ಬಳಕೆದಾರರಿಗೆ ಹಣ ಸಂಪಾದಿಸಲು ಅವಕಾಶ ನೀಡಿದ ಚಿಂಗಾರಿ ಅಪ್ಲಿಕೇಶನ್‌!

|

ಚೀನಾ ಮೂಲದ 59 ಆಪ್‌ಗಳನ್ನ ಭಾರತ ಸರ್ಕಾರ ಬ್ಯಾನ್ ಮಾಡಿದ ನಂತರ ಸ್ವದೇಶಿ ಆಪ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗ್ತಿದೆ. ಇವುಗಳಲ್ಲಿ ಟಿಕ್‌ಟಾಕ್‌ಗೆ ಪ್ರತಿಸ್ಫರ್ಧಿಯಾಗಿ ಬಿಡುಗಡೆ ಆಗಿದ್ದ ಚಿಂಗಾರಿ ಆಪ್‌ ಕೂಡ ಒಂದಾಗಿದೆ. ಟಿಕ್‌ಟಾಕ್‌ಗೆ ಪೈಪೋಟಿ ನೀಡೋಕೆ ಅಂತಾನೆ ಬಿಡುಗಡೆ ಆಗಿದ್ದ ಚಿಂಗಾರಿ ಆಪ್‌ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ತನ್ನ ಜನಪ್ರಿಯತೆಯ್ನ ಇನ್ನಷ್ಟು ಹೆಚ್ಚಿಸಿಕೊಂಡಿದೆ. ಸದ್ಯ ಇದೀಗ ಇನ್ನಷ್ಟು ಬಳಕೆದಾರರನ್ನು ಸೆಳೆಯಲು ಚಿಂಗಾರಿ ಆಪ್‌ ವೀಡಯೋ ಕ್ರಿಯೆಟ್‌ ಮಾಡುವ ಜೊತೆಗೆ ಸ್ವಲ್ಪ ಮಟ್ಟದ ಆದಾಯವನ್ನು ಪಡೆಯಬಲ್ಲ ಅವಕಾಶವನ್ನ ಪರಿಚಯಿಸಿದೆ.

ಚಿಂಗಾರಿ

ಹೌದು, ಚಿಂಗಾರಿ ಅಪ್ಲಿಕೇಶನ್‌ ಪ್ರಸ್ತುತ ಭಾರತದಲ್ಲಿ ಟಿಕ್‌ಟಾಕ್‌ಗೆ ಪ್ರತಿಯಾಗಿ ಲಭ್ಯವಿರುವ ಸ್ವದೇಶಿ ಆಪ್‌ಗಳಲ್ಲಿ ಒಂದಾಗಿದೆ . ಸದ್ಯ ಈಗಾಗಲೇ ಚಿಂಗಾರಿ ಆಪ್‌ ತನ್ನ ಜನಪ್ರಿಯತೆಯನ್ನ ಹೆಚ್ಚಿಸಿಕೊಂಡಿದೆ. ಸದ್ಯ ಈ ಅಪ್ಲಿಕೇಶನ್ ಈವರೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್‌ ಗೂ ಅಧಿಕ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ. ಈಗಾಗಲೇ ಚಿಂಗಾರಿ ಅಪ್ಲಿಕೇಶನ್‌ ತನ್ನ ಬಳಕೆದಾರಿಗೆ ಅವರ ವೀಡಿಯೊ ವೀಕ್ಷಣೆಗಳ ಆಧಾರದ ಮೇಲೆ ಹಣವನ್ನು ಸಂಪಾದಿಸಲು ಅನುವು ಮಾಡಿಕೊಟ್ಟಿದೆ. ಅಷ್ಟಕ್ಕು ಬಳಕೆದಾರರು ಚಿಂಗಾರಿ ಆಪ್‌ನಲ್ಲಿ ಹಣವನ್ನು ಸಂಪಾದಿಸುವುದು ಹೇಗೆ ಸಾಧ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಿಂಗಾರಿ

ಚಿಂಗಾರಿ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಬಳಕೆದಾರರನ್ನ ಸೆಳೆಯುವ ಉದ್ದೇಶದಿಂದ ಬಳಕೆದಾರರು ಕ್ರಿಯೆಟ್‌ ಮಾಡಿದ ವಿಡಿಯೋ ವೀಕ್ಷಣೆ ಆದಾರದ ಮೇಲೆ ಅದಕ್ಕೆ ಇಂತಿಷ್ಟು ಹಣ ನೀಡುತ್ತಿದೆ. ಸದ್ಯ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಚಿಂಗಾರಿ ಅಪ್ಲಿಕೇಶನ್‌ ಇದೀಗ ಮ್ಯೂಸಿಕ್‌ ಟ್ರ್ಯಾಕ್‌ ಸಂಯೋಜಕರಿಗೂ ಸಹ ಹಣವನ್ನು ಸಂಪಾದಿಸುವ ಅವಕಾಶವನ್ನ ನೀಡಿದೆ. ವೈರಲ್‌ ಆಗುವ ಮ್ಯೂಸಿಕ್‌ ಟ್ರಾಕ್‌ಗಳ ಆದಾರದ ಮೇಲೆ ಹಣ ನೀಡಲಿದೆ ಎಂದು ಹೇಳಲಾಗ್ತಿದೆ.

ಚಿಂಗಾರಿ

ಇನ್ನು ಚಿಂಗಾರಿ ಅಪ್ಲಿಕೇಶನ್ ಸಂಗೀತ ಟ್ರ್ಯಾಕ್‌ಗಳನ್ನು ಹೊಂದಿದ್ದು, ಬಳಕೆದಾರರು ತಮ್ಮ ವೀಡಿಯೊಗಳಿಗೆ ಸೇರಿಸಬಹುದು. ಇವು ಹಾಡಿನ ಸಣ್ಣ ಭಾಗಗಳಿದ್ದು, ವೈರಲ್‌ ಆಗುವ ಸಾಮರ್ಥ್ಯ ಹೊಂದಿವೆ. ಇದು ಚಿಂಗಾರಿ ಅಪ್ಲಿಕೇಶನ್‌ನಲ್ಲಿ ಜನಪ್ರಿಯವಾಗುತ್ತಿರುವ ಹಾಡುಗಳಿಗೆ ಮ್ಯೂಸಿಕ್‌ ಸಂಯೋಜಸಿದವರಿಗೆ ಹಣ ಪಾವತಿಸಲಿದೆ ಎಂದು ವರದಿ ಆಗಿದೆ. ಇದಲ್ಲದೆ ಚಿಂಗಾರಿ ಸಂಗೀತಗಾರರನ್ನು ತಮ್ಮ ಸಂಗೀತವನ್ನು ವೇದಿಕೆಯಲ್ಲಿ ಮ್ಯೂಸಿಕ್‌ ಕ್ರಿಯೆಟ್‌ ಮಾಡಲು ಮತ್ತು ಶೇರ್‌ ಮಾಡಲು ಅವಕಾಶ ನೀಡಲಿದೆ. ಆದರೆ ಇದು ಹೇಗೆ ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಕಂಪನಿಯು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ ಎನ್ನಲಾಗ್ತಿದೆ.

ಟಿಕ್‌ಟಾಕ್‌

ಈಗಾಗಲೇ ಟಿಕ್‌ಟಾಕ್‌ನಲ್ಲಿ ಹಾಡುಗಳು ಹೇಗೆ ವೈರಲ್‌ ಆಗುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ಇದೇ ಕಾರಣಕ್ಕೆ ಚಿಂಗಾರಿ ಅಪ್ಲಿಕೇಶನ್‌ ಕೂಡ ಜನಪ್ರಿಯತೆಯ ಹಾದಿಗಾಗಿ ಹೊಸಹೊಸ ಮಾರ್ಗಗಳನ್ನ ಅನುಸರಿಸುತ್ತಿದೆ. ಸದ್ಯ ಭಾರತದಲ್ಲಿ ಹೇಗೆ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ನೋಡಿದಾಗ, ಹಾಡುಗಳು ಜನಪ್ರಿಯವಾಗಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಚಿಂಗಾರಿ ಪ್ರಸ್ತುತ ಬಳಕೆದಾರರಿಗೆ ಪಾಯಿಂಟ್‌ಗಳ ರೂಪದಲ್ಲಿ ಹಣವನ್ನ ಪಾವತಿಸಲಿದೆ. ಆದರೆ ಇದು ಬಳಕೆದಾರರು ತಮ್ಮ ವೀಡಿಯೊಗಳಲ್ಲಿ ಎಷ್ಟು ವೀಕ್ಷಣೆಗಳನ್ನು ಪಡೆಯುತ್ತಾರೆ ಎಂಬುದನ್ನು ಆಧರಿಸಿದೆ. ಸದ್ಯ ಈ ಅಪ್ಲಿಕೇಶನ್ ಪ್ರಸ್ತುತ 16 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಈ ತಿಂಗಳ ಅಂತ್ಯದ ವೇಳೆಗೆ 100 ಮಿಲಿಯನ್ ಬಳಕೆದಾರರನ್ನು ತಲುಪಲು ಯೋಜಿಸಿದೆ ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Chingari is also inviting musicians to create and share songs on its platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X