Home
ಸುದ್ದಿಜಾಲ

ಚೀನಾದಲ್ಲಿ ಬಂತು ಗೇಯ್ಟ್ ರೆಕಗ್ನಿಷನ್!..ಇನ್ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!

ಸಿಸಿ ಕ್ಯಾಮೆರಾಗಳಿಂದ ಅಷ್ಟೇನು ಉಪಯೋಗವಿಲ್ಲ ಎಂದು ಅರಿತಿರುವ ಚೀನಾ ಇದೀಗ ವಿಶಿಷ್ಟ ಗೇಯ್ಟ್ ರೆಕಗ್ನಿಷನ್ ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಜನರ ಮುಖ ಕಾಣದೇ ಇದ್ದರೂ, ಅವರು ನಡೆಯುವ ಹಾಗೂ ನಿಲ್ಲುವ ಭಂಗಿ ದೇಹದ ಆಕಾರದಿಂದಲೇ ಗುರುತು ಪತ್ತೆ ಮಾಡಬಹುದಾಗಿದ್ದು, ಈಗಾಗಲೇ ಈ ತಂತ್ರಜ್ಞಾನವನ್ನು ಪೊಲೀಸರು ಬಳಸುತ್ತಿದ್ದಾರೆ.

ಹೌದು, ಖಾಸಗಿತನ ಮತ್ತು ಭದ್ರತೆ ಸವಾಲಾಗಿರುವ ಈ ದಿನಗಳಲ್ಲಿ ಜನರ ನಡಿಗೆ, ದೇಹದ ಭಾಷೆಯನ್ನೇ ಗುರುತಿಸಿ ಅವರನ್ನು ಪತ್ತೆಹಚ್ಚುವ ನೂತನ ಗೇಟ್ ರಿಕಗ್ನಿಷನ್ ತಂತ್ರಜ್ಞಾನವನ್ನು ಚೀನಾದಲ್ಲಿ ಅಳವಡಿಸಲಾಗಿದೆ. ವ್ಯಕ್ತಿಯ ಮುಖ ಮುಚ್ಚಿಕೊಂಡಿದ್ದರೆ, ಬೆನ್ನು ಹಾಕಿ ನಡೆಯುತ್ತಿದ್ದರೂ ಸಹ ಯಾವುದೇ ಸಮಸ್ಯೆಯಿಲ್ಲದೆ ಆ ವ್ಯಕ್ತಿಯನ್ನು ಗುರುತಿಸುವ ತಂತ್ರಜ್ಞಾನ ಇದಾಗಿದೆ.

ಚೀನಾದಲ್ಲಿ ಬಂತು ಗೇಯ್ಟ್ ರೆಕಗ್ನಿಷನ್!..ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!

ಜಪಾನ್, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಈಗಾಗಲೇ ರಕ್ಷಣಾ ಕ್ಷೇತ್ರದಲ್ಲಿ ಗೇಟ್ ರಿಕಗ್ನಿಷನ್ ತಂತ್ರಜ್ಞಾನ ಬಳಕೆಯಲ್ಲಿದೆ. ಆದರೆ ಚೀನಾ ಮಾತ್ರ ಜನರನ್ನು ಕೂಡ ಈ ತಂತ್ರಜ್ಞಾನದ ಅಡಿ ತರಲು ಮುಂದಾಗಿದೆ. ಹಾಗಾದರೆ, ಚೀನಾದಲ್ಲಿ ಅಳಡಿಕೆಯಾಗುತ್ತಿರುವ ಗೇಯ್ಟ್ ರೆಕಗ್ನಿಷನ್ ಸಾಫ್ಟ್‌ವೇರ್ ಹೇಗಿರಲಿದೆ? ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗೇಟ್ ರಿಕಗ್ನಿಷನ್ ತಂತ್ರಜ್ಞಾನ ಏಕೆ?

ಗೇಟ್ ರಿಕಗ್ನಿಷನ್ ತಂತ್ರಜ್ಞಾನ ಏಕೆ?

ಫೇಸ್ ರಿಕಗ್ನಿಷನ್, ಬೆರಳಚ್ಚು ಪರಿಶೀಲನೆಗೆ ಹಲವು ಮಂದಿ ಅಸಹಕಾರ ವ್ಯಕ್ತಡಿಸುತ್ತಾರೆ. ಆದರೆ ಗೇಟ್ ರಿಕಗ್ನಿಷನ್‌ಗೆ ಜನರ ಅನುಮತಿ ಬೇಕಿಲ್ಲ, ಹೀಗಾಗಿ ಪೊಲೀಸರ ಕೆಲಸ ಸುಲಭವಾಗಲಿದೆ. ಪ್ರತಿ ವ್ಯಕ್ತಿಯ ನಡಿಗೆ, ಚಲನವಲನ ವಿಭಿನ್ನವಾಗಿರುವುದರಿಂದ ಗೇಟ್ ರಿಕಗ್ನಿಷನ್ ತಂತ್ರಜ್ಞಾನ ಪ್ರತ್ಯೇಕವಾಗಿ ಅವರ ದತ್ತಾಂಶವನ್ನು ಸಂಗ್ರಹಿಸುತ್ತದೆ. ಇದರಿಂದ ಪೊಲೀಸರು ಸುಲಭವಾಗಿ ಜನರನ್ನು ಗುರುತಿಸಬಹುದಾಗಿದೆ.

ಗೇಯ್ಟ್ ರೆಕಗ್ನಿಷನ್ ಕೆಲಸ ಹೇಗೆ?

ಗೇಯ್ಟ್ ರೆಕಗ್ನಿಷನ್ ಕೆಲಸ ಹೇಗೆ?

ಗೇಟ್ ತಂತ್ರಜ್ಞಾನವು ವ್ಯಕ್ತಿಯ ನಡಿಗೆ, ಬಾಡಿ ಲಾಂಗ್ವೇಜ್ ಅನ್ನು 50 ಮೀ. ದೂರದಲ್ಲೇ ಗುರುತಿಸುತ್ತದೆ. ವ್ಯಕ್ತಿಯ ಮುಖ ಮುಚ್ಚಿಕೊಂಡಿದ್ದರೆ, ಬೆನ್ನು ಹಾಕಿ ನಡೆಯುತ್ತಿದ್ದರೂ, ಯಾವುದೇ ಸಮಸ್ಯೆಯಿಲ್ಲದೆ ವ್ಯಕ್ತಿಯನ್ನು ಗುರುತಿಸುತ್ತದೆ. ಜನರ ಚಲನವಲನವನ್ನು ಅದು ದಾಖಲಿಸಿಕೊಳ್ಳುವುದರಿಂದ ನಿರ್ಧಿಷ್ಟ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗಲಿದೆ. ಹಾಗಾಗಿ, ಈಗ ಯಾವುದೇ ಸ್ಕ್ಯಾನಿಂಗ್ ಯಂತ್ರದ ಮೊರೆಹೋಗಬೇಕಿಲ್ಲ.

ಫೇಶಿಯಲ್‌ಗಿಂತ ಹೇಗೆ ಭಿನ್ನ?

ಫೇಶಿಯಲ್‌ಗಿಂತ ಹೇಗೆ ಭಿನ್ನ?

ಸಾಮಾನ್ಯವಾಗಿ ಫೇಶಿಯಲ್‌ ರಿಕಾಗ್ನಿಶನ್‌ನಲ್ಲಿ ಅತ್ಯಂತ ಹತ್ತಿರದ ಹಾಗೂ ಅಧಿಕ ರೆಸಾಲ್ಯುಶನ್‌ ಚಿತ್ರಗಳು ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಫೇಶಿಯಲ್‌ ರೆಕಗ್ನಿಷನ್‌ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಷ್ಟೇ ಅಲ್ಲ, ಕಾಲು ಕುಂಟುತ್ತಾ ನಡೆದರೆ ಅಥವಾ ವಿಚಿತ್ರ ಭಂಗಿಯಲ್ಲಿ ನಡೆದಾಡಿದರೂ ಗೇಯ್ಟ್ ರೆಕಗ್ನಿಷನ್ ಸಾಫ್ಟ್ವೇರ್‌ ವ್ಯಕ್ತಿಯ ಗುರುತು ಹಿಡಿಯಬಲ್ಲದು ಎಂದು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವ್ಯಾಟ್ರಿಕ್ಸ್ ಕಂಪೆನಿಯ ಸಿಇಒ ಹುವಾಂಗ್ ಯಾಂಗ್‌ಝೆನ್ ಅವರು ಹೇಳಿದ್ದಾರೆ.

ಸ್ಕ್ಯಾನಿಂಗ್ ಯಂತ್ರ ಬೇಕಿಲ್ಲ!

ಸ್ಕ್ಯಾನಿಂಗ್ ಯಂತ್ರ ಬೇಕಿಲ್ಲ!

ಮುಖ ಗುರುತಿಸುವ ಫೇಶಿಯಲ್ ರಿಕಗ್ನಿಶನ್‌ಗೆ ಹೋಲಿಸಿದರೆ ಗೇಯ್ಟ್ ರೆಕಗ್ನಿಷನ್ ಯಾವುದೇ ಹೆಚ್ಚಿನ ಅವಶ್ಯಕತೆಯನ್ನು ಬೇಡುವುದಿಲ್ಲ, ಬದಲಾಗಿ ಓರ್ವ ವ್ಯಕ್ತಿ ಸಹಜವಾಗಿ ನಡೆದು ಹೋಗುತ್ತಿದ್ದರೆ ಆತನ ನಡಿಗೆ ಮತ್ತು ದೇಹದ ಭಾಷೆಯನ್ನು ಗಮನಿಸಿಕೊಂಡು ಅಲ್ಲಿಂದಲೇ ಪತ್ತೆಹಚ್ಚುತ್ತದೆ. ಅದಕ್ಕಾಗಿ ಯಾವುದೇ ಸ್ಕ್ಯಾನಿಂಗ್ ಯಂತ್ರದ ಮೊರೆಹೋಗಬೇಕಿಲ್ಲ. ಜತೆಗೆ ಜನರನ್ನು ಈ ಯಂತ್ರದ ಮೂಲಕ ಪರಿಶೀಲಿಸುವ ಅಗತ್ಯವೂ ಇರುವುದಿಲ್ಲ.

ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜನರು!

ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜನರು!

ಖಾಸಗಿತನ ಮತ್ತು ಭದ್ರತೆ ಸವಾಲಾಗಿರುವ ಈ ದಿನಗಳಲ್ಲಿ ಜನರ ನಡಿಗೆ, ದೇಹದ ಭಾಷೆಯನ್ನೇ ಗುರುತಿಸಿ ಅವರನ್ನು ಪತ್ತೆಹಚ್ಚುವ ನೂತನ ಗೇಟ್ ರಿಕಗ್ನಿಷನ್ ತಂತ್ರಜ್ಞಾನ ಒಳ್ಳೆಯದೇ. ಆದರೆ, ಜನರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯ ಬಗ್ಗೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮುಸ್ಲಿಂ ಬಾಹುಳ್ಯವಿರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಈ ತಂತ್ರಜ್ಞಾನದ ಅಗತ್ಯ ಹೆಚ್ಚಿದೆ ಎಂದು ಪೊಲೀಸ್‌ ಇಲಾಖೆ ಹೇಳಿರುವುದು ಈಗ ವಿವಾದಾತ್ಮಕವಾಗಿದೆ.

Best Mobiles in India

English summary
Chinese authorities have begun deploying a new surveillance tool: “gait recognition” software that uses people's body shapes and how they. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+