Home
ಸುದ್ದಿಜಾಲ

ವಿಶ್ವದಾದ್ಯಂತ ಉಚಿತ ಇಂಟರ್‌ನೆಟ್!..ಚೀನಾ ಕಂಪೆನಿಯ ಹೊಸ ಸಾಹಸ!!

ಯಾವಾಗಲೂ ಅನಿಯಮಿತ ಹೈ ಸ್ಪೀಡ್ ಉಚಿತ ಇಂಟರ್‌ನೆಟ್ ಸಿಕ್ಕರೆ ಹೇಗಿರುತ್ತದೆ?.. ಹೌದು, ಇಂತಹದೊಂದು ದೊಡ್ಡ ಕಲ್ಪನೆಯು ನನಸಾಗುವ ಕಾಲ ಸನಿಹದಲ್ಲಿದೆ. ವಿಶ್ವದಾದ್ಯಂತ ಉಚಿತ ಇಂಟರ್​ನೆಟ್​ ಸೇವೆಯನ್ನು ಒದಗಿಸಲು ಈಗ ಚೀನಾ ಮೂಲದ ಕಂಪೆನಿಯೊಂದು ಸಜ್ಜಾಗಿದೆ. ಪ್ರಪಂಚದಾದ್ಯಂತ ಉಚಿತ ವೈ ಫೈ ನೀಡುವುದಾಗಿ ಆ ಕಂಪೆನಿ ಘೋಷಿಸಿಕೊಂಡಿದೆ.

ಹೌದು, ಈಗಾಗಲೇ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕವನ್ನು ಒದಗಿಸುವ ಕ್ಲಪನೆಯನ್ನು ಹೊಂದಿರುವ ಸ್ಪೇಸ್ ಎಕ್ಸ್, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಕಂಪೆನಿಗಳ ಸಾಲಿಗೆ ಈಗ ಚೀನಾದ ಅಂತರ್ಜಾಲ ತಂತ್ರಜ್ಞಾನ ಕಂಪನಿಯೊಂದು ಸೇರಿಕೊಂಡಿದೆ. ಶಾಂಘೈ ಮೂಲದ 'ಲಿಂಕ್‌ಶೂರ್ ನೆಟ್ವರ್ಕ್' ಎಂಬ ಕಂಪೆನಿ ಇಂತಹದೊಂದು ಬೃಹತ್ ಯೋಜನೆಗೆ ಕೈಹಾಕಿದೆ.

ವಿಶ್ವದಾದ್ಯಂತ ಉಚಿತ ಇಂಟರ್‌ನೆಟ್!..ಚೀನಾ ಕಂಪೆನಿಯ ಹೊಸ ಸಾಹಸ!!

2026ರ ವೇಳೆಗೆ ಲಿಂಕ್​ಶೂರ್ ನೆಟ್​ವರ್ಕ್​ ಕಂಪೆನಿ 272 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಲು ನಿರ್ಧರಿಸಿದ್ದು, ಇದರ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿ ಉಚಿತ ಇಂಟರ್​ನೆಟ್​ ಸಿಗಲಿದೆ ಎಂದು ಹೇಳಲಾಗಿದೆ. 2020ರಲ್ಲಿ ಸಂಶೋಧನೆಯ ಮೊದಲ ಹಂತದ ಭಾಗವಾಗಿ 10 ಉಪಗ್ರಹಗಳನ್ನು ಉಡಾವಣೆ ಮಾಡಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.

ಈ ಯೋಜನೆಗಾಗಿ ಲಿಂಕ್​ಶೂರ್ ನೆಟ್​ವರ್ಕ್​ ಕಂಪೆನಿ ಕನಿಷ್ಟ 3 ಶತಕೋಟಿ ಯುವಾನ್ ($ 590 ಮಿಲಿಯನ್ ಅಥವಾ ಅಂದಾಜು 4 ಸಾವಿರ ಕೋಟಿ ) ಹೂಡಿಕೆಯು ಮಾಡಲಿದೆ ಎಂದು ಹೇಳಲಾಗಿದ್ದು, ಭೂಮಿ, ಸಮುದ್ರ ಅಥವಾ ಮರುಭೂಮಿಯಂತಹ ಅನೇಕ ಭೂಪ್ರದೇಶಗಳಲ್ಲಿಯೂ ಇನ್ಮುಂದೆ ಅಂತರ್ಜಾಲ ಸಿಗಲಿರುವ ವಿಶ್ವಾಸವನ್ನು ಈ ಸಂಸ್ಥೆ ವ್ಯಕ್ತಪಡಿಸಿದೆ.

ವಿಶ್ವದಾದ್ಯಂತ ಉಚಿತ ಇಂಟರ್‌ನೆಟ್!..ಚೀನಾ ಕಂಪೆನಿಯ ಹೊಸ ಸಾಹಸ!!

ಇನ್ನು ಲಿಂಕ್​ಶೂರ್ ವೆಬ್‌ಸೈಟ್ ಪ್ರಕಾರ, ಲಿಂಕ್​ಶೂರ್ ಈಗಾಗಲೇ 223 ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ 900 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಸೇವೆ ಸಲ್ಲಿಸುತ್ತದೆ ಎಂದು ಹೇಳಿಕೊಂಡಿದೆ. ಮುಖ್ಯವಾಗಿ ಲಿಂಕ್​ಶೂರ್ ಅಪ್ WiFi ಮಾಸ್ಟರ್ ಕೀ ಮೂಲಕ, ಬಳಕೆದಾರರಿಗೆ ನಿರ್ದಿಷ್ಟ ಲಾಗಿನ್ ವಿವರಬಳಸದೆ ಕೆಲವು Wi-Fi ಸಂಪರ್ಕ ಕಲ್ಪಿಸಲು ಇದು ಅನುಮತಿಸುತ್ತದೆ.

Best Mobiles in India

English summary
A Chinese internet technology firm is planning to launch a constellation of 272 satellites by 2026 with an aim to to provide free WiFi service worldwide. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+