ಮಿ ಮಾರುಕಟ್ಟೆಯಲ್ಲಿ ಆಶ್ಚರ್ಯ ಮೂಡಿಸಿದೆ. ಒಂದು ಬ್ರ್ಯಾಂಡ್ ಹೆಸರಾಗಲು ಕೆಲ ವರ್ಷಗಳೇ ಬೇಕು. ಆದರೆ, ಒಂದೇ ವರ್ಷದಲ್ಲಿ ರಿಯಲ್‌ಮಿ ಬ್ರ್ಯಾಂಡ್ ನಾಲ್ಕನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಪಟ್ಟಿಯಲ್ಲೇ ಇರದ ರಿಯಲ್‌ಮಿ ಕಂಪೆನಿಯ ಈ ವರ್ಷದ ಮಾರುಕಟ್ಟೆ ಪಾಲು ಶೇ.7 ರಷ್ಟಿದೆ.

ಐದನೇ ಸ್ಥಾನ ಒಪ್ಪೊಗೆ!
ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ ಟಾಪ್ 5 ಪಟ್ಟಿಯಲ್ಲಿ ಒಪ್ಪೊ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಮೊದಲ ತ್ರೈ ಮಾಸಿಕದಲ್ಲಿ ಶೇ. 6 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದ ಒಪ್ಪೊ ಈ ಬಾರಿ ಒಂದು ಪರ್ಸೆಂಟ್‌ನಷ್ಟು ಏರಿಕೆ ಕಂಡು ಶೇ.7 ರಷ್ಟು ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಆದರೆ, ರಿಯಲ್‌ಮಿಗಿಂತ ಹಿಂದುಳಿದಿರುವುದ ಆಶ್ಚರ್ಯವಾಗಿದೆ.

ಭಾರತೀಯ ಬ್ರ್ಯಾಂಡ್ ಕಣ್ಮರೆ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ನಡೆಯುತ್ತಿರುವ ಕಾರಣ ಭಾರತೀಯ ಬ್ರ್ಯಾಂಡ್‌ಗಳು ತಮ್ಮ ಅತ್ಯಂತ ಕಡಿಮೆ ಪಾಲನ್ನು ತಲುಪಿವೆ. ಕಳೆದ ತ್ರೈ ಮಾಸಿಕದಲ್ಲಿ 5ನೇ ಸ್ಥಾನ ಪಡೆದು ಆಶ್ಚರ್ಯ ಮೂಡಿಸಿದ್ದ ಮೈಕ್ರೋಮ್ಯಾಕ್ಸ್ ಈ ಬಾರಿ ಟಾಪ್ 5 ನಿಂದ ಕಣ್ಮರೆಯಾಗಿದೆ. ಆದರೆ, ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಜಿಯೋ ಈ ವರ್ಷವೂ (ಶೇ.36 ರಷ್ಟು) ಅಬ್ಬರಿಸಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470