Home
ಸುದ್ದಿಜಾಲ

ಮಂಗಳನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ಚೀನಾದ ಟಿಯಾನ್ವೆನ್‌-1

By Gizbot Bureau

ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತನ್ನ ಟಿಯಾನ್ವೆನ್‌-1 ಉಪಗ್ರಹದಿಂದ ಸೆರೆಹಿಡಿಯಲಾದ ಮಂಗಳ ಗ್ರಹದ ಅದ್ಭುತ, ಹೈ ರೆಸಲೂಷನ್‌ ಚಿತ್ರಗಳನ್ನು ಭಾನುವಾರ ಬಿಡುಗಡೆಗೊಳಿಸಿದೆ. ಟಿಯಾನ್ವೆನ್‌ 1 ಸದ್ಯ ಅಂಗಾರಕನ ಸುತ್ತ ಪರಿಭ್ರಮಿಸುತ್ತಿದೆ. ಕಳೆದ ಜುಲೈ 23 ರಂದು ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಅಲ್ಲಿಂದ 224 ದಿನಗಳ ಅವಧಿಯಲ್ಲಿ 475 ದಶಲಕ್ಷ ಕಿಮೀ ದೂರವನ್ನು ಕ್ರಮಿಸಿದೆ.

ಮಂಗಳನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ಚೀನಾದ ಟಿಯಾನ್ವೆನ್‌-1

ಚೀನಾದ ಟಿಯಾನ್ವೆನ್ -1 ಪ್ರೋಬ್‌, ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್‌ನ್ನು ಒಳಗೊಂಡಿದೆ. ಉಡಾವಣೆಯಾಗಿ ಏಳು ತಿಂಗಳ ಬಳಿಕ ಅಂದರೆ, ಫೆಬ್ರವರಿ 24ರಂದು ಟಿಯಾನ್ವೆನ್‌ ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು.

ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಮಾರ್ಚ್ 4ರಂದು ಮಂಗಳ ಗ್ರಹದ ಮೇಲ್ಮೈಯ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಎರಡು ಪಂಚ್ರೊಮ್ಯಾಟಿಕ್ ವ್ಯೂವ್‌ ಮತ್ತು ಒಂದು ಬಣ್ಣದ ಚಿತ್ರವಿದೆ.

ಮಂಗಳನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ಚೀನಾದ ಟಿಯಾನ್ವೆನ್‌-1

ಸಿಎನ್‌ಎಸ್‌ಎ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಮಂಗಳ ಗ್ರಹದಲ್ಲಿನ ಸಣ್ಣ ಕುಳಿಗಳು, ಪರ್ವತ ರೇಖೆಗಳು ಮತ್ತು ದಿಬ್ಬಗಳಂತಹ ಆಕೃತಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಚಿತ್ರಗಳಲ್ಲಿನ ಅತಿದೊಡ್ಡ ಕುಳಿಯ ವ್ಯಾಸವು ಸುಮಾರು 620 ಮೀಟರ್ ಎಂದು ಅಂದಾಜಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಸಿಎನ್‌ಎಸ್‌ಎ ಬಿಡುಗಡೆ ಮಾಡಿದ ಚಿತ್ರಗಳು ಇಲ್ಲಿವೆ:

1. ಟಿಯಾನ್ವೆನ್‌-1 ರಲ್ಲಿರುವ ಆರ್ಬಿಟರ್‌ ತನ್ನ ಹೈ ಡೆಫಿನಿಷನ್‌ ಕ್ಯಾಮೆರಾ ಸಹಾಯದಿಂದ ಎರಡು ಕಪ್ಪು-ಬಿಳುಪಿನ 7 ಮೀಟರ್‌ ರೆಸಲೂಷನ್‌ ಚಿತ್ರಗಳನ್ನು ತೆಗೆದಿದೆ. ಇವುಗಳನ್ನು ಮಂಗಳ ಗ್ರಹದ ಮೇಲ್ಮೈನಲ್ಲಿ 330 ರಿಂದ 350 ಕಿಲೋ ಮೀಟರ್‌ ಎತ್ತರದಿಂದ ಸೆರೆಹಿಡಿಯಲಾಗಿದೆ ಎಂದು ಸಿಎನ್ಎಸ್ಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

2. ಅಂಗಾರಕನ ಚಿತ್ರಗಳಲ್ಲಿ ಕುಳಿಗಳು, ಪರ್ವತ ರೇಖೆಗಳು ಮತ್ತು ಮರಳು ದಿಬ್ಬಗಳು ಸ್ಪಷ್ಟವಾಗಿವೆ ಎಂದು ಸಿಎನ್ಎಸ್ಎ ಉಲ್ಲೇಖಿಸಿದೆ.

3. ಆರ್ಬಿಟರ್‌ನ ಮತ್ತೊಂದು ಕ್ಯಾಮೆರಾದಿಂದ ಬಣ್ಣದ ಚಿತ್ರವನ್ನು ಸೆರೆಹಿಡಿಯಲಾಗಿದ್ದು, ಇಲ್ಲಿ ಮಂಗಳನ ಉತ್ತರ ಧ್ರುವವನ್ನು ನೋಡಬಹುದು ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಮಂಗಳನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ಚೀನಾದ ಟಿಯಾನ್ವೆನ್‌-1

ಚೀನಾದ ಟಿಯಾನ್ವೆನ್ -1

2020ರ ಜುಲೈ 23ರಂದು ಟಿಯಾನ್ವೆನ್ -1 ಉಪಗ್ರಹವನ್ನು ಚೀನಾ ಉಡಾವಣೆ ಮಾಡಿತು. ಅದು ಈ ಫೆಬ್ರವರಿ 24 ರಂದು ಮಂಗಳನ ಕಕ್ಷೆಗೆ ಪ್ರವೇಶಿಸಿತು. ಪ್ರಸ್ತುತ ಟಿಯಾನ್ವೆನ್‌-1 ಭೂಮಿಯಿಂದ ಸುಮಾರು 212 ದಶಲಕ್ಷ ಕಿಮೀ ದೂರದಲ್ಲಿದೆ ಎಂದು ಸಿಎನ್‌ಎಸ್‌ಎ ತಿಳಿಸಿದೆ. ರೋವರ್ ಹೊತ್ತ ಲ್ಯಾಂಡರ್ ಈ ವರ್ಷದ ಮೇ ಅಥವಾ ಜೂನ್‌ನಲ್ಲಿ ಮಂಗಳನ ಅಂಗಳಕ್ಕೆ ಇಳಿಯುವ ನಿರೀಕ್ಷೆಯಿದೆ.

Source

Best Mobiles in India

English summary
Chinese Mars Probe Sends Stunning Photos From Red Planet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+