ಟ್ರಂಪ್‌ಗೆ ಸೆಡ್ಡು ಹೊಡೆದ ಅಲಿಬಾಬಾ: ಅಮೆರಿಕಾದ ಅವಶ್ಯಕತೆ ಇಲ್ಲ ಅಂದ್ರೂ...!

|

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸುವ ಸಲುವಾಗಿ ಹುಚ್ಚು ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಮೆರಿಕಾದಲ್ಲಿ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ 100ರಷ್ಟು ಆಮದು ಸುಂಕ ಹೇರುವ ಮೂಲಕ ಚೀನಾ ಮೂರನೇ ಮಹಾಯುದ್ಧದ ಬದಲು ವ್ಯಾಪಾರ ಯುದ್ಧಕ್ಕೆ ಮುಂದಾಗಿದ್ದಾರೆ. ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಹಿಡಿತವನ್ನು ತಪ್ಪಿಸುವ ಯೋಜನೆ ರೂಪಿಸಿದ್ದಾರೆ.

ಆದರೆ ಅಮೆರಿಕಾದ ಈ ಕ್ರಮದ ವಿರುದ್ಧ ತಿರುಗಿ ಬಿದ್ದಿರುವ ಚೀನಾದ ಬೃಹತ್ ಇ ಕಾರ್ಮಸ್ ಕಂಪನಿ ಅಲಿಬಾಬಾ, ಟ್ರಂಪ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ, ಅಮೆರಿಕದ ವಾಣಿಜ್ಯ ಯುದ್ಧವನ್ನು ಎದುರಿಸಿ ನಿಲ್ಲಲು ಶಕ್ತವಾಗಿದ್ದು, ನಮ್ಮ ವಸ್ತುಗಳು ಇಲ್ಲದೇ ಅಮೆರಿಕಾ ಕಷ್ಟ ಪಡಬೇಕಾಗಿದೆ, ಆದರೆ ನಾವು ಅಮೆರಿಕಾದಿಂದ ತರಿಸಿಕೊಳ್ಳುವ ವಸ್ತುಗಳನ್ನು ಬೇರೆ ಕಡೆಯಿಂದಲೂ ತರಿಸಿಕೊಳ್ಳಲು ಶಕ್ತವಾಗಿರುವುದಾಗಿ ತಿಳಿಸಿದ್ದಾರೆ.

ಲಾಭದ ಲೆಕ್ಕ:

ಲಾಭದ ಲೆಕ್ಕ:

ಅಲಿಬಾಬಾ ಕಂಪನಿಯೂ 8.7 ಬಿಲಿಯನ್​ ನಿವ್ವಳ ಲಾಭ ಗಳಿಸಿದೆ. ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಅಲಿಬಾಬಾ ಕಂಪನಿ ಬರೋಬ್ಬರಿ ರೂ. 8,865 ಕೋಟಿ ನಿವ್ವಳ ಲಾಭ ಗಳಿಕೆ ಮಾಡಿದೆ. ಈ ಲೆಕ್ಕಾಚಾರವನ್ನು ಘೋಷಣೆ ಮಾಡುವ ಸಂದರ್ಭದಲ್ಲಿಯೇ ಅಮೆರಿಕಾ ವಿರುದ್ಧ ತೊಡೆತಟ್ಟಿದೆ.

ಅಮೆರಿಕಾಗೆ ಸೆಡ್ಡು:

ಅಮೆರಿಕಾಗೆ ಸೆಡ್ಡು:

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕಾ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಚೀನಾ ಮಾತ್ರವೇ ಅಮೆರಿಕಾಗೆ ಹೆಚ್ಚಿನ ಪ್ರಮಾಣದಲ್ಲಿ ಸೆಡ್ಡು ಹೊಡೆಯಲು ಶಕ್ತವಾಗಿದೆ. ಈ ಹಿನ್ನಲೆಯಲ್ಲಿ ತಂತ್ರಜ್ಞಾನ, ಗ್ಯಾಜೆಡ್ಸ್‌ ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ನಿರ್ಮಾಣ ಮಾಡುತ್ತಿರುವ ಚೀನಾದಕ್ಕೆ ಸೆಡ್ಡು ಹೊಡೆಯಲು ಅಮೆರಿಕಾ ಮುಂದಾಗಿದೆ. ಆದರೆ ಅಮೆರಿಕಾವನ್ನು ಕ್ಯಾರೆ ಎನ್ನುವುದಿಲ್ಲ ಎಂದು ಅಲಿಬಾಬಾ ತಿಳಿಸಿದೆ.

ಟ್ರಂಪ್​ ನೀತಿಗೆ ತಿರುಗೇಟು:

ಟ್ರಂಪ್​ ನೀತಿಗೆ ತಿರುಗೇಟು:

ಟ್ರಂಪ್​ ನೀತಿಗೆ ಭಾರತ ಸೇರಿದಂತೆ ಎಲ್ಲಾ ಕಡೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಚೀನಾದ ಬೃಹತ್​ ಕಂಪನಿ ಅಲಿಬಾಬಾ ತಾನು ಅಮೆರಿಕದ ವಾಣಿಜ್ಯ ಯುದ್ಧವನ್ನು ಎದುರಿಸಿ ನಿಲ್ಲಲು ಸಮರ್ಥವಾಗಿರುವುದಾಗಿ ತಿಳಿಸಿದೆ. ಅಮೆರಿಕದೊಡನೆ ವಾಣಿಜ್ಯ ಸಮರಕ್ಕೂ ಕಂಪನಿ ಸಿದ್ಧವಿದೆ ಎಂದು ಘೋಷಿಸಲಾಗಿದೆ. ಜೊತೆಗೆ ಅಮೆರಿಕಕ್ಕೆ ಸೆಡ್ಡು ಹೊಡೆಯುವ ನಂಬಿಕೆ ಇದೆ ಎಂದು ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಯುದ್ಧಕ್ಕೂ ಆಹ್ವಾನ ನೀಡಿದೆ.

ತಲೆ ಕೆಡಿಸಿಕೊಳ್ಳುವುದಿಲ್ಲ:

ತಲೆ ಕೆಡಿಸಿಕೊಳ್ಳುವುದಿಲ್ಲ:

ಅಮೆರಿಕದ ಉತ್ಪನ್ನಗಳ ಬೆಲೆ ಏರಿಕೆಯಾದರೆ, ಚೀನಾ ಗ್ರಾಹಕರು ಸ್ವದೇಶದ ಉತ್ಪನ್ನಗಳನ್ನು ಬಳಸುತ್ತಾರೆ ಅಥವಾ ಪ್ರಪಂಚದ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ ಆದರೆ ಎಂದಿಗೂ ಬೆಲೆ ಕಡಿಮೆ ಮಾಡಿ ಎಂದು ಮನವಿ ಮಾಡುವುದಿಲ್ಲ ಎಂದಿದ್ದಾರೆ.

Best Mobiles in India

English summary
Chinese giant Alibaba showed how Trump's trade war could backfire. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X