Home
ಸುದ್ದಿಜಾಲ

ಕ್ರಿಸ್‌ಮಸ್ ಹಬ್ಬಕ್ಕೆ BSNL ನಿಂದ ಸೀಮಿತ ಅವಧಿಗೆ ಭರ್ಜರಿ ಆಫರ್‌ಗಳು!

ಭಾರತದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಕ್ರಿಸ್‌ಮಸ್ ಹಬ್ಬದ ಸಂಭ್ರಮದ ಅಂಗವಾಗಿ ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಿದೆ. ಕಂಪನಿಯು ಹೊಸ ಕ್ರಿಸ್‌ಮಸ್ ಬೊನಾಂಜಾ ಪ್ರೀಪೇಯ್ಡ್ ಆಫರ್ ಅನ್ನು ಕೇವಲ 1 ರೂ. ದರದಲ್ಲಿ ಪರಿಚಯಿಸಿದೆ. ಜೊತೆಗೆ 251 ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಗಯಲ್ಲಿ ಈಗ 100GB ಡೇಟಾ ಲಾಭವನ್ನು ಒದಗಿಸುತ್ತಿದೆ. ಕ್ರಿಸ್‌ಮಸ್ ವಿಶೇಷವಾಗಿ ಘೋಷಿಸಲಾದ ಈ ಸೀಮಿತ ಅವಧಿಯ ಆಫರ್ ಈಗಾಗಲೇ ಬಳಕೆದಾರರ ಗಮನ ಸೆಳೆಯುತ್ತಿದ್ದು, ಮೌಲ್ಯಾಧಾರಿತ ರೀಚಾರ್ಜ್ ಹುಡುಕುತ್ತಿರುವ ಗ್ರಾಹಕರಿಗೆ ಇದು ಆಕರ್ಷಕ ಆಯ್ಕೆಯಾಗಿದೆ. ಹಾಗಾದರೆ, ಕ್ರಿಸ್‌ಮಸ್ ಕೊಡುಗೆಯಾಗಿ BSNL ಒದಗಿಸುತ್ತಿರುವ ಲಾಭಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಕೇವಲ 1 ರೂ.ಗೆ 30 ದಿನಗಳ ವ್ಯಾಲಿಡಿಟಿ ಆಫರ್!
BSNL ಪ್ರಕಟಿಸಿರುವ ಕ್ರಿಸ್‌ಮಸ್ ಬೊನಾಂಜಾ ಪ್ರೀಪೇಯ್ಡ್ ಯೋಜನೆಯು ಕೇವಲ 1 ರೂ.ಗೆ ಲಭ್ಯವಾಗುತ್ತಿದೆ. ಮತ್ತು ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಗ್ರಾಹಕರು ಪ್ರತಿದಿನ 2GB 4G ಹೈ ಸ್ಪೀಡ್ ಡೇಟಾ, ಯಾವುದೇ ಮಿತಿಯಿಲ್ಲದ ವಾಯ್ಸ್ ಕಾಲ್‌ಗಳು ಮತ್ತು ದಿನಕ್ಕೆ 100 SMS ಗಳನ್ನು ಬಳಸಿಕೊಳ್ಳಬಹುದು. ದಿನದ ಡೇಟಾ ಮಿತಿ ಮುಗಿದ ನಂತರ ಫೇರ್ ಯೂಸೇಜ್ ಪಾಲಿಸಿಯಂತೆ ಇಂಟರ್ನೆಟ್ ವೇಗ 40kbps ಗೆ ಇಳಿಯುತ್ತದೆ. ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಹೊಸ ಗ್ರಾಹಕರಿಗೆ BSNL ಉಚಿತ 4G ಸಿಮ್ ಕಾರ್ಡ್ ನೀಡುತ್ತಿರುವುದು. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 4G ಸಂಪರ್ಕ ಪಡೆಯುವ ಅವಕಾಶ ಇದಾಗಿದೆ.

ಕ್ರಿಸ್‌ಮಸ್ ಹಬ್ಬಕ್ಕೆ BSNL ನಿಂದ ಸೀಮಿತ ಅವಧಿಗೆ ಭರ್ಜರಿ ಆಫರ್‌ಗಳು!

ಕಡಿಮೆ ವೆಚ್ಚದಲ್ಲಿ BSNL ನೆಟ್ವರ್ಕ್ ಅನುಭವಿಸಬೇಕೆನ್ನುವ ಬಳಕೆದಾರರಿಗೆ ಇದು ಉತ್ತಮ ಅವಕಾಶವಾಗಿದೆ. ಆದರೆ, ಈ BSNL ಕ್ರಿಸ್‌ಮಸ್ ಬೊನಾಂಜಾ ಯೋಜನೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಡಿಸೆಂಬರ್ 31ರವರೆಗೆ ಗ್ರಾಹಕರು ಈ ಆಫರ್‌ಗೆ ಚಂದಾದಾರರಾಗಬಹುದು. ಈ ಯೋಜನೆಯನ್ನು ಪಡೆಯಲು ಗ್ರಾಹಕರು ಹತ್ತಿರದ BSNL ರಿಟೇಲರ್ ಅಥವಾ BSNL ಕಾಮನ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಬಹುದು. ಸಿಮ್ ವಿತರಣೆ, ರೀಚಾರ್ಜ್ ಹಾಗೂ ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳು ಈ ಕೇಂದ್ರಗಳಲ್ಲಿ ಲಭ್ಯವಿವೆ. ಮನೆಬಾಗಿಲಿಗೆ ಸಿಮ್ ವಿತರಣೆ ಸೇವೆಯಲ್ಲಿ ಈ ಆಫರ್ ಅನ್ವಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

30 ದಿನಗಳ ವ್ಯಾಲಿಡಿಟಿಯೊಂದಿಗೆ 100GB ಡೇಟಾ!
ಇದರ ಜೊತೆಗೆ BSNL ಮತ್ತೊಂದು ಆಕರ್ಷಕ 251 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆನ್ನೂ ಪ್ರಕಟಿಸಿದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 100GB ಡೇಟಾವನ್ನು ಒದಗಿಸುತ್ತದೆ. ಜೊತೆಗೆ ಅನಿಯಮಿತ ಲೋಕಲ್, STD ಮತ್ತು ರೋಮಿಂಗ್ ಕಾಲ್‌ಗಳು ಹಾಗೂ ಪ್ರತಿದಿನ 100 SMS ಸೌಲಭ್ಯವೂ ಲಭ್ಯವಿರುತ್ತದೆ. 251 ರೂ. ರೀಚಾರ್ಜ್ ಯೋಜನೆಯ ಹೆಚ್ಚುವರಿ ಲಾಭವಾಗಿ ಗ್ರಾಹಕರಿಗೆ 30 ದಿನಗಳ ಉಚಿತ BiTV OTT ಸಬ್‌ಸ್ಕ್ರಿಪ್ಶನ್ ನೀಡಲಾಗುತ್ತದೆ. ಈ OTT ವೇದಿಕೆಯಲ್ಲಿ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಸಿನಿಮಾಗಳು ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವಿದೆ.

ಒಟ್ಟಾರೆಯಾಗಿ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ, ಕರೆ ಮತ್ತು ಮನರಂಜನಾ ಸೌಲಭ್ಯಗಳನ್ನು ಬಯಸುವ ಭಾರತೀಯ ಬಳಕೆದಾರರಿಗೆ BSNL ಒದಗಿಸಿರುವ ಈ ಹೊಸ ಪ್ರೀಪೇಯ್ಡ್ ಯೋಜನೆಗಳು ಅತ್ಯಂತ ಉಪಯುಕ್ತವಾಗಿವೆ. ಹಬ್ಬದ ಸಮಯದಲ್ಲಿ ಪರಿಚಯಿಸಿರುವ ಈ ಆಫರ್‌ಗಳು ಸ್ಥಳೀಯ ಗ್ರಾಹಕರಿಗೆ ಮೌಲ್ಯಯುತ ಆಯ್ಕೆಯಾಗಿ ಕಾಣಿಸುತ್ತಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ BSNLಗೆ ಹೊಸ ಚೈತನ್ಯವನ್ನು ನೀಡುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನಿಮಗೆ ಇಷ್ಟವಾದ ಆಫರ್ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
State-owned telecom operator BSNL has launched a Christmas Bonanza prepaid offer, allowing users to get a ₹1 plan and enjoy an extra 100GB data benefit with the ₹251 recharge for a limited period.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+